2025ರಲ್ಲಿ 43-ಇಂಚಿನ ಟಾಪ್ 4 ಸ್ಮಾರ್ಟ್‌ಟಿವಿಗಳು: ಕಡಿಮೆ ಬೆಲೆ, ಪ್ರೀಮಿಯಂ ಲುಕ್!
ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆ ಮೊದಲಿನಂತಿಲ್ಲ. ಇದೀಗ ಅತ್ಯಂತ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವಂತಹ ಹಲವಾರು ಆಯ್ಕೆಗಳಿವೆ. 2025ರಲ್ಲಿ ಬಜೆಟ್ ಸೆಗ್ಮೆಂಟ್‌ನಲ್ಲಿ ಹಲವು ಬ್ರಾಂಡ್‌ಗಳು ಹೊಸ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿವೆ. ಇದು ಕಡಿಮೆ ಬೆಲೆಯಲ್ಲೇ ಪ್ರೀಮಿಯಂ ತಂತ್ರಜ್ಞಾನ, ಉತ್ತಮ ಚಿತ್ರ ಗುಣಮಟ್ಟ ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ನೀಡುತ್ತಿವೆ. ನೀವು ಪ್ರಸ್ತುತ 43-ಇಂಚಿನ ಸ್ಮಾರ್ಟ್‌ಟಿವಿಯನ್ನು ಖರೀದಿಸಲು ಬಯಸಿದ್ದರೆ, ನಾವು ನಿಮಗಾಗಿ ಅತ್ಯುತ್ತಮ ನಾಲ್ಕು ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಿದ್ದೇವೆ. ಇವು ಬೆಲೆ, ವೈಶಿಷ್ಟ್ಯಗಳು ಮತ್ತು ಬಳಕೆದಾರ ಅನುಭವದ ಸಮತೋಲನವನ್ನು ಒದಗಿಸುವ ಉತ್ತಮ ಮಾದರಿಗಳಾಗಿವೆ.
Samsung 43-inch 4K Ultra HD Smart TV - ₹25,490
ಬಜೆಟ್ ವಿಭಾಗದಲ್ಲಿ Samsungನ 43-ಇಂಚಿನ 4K UHD ಟಿವಿ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. Tizen OS ಹೊಂದಿರುವ ಈ ಟಿವಿ ಸ್ಪಷ್ಟ ಬಣ್ಣಗಳು ಮತ್ತು ನೈಸರ್ಗಿಕ ಕಾನ್ಟ್ರಾಸ್ಟ್ ನೀಡುತ್ತದೆ. 50Hz ರಿಫ್ರೆಶ್ ರೇಟ್ ಮತ್ತು Anynet+ (HDMI-CEC) ಸಪೋರ್ಟ್ ಒಂದೇ ರಿಮೋಟ್‌ನಿಂದ ಹಲವಾರು ಸಾಧನಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೂರು HDMI ಪೋರ್‍ಟ್‌ಗಳು, RF ಇನ್‌ಪುಟ್ ಮತ್ತು ಸ್ಥಿರ ಕಾರ್ಯಕ್ಷಮತೆ ಈ ಬೆಲೆಗೆ ಇದನ್ನು ಗೆಲ್ಲುವ ಆಯ್ಕೆಯಾಗಿ ಮಾಡಿವೆ.
Sony BRAVIA 2 II 43-inch 4K Smart TV - ₹38,490
Sony BRAVIA 2 II ಈ ವರ್ಷ ಬಿಡುಗಡೆ ಆದ ಅತ್ಯಂತ ಗಮನಾರ್ಹ ಮಾದರಿಗಳಲ್ಲಿ ಒಂದಾಗಿದೆ. 4K LCD ಪ್ಯಾನೆಲ್, Live Colour ತಂತ್ರಜ್ಞಾನ ಮತ್ತು 50Hz ರಿಫ್ರೆಶ್ ರೇಟ್ ಹೊಂದಿರುವ ಇದು ಚಿತ್ರ ಗುಣಮಟ್ಟದಲ್ಲಿ ಸ್ಪಷ್ಟ ಮೇಲುಗೈ ಸಾಧಿಸುತ್ತದೆ. Android OS, Wi-Fi, 4 HDMI, 2 USB, Bluetooth 5.3 ಮತ್ತು Chromecast Built-in ಒಟ್ಟಿಗೆ ಅತ್ಯುತ್ತಮ ಸ್ಮಾರ್ಟ್ ಅನುಭವ ಒದಗಿಸುತ್ತವೆ. Dolby Atmos ಸಹಿತ 20W ಸ್ಪೀಕರ್‌ಗಳು ಪ್ರೀಮಿಯಂ ಆಡಿಯೋ ಹುಡುಕುವವರಿಗೆ ಸೂಕ್ತ.

