ಚೀನಾ ಕಂಪೆನಿಗಳಿಗೆ ಪ್ಲೆಕ್ಸ್ ಟ್ಯಾಬ್ಲೆಟ್ ಮೂಲಕ ಮೈಕ್ರೋಮ್ಯಾಕ್ಸ್ ಸೆಡ್ಡು!!

Written By:

ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಶ್ರಮಿಸುತ್ತಿರುವ ಭಾರತದ ಮೊಬೈಲ್ ತಯಾರಿಕಾ ಕಂಪೆನಿ ಇದೀಗ ಅತ್ಯುತ್ತಮ ಸಾಧನಗಳನ್ನು ಬಿಡುಗಡೆ ಮಾಡುತ್ತಿದೆ.!! ಹೆಚ್ಚು ಫೀಚರ್ಸ್ ಒಳಗೊಂಡ ಸಾಧನಗಳನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡುವಲ್ಲಿ ಚೀನಾ ಕಂಪೆನಿಗಳೊಂದಿಗೆ ಮೈಕ್ರೋಮ್ಯಾಕ್ಸ್ ಪೈಪೋಟಿಗೆ ನಿಂತಿದೆ.!!

ಕೆಲವೇ ದಿವಸಗಳ ಹಿಂದಷ್ಟೆ ಕ್ಯಾನ್ವಾಸ್ ಇನ್ಫಿನಿಟಿಯಂತಹ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ ಮೈಕ್ರೋಮ್ಯಾಕ್ಸ್ ಇದೀಗ ಟ್ಯಾಬ್‌ ಪ್ರಪಂಚದಲ್ಲಿಯೂ ಚಾಪು ಮೂಡಿಸಿದ್ದು, ಅತಿ ನೂತನ ಕ್ಯಾನ್ವಾಸ್ ಪ್ಲೆಕ್ಸ್ ಟ್ಯಾಬ್ಲೆಟ್ ಅನ್ನು ಬಿಡುಗಡೆಗೊಳಿಸಿದೆ.!! ಟ್ಯಾಬ್ಲೆಟ್ ಅತ್ಯುತ್ತಮ ಫೀಚರ್ಸ್ ಹೊಂದಿದ್ದು ಅವುಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
8 ಇಂಚುಗಳ ಎಚ್‌ಡಿ ಡಿಸ್‌ಪ್ಲೇ!!

8 ಇಂಚುಗಳ ಎಚ್‌ಡಿ ಡಿಸ್‌ಪ್ಲೇ!!

ಡಿಜಿಟಲ್ ಫ್ಲ್ಯಾಟ್‌ಫಾರ್ಮ್ ಎರೋಸ್ ನೌ ಸಹಯೋಗದಲ್ಲಿ ನೂತನ ಉತ್ಪನ್ನವನ್ನು ಮೈಕ್ರೋಮ್ಯಾಕ್ಸ್ ಹೊರತಂದಿದ್ದು, ಕ್ಯಾನ್ವಾಸ್ ಪ್ಲೆಕ್ಸ್ ಟ್ಯಾಬ್ಲೆಟ್ 8 ಇಂಚುಗಳ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. 720x1280 ಪಿಕ್ಸೆಲ್ ರೆಸೊಲ್ಯೂಷನ್ ಮೂಲಕ ಮಲ್ಟಿಮೀಡಿಯಾಗೆ ಸರಾಸರಿ ರೂಪಿತವಾಗಿರುವ ಡಿಸ್‌ಪ್ಲೇ ಇದಾಗಿದೆ.!!

ಪ್ರೊಸೆಸರ್ ಮತ್ತು ಕ್ಯಾಮೆರಾ!!

ಪ್ರೊಸೆಸರ್ ಮತ್ತು ಕ್ಯಾಮೆರಾ!!

ಕ್ಯಾನ್ವಾಸ್ ಪ್ಲೆಕ್ಸ್ ಟ್ಯಾಬ್ಲೆಟ್ ಆಂಡ್ರಾಯ್ಡ್ 7.0 ನೌಗಾಟ್ ಓಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಜೊಗೆ 3GB RAM, 32GB ಇಂಟರ್‌ನಲ್ ಸ್ಟೋರೆಜ್ ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಆಂತರಿಕೆ ಮೆಮೊರಿಯನ್ನು ಹೆಚ್ಚಿಸಬಹುದಾಗಿದೆ.

ಪ್ರಿ-ಲೋಡ್ ಲೈಬ್ರರಿ !!

ಪ್ರಿ-ಲೋಡ್ ಲೈಬ್ರರಿ !!

ಬಾಲಿವುಡ್, ಪ್ರಾದೇಶಿಕ ಭಾಷಾ ಚಲನಚಿತ್ರ, ಟಿವಿ ಶೋ, ಮ್ಯೂಸಿಕ್ ವಿಡಿಯೋ ಹೀಗೆ ದೊಡ್ಡ ಲೈಬ್ರರಿ ಸಂಗ್ರಹವೇ ಪ್ರಿ-ಲೋಡ್ ಆಗಿ ಲಭ್ಯವಾಗಲಿದೆ. ಇದರೊಂದಿಗೆ ಒಂದು ವರ್ಷದ ಎರೋಸ್ ನೌ ಡಿಜಿಟಲ್ ಚಂದಾದಾರಿಕೆಯೂ ದೊರಕಲಿದೆ.

ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಬ್ಯಾಟರಿ ಮತ್ತು ಬೆಲೆ!!

ಬ್ಯಾಟರಿ ಮತ್ತು ಬೆಲೆ!!

ಅತ್ಯುತ್ತಮ ಬ್ಯಾಟರಿಗಳನ್ನು ಹೊಂದುವ ಮೂಲಕ ಚೀನಾ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಮೈಕ್ರೋಮ್ಯಾಕ್ಸ್ ಮುಂದಾಗಿದ್ದು, 4,000 mAh ಬ್ಯಾಟರಿಯನ್ನು ಕ್ಯಾನ್ವಾಸ್ ಪ್ಲೆಕ್ಸ್ ಟ್ಯಾಬ್ಲೆಟ್‌ನಲ್ಲಿ ನೀಡಿದೆ.!! ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಟ್ಯಾಬ್ಲೆಟ್ ಬೆಲೆ 12,999 ರೂಪಾಯಿಗಳು.!!

ಓದಿರಿ:ಬ್ಲೂವೇಲ್ ಆಟಕ್ಕೆ ಚೆನ್ನೈ ವಿಧ್ಯಾರ್ಥಿ ಬಲಿ!..ಡೆತ್‌ನೋಟ್ ನೋಡಿ ಎಲ್ಲರೂ ಶಾಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The company has launched the tablet in association with the digital platform Eros Now.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot