ಈ ಹಾಸ್ಯಮಯ ಸೆಲ್ಫಿ ಸ್ಟಿಕ್ ನೀವೆಂದು ನೋಡಿಯೇಇರಲಿಕ್ಕಿಲ್ಲಾ
ಎಲ್ಲಂದರಲ್ಲಿ ಸೆಲ್ಫಿ. ಕುಂತಲ್ಲಿ ಸೆಲ್ಫಿ, ನಿಂತಲ್ಲಿ ಸೆಲ್ಫಿ, ವಾಹನ ರೈಡಿಂಗ್‌ನಲ್ಲಿ ಸೆಲ್ಫಿ. ಸೆಲ್ಫಿಗಾಗಿಯೇ ಮೊಬೈಲ್ ತೆಗೆದುಕೊಳ್ಳುವ ಕಾಲ ಯಾವಾಗಲೊ ಬಂದಾಯಿತು. ಸೆಲ್ಫಿ ಬಂದ ಆರಂಭದಲ್ಲಿ ಕೇವಲ ಮೊಬೈಲ್ ಹಿಡಿದು ಒಬ್ಬರೋ ಇಬ್ಬರೋ ವ್ಯಕ್ತಿಗಳು ಜೊತೆಯಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಸೆಲ್ಫಿ ಫೋಟೋ ತೆಗೆಯೋವಾಗ ಕ್ಯಾಮೆರಾಗೆ ಪೋಜ್ ಕೊಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಒಬ್ಬರೇ ಎಲ್ಲಾದ್ರೂ ಹೋದಾಗ ವೈಡ್ ಆಂಗಲ್‌ನಲ್ಲಿ ಸೆಲ್ಫಿ ಫೋಟೋ ತೆಗೆಯಲು ಸೆಲ್ಫಿ ಸ್ಟಿಕ್ ಅಭಿವೃದ್ದಿಗೊಳಿಸಲಾಯಿತು. ಇಷ್ಟುದಿನ ಸೆಲ್ಫಿ ಸ್ಟಿಕ್‌ಗಳನ್ನು ಒಂದೇ ರೀತಿಯ ವಿನ್ಯಾಸದಲ್ಲಿ ತಯಾರಾಗುತ್ತಿದ್ದವು. ಆದ್ರೆ ಈಗ ಸೆಲ್ಫಿ ಸ್ಟಿಕ್‌ಗಳ ಟ್ರೆಂಡ್ ಸಹ ಬದಲಾಗಿದೆ.
ಇತ್ತೀಚಿಗಿನ ಸೆಲ್ಫಿ ಸ್ಟಿಕ್‌ಗಳು ಹಾಸ್ಯಮಯವಾಗಿದ್ದು, ಸೆಲ್ಟಿ ಸ್ಟಿಕ್‌ಗಳ ಹೊಸ ಟ್ರೆಂಡ್ ಬಂದಾಗಿದೆ. ಅವುಗಳು ಕೇವಲ ನೋಡಲಿಕ್ಕೆ ಬಹು ಆಶ್ಚರ್ಯವಾಗಿದ್ದು, ಇನ್ನು ಬಳಸಲು ಪ್ರಾರಂಭಿಸಿದರೆ ಅತ್ಯುತ್ತಮ ಅನುಭವ ನೀಡುವಲ್ಲಿ ಸಂಶಯವಿಲ್ಲ. ಹಾಗಾದರೆ ತಡ ಮಾಡದೇ ಆ ಹಾಸ್ಯಮಯ ಸೆಲ್ಫಿ ಸ್ಟಿಕ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸೆಲ್ಫಿ ಸ್ಟಿಕ್
ಸ್ಟಾರ್‌ವಾರ್ ಅಭಿಮಾನಿ ಮುಖವಾಡ ಧರಿಸಿ ಸೆಲ್ಫಿ ಕ್ಲಿಕ್ಕಿಸುತ್ತಿರುವುದು.

ಸೆಲ್ಫಿ ಸ್ಟಿಕ್
ಇದು ವಿವಿಧ ಆಂಗಲ್‌ಗಳಲ್ಲಿ ನಿಮ್ಮ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಸಹಾಯವಾಗಿದೆ.

ಸೆಲ್ಫಿ ಸ್ಟಿಕ್
ತಲೆಕೂದಲು ಬ್ರಸ್ ಮತ್ತು ಒಂದು ಐಫೋನ್ ಕೇಸ್‌ನ ಸಂಯೋಜನೆಯೊಂದಿಗೆ ಈಗ ನೀವು ಇನ್ನು ಉತ್ತಮ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು. ಅದನ್ನು ಚಿತ್ರದಲ್ಲಿ ನೋಡಿರಿ.

