Home
Gadgets

OnePlus Pad 2 Proನ ಫೀಚರ್ಸ್ ಸೋರಿಕೆ; ಸ್ನಾಪ್‌ಡ್ರಾಗನ್ 8 ಎಲೈಟ್ SoC ಇರುವ ಸಾಧ್ಯತೆ!

ಕಳೆದ ಜೂನ್ 2024 ರಲ್ಲಿ ಪರಿಚಯಿಸಲಾದ OnePlus Pad Pro ಸಾಧನದ ಉತ್ತರಾಧಿಕಾರಿಯಾಗಿ ಹೊಸ OnePlus Pad 2 Pro ಸಾಧನವು ಶೀಘ್ರದಲ್ಲೇ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಹಿಂದಿನ ಮಾದರಿಯ ಹೋಲಿಸಿದರೆ ಹಲವಾರು ಅಪ್‌ಗ್ರೇಡ್‌ಗಳೊಂದಿಗೆOnePlus Pad 2 Pro ಸಾಧನವನ್ನು ಪರಿಚಯಿಸಲಾಗುತ್ತಿದ್ದು, ಈ ಸಾಧನವು 3.4K ರೆಸಲ್ಯೂಶನ್‌ ಹೊಂದಿರುವ 13.2-ಇಂಚಿನ LCD ಕಸ್ಟಮ್ ಪರದೆಯನ್ನು ಹಾಗೂ "ಫುಲ್-ಬ್ಲಡ್" ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಡಿಜಿಟಲ್ ಚಾಟ್ ಸ್ಟೇಷನ್‌ ವರದಿ ಮಾಡಿದೆ.

ಡಿಜಿಟಲ್ ಚಾಟ್ ಸ್ಟೇಷನ್‌ನ ವರದಿಯ ಪ್ರಕಾರ, OnePlus Pad 2 Pro 13-ಇಂಚಿನ ದೊಡ್ಡ ಪರದೆಯೊಂದಿಗೆ 3.4K ರೆಸಲ್ಯೂಶನ್‌ ಹೊಂದಿರುವ 13.2-ಇಂಚಿನ LCD ಕಸ್ಟಮ್ ಪರದೆ ಮತ್ತು "ಫುಲ್-ಬ್ಲಡ್" ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ, ಈ ಟ್ಯಾಬ್ಲೆಟ್ ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲದೆ, ಈ ಸಾಧನವು 16GB ವರೆಗೆ LPDDR5X RAM ಮತ್ತು 1TB ವರೆಗೆ UFS 4.0 ಆನ್‌ಬೋರ್ಡ್ ಸಂಗ್ರಹಣೆಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದಿದೆ.

OnePlus Pad 2 Proನ ಫೀಚರ್ಸ್ ಸೋರಿಕೆ; ಸ್ನಾಪ್‌ಡ್ರಾಗನ್ 8 ಎಲೈಟ್ SoC ಸಾಧ್ಯತೆ!

ಪ್ರಸ್ತುತ OnePlus Pad Pro ಸಾಧನವು 12.1-ಇಂಚಿನ 3K ಡಿಸ್ಪ್ಲೇ, 16GB ವರೆಗೆ LPDDR5X RAM ಮತ್ತು 512GB ವರೆಗೆ UFS 4.0 ಸಂಗ್ರಹಣೆಯೊಂದಿಗೆ Snapdragon 8 Gen 3 ಚಿಪ್‌ಸೆಟ್ ಹಾಗೂ 67W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 9,510mAh ಬ್ಯಾಟರಿಗಳನ್ನು ಒಳಗೊಂಡಿರುವ ವೈಶಿಷ್ಟ್ಯಗಳಲ್ಲಿದೆ. ಮತ್ತು ಈ ಟ್ಯಾಬ್ಲೆಟ್ Android 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾದರೆ, ಈ ಮೊದಲಿನ OnePlus Pad Pro ಸಾಧನವು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿತ್ತು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

OnePlus Pad Pro ಸಾಧನದ ವೈಶಿಷ್ಟ್ಯಗಳು

OnePlus Pad Pro ಸಾಧನವು Android 14 ಮತ್ತು ColorOS 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 12.1-ಇಂಚಿನ 3K (2,120x3,200 ಪಿಕ್ಸೆಲ್‌ಗಳು) ಡಿಸ್ಪ್ಲೇ ಇದೆ, ಇದು 144Hz ರಿಫ್ರೆಶ್ ದರ, 7:5 ಆಕಾರ ಅನುಪಾತ, 303ppi ಪಿಕ್ಸೆಲ್ ಸಾಂದ್ರತೆ, 900 nits ಗರಿಷ್ಠ ಹೊಳಪು ಮತ್ತು 540Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. TUV ರೈನ್‌ಲ್ಯಾಂಡ್ 3.0 ಪ್ರಮಾಣೀಕೃತ ಪರದೆಯು ಡಾಲ್ಬಿ ವಿಷನ್ ಬೆಂಬಲವನ್ನು ಒದಗಿಸುತ್ತದೆ. ಈಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 16GB ವರೆಗೆ LPDDR5X RAM ಮತ್ತು 512GB ವರೆಗೆ UFS 4.0 ಸಂಗ್ರಹಣೆಯನ್ನು ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, OnePlus Pad Pro 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರಲ್ಲಿ ಕ್ವಾಡ್ ಸ್ಟೀರಿಯೊ ಸ್ಪೀಕರ್‌ಗಳು ಇವೆ. ಸಂಪರ್ಕ ಆಯ್ಕೆಗಳಲ್ಲಿ Wi-Fi, ಬ್ಲೂಟೂತ್ ಮತ್ತು NFC ಸೇರಿವೆ. ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ, ಟ್ಯಾಬ್ಲೆಟ್ USB ಟೈಪ್-C ಪೋರ್ಟ್ ಅನ್ನು ಹೊಂದಿದೆ. OnePlus Pad Pro 9,510mAh ಬ್ಯಾಟರಿಯನ್ನು ಹೊಂದಿದ್ದು, 67W ಸೂಪರ್‌ವಿಒಸಿ ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸುತ್ತದೆ. ಈ ಸಾಧನವು 6.49 ಮಿಮೀ ದಪ್ಪ ಮತ್ತು 584 ಗ್ರಾಂ. ತೂಕವನ್ನು ಹೊಂದಿದೆ.

Best Mobiles in India

English summary
The OnePlus Pad 2 Pro is anticipated to feature the powerful octa-core Snapdragon 8 Elite chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+