Home
Gadgets

ಭಾರತದಲ್ಲಿ 10,200mAh ಬ್ಯಾಟರಿಯ Lenovo Idea Tab Plus ಬಿಡುಗಡೆ!

ಭಾರತದ ಮಾರುಕಟ್ಟೆಗೆ ಕಳೆದ ಆಗಸ್ಟ್‌ನಲ್ಲಿ Lenovo Idea Tab ಬಿಡುಗಡೆಯಾಗಿ ಭರ್ಜರಿ ಯಶಸ್ಸನ್ನು ಗಳಿಸಿತ್ತು. ಇದೀಗ ಇದಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾದ ಹೊಸ Lenovo Idea Tab Plus ಅನ್ನು ಲೆನೊವೊ ಪರಿಚಯಿಸಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾದ Lenovo Idea Tab ಗಿಂತಲೂ ಹೆಚ್ಚು ಶಕ್ತಿಶಾಲಿ ಹಾರ್ಡ್‌ವೇರ್ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಮಾದರಿಯು ಮಿಡ್‌-ಪ್ರೀಮಿಯಂ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಬಂದಿದೆ. ಹಾಗಾದರೆ, ಹೊಸ Lenovo Idea Tab Plus ಟ್ಯಾಬ್ ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ

Lenovo Idea Tab Plus: ಬೆಲೆ ಮತ್ತು ಲಭ್ಯತೆ
ದೇಶದಲ್ಲಿ 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಯ Lenovo Idea Tab Plus ಬೆಲೆ 27,999 ರೂ. ಆಗಿದೆ. ಇದೇ ಬೆಲೆಯಲ್ಲಿ Wi-Fi ಹಾಗೂ 5G ಸಂಪರ್ಕ ಇರುವ ಆಯ್ಕೆಯೂ ಲಭ್ಯವಿದೆ. ಹೆಚ್ಚಿನ ಕಾರ್ಯಕ್ಷಮತೆ ಬೇಕಾದವರಿಗೆ 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ Wi-Fi ಆವೃತ್ತಿಯನ್ನು ರೂ. 30,999 ದರದಲ್ಲಿ ಪರಿಚಯಿಸಲಾಗಿದೆ. Luna Grey ಎಂಬ ಏಕೈಕ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾಗಿರುವ ಈ ಟ್ಯಾಬ್ಲೆಟ್ ಈಗ ಪ್ರೀ-ಆರ್ಡರ್‌ಗೆ ಲಭ್ಯವಿದ್ದು, ಡಿಸೆಂಬರ್ 22 ರಿಂದ Lenovo ಅಧಿಕೃತ ವೆಬ್‌ಸೈಟ್ ಮತ್ತು Amazon ಮೂಲಕ ಖರೀದಿಗೆ ಲಭ್ಯವಿರಲಿದೆ. ಇನ್ನು ಈ ಎಲ್ಲಾ ಮಾದರಿಗಳಲ್ಲೂ Tab Pen ಸ್ಟೈಲಸ್ ಬಾಕ್ಸ್‌ನಲ್ಲೇ ಸಿಗುವುದು ಈ ಟ್ಯಾಬ್ಲೆಟ್‌ನ ಪ್ರಮುಖ ಆಕರ್ಷಣೆಯಾಗಿದೆ.

ಭಾರತದಲ್ಲಿ 10,200mAh ಬ್ಯಾಟರಿಯ Lenovo Idea Tab Plus ಬಿಡುಗಡೆ!