ಸೆಲ್ಫಿ ಸ್ಟಿಕ್
ಇತರರ ಕೈಹಿಡಿದು ಸೆಲ್ಫಿ ತೆಗೆದುಕೊಂಡ ಅನುಭವಕ್ಕಾಗಿ ಕೈಗಳ ವಿನ್ಯಾಸದ ಸೆಲ್ಫಿ ಸ್ಟಿಕ್ ಸಹ ಇಂದು ಮಾರುಕಟ್ಟೆಯಲ್ಲಿವೆ.

ಸೆಲ್ಫಿ ಸ್ಟಿಕ್
ಬಹಳಷ್ಟು ಜನರಿಗೆ ತಿಳಿಯದ ವಿಷಯ. ಪ್ರಪಂಚದ ಅತಿ ವೆಚ್ಚದ ಸೆಲ್ಫಿ ಸ್ಟಿಕ್ ನಮ್ಮ ಗ್ರಹದಲ್ಲಿ ಇಲ್ಲ. ಕ್ಯುರಿಯಾಸಿಟಿ ರೋವರ್ ಮಿಷನ್ ಬೆಲೆ $2.5 ಶತಕೋಟಿ. ಇದು ಭೂಮಿಗೆ ಆಗಾಗ ಮಂಗಳ ಗ್ರಹದ ಸೆಲ್ಫಿ ಫೋಟೋಗಳನ್ನು ಕಳುಹಿಸುತ್ತಿರುತ್ತದೆ.

ಸೆಲ್ಫಿ ಸ್ಟಿಕ್
ಇಂದು ಅತಿದೊಡ್ಡ ಸೆಲ್ಫಿ ಸ್ಟಿಕ್ ಎಂದರೆ ಅದು ಮ್ಯಾಕ್‌ಬುಕ್ ಸೆಲ್ಫಿ ಸ್ಟಿಕ್. ಒಂದು ಲ್ಯಾಪ್‌ಟಾಪ್ ಅನ್ನೆ ಹಿಡಿದು ಸೆಲ್ಫಿ ಕ್ಲಿಕ್ಕಿಸಲು ಸಹಾಯಕವಾಗುವ ಸೆಲ್ಫಿ ಸ್ಟಿಕ್ ಅದು.

ಸೆಲ್ಫಿ ಸ್ಟಿಕ್
ಹೆಸರು ಪಾಪ್ ಸ್ಟಿಕ್ ಅಂತ. ಸ್ಮಾರ್ಟ್‌ಫೋನ್‌ಗಳನ್ನು ಮೆಟಲ್ ಬ್ರಾಸ್ಲೆಟ್‌ಗೆ ಕನೆಕ್ಟ್ ಮಾಡಿ ಯಾವುದೇ ಸದ್ದಿಲ್ಲದೇ ನೀವು ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ.

ಸೆಲ್ಫಿ ಸ್ಟಿಕ್
ಚಿತ್ರದಲ್ಲಿ ನೋಡುತ್ತಿರುವ ಸ್ಟಿಕಿ ಸೆಲ್ಫಿ ಗ್ಯಾಜೆಟ್ ಅನ್ನು ಸೆಲ್ಫಿ ಸ್ಟಿಕ್ ಎನ್ನಲಾಗುತ್ತದೆ. ಆದರೆ ಇದನ್ನು ಕಾರಿನಲ್ಲಿಯೋ ಅಥವಾ ನೀವು ಹೆಚ್ಚು ಸಮಯ ಕೂರುವ ಕೆಫೆಟೇರಿಯಾದಲ್ಲೋ ಕುಳಿತಿರುವ ಸೆಲ್ಫಿ ತೆಗೆದುಕೊಳ್ಳಲು ಮೃದುವಾದ ಸ್ಥಳಕ್ಕೆ ಫೋನ್ ಅನ್ನು ಗ್ಯಾಜೆಟ್ ಸಹಾಯದಿಂದ ಅಂಟಿಸಿ ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ.

ಸೆಲ್ಫಿ ಸ್ಟಿಕ್
ಸ್ವಲ್ಪ ಕಷ್ಟ ಆಗಬಹುದು ಈ ಸೆಲ್ಫಿ ಸ್ಟಿಕ್‌ನಿಂದ ಫೋಟೋ ತೆಗೆಯಲು. ಈ ಸೆಲ್ಫಿ ಸ್ಟಿಕ್ 9.57 ಮೀಟರ್ ಉದ್ದವಿದೆ. ಇದರ ಉಪಯೋಗವೆಂದರೆ ಪರಿಸರವನ್ನು ಹೆಚ್ಚು ಇಷ್ಟ ಪಡುವವರು ತಮ್ಮ ಸೆಲ್ಫಿ ಹಿಂಭಾಗದಲ್ಲಿ ಪರಿಸರದ ಚಿತ್ರ ಹೊಂದಲು ಈ ರೀತಿಯ ಸೆಲ್ಫಿ ಸ್ಟಿಕ್‌ಗಳನ್ನು ಬಳಸಬಹುದಾಗಿದೆ.



Click it and Unblock the Notifications