LG 43-inch NANO 83A 4K Smart TV - ₹35,290
LGಯ NANO 83A ತನ್ನ α7 AI Processor 4K Gen8 ನಿಂದ ನಿಖರ ಬಣ್ಣ ಮತ್ತು ಶಾರ್ಪ್ ದೃಶ್ಯಗಳನ್ನು ಒದಗಿಸುತ್ತದೆ. AI Magic Remote, ವಾಯ್ಸ್ ಕಂಟ್ರೋಲ್ ಮತ್ತು ಸುಲಭ UI ಇದರ ಪ್ರಮುಖ ಬಲ. 60Hz ರಿಫ್ರೆಶ್ ರೇಟ್ ಮತ್ತು Dolby Atmos ಬೆಂಬಲದಿಂದ ಸಿನಿಮಾಗಳು ಮತ್ತು ಸ್ಪೋರ್ಟ್ಸ್ ವೀಕ್ಷಣೆ ಹೆಚ್ಚು ಜೀವಂತವಾಗಿ ಕಾಣುತ್ತದೆ. ಚಿತ್ರ ಮತ್ತು ಧ್ವನಿ ಗುಣಮಟ್ಟದಲ್ಲಿ ಸಮತೋಲನ ಬಯಸುವವರಿಗೆ ಇದು ಒಳ್ಳೆಯ ಆಯ್ಕೆ.
Xiaomi FX Pro QLED Smart TV 43-inch- ₹32,999
Xiaomi FX Pro ತನ್ನ QLED ಪ್ಯಾನೆಲ್‌ನಿಂದ ಬಣ್ಣಗಳನ್ನು ಹೆಚ್ಚಿಸುತ್ತದೆ. 43-ಇಂಚು ಮಾದರಿಯಲ್ಲಿ 30W ಮತ್ತು 55-ಇಂಚು ಮಾದರಿಯಲ್ಲಿ 34W ಸ್ಪೀಕರ್‌ಗಳಿದ್ದು, Dolby Audio ಸಹಿತ ತುಂಬಾ ಸಮೃದ್ಧ ಧ್ವನಿ ನೀಡುತ್ತದೆ. Fire TV Built-in ಇರುವುದರಿಂದ 12,000ಕ್ಕೂ ಹೆಚ್ಚು ಆಪ್‌ಗಳಿಗೆ ಪ್ರವೇಶ ಸಿಗುತ್ತದೆ. 2GB RAM ಮತ್ತು 32GB ಸ್ಟೋರೇಜ್‌ನಿಂದ ನಿತ್ಯ ಬಳಕೆಯಲ್ಲಿ ಲ್ಯಾಗ್ ಕಾಣದೇ ಸ್ಮೂತ್ ಕಾರ್ಯಕ್ಷಮತೆ ದೊರೆಯುತ್ತದೆ.
ಯಾವ ಟಿವಿ ನಿಮಗೆ ಸೂಕ್ತ?
2025ರಲ್ಲಿ ಬಜೆಟ್ ಟಿವಿಗಳ ಗುಣಮಟ್ಟ ಶ್ರೇಷ್ಠ ಮಟ್ಟಕ್ಕೆ ಏರಿದೆ. 4K ರೆಸಲ್ಯೂಶನ್, Dolby Audio, ಶಕ್ತಿಶಾಲಿ ಪ್ರೊಸೆಸರ್‌ಗಳು ಮತ್ತು ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಎಲ್ಲವೂ ಕಡಿಮೆ ಬೆಲೆಯಲ್ಲಿಯೇ ಲಭ್ಯವಾಗುತ್ತಿವೆ. Samsung ಮತ್ತು Xiaomi ಗೇಮಿಂಗ್ ಹಾಗೂ ಸ್ಟ್ರೀಮಿಂಗ್‌ಗಾಗಿ ಉತ್ತಮವಾಗಿದ್ದರೆ, Sony ಮತ್ತು LG ಚಿತ್ರ ನಿಖರತೆ ಹಾಗೂ ಕಲರ್ ಪ್ರದರ್ಶನದಲ್ಲಿ ಮೇಲುಗೈ ಸಾಧಿಸುತ್ತವೆ. ಈ ಮೇಲಿನ ಸ್ಮಾರ್ಟ್‌ಟಿವಿಗಳಲ್ಲಿ ನಿಮ್ಮ ಗಮನಸೆಳೆದ ಸ್ಮಾರ್ಟ್‌ಟಿವಿ ಯಾವುದು?. ಈ ಬೆಲೆಗಳಲ್ಲಿ ನೀವು ಹೊಸ ಸ್ಮಾರ್ಟ್‌ಟಿವಿಯನ್ನು ಖರೀದಿಸಲು ಇಚ್ಚಿಸುತ್ತೀರಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








