Home
Gadgets

5G ಸಂಪರ್ಕದೊಂದಿಗೆ ಭಾರತದಲ್ಲಿ ಲೆನೊವೊ ಐಡಿಯಾ ಟ್ಯಾಬ್ ಬಿಡುಗಡೆ!

ಪ್ರೀಮಿಯಂ 'ಐಡಿಯಾ ಟ್ಯಾಬ್ ಪ್ರೊ' ನ ಯಶಸ್ಸಿನ ನಂತರ, ಲೆನೊವೊ ತನ್ನ ಹೊಸ 'ಐಡಿಯಾ ಟ್ಯಾಬ್' (Lenovo Idea Tab) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ 15 ನೊಂದಿಗೆ 5G ಸಂಪರ್ಕ ಆಯ್ಕೆಯಲ್ಲಿ ಪರಿಚಯಗೊಂಡಿರುವ ಈ ಹೊಸ ಮಾದರಿಯ ಟ್ಯಾಬ್ಲೆಟ್ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒದಗಿಸುವ ಗುರಿ ಹೊಂದಿದ್ದು, ಮಧ್ಯಮ ಶ್ರೇಣಿಯ ಟ್ಯಾಬ್ಲೆಟ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲು ತಯಾರಾಗಿ ಬಂದಿದೆ. ಹಾಗಾದರೆ, ಹೊಸ ಐಡಿಯಾ ಟ್ಯಾಬ್‌ ಹೇಗಿದೆ?, ಇದೆ ಪ್ರಮುಖ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

ಲೆನೊವೊ ಐಡಿಯಾ ಟ್ಯಾಬ್: ಪ್ರಮುಖ ವೈಶಿಷ್ಟ್ಯಗಳು

ಹೊಸ ಐಡಿಯಾ ಟ್ಯಾಬ್ 11-ಇಂಚಿನ ದೊಡ್ಡ 2.5K LCD ಡಿಸ್‌ಪ್ಲೇಯನ್ನು ಹೊಂದಿದೆ, ಇದು ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಇದರ ಹೊಳಪು 500 ನಿಟ್‌ಗಳವರೆಗೆ ತಲುಪುತ್ತದೆ, ಇದು ಪ್ರಕಾಶಮಾನವಾದ ಪರಿಸರದಲ್ಲೂ ಸುಲಭವಾಗಿ ವೀಕ್ಷಿಸಲು ಸಹಾಯ ಮಾಡುತ್ತದೆ. ಕಣ್ಣುಗಳ ರಕ್ಷಣೆಗೆ ಲೆನೊವೊ ವಿಶೇಷ ಗಮನ ನೀಡಿದ್ದು, ಟ್ಯಾಬ್ಲೆಟ್ TÜV ರೈನ್‌ಲ್ಯಾಂಡ್ ಐ-ಕೇರ್ ಪ್ರಮಾಣೀಕರಣವನ್ನು ಪಡೆದಿದೆ. ಇದರಿಂದ ದೀರ್ಘಕಾಲದ ಬಳಕೆಯಲ್ಲೂ ಕಣ್ಣುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದು ಲೆನೊವೊ ಕಂಪೆನಿಯು ಹೇಳಿಕೊಂಡಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಐಡಿಯಾ ಟ್ಯಾಬ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್ ಹೊಂದಿದ್ದು, ಇದು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಯಾಗಿದೆ. ಇದು ದೈನಂದಿನ ಕಾರ್ಯಗಳು, ಲಘು ಗೇಮಿಂಗ್ ಮತ್ತು ವಿಡಿಯೋ ಸ್ಟ್ರೀಮಿಂಗ್‌ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಸಂಗ್ರಹಣೆಯನ್ನು ವಿಸ್ತರಿಸಲು ಮೈಕ್ರೋ SD ಕಾರ್ಡ್ ಸ್ಲಾಟ್ ಸಹ ಇದೆ, ಇದರ ಮೂಲಕ 2TB ವರೆಗೆ ಹೆಚ್ಚಿಸಿಕೊಳ್ಳಬಹುದು.ಹೊಸ ಐಡಿಯಾ ಟ್ಯಾಬ್‌ನ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ, ಇದು ಬಾಕ್ಸ್‌ನಿಂದಲೇ ಆಂಡ್ರಾಯ್ಡ್ 15 ನೊಂದಿಗೆ ಬರುತ್ತದೆ.

5G ಸಂಪರ್ಕದೊಂದಿಗೆ ಭಾರತದಲ್ಲಿ ಲೆನೊವೊ ಐಡಿಯಾ ಟ್ಯಾಬ್ ಬಿಡುಗಡೆ!

