Home
Gadgets

ಭಾರತದಲ್ಲಿ ಇಂದಿನಿಂದ Meta Ray-Ban Gen 1 ಸ್ಮಾರ್ಟ್‌ಗ್ಲಾಸ್ ಸೇಲ್!

ಫೇಸ್‌ಬುಕ್ ಮಾಲಿಕತ್ವದ ಮೆಟಾ ಸಂಸ್ಥೆಯು ತನ್ನ ಇತ್ತೀಚಿನ Meta Ray-Ban Gen 1 ಸ್ಮಾರ್ಟ್‌ಗ್ಲಾಸ್‌ಗಳನ್ನು ಭಾರತದಲ್ಲಿ (ನವೆಂಬರ್ 21) ಇಂದಿನಿಂದ ಮಾರಾಟ ಮಾಡಲು ಪ್ರಾರಂಭಿಸಿದೆ. ದೇಶದಲ್ಲಿ Amazon, Flipkart ಹಾಗೂ Reliance Digital ಆನ್‌ಲೈನ್ ತಾಣಗಳಲ್ಲಿ Meta-Ban Gen 1 ಸ್ಮಾರ್ಟ್‌ಗ್ಲಾಸ್‌ಗಳ ಮಾರಾಟ ಆರಂಭವಾಗಿದ್ದು, ದೇಶದ ಗ್ರಾಹಕರಿಗೆ ಬ್ಯಾಂಕ್ ಕೊಡುಗೆಗಳೊಂದಿಗೆ ಶೇ. 20 ರಷ್ಟು ರಿಯಾಯಿತಿಯಲ್ಲಿ ಈ ಸಾಧನವು ಲಭ್ಯವಾಗುತ್ತಿದೆ. ಹಾಗಾದರೆ, ಈ Meta Ray-Ban Gen 1 ಸ್ಮಾರ್ಟ್‌ಗ್ಲಾಸ್‌ಗಳು ಹೇಗಿವೆ?, ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.

Meta-Ray-Ban Gen 1: ಬೆಲೆ ಮತ್ತು ಕೊಡುಗೆಗಳು.
Meta ತನ್ನ ಈ ಹೊಸ Meta Ray-Ban Gen 1 ಸ್ಮಾರ್ಟ್‌ಗ್ಲಾಸ್‌ಗಳನ್ನು ಭಾರತದಲ್ಲಿ ₹29,900 ರೂ.ಗಳ ಆರಂಭಿಕ ಬೆಲೆಯೊಂದಿಗೆ ಪರಿಚಯಿಸಿತ್ತು. ಆದರೆ, ಈ ಪ್ರಸ್ತುತ ಮಾರಾಟದ ಅವಧಿಯಲ್ಲಿ ಗ್ರಾಹಕರು ಈ ಸಾಧನವನ್ನು ₹22,920 ಪರಿಣಾಮಕಾರಿ ಬೆಲೆಯಲ್ಲಿ ಖರೀದಿಸಬಹುದು. ಜೊತೆಗೆ EMI ಮೂಲಕ ಖರೀದಿ ಮಾಡಲು ಬಯಸುವವರಿಗೆ, ತಿಂಗಳಿಗೆ ₹1,919ರಿಂದ EMI ಪ್ರಾರಂಭವಾಗುತ್ತದೆ. ಈ ಮೊತ್ತವು ಪಟ್ಟಿ ಮಾಡಲಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಅನ್ವಯವಾಗುವ ಬ್ಯಾಂಕ್ ಕೊಡುಗೆಗಳೊಂದಿಗೆ ಶೇ. 20% ರಿಯಾಯಿತಿಯನ್ನು ಒಳಗೊಂಡಿದೆ ಮತ್ತು ಡಿಸೆಂಬರ್ 1 ರವರೆಗೆ ಈ ವಿಶೇಷ ಬೆಲೆ ಮಾನ್ಯವಾಗಿರುತ್ತದೆ ಎಂದು Meta ತಿಳಿಸಿದೆ. ಆದರೆ, ವೇದಿಕೆ ಮತ್ತು ಪಾವತಿ ವಿಧಾನಕ್ಕೆ ಅನುಗುಣವಾಗಿ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು ಎಂಬುದನ್ನು ಗ್ರಾಹಕರು ಗಮನಿಸಬೇಕು.

ಭಾರತದಲ್ಲಿ ಇಂದಿನಿಂದ Meta Ray-Ban Gen 1 ಸ್ಮಾರ್ಟ್‌ಗ್ಲಾಸ್ ಸೇಲ್!

Meta-Ray-Ban Gen 1: ಹೇಗಿವೆ ಸ್ಮಾರ್ಟ್‌ಗ್ಲಾಸ್‌ಗಳು
ಈ Meta-Ray-Ban Gen 1 ಸ್ಮಾರ್ಟ್‌ಗ್ಲಾಸ್‌ಗಳು ಬಹು ಫ್ರೇಮ್ ಮತ್ತು ಲೆನ್ಸ್ ಸಂಯೋಜನೆಗಳಲ್ಲಿ ಬರುತ್ತದೆ, ಹಾಗೂ ಪರಿಚಿತ Ray-Ban ಸೌಂದರ್ಯವನ್ನು ಹಾಗೆಯೇ ಇರಿಸುತ್ತದೆ. ಖರೀದಿದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸಾಮಾನ್ಯ (ಪ್ರಿಸ್ಕ್ರಿಪ್ಶನ್), ಸನ್ ಲೆನ್ಸ್, ಪೊಲರೈಸ್‌ಡ್, ಟ್ರಾನ್ಸಿಷನ್ ಲೆನ್ಸ್ ಆಯ್ಕೆಗಳಲ್ಲಿ ಖರೀದಿಸಬಹುದು. ಇದರ ಗ್ಲಾಸೆಸ್‌ಗಳೊಂದಿಗೆ ಸಣ್ಣ ಗಾತ್ರದ ಚಾರ್ಜಿಂಗ್ ಕೇಸ್ ಕೂಡ ಸಿಗಲಿದೆ.

