'ಮೊಡೊಬ್ಯಾಗ್' ಸೂಟ್‌ಕೇಸ್‌: ಲಗೇಜ್ ಎಷ್ಟೇ ಇರಲಿ ಕುಳಿತು ಡ್ರೈವ್‌ಮಾಡಿ!

By Suneel
|

ಟ್ರಾವೆಲ್‌ ಮಾಡೋದು ರೈಲಿನಲ್ಲೇ ಆಗಲಿ, ವಿಮಾನದಲ್ಲೇ ಕಷ್ಟ ಅಲ್ಲ. ಆದ್ರೆ ರೈಲು ಮತ್ತು ವಿಮಾನ ನಿಲ್ದಾಣದವರೆಗೆ ಲಗೇಜ್‌ನ ಸೂಟ್‌ಕೇಸ್‌ ಅನ್ನು ಎಳೆದು ಹೋಗುವುದೇ ಕಷ್ಟ. ಯಾವುದೇ ಲಗ್ಗೇಜ್ ಇಲ್ಲದೇ ಒಂದು ಗಂಟೆ ಬೇಕಾದರೂ ನಡೆದು ಹೋಗಬಹುದು. ಅದೇ ಲಗ್ಗೇಜ್‌ ಸ್ವಲ್ಪ ಇದ್ದರೂ ಸಹ ಅದನ್ನು ಸಾಗಿಸುವುದು ಕಷ್ಟ.

ಸೂಟ್‌ಕೇಸ್‌ ಅನ್ನು ಎಳೆದುಹೋಗುವ ಬದಲು ಅದರ ಮೇಲೆ ಕುಳಿತರೆ ಅದೇ ನಮ್ಮನ್ನು ಹೊತ್ತೋಯ್ಯುವಂತಿದ್ದರೇ ಎಷ್ಟೊಂದು ಚೆನ್ನಾಗಿರುತ್ತಿತ್ತು ಎಂದು ಫೀಲ್‌ ಮಾಡುವವರ ಸಂಖ್ಯೆ ಹೆಚ್ಚಾಗೆ ಇದೆ. ಈ ಫೀಲ್‌ನ ಟೆಕ್‌ ಪ್ರಿಯರೊಬ್ಬರು ಈಗ ನಿಜವಾಗಿಯೂ ಫೀಲ್ ಮಾಡುವಂತೆ ಮಾಡಿದ್ದಾರೆ. ಅಂದಹಾಗೆ ಇನ್ನುಮುಂದೆ ರೈಲು, ಬಸ್ಸು, ವಿಮಾನ ನಿಲ್ದಾಣಗಳವರೆಗೆ ಲಗೇಜ್‌ ಅನ್ನು ಎಳೆದು ಹೋಗುವ ಅವಶ್ಯಕತೆ ಇಲ್ಲ. ಸೂಟ್‌ಕೇಸ್‌ ಮೇಲೆ ಕುಳಿತರೆ ಅದನ್ನು ನೀವೂ ಡ್ರೈವ್‌ಮಾಡಿಕೊಂಡು ಹೋಗಬಹುದು.

ಸೂಟ್‌ಕೇಸ್‌ ಹೆಸರು 'Modobag' (ಮೊಡೊಬ್ಯಾಗ್‌). ನೀವು ಆಗಾಗ ಪ್ರವಾಸ ಹೋಗುವವರೇ ಆಗಿದ್ದಲ್ಲಿ, ಲಗೇಜ್‌ನೂ ಆಗಾಗ ಎಳೆದು ಎಳೆದು ಸುಸ್ತಾಗಿದ್ದಲ್ಲಿ ಒಮ್ಮೆ 'ಮೊಡೊಬ್ಯಾಗ್' ವಿಶೇಷತೆ ತಿಳಿದು, ಖರೀದಿ ಮಾಡಿ. ಸೂಟ್‌ಕೇಸ್‌ ಎಳೆಯುವ ಬದಲು ಅದರ ಮೇಲೆ ಕುಳಿತು ಡ್ರೈವ್‌ ಮಾಡಿಕೊಂಡು ಹೋಗಿ. ಮಾಹಿತಿಗಾಗಿ ಲೇಖನದ ಸ್ಲೈಡರ್‌ ಓದಿರಿ.

ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು ಮತ್ತು ಉಪ್ಪು ಸಾಕು!

ಮೊಡೊಬ್ಯಾಗ್ (Modobag)

ಮೊಡೊಬ್ಯಾಗ್ (Modobag)

ಮೊಡೊಬ್ಯಾಗ್ ರೀತಿಯಲ್ಲಿ ಇದುವರೆಗೂ ಯಾವುದೇ ಗ್ಯಾಜೆಟ್‌ ಸಹ ಮಾರುಕಟ್ಟೆಯಲ್ಲಿ ಇಲ್ಲ. ಅದು ಇಂಜಿನಿಯರ್ ಹತ್ತಿರದಲ್ಲಿದೆ. 8 mph ಸಾಮರ್ಥ್ಯ ಮತ್ತು 5 ಮೈಲಿಗಳ ದೂರವನ್ನು ಕ್ರಮಿಸುವ ಬ್ಯಾಟರಿ ಹೊಂದಿದ್ದು, ಅತ್ಯಂತ ಬ್ರಿಲಿಯಂಟ್‌ ಟೆಕ್ನಾಲಜಿ ಇದಾಗಿದೆ.

