ಭಾರತದಲ್ಲಿ Lumio Arc 5 ಮತ್ತು Arc 7 ಪ್ರೊಜೆಕ್ಟರ್‌ಗಳು ಪರಿಚಯ!
Lumio ತನ್ನ ಮೊದಲ ಪ್ರೊಜೆಕ್ಟರ್‌ಗಳಾದ Arc 5 ಮತ್ತು Arc 7 ಸಾಧನಗಳನ್ನು ಭಾರತದಲ್ಲಿ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದೆ. ಏಪ್ರಿಲ್‌ನಲ್ಲಿ Vision 7 ಮತ್ತು Vision 9 ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದ ನಂತರ, ಕಂಪನಿಯು ಈಗ ಪ್ರೊಜೆಕ್ಟರ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಈ ಹೊಸ ಪ್ರೊಜೆಕ್ಟರ್‌ಗಳು Google TV ಮತ್ತು Netflix ಅಪ್ಲಿಕೇಶನ್‌ಗಳಿಗೆ ಅಧಿಕೃತ ಬೆಂಬಲವನ್ನು ಒದಗಿಸುತ್ತವೆ. ಇವು 1080p ರೆಸಲ್ಯೂಶನ್‌ನಲ್ಲಿ ಔಟ್‌ಪುಟ್ ನೀಡುವ ಸಾಮರ್ಥ್ಯ ಹೊಂದಿದ್ದು, ಕನಿಷ್ಠ 200 ANSI ಲುಮೆನ್‌ಗಳ ಹೊಳಪನ್ನು ಹೊಂದಿವೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯು ಇಲ್ಲಿದೆ.
Lumio Arc 5 ಮತ್ತು Arc 7 : ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
Lumio Arc 5 ಮತ್ತು Arc 7 ಎರಡೂ ಸಹ LED ಪ್ರೊಜೆಕ್ಟರ್‌ಗಳಾಗಿವೆ. ಇದರಲ್ಲಿ Arc 5 100-ಇಂಚಿನ ಪರದೆಯನ್ನು ಬೆಂಬಲಿಸಲಿದ್ದರೆ, Arc 7 120-ಇಂಚಿನ ಪರದೆಯವರೆಗೆ ಬೆಂಬಲಿಸುತ್ತದೆ. ಹೊಳಪಿನ ವಿಷಯದಲ್ಲಿ, Arc 5 200 ANSI ಲುಮೆನ್‌ಗಳನ್ನು ಹೊಂದಿದ್ದು, Arc 7 400 ANSI ಲುಮೆನ್‌ಗಳ ಹೆಚ್ಚಿನ ಬೆಳಕಿನ ಔಟ್‌ಪುಟ್ ನೀಡುತ್ತದೆ. ಆಡಿಯೊಕ್ಕಾಗಿ, Arc 5 ಒಂದು 5W ಸ್ಪೀಕರ್ ಅನ್ನು ಹೊಂದಿದೆ, ಆದರೆ Arc 7 ಎರಡು 8W ಸ್ಪೀಕರ್‌ಗಳನ್ನು ಒಳಗೊಂಡಿದೆ. ಎರಡೂ ಸಾಧನಗಳು Lumio Arc Light Engine ನಿಂದ ಚಾಲಿತವಾಗಿದ್ದು, ಸಂಪೂರ್ಣವಾಗಿ ಸೀಲ್ ಮಾಡಲ್ಪಟ್ಟ ಮತ್ತು ಧೂಳು ನಿರೋಧಕವಾಗಿವೆ ಎಂದು ಕಂಪನಿಯು ತಿಳಿಸಿದೆ.
ಈ ಪ್ರೊಜೆಕ್ಟರ್‌ಗಳು Google TV ಮತ್ತು Netflix ನಿಂದ ಪ್ರಮಾಣೀಕರಿಸಲ್ಪಟ್ಟಿವೆ, ಅಂದರೆ ಆಪರೇಟಿಂಗ್ ಸಿಸ್ಟಮ್ ಮತ್ತು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಅಧಿಕೃತ ಬೆಂಬಲವಿದೆ. Lumio ಎಲ್ಲಾ ಪ್ರಮುಖ ಓವರ್-ದಿ-ಟಾಪ್ (OTT) ಅಪ್ಲಿಕೇಶನ್‌ಗಳನ್ನು ಸಹ ಬೆಂಬಲಿಸುತ್ತವೆ. ಕಂಪನಿಯು ದೇಶಾದ್ಯಂತ 200 ಕ್ಕೂ ಹೆಚ್ಚು ಆಫ್‌ಲೈನ್ ಸೇವಾ ಕೇಂದ್ರಗಳನ್ನು ಹೊಂದಿದ್ದು, ಕ್ಯಾರಿ-ಇನ್ ಸೇವಾ ಅನುಭವವನ್ನು ಒದಗಿಸುತ್ತದೆ.