ಈ ಗ್ಲಾಸೆಸ್‌ಗಳ ಪ್ರಮುಖ ಆಕರ್ಷಣೆ Meta AI ಆಗಿದೆ. ಬಳಕೆದಾರರು 'Hey Meta ಎಂದು ಹೇಳುವ ಮೂಲಕ ತಮ್ಮ ಫೋನ್ ಬಳಸದೆಯೇ, ಇದರಲ್ಲಿ ಪ್ರಶ್ನೆಗಳನ್ನು ಕೇಳಬಹುದು, ಮಾಹಿತಿ ಪಡೆಯಬಹುದು ಅಥವಾ ಕೆಲವು ಕಾರ್ಯಗಳನ್ನು ಸಹ ನಿಯಂತ್ರಿಸಬಹುದು. ಈ ಸ್ಮಾರ್ಟ್‌ಗ್ಲಾಸ್ ಅನ್ನು ಕೇವಲ ಆಡಿಯೋ ಅಥವಾ ಕ್ಯಾಮೆರಾ ಸಾಧನಕ್ಕಿಂತ ಹೆಚ್ಚಾಗಿ ಸಂಪರ್ಕಿತ ಪರಿಕರದಂತೆ ಭಾಸವಾಗುವಂತೆ ಮಾಡಲು ಉದ್ದೇಶಿಸಲಾಗಿದೆ.

ನೀವು ಈ ಮೆಟಾ ಸಾಧನದಲ್ಲಿ ಫೋಟೊಗಳನ್ನು ಕ್ಲಿಕ್ ಮಾಡಬಹುದು, ವೀಡಿಯೊಗಳನ್ನು ಸೆರೆಹಿಡಿಯಬಹುದು. ಸುಮ್ಮನೆ Hey Meta, restyle this ಎಂದು ಹೇಳಿದರೆ, ನೀವು ಚಿತ್ರಿಸಿದ ಫೋಟೋಗಳಿಗೆ ಹಬ್ಬದ ಥೀಮ್ ಮತ್ತು ಕ್ರಿಯೇಟಿವ್ ಎಫೆಕ್ಟ್‌ಗಳನ್ನು ಬಳಸಬಹುದು. ಆದರೆ, ಸ್ಮಾರ್ಟ್‌ಗ್ಲಾಸ್ ಕ್ಯಾಮೆರಾವು ಸಕ್ರಿಯವಾಗಿದ್ದಾಗಲೆಲ್ಲಾ ಗೋಚರಿಸುವ LED ಬೆಳಗುತ್ತದೆ, ಹತ್ತಿರದ ಜನರಿಗೆ ರೆಕಾರ್ಡಿಂಗ್ ನಡೆಯುತ್ತಿದೆ ಎಂದು ಸೂಚಿಸುತ್ತದೆ.

ಭಾರತಕ್ಕೆ ವಿಶೇಷವಾದ ಹೊಸ ವೈಶಿಷ್ಟ್ಯಗಳು!
ಭಾರತೀಯ ಬಳಕೆದಾರರಿಗಾಗಿ Meta ಕೆಲವು ಹೊಸ ಫೀಚರ್‌ಗಳನ್ನೂ ಪರಿಚಯಿಸಿದೆ. ಹಿಂದಿ ಭಾಷಾ ಬೆಂಬಲವು ಈಗ ಮೆಟಾ AI ಗೆ ಲಭ್ಯವಿದೆ, ಇದು ಬಳಕೆದಾರರಿಗೆ ಹೆಚ್ಚು ಪರಿಚಿತ ಧ್ವನಿ ಇಂಟರ್ಫೇಸ್‌ನಲ್ಲಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. AI ವಾಯ್ಸ್‌ಗೆ ದೀಪಿಕಾ ಪಡುಕೋಣೆ ಅವರ ವಿಶೇಷ ಧ್ವನಿ ಆಯ್ಕೆಯೂ ಇದೆ. Meta ಮುಂದಿನ ಅಪ್‌ಡೇಟ್‌ನಲ್ಲಿ UPI Lite ಪೇಮೆಂಟ್ ಸಹ ನೀಡಲು ಸಿದ್ಧವಾಗಿದ್ದು, ಬಳಕೆದಾರರು ಗ್ಲಾಸೆಸ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಬಹುದು₹1,000 ಒಳಗಿನ ಪಾವತಿಗಳನ್ನು Hey Meta, scan and pay ಮೂಲಕ ಪೂರ್ಣಗೊಳಿಸಬಹುದು ಎಂದು ಹೇಳಲಾಗಿದೆ.

Best Mobiles in India

English summary
Meta has launched its new Meta Ray-Ban Gen 1 smartglasses in India, priced from ₹29,900. During the ongoing sale, customers can grab the device at an effective price of ₹22,920. For buyers opting for EMI, plans start at just ₹1,919 per month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+