ಮೊಡೊಬ್ಯಾಗ್‌ ಯಂತ್ರ

ಮೊಡೊಬ್ಯಾಗ್‌ ಯಂತ್ರ

ಮೊಡೊಬ್ಯಾಗ್‌ ಯಂತ್ರವು ಬ್ಯಾಗ್‌ನಲ್ಲಿ ಶೇಕಡ 15 ರಷ್ಟು ಜಾಗವನ್ನು ಒಳಗೆ ಆಕ್ರಮಿಸಿದೆ. ಇದನ್ನು ಬಳಸುವ ಅತ್ಯುಪಯುಕ್ತ ಸೂಟ್‌ಕೇಸ್‌ಗಳಲ್ಲಿ ಮೊದಲ ಆದ್ಯತೆಯ ಬ್ಯಾಗ್‌ ಎನ್ನಲಾಗಿದೆ.

ವೀಡಿಯೊ

ವೀಡಿಯೊ

ಮೊಡೊಬ್ಯಾಗ್‌ ಬಗೆಗಿನ ವೀಡಿಯೊ ನೋಡಿದರೆ ಎಲ್ಲರಿಗು ಸಹ ಈ ಸೂಟ್‌ಕೇಸ್‌ ಏಕೆ ಯಶಸ್ಸು ಪಡೆಯಿತು ಎಂದು ತಿಳಿಯುತ್ತದೆ. ಅಂದಹಾಗೆ ಸೂಟ್‌ಕೇಸ್‌ ಅನ್ನು ನೀವು ತೆಗೆದುಕೊಂಡು ಹೋಗುವ ಬದಲು ಅದರ ಮೇಲೆ ಕುಳಿತರೆ ನಿಮ್ಮನ್ನು ಅದೇ ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಹೊತ್ತೋಯ್ಯುತ್ತದೆ. ಆದರೆ ನೀವು ಡ್ರೈವ್ ಮಾಡಬೇಕಷ್ಟೆ.

ಕಿಕ್‌ಸ್ಟಾರ್ಟರ್‌ ಮೋಡ್‌

ಕಿಕ್‌ಸ್ಟಾರ್ಟರ್‌ ಮೋಡ್‌

ಈ ಪ್ರಾಜೆಟ್‌ ಪ್ರಸ್ತುತದಲ್ಲಿ ಕಿಕ್‌ಸ್ಟಾರ್ಟರ್‌ ಮೋಡ್‌ನಲ್ಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಿಕ್‌ಸ್ಟಾರ್ಟರ್‌ನ IndieGoGo ಪೇಜ್‌ನಲ್ಲಿ ತಿಳಿಯಬಹುದು. ಮೊಡೊಬ್ಯಾಗ್‌ ಬೆಲೆ $995 (ರೂ.66724.65) ಆಗಿದ್ದು, ಮಾರುಕಟ್ಟೆ ತಲುಪಿದ ನಂತರ ಇದರ ಬೆಲೆ $1,199.(ರೂ.80422.87) ಆಗಲಿದೆ.

ಉತ್ತಮ ಯಶಸ್ಸು

ಉತ್ತಮ ಯಶಸ್ಸು

ಮೊಡೊಬ್ಯಾಗ್‌ ಈಗಾಗಲೇ ಉತ್ತಮ ಯಶಸ್ಸು ಪಡೆದಿದ್ದು, ಮಾರುಕಟ್ಟೆಗೆ ಬಂದ ನಂತರ ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ನೋಡಬಹುದು. ಪ್ರಾಯೋಗಿಕವಾಗಿ ಮಾತ್ರವಲ್ಲದೇ ಹೊಸ ಕ್ರೇಜ್‌ ಅನ್ನು ಸಹ ನೀಡಲಿದೆ.

rn

ವೀಡಿಯೊ

ಮೊಡೊಬ್ಯಾಗ್‌ ಚಲಿಸುವ ವೇಗ ಹೆಚ್ಚಿದೆಯೋ, ನಿಧಾನವಿದೆಯೋ ಹಾಗೆ ಒಮ್ಮೆ ವೀಡಿಯೊ ನೋಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!<br /></a><a href=ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಏರ್‌ಟೆಲ್‌ನಿಂದ 10GB 4G ಡಾಟಾ" title="ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!
ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಏರ್‌ಟೆಲ್‌ನಿಂದ 10GB 4G ಡಾಟಾ" loading="lazy" width="100" height="56" />ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!
ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಏರ್‌ಟೆಲ್‌ನಿಂದ 10GB 4G ಡಾಟಾ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Modobag Is A Drivable Suitcase Worthy Of Your Attention. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X