ಶೀಘ್ರವೇ AI ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ ‘B by Lenskart’ ಸ್ಮಾರ್ಟ್‌ಗ್ಲಾಸ್!
ಭಾರತದ ಪ್ರಸಿದ್ಧ ಐವೇರ್ ಬ್ರಾಂಡ್ Lenskart ತನ್ನ ಹೊಸ AI ಆಧಾರಿತ ಸ್ಮಾರ್ಟ್‌ಗ್ಲಾಸ್ "B by Lenskart" ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಹೊಸ ಗ್ಲಾಸ್‌ಗಳಲ್ಲಿ Google Gemini Live ಆಧಾರಿತ ವಾಯ್ಸ್ ಅಸಿಸ್ಟೆಂಟ್, Sony ಕ್ಯಾಮೆರಾ, ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಕೆಲಸ ಮಾಡುವ ಅನೇಕ ವೈಶಿಷ್ಟ್ಯಗಳನ್ನು ತರುತ್ತಿರುವುದಾಗಿ ಕಂಪೆನಿಯು ತಿಳಿಸಿದ್ದು, ಈ ಗ್ಲಾಸ್‌ಗಳನ್ನು 2025ರ ಅಂತ್ಯದೊಳಗೆ ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸುತ್ತಿದೆ. ಹಾಗಾದರೆ, ಈ ಹೊಸ AI ಆಧಾರಿತ ಸ್ಮಾರ್ಟ್‌ಗ್ಲಾಸ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.
AI ಆಧಾರಿತ ಸ್ಮಾರ್ಟ್‌ಗ್ಲಾಸ್ "B by Lenskart"!
Lenskart ಪರಿಚಯಿಸಲಿರುವ ಮುಂಬರುವ AI ಆಧಾರಿತ ಸ್ಮಾರ್ಟ್‌ಗ್ಲಾಸ್ ಸಾಧನವನ್ನು "B by Lenskart" ಎಂದು ಕರೆಯಲಾಗಿದೆ. ಈ ಗ್ಲಾಸ್‌ಗಳು Qualcomm Snapdragon AR1 Gen 1 ಚಿಪ್‌ಸೆಟ್ ಮೇಲೆ ಕಾರ್ಯನಿರ್ವಹಿಸಲಿವೆ. ಇದೇ ಚಿಪ್ Ray-Ban Meta Smartglasses ಗಳಲ್ಲಿಯೂ ಬಳಸಲಾಗಿದೆ. Lenskart ಪ್ರಕಾರ, ಈ ಗ್ಲಾಸ್‌ಗಳು Google Gemini 2.5 AI ಮಾದರಿಯಿಂದ ಸಂಚಾಲಿತವಾಗಿದ್ದು, ಬಳಕೆದಾರರೊಂದಿಗೆ ಸಹಜವಾಗಿ ಮಾತುಕತೆ ನಡೆಸಬಲ್ಲ ಬುದ್ಧಿವಂತ ಸಹಾಯಕ (AI Assistant) ಅನ್ನು ಹೊಂದಿರುತ್ತದೆ.
ಈ ಸ್ಮಾರ್ಟ್‌ಗ್ಲಾಸ್‌ಗಳಲ್ಲಿ Sony ಇಮೇಜ್ ಸೆನ್ಸರ್ ಹೊಂದಿದ ಇನ್‌ಬಿಲ್ಟ್ ಕ್ಯಾಮೆರಾ ಇರುತ್ತದೆ. ಇದರಿಂದ ಬಳಕೆದಾರರು ನೇರವಾಗಿ ಫೋಟೋ ತೆಗೆದು ಅಥವಾ ವೀಡಿಯೋ ರೆಕಾರ್ಡ್ ಮಾಡಬಹುದು. ಜೊತೆಗೆ, ಈ ಸ್ಮಾರ್ಟ್‌ಗ್ಲಾಸ್‌ಗಳು UPI ಪೇಮೆಂಟ್, ಲೈವ್ ಭಾಷಾಂತರ (Live Translation) ಮತ್ತು ಆರೋಗ್ಯ ಕುರಿತ ಮಾಹಿತಿಗಳು ನೀಡುವ ಸಾಮರ್ಥ್ಯ ಹೊಂದಿರುತ್ತವೆ. ಬಳಕೆದಾರರು ಗ್ಲಾಸ್‌ನ ಕ್ಯಾಮೆರಾ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ ನೇರ ಪಾವತಿ ಮಾಡಬಹುದಾಗಿದೆ. ಅಂದರೆ, UPI Lite ಪೇಮೆಂಟ್ ಸೇರಿದಂತೆ ಹಲವಾರು ಪೇಮೆಂಟ್ ವ್ಯವಸ್ಥೆಗಳು ಕೂಡ ಇರಬಹುದು.