Lumio Arc 5 ಮತ್ತು Arc 7 ಎರಡೂ 16:9 ಸ್ಥಳೀಯ ಆಕಾರ ಅನುಪಾತ, 41.9% DCI-P3 ಕವರೇಜ್ ಮತ್ತು HDR10 ಬೆಂಬಲವನ್ನು ಒದಗಿಸುತ್ತವೆ. ಇವು MediaTek MT9630 ಪ್ರೊಸೆಸರ್ ನಿಂದ ಚಾಲಿತವಾಗಿದ್ದು, 2GB RAM ಮತ್ತು 16GB ಆಂತರಿಕ ಸಂಗ್ರಹಣೆಯನ್ನು ಹೊಂದಿವೆ. ವಿಡಿಯೋ ಕೋಡೆಕ್‌ಗಳ ವಿಷಯದಲ್ಲಿ, ಇವುಗಳು MPEG-2, MPEG-4, H.264, H.265 (HVEC), VP8, VP9, ಮತ್ತು AV1 ಅನ್ನು 1080p ರೆಸಲ್ಯೂಶನ್‌ನಲ್ಲಿ 60fps ವರೆಗೆ ಬೆಂಬಲಿಸುತ್ತವೆ. ಆಡಿಯೊ ಕೋಡೆಕ್‌ಗಳಾದ FLAC, ಡಾಲ್ಬಿ ಡಿಜಿಟಲ್ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ಅನ್ನು ಸಹ ಬೆಂಬಲಿಸುತ್ತವೆ.
ಈ ಸಾಧನಗಳು ಸುಲಭವಾದ ಟ್ರೆಪೆಜಾಯ್ಡಲ್ ಮರುಮಾಪನಾಂಕ ನಿರ್ಣಯ, ಸ್ವಯಂ-ಕೀಸ್ಟೋನ್ ಎಡಿಟ್, ಅಡಚಣೆ ತಪ್ಪಿಸುವಿಕೆ ಮತ್ತು ತ್ವರಿತ ಆಟೋಫೋಕಸ್‌ನಂತಹ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಸಂಪರ್ಕಕ್ಕಾಗಿ, Arc 5 ಮತ್ತು Arc 7 ಎರಡೂ ಬ್ಲೂಟೂತ್ 5.1, ವೈಫೈ 5 (2.4GHz ಮತ್ತು 5GHz ಬ್ಯಾಂಡ್‌ಗಳು), ಡಾಲ್ಬಿ ಪಾಸ್‌ಥ್ರೂ ಜೊತೆಗೆ HDMI 1.5 ಮತ್ತು 2.0, ಮತ್ತು USB 2.0 ಅನ್ನು ಬೆಂಬಲಿಸುತ್ತವೆ. ಹೆಚ್ಚುವರಿಯಾಗಿ, Lumio Arc ಪ್ರೊಜೆಕ್ಟರ್‌ಗಳು L1 Widevine ಮತ್ತು Netflix ESN ಅನ್ನು ಸಹ ಬೆಂಬಲಿಸುತ್ತವೆ.
ಬೆಲೆ ಮತ್ತು ಲಭ್ಯತೆ
Lumio Arc 5 ಪ್ರೊಜೆಕ್ಟರ್‌ನ್ನು ₹19,999 ಗೆ ಮತ್ತು Lumio Arc 7 ಪ್ರೊಜೆಕ್ಟರ್ ಅನ್ನು ₹34,999 ಗೆ ಮಾರಾಟ ಮಾಡಲಾಗುತ್ತಿದೆ. Arc 7 ಜುಲೈ 12 ರಿಂದ Amazon ನಲ್ಲಿ ಖರೀದಿಗೆ ಲಭ್ಯವಿರುತ್ತದೆ. Amazon ನ ಪ್ರೈಮ್ ಡೇ ಸೇಲ್‌ನ ಭಾಗವಾಗಿ, ಈ ಅವಧಿಯಲ್ಲಿ ಕಾರ್ಡ್ ಆಫರ್‌ಗಳೊಂದಿಗೆ Arc 7 ಅನ್ನು ₹29,999 ಗೆ ಪಡೆಯಬಹುದು. Lumio Arc 5 ಜುಲೈ ಕೊನೆಯ ವಾರದಲ್ಲಿ Amazon ನಲ್ಲಿ ಮಾರಾಟಕ್ಕೆ ಬರಲಿದೆ ಎಂದು ಕಂಪೆನಿಯು ತಿಳಿಸಿದೆ. .


Click it and Unblock the Notifications








