ಇಂದು 22,999 ರೂ.ಗೆ 43 ಇಂಚಿನ 'Mi TV 4A Pro' ಸ್ಮಾರ್ಟ್‌ಟಿವಿ ಮಾರಾಟ!!
ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೇ ಬದಲಾವಣೆ ತರುತ್ತದೆ ಎಂದು ಹೇಳಲಾಗುತ್ತಿರುವ ಶಿಯೋಮಿಯ 43 ಇಂಚಿನ 'Mi TV 4A Pro' ಸ್ಮಾರ್ಟ್‌ಟಿವಿ ಇಂದು ಫ್ಲಾಶ್‌ಸೇಲ್‌ನಲ್ಲಿ ಮಾರಾಟಕ್ಕಿದೆ. ಕಂಪೆನಿಯ ಅಧಿಕೃತ ವೆಬ್ಸೈಟ್ mi.com ನಲ್ಲಿ ಹೊಸ ವಿನ್ಯಾಸದ ಸ್ಮಾರ್ಟ್ ಟಿವಿಯನ್ನು ಗ್ರಾಹಕರು ಫ್ಲಾಶ್‌ಸೇಲ್‌ನಲ್ಲಿ ಖರೀದಿಸಬಹುದು ಎಂದು ಶಿಯೋಮಿ ತಿಳಿಸಿದೆ.
43 ಇಂಚಿನ ಸ್ಮಾರ್ಟ್‌ಟಿವಿಗಳಲ್ಲೇ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರುವ ಸ್ಮಾರ್ಟ್‌ಟಿವಿ ಎಂದು ಪ್ರಖ್ಯಾತಿ ಪಡೆದಿರುವ ಹೊಸ 'Mi TV 4A Pro' ಸ್ಮಾರ್ಟ್‌ಟಿವಿ ಬೆಲೆ ಕೇವಲ 22,999 ರೂ.ಗಳಾಗಿದ್ದು, ಅಲ್ಟ್ರಾ ಬ್ರೈಟ್ ಎಲ್ಇಡಿ ಡಿಸ್ಪ್ಲೇ , ಓನ್ ರಿಮೋಟ್ ಮತ್ತು 3 HDMI ಪೋರ್ಟ್ಗಳಂತಹ ಹಲವು ವಿಶೇಷತೆಗಳನ್ನು ಹೊಂದಿರುವುದು ಈಗ ಟಿವಿ ಗ್ರಾಹಕರ ನಿದ್ದೆಗೆಡಿಸಿದೆ.

ಇನ್ನು ಈ ಸ್ಮಾರ್ಟ್‌ಟಿವಿಯೊಂದಿಗೆ 7 ಲಕ್ಷಕ್ಕೂ ಹೆಚ್ಚಿನ ಗಂಟೆಗಳ ಕಂಟೆಂಟ್ ನೀಡಲಾಗಿದ್ದು, ಇದರ ಮನರಂಜನಾ ಕಾರ್ಯಕ್ರಮಗಳನ್ನು ಸತತ 80 ವರ್ಷಗಳ ಕಾಲ ವೀಕ್ಷಿಸಿದರೂ ಕೊನೆಯಾಗುವುದಿಲ್ಲ ಎಂದು ಶಿಯೋಮಿ ತಿಳಿಸಿದೆ. ಹಾಗಾದರೆ, 43 ಇಂಚಿನ 'Mi TV 4A Pro' ಟಿವಿ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್ಪ್ಲೇ
43 ಇಂಚು ಮೊನಿಟರ್ ಸೈಜ್‌ನ ಈ ಟಿವಿ ಅಲ್ಟ್ರಾ ಬ್ರೈಟ್ ಎಲ್ಇಡಿ ಡಿಸ್ಪ್ಲೇ ಹೊಂದಿದೆ.

ಪ್ರೊಸೆಸರ್:
64-ಬಿಟ್ ಕ್ವಾಡ್ ಕೋರ್ ಪ್ರೊಸೆಸರ್, ಶೇಖರಣಾ ಸಾಮರ್ಥ್ಯ: 1GB RAM + 8GB ಸ್ಟೋರೇಜ್

ಓನ್ ರಿಮೋಟ್:
ಟಿವಿ ಕಂಟ್ರೋಲ್, ಸೆಟಪ್ ಬಾಕ್ಸ್ ಹಾಗೂ ಎಲ್ಲದಕ್ಕೂ ಒಂದೇ ರಿಮೋಟ್

ವಾಯ್ಸ್ ಕಂಟ್ರೋಲ್:
AR11 ಬ್ಲೂಟೂತ್ ಧ್ವನಿ ನಿಯಂತ್ರಕದ ಮೂಲಕ ಟಿವಿಯನ್ನು ನಿಂಯತ್ರಿಸಬಹುದು

ಸ್ಪೀಕರ್:
20W ದೊಡ್ಡ ಸ್ಪೀಕರ್ ನೀಡಲಾಗಿದೆ.

ಕನೆಕ್ಟಿವಿಟಿ:
3 USB ಪೋರ್ಟ್ಗಳು, 3 HDMI ಪೋರ್ಟ್ಗಳು, ಬ್ಲೂಟೂತ್ ಮತ್ತು ವೈ-ಫೈ ಜೊತೆಗೆ 1 AV ಕನೆಕ್ಟಿವಿಟಿ ಈ ಟಿವಿಯಲ್ಲಿ ನೀಡಲಾಗಿದೆ.


Click it and Unblock the Notifications