ಭಾರತೀಯ ಡೆವಲಪರ್‌ಗಳಿಗೆ ಹೊಸ ವೇದಿಕೆ?
Lenskart ತನ್ನ ಹೊಸ ಸ್ಮಾರ್ಟ್‌ಗ್ಲಾಸ್ ವೇದಿಕೆಯನ್ನು ಭಾರತೀಯ ಆಪ್ ಡೆವಲಪರ್‌ಗಳಿಗೆ ಮುಕ್ತಗೊಳಿಸಿಸುವುದಾಗಿ ತಿಳಿಸಿದೆ. ಅಂದರೆ, ದೇಶದ ಆಪ್ ಕಂಪನಿಗಳು ಈಗ ತಮ್ಮ ಸೇವೆಗಳನ್ನು ಈ ಗ್ಲಾಸ್‌ಗಳಿಗೆ ಅನುಕೂಲಕರವಾಗಿ ರೂಪಿಸಬಹುದು ಅಥವಾ ಹೊಸ ಆಪ್‌ಗಳನ್ನು ಅಭಿವೃದ್ಧಿಪಡಿಸಬಹುದು. ಕಂಪನಿಯು ಆಹಾರ ವಿತರಣೆ, ಮನರಂಜನೆ, ಫಿಟ್ನೆಸ್, ಟಿಕೆಟ್ ಬುಕ್ಕಿಂಗ್ ವಿಭಾಗಗಳಲ್ಲಿ ಸಹಕಾರ ನೀಡುವ ಯೋಜನೆ ಹೊಂದಿದೆ. ಮುಂದಿನ ದಿನಗಳಲ್ಲಿ Zomato, Swiggy, BookMyShow ಮುಂತಾದ ಜನಪ್ರಿಯ ಆಪ್‌ಗಳು "B by Lenskart" ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
Meta ಕಂಪನಿಯು ತನ್ನ Ray-Ban Meta ಗ್ಲಾಸ್ ಮೂಲಕ AI ಆಧಾರಿತ ಸ್ಮಾರ್ಟ್‌ಗ್ಲಾಸ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಇದೀಗ "B by Lenskart" ಸ್ಮಾರ್ಟ್‌ಗ್ಲಾಸ್‌ಗಳು ಭಾರತದ ತಂತ್ರಜ್ಞಾನ ಲೋಕದಲ್ಲಿ ಹೊಸ ಯುಗದ ಪ್ರಾರಂಭವಾಗುವ ಸೂಚನೆಯನ್ನು ನೀಡಿವೆ. AI ಅಸಿಸ್ಟೆಂಟ್, ಕ್ಯಾಮೆರಾ, ಹಾಗೂ ಸ್ಥಳೀಯ ಪಾವತಿ ಬೆಂಬಲದೊಂದಿಗೆ, ಈ ಗ್ಲಾಸ್‌ಗಳು ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಹತ್ತಿರಕ್ಕೆ ತರುವ ಪ್ರಯತ್ನವಾಗಬಹುದು. ಭಾರತದ ಬಳಕೆದಾರರಿಗೆ AI ಮತ್ತು ಸ್ಮಾರ್ಟ್ ವೇಯರಬಲ್ ಸಾಧನಗಳ ಭವಿಷ್ಯವನ್ನು ತೆರೆದಿಡುವ ಪ್ರಮುಖ ಹೆಜ್ಜೆ ಇದು ಎಂಬುದನ್ನು ನನ್ನ ಅಭಿಪ್ರಾಯ.
Lenskart ಘೋಷಿಸಿರುವ ಹೊಸ "B by Lenskart" AI ಸ್ಮಾರ್ಟ್‌ಗ್ಲಾಸ್ ಕುರಿತಂತೆ ನಿಮ್ಮ ಅನಿಸಿಕೆ ಏನು?. ನಿಮ್ಮನ್ನು ಆಕರ್ಷಿಸಿದ ಪೀಚರ್ ಯಾವುದು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








