ಇಂದಿನಿಂದ Lava Probuds N33 ನೆಕ್‌ಬ್ಯಾಂಡ್ ಸೇಲ್: ಕಡಿಮೆ ಬೆಲೆಗೆ ANC!
ಭಾರತೀಯ ಟೆಕ್ ಬ್ರ್ಯಾಂಡ್ ಲಾವಾ (Lava) ತನ್ನ ಹೊಸ ವೈರ್‌ಲೆಸ್ ನೆಕ್‌ಬ್ಯಾಂಡ್ Lava Probuds N33 ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಆಡಿಯೋ ಉತ್ಪನ್ನವು ಇಂದಿನಿಂದ (ನವೆಂಬರ್ 1) ಲಾವಾ ಇ-ಸ್ಟೋರ್ ಮತ್ತು ದೇಶದ ಪ್ರಮುಖ ರಿಟೇಲ್ ಅಂಗಡಿಗಳಲ್ಲಿ ಮಾರಾಟಕ್ಕೆ ಬರುತ್ತಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಆಕ್ಟಿವ್ ನಾಯ್ಸ್ ಕ್ಯಾಂಸಲೇಶನ್ (ANC) ವೈಶಿಷ್ಟ್ಯವನ್ನು ನೀಡುತ್ತಿರುವ ಇಯರ್‌ಫೋನ್‌ಗಳಲ್ಲಿ ಒಂದಾಗಿದೆ. ಹಾಗಾದರೆ, ಹೊಸ Lava Probuds N33 ನೆಕ್‌ಬ್ಯಾಂಡ್ ಹೇಗಿದೆ?, ಪೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬುದನನ್ನು ನೋಡೋಣ ಬನ್ನಿ.
ಸ್ಟೈಲಿಷ್ ಮತ್ತು ಆರಾಮದಾಯಕ ವಿನ್ಯಾಸ
ಮೊದಲು Lava Probuds N33 ನೆಕ್‌ಬ್ಯಾಂಕ್ ವಿನ್ಯಾಸದ ಕುರಿತು ಮಾತನಾಡುವುದಾದರೆ, ಈ ಸಾಧನವನ್ನು ದೈನಂದಿನ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಲೋಹದ ಫಿನಿಷ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಲೋಹದ ಫಿನಿಷ್‌ನೊಂದಿಗೆ ಬಲಿಷ್ಠ ಮತ್ತು ಆರಾಮದಾಯಕ ವಿನ್ಯಾಸ ಹೊಂದಿರುವ ಈ ನೆಕ್‌ಬ್ಯಾಂಕ್, 13ಮಿಮೀ ಡೈನಾಮಿಕ್ ಬಾಸ್ ಡ್ರೈವರ್‌ಗಳು ಆಳವಾದ ಬಾಸ್ ಮತ್ತು ಸ್ಪಷ್ಟ ಧ್ವನಿಯನ್ನು ಒದಗಿಸುತ್ತವೆ, ಇದರಿಂದ ಸಂಗೀತ, ಸಿನಿಮಾಗಳು ಅಥವಾ ಗೇಮಿಂಗ್ ಸಮಯದಲ್ಲಿ ಅತ್ಯುತ್ತ ಆಡಿಯೋ ಅನುಭವ ದೊರೆಯುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಈ Lava Probuds N33 ಸಾಧನವು ANC ತಂತ್ರಜ್ಞಾನವನ್ನು ಹೊಂದಿದ್ದು, ಇದು ಹಿನ್ನಲೆ ಶಬ್ದವನ್ನು 30 ಡೆಸಿಬೆಲ್‌ವರೆಗೆ ಕಡಿಮೆ ಮಾಡುತ್ತದೆ, ಇದು ಪ್ರಯಾಣ ಅಥವಾ ಕಚೇರಿ ಪರಿಸರಗಳಲ್ಲಿ ಉತ್ತಮ ಆಡಿಯೊ ಅನುಭವ ಒದಗಿಸಲಿದೆ. ಜೊತೆಗೆ, ಟ್ರಾನ್ಸ್‌ಪರನ್ಸಿ ಮೋಡ್ ಹೊರಗಿನ ಶಬ್ದಗಳನ್ನು ಅಗತ್ಯವಿದ್ದಾಗ ಕೇಳಲು ಅವಕಾಶ ನೀಡುತ್ತದೆ. ಕರೆಗಳ ವೇಳೆ ಸ್ಪಷ್ಟ ಧ್ವನಿಗಾಗಿ ಇಎನ್‌ಸಿ (ENC) ವೈಶಿಷ್ಟ್ಯವನ್ನು ಕೂಡ ನೀಡಲಾಗಿದೆ. ಇವು ಸಾಮಾನ್ಯವಾಗಿ ಹೆಚ್ಚು ದರದ ಪ್ರೀಮಿಯಂ ಇಯರ್‌ಫೋನ್‌ಗಳಲ್ಲಿ ಮಾತ್ರ ಕಾಣುವ ಸೌಲಭ್ಯಗಳು ಎಂದರೆ ತಪ್ಪಾಗುವುದಿಲ್ಲ.

