ಫ್ಲಿಪ್‌ಕಾರ್ಟ್‌ನಲ್ಲಿ ಶಿಯೋಮಿ ಟಿವಿ ಸೇಲ್: ನೀವು ಖರೀದಿಸಬೇಕಾ..?
ಇದೇ ತಿಂಗಳ 14ರಂದು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆದಂತಹ ಮೊದಲ ಶಿಯೋಮಿ ಟಿವಿ Mi LED TV 4 ಸ್ಮಾರ್ಟ್ ಟಿವಿ ಫೆ.22 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್‌ಆಗಲಿದೆ. ಅದುವೇ ಏಕ್ಸ್‌ಕ್ಲೂಸಿವ್ ಆಗಿ ಮಾರಾಟವಾಗಲಿದ್ದು, ಚೀನಾವನ್ನು ಬಿಟ್ಟರೇ ಭಾರತದಲ್ಲಿಯೇ ಮೊದಲ ಬಾರಿಗೆ Mi TV ದೊರೆಯುತ್ತಿದೆ.

Mi LED TV 4 ಒಳಗೊಂಡಿರುವ ವಿಷೇಶತೆಗಳು ಉತ್ತಮವಾಗಿದ್ದು, ಬೇರೆ ಕಂಪನಿಗಳಲ್ಲಿ ಇಷ್ಟು ಆಯ್ಕೆಗಳು ಬೇಕೆಂದರೆ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ. ಆದರೆ ಮಾರುಕಟ್ಟೆಯಲ್ಲಿ ಹೊಸ ಅಲೆ ಹುಟ್ಟಿ ಹಾಕುವ ಸಲುವಾಗಿ ಮತ್ತು ದರ ಸಮಯವನ್ನು ನಡೆಸುವ ಸಲುವಾಗಿ 4K ಗುಣಮಟ್ಟದ ಟಿವಿಯನ್ನು ರೂ. 39,999ಕ್ಕೆ ಮಾರಾಟ ಮಾಡುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್..!
ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿರುವ Mi LED TV 4, ಫೆ.22 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಇದಲ್ಲದೇ ಮಿ.ಕಾಮ್ ನಲ್ಲಿ Mi LED TV 4 ಸೇಲ್ ಆಗಲಿದೆ. ಈಗಾಗಲೇ ಈ ಸ್ಮಾರ್ಟ್‌ಟಿವಿ ಬೇಡಿಕೆಯೂ ಹೆಚ್ಚಾಗಿದ್ದು, ಖರೀದಿಸಲು ಬಳಕೆದಾರರು ತುದಿಗಾಲಿನಲ್ಲಿ ನಿಂತಿದ್ದಾರೆ.

Mi LED TV 4 ವಿಶೇಷತೆ:
Mi LED TV 4 ಸ್ಮಾರ್ಟ್ ಟಿವಿಯಲ್ಲಿ 2GB RAM ನೊಂದಿಗೆ 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮಾಡಿಕೊಳ್ಳುವ ಅವಕಾಶ ನೀಡಿದ್ದು, Wi Fi ನೊಂದಿಗೆ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ.

ಹೊಸ ಮಾದರಿಯ UI
Mi LED TV 4 ಸ್ಮಾರ್ಟ್ ಟಿವಿಯಲ್ಲಿ ಹೊಸ ಮಾದರಿಯಲ್ಲಿ ಪ್ಯಾಚ್ ವಾಪ್ UI ಅಳವಡಿಸಲಾಗಿದ್ದು, DTH ಚಾನಲ್‌ಗಳನ್ನು ಮತ್ತು ಇಂಟರ್ನೆಟ್ ಚಾನಲ್‌ಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದ್ದು, ಬೇರೆ ಯಾವುದೇ ಟಿವಿಯಲ್ಲಿ ಈ ಮಾದರಿಯನ್ನು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

ತುಂಬ ತೆಳುವಾದ ಡಿಸ್‌ಪ್ಲೇ:
55 ಇಂಚಿನ Mi LED TV 4 ಸ್ಮಾರ್ಟ್ ಟಿವಿ ವಿಶ್ವದ ಅತೀ ತಳುವಾದ LED TV ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದು 4.9mm ನಷ್ಟು ತೆಳುವಾಗಿದ್ದು, ಟಾಪ್ ಬ್ರಾಂಡಿನ ಟಿವಿಗಳಿಗೂ ಇದು ಸೆಡ್ಡು ಹೊಡೆಯಲಿದೆ. ಇದನ್ನು ಬಿಟ್ಟರೇ ಇಷ್ಟು ತೆಳುವಾದ ಟಿವಿ ಲಭ್ಯವಿಲ್ಲ.


ಉತ್ತಮ ಮಿ ರೀಮೋಟ್:
Mi LED TV 4 ಸ್ಮಾರ್ಟ್ ಟಿವಿಯೊಂದಿಗೆ ಉತ್ತಮವಾದ ರಿಮೋಟ್ ದೊರಯಲಿದ್ದು, ಸೆಟಪ್ ಬ್ಯಾಕ್ಸ್ ನೊಂದಿಗೆ ಟಿವಿ ಸಿಂಕ್ ಆಗಲಿದೆ. ಇದರಿಂದಾಗಿ ಮಿ ರಿಮೋಟ್ ಒಂದೇ ಎಲ್ಲಾ ಕಾರ್ಯವನ್ನು ಮಾಡುತ್ತದೆ. ಇದು ಬಳಕೆದಾರರಿಗೆ ಹೊಸ ಅನುಭವನನ್ನು ನೀಡಲಿದೆ.


Click it and Unblock the Notifications