ಲೆನೊವೊ ಎರಡು ಪ್ರಮುಖ ಓಎಸ್ ಅಪ್‌ಡೇಟ್‌ಗಳನ್ನು (ಆಂಡ್ರಾಯ್ಡ್ 17 ವರೆಗೆ) ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು (2029 ರವರೆಗೆ) ಒದಗಿಸುವುದಾಗಿ ಭರವಸೆ ನೀಡಿದೆ. ಇದು ಈ ವರ್ಗದ ಟ್ಯಾಬ್ಲೆಟ್‌ಗಳಲ್ಲಿ ಅಪರೂಪ ಮತ್ತು ಬಳಕೆದಾರರಿಗೆ ದೀರ್ಘಕಾಲದವರೆಗೆ ಸುರಕ್ಷಿತ ಮತ್ತು ನವೀಕರಿಸಿದ ಅನುಭವವನ್ನು ಖಚಿತಪಡಿಸುತ್ತದೆ. ಇದು ವೈ-ಫೈ ಮಾತ್ರ ಮತ್ತು 5G ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. 5G ಸಂಪರ್ಕ ಆಯ್ಕೆಯು ಪ್ರಯಾಣದಲ್ಲಿರುವಾಗಲೂ ಇಂಟರ್ನೆಟ್ ಬಳಸಲು ಇಷ್ಟಪಡುವವರಿಗೆ ಸೂಕ್ತವಾಗಿದೆ. ಅಪ್ಲಿಕೇಶನ್‌ಗಳ ವೇಗವನ್ನು ಹೆಚ್ಚಿಸಲು ಲೆನೊವೊ ಟರ್ಬೋಸಿಸ್ಟಮ್ ಎಂಬ ತಂತ್ರಜ್ಞಾನವನ್ನು ಕೂಡ ಸೇರಿಸಲಾಗಿದೆ.

ಆಡಿಯೋ ವಿಷಯದಲ್ಲಿ, ಐಡಿಯಾ ಟ್ಯಾಬ್ ಡಾಲ್ಬಿ ಅಟ್ಮಾಸ್ ಟ್ಯೂನಿಂಗ್ ಹೊಂದಿರುವ ನಾಲ್ಕು ಸ್ಪೀಕರ್‌ಗಳನ್ನು ಹೊಂದಿದೆ. ಇದರಲ್ಲಿರುವ 3.5mm ಹೆಡ್‌ಫೋನ್ ಜ್ಯಾಕ್ ಇರುವುದು ಸಂಗೀತ ಪ್ರಿಯರಿಗೆ ಮತ್ತೊಂದು ಪ್ಲಸ್ ಪಾಯಿಂಟ್. ಇದರ ಕ್ಯಾಮೆರಾಗಳು ಮೂಲಭೂತವಾಗಿದ್ದು, ಹಿಂಭಾಗದಲ್ಲಿ 8MP ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ. 20W ಚಾರ್ಜಿಂಗ್ ಬೆಂಬಲದೊಂದಿಗೆ ಬರುವ 7040mAh ಬ್ಯಾಟರಿ ಸಾಮಾನ್ಯ ಬಳಕೆಯಲ್ಲಿ ಇಡೀ ದಿನದವರೆಗೂ ಬಾಳಿಕೆ ಬರುತ್ತದೆ. ಜೊತೆಗೆ, ಗೂಗಲ್ ಸಹಯೋಗದೊಂದಿಗೆ ಸರ್ಕಲ್ ಟು ಸರ್ಚ್ ಮತ್ತು ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಲೆನೊವೊ AI ನೋಟ್ ನಂತಹ ಕೆಲವು AI ವೈಶಿಷ್ಟ್ಯಗಳನ್ನು ಕೂಡ ಸೇರಿಸಲಾಗಿದೆ.

ಲೆನೊವೊ ಐಡಿಯಾ ಟ್ಯಾಬ್: ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಲೆನೊವೊ ಐಡಿಯಾ ಟ್ಯಾಬ್ ವೈ-ಫೈ + ಪೆನ್ ರೂಪಾಂತರವು ₹16,999 ಬೆಲೆಯಲ್ಲಿ ಪರಿಚಯಗೊಂಡಿದೆ. ಹಾಗೆಯೇ ಇದರ 5G + ಪೆನ್ ರೂಪಾಂತರದ ಬೆಲೆ ₹19,999 ಗಳಾಗಿವೆ.. ಈ ಟ್ಯಾಬ್ಲೆಟ್ ಈಗ ಲೆನೊವೊದ ಅಧಿಕೃತ ವೆಬ್‌ಸೈಟ್, Amazon.in ಮತ್ತು ಅಧಿಕೃತ ಆಫ್‌ಲೈನ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ. ಕೈಗೆಟುಕುವ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

Best Mobiles in India

English summary
Lenovo Idea Tab Launched in India with Android 15 and 5G Connectivity. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+