Lenovo Idea Tab Plus: ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೇ ವಿಭಾಗದಲ್ಲಿ, Lenovo Idea Tab Plus ಗಮನಸೆಳೆಯುತ್ತಿದೆ. ಇದು 12.1 ಇಂಚಿನ ದೊಡ್ಡ LCD ಡಿಸ್‌ಪ್ಲೇ ಹೊಂದಿದ್ದು, 2.5K ರೆಸಲ್ಯೂಷನ್ ಮತ್ತು 90Hz ರಿಫ್ರೆಶ್ ರೇಟ್ ಸಪೋರ್ಟ್ ಇದೆ. ಇದರಲ್ಲಿ ಗರಿಷ್ಠ 800 ನಿಟ್ಸ್ ಬ್ರೈಟ್ನೆಸ್ ಇರುವುದರಿಂದ ಗೇಮಿಂಗ್‌ಗೆ ಸಹ ಇದು ಸೂಕ್ತವಾಗಿದೆ ಎಂದು ಲೆನೊವೊ ತಿಳಿಸಿದೆ. ಕಾರ್ಯಕ್ಷಮತೆಗಾಗಿ, Lenovo Idea Tab Plus ಸಾಧನವು MediaTek Dimensity 6400 ಪ್ರೊಸೆಸರ್ ಹೊಂದಿದ್ದು, ಇದು ಗರಿಷ್ಠ 12GB RAM ಮತ್ತು 256GB ಇನ್‌ಬಿಲ್ಟ್ ಸ್ಟೋರೇಜ್ ಬೆಂಬಲಿಸುತ್ತದೆ.

ಕ್ಯಾಮೆರಾ ಮತ್ತು ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, Lenovo Idea Tab Plus ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಆನ್‌ಲೈನ್ ಮೀಟಿಂಗ್‌ಗಳು, ವಿಡಿಯೋ ಕಾಲ್‌ಗಳು ಮತ್ತು ಡಾಕ್ಯುಮೆಂಟ್ ಸ್ಕ್ಯಾನಿಂಗ್‌ಗೆ ಇದು ಸಹಕಾರಿಯಾಗುತ್ತದೆ. Wi-Fi 802.11 a/b/g/n/ac, 5G (ಆಯ್ದ ಮಾದರಿಯಲ್ಲಿ) ಮತ್ತು Bluetooth 5.2 ಬೆಂಬಲ ಈ ಟ್ಯಾಬ್ಲೆಟ್‌ನ ಸಂಪರ್ಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬ್ಯಾಟರಿ ಮತ್ತು ಸ್ಮಾರ್ಟ್ ಫೀಚರ್‌ಗಳು Lenovo Idea Tab Plus ಅನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ. 10,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದ್ದು, ದೀರ್ಘಕಾಲ ಬಳಕೆಗೆ ಅನುಕೂಲವಾಗುತ್ತದೆ. ಸುಮಾರು 540 ಗ್ರಾಂ ತೂಕ ಹೊಂದಿರುವ ಈ ಟ್ಯಾಬ್ಲೆಟ್ Lenovo NotePad, Circle to Search, Google Gemini ಮತ್ತು Tab Pen ಸಪೋರ್ಟ್ ಮುಂತಾದ ಉಪಯುಕ್ತ ಫೀಚರ್‌ಗಳೊಂದಿಗೆ ಬರುತ್ತದೆ. ಮತ್ತು ಟ್ಯಾಬ್ಲೆಟ್ Android 15 ಮೇಲೆ ಕಾರ್ಯನಿರ್ವಹಿಸುತ್ತದೆ.

ಒಟ್ಟಾರೆಯಾಗಿ, ದೊಡ್ಡ 2.5K ರೆಸಲ್ಯೂಷನ್ ಡಿಸ್‌ಪ್ಲೇ, 10,200mAh ಶಕ್ತಿಶಾಲಿ ಬ್ಯಾಟರಿ, ಹೊಸ Android 15 ಅನುಭವ ಮತ್ತು ಸ್ಟೈಲಸ್ ಸಪೋರ್ಟ್ ಬೇಕೆನ್ನುವವರಿಗೆ Lenovo Idea Tab Plus ಭಾರತದಲ್ಲಿ ಗಮನಿಸಬಹುದಾದ ಪ್ರೀಮಿಯಂ ಟ್ಯಾಬ್ಲೆಟ್ ಆಗಿದೆ. ವಿದ್ಯಾರ್ಥಿಗಳು, ಪ್ರೊಫೆಷನಲ್‌ಗಳು ಹಾಗೂ ಮನರಂಜನೆಗೆ ಒಂದೇ ಸಾಧನ ಹುಡುಕುತ್ತಿರುವ ಬಳಕೆದಾರರಿಗೆ ಇದು ಮೌಲ್ಯಯುತ ಆಯ್ಕೆಯಾಗಿ ಕಾಣಿಸುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Lenovo has launched the new Idea Tab Plus with upgraded hardware and modern features, targeting users seeking a powerful mid-premium tablet experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+