ಇಷ್ಟೇ ಅಲ್ಲದೆ, ಈ ಇಯರ್‌ಬ್ಯಾಂಡ್ ಮೊಬೈಲ್ ಗೇಮರ್‌ಗಳಿಗೆ ಲಾವಾ ಪ್ರೋ ಗೇಮ್ ಮೋಡ್ ಅನ್ನು ಹೊಂದಿದೆ. ಕೇವಲ 45 ಮಿಲಿಸೆಕೆಂಡ್ ಲ್ಯಾಟೆನ್ಸಿಯಿಂದ, ಧ್ವನಿ ಮತ್ತು ದೃಶ್ಯಗಳ ನಡುವಿನ ವಿಳಂಬ ಕಡಿಮೆಯಾಗುತ್ತದೆ. ಇದರಿಂದ ಗೇಮಿಂಗ್ ವೇಳೆ ತಕ್ಷಣದ ಧ್ವನಿ ಪ್ರತಿಕ್ರಿಯೆ ಅನುಭವ ಸಿಗುತ್ತದೆ. ಕಡಿಮೆ ಬೆಲೆಯೆಲ್ಲಿ ನೆಕ್‌ಬ್ಯಾಂಡ್ ನೋಡುತ್ತಿದ್ದ ಗೇಮರ್‌ಗಳಿಗೂ ಇದು ಆಯ್ಕೆಯಾಗಲಿದೆ. ಇನ್ನು ಸಂಪರ್ಕ ವೈಶಿಷ್ಟ್ಯಗಳಲ್ಲಿ, Bluetooth 5.4, Type-C ಫಾಸ್ಟ್ ಚಾರ್ಜಿಂಗ್ ಮತ್ತು ಡ್ಯುಯಲ್ ಡಿವೈಸ್ ಪೇರಿಂಗ್ ವೈಶಿಷ್ಟ್ಯಗಳಿವ. ಅಂದರೆ, ಎರಡು ಸಾಧನಗಳಿಗೆ ಒಂದೇ ವೇಳೆ ಸಂಪರ್ಕಿಸಿಸಬಹುದಾಗಿದೆ.
ಈ Lava Probuds N33 ಸಾಧನವು ದೀರ್ಘ ಬ್ಯಾಟರಿ ಲೈಫ್ ಮತ್ತು ವೇಗದ ಚಾರ್ಜಿಂಗ್ ಸಹ ಹೊಂದಿದ್ದು, ಇದರಲ್ಲಿ 300mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಇದು ANC ಆಫ್ ಮಾಡಿದಾಗ 40 ಗಂಟೆಗಳ ಪ್ಲೇಬ್ಯಾಕ್ ಮತ್ತು ANC ಆನ್ ಮಾಡಿದಾಗ ಸುಮಾರು 31 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ. ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 10 ಗಂಟೆಗಳ ಪ್ಲೇಬ್ಯಾಕ್ ಸಿಗುತ್ತದೆ, ಮತ್ತು ಪೂರ್ಣ ಚಾರ್ಜ್ ಆಗಲು ಸುಮಾರು 60 ನಿಮಿಷ ಬೇಕಾಗುತ್ತದೆ.
ಈ ನೆಕ್‌ಬ್ಯಾಂಡ್ ಸುರಕ್ಷತೆ ಮತ್ತು ರಕ್ಷಣೆಗೂ ಸಹ ಕಂಪೆನಿಯು ಗಮನಹರಿಸಿದೆ. ಈ ಸಾಧನದಲ್ಲಿ IPX5 ರೇಟಿಂಗ್ ಇದೆ. ಇದರಿಂದ ಈ ನೆಕ್‌ಬ್ಯಾಂಡ್ ವ್ಯಾಯಾಮ ಅಥವಾ ಪ್ರಯಾಣದ ವೇಳೆ ಬೆವರು ಮತ್ತು ನೀರಿನ ಸಿಂಪಡಣೆಯಂತಹ ಸಂದರ್ಭಗಳನ್ನು ತಡೆದುಕೊಳ್ಳಬಲ್ಲದು. ನೆಕ್‌ಬ್ಯಾಂಕ್ ಬಳಕೆದಾರರು, ಹೆಚ್ಚು ಇಷ್ಟಪಡುವ, ಮ್ಯಾಗ್ನೆಟಿಕ್ ಹಾಲ್ ಸ್ವಿಚ್ ವೈಶಿಷ್ಟ್ಯವು ಸಹ ಇದ್ದು, ಈ ಇಯರ್‌ಬಡ್ಸ್ ಬೇರ್ಪಟ್ಟಾಗ ಸ್ವಯಂಚಾಲಿತವಾಗಿ ಆನ್ ಆಗಿ, ಜೋಡಿಸಿದಾಗ ಆಫ್ ಆಗುತ್ತದೆ. ನಾಲ್ಕು ಬಟನ್ ನಿಯಂತ್ರಣದಿಂದ ಸಂಗೀತ, ಕರೆ ಮತ್ತು ವಾಲ್ಯೂಮ್ ಅನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.
Lava Probuds N33: ಬೆಲೆ ಮತ್ತು ಲಭ್ಯತೆ
ಹೊಸ Lava Probuds N33 ವೈರ್‌ಲೆಸ್ ನೆಕ್‌ಬ್ಯಾಂಡ್ ಸಾಧನವು ₹1,299 ಬೆಲೆಯಲ್ಲಿ ಪರಿಚಯಗೊಂಡಿದೆ ಮತ್ತು ಇಂದನಿಂದಲೇ ಲೇ ಲಾವಾದ ಅಧಿಕೃತ ವೆಬ್‌ಸೈಟ್ ಹಾಗೂ ಭಾರತದ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಗ್ರಾಹಕರು Obsidian Black ಮತ್ತು Cosmic Teal Green ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಈ ಸಾಧನವನ್ನು ಖರೀದಿಸಬಹುದು. ಒಟ್ಟಾರೆಯಾಗಿ, ಈ ಸಾಧನವು ಈ ಸಾಧನವು ಅತ್ಯುತ್ತಮ ಆಡಿಯೊ ಅನುಭವ, ಬ್ಯಾಟರಿ ದೀರ್ಘಾವಧಿ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬಜೆಟ್ ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಯಾಗಬಹುದು.


Click it and Unblock the Notifications








