ಭಾರತದಲ್ಲಿ Moto Buds Loop ಮತ್ತು Buds Bass TWS ಇಯರ್‌ಬಡ್ಸ್ ಬಿಡುಗಡೆ!
ಮೋಟೋ ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಎರಡು ಹೊಸ TWS ಹೆಡ್‌ಸೆಟ್‌ಗಳಾದ Moto Buds Loop ಮತ್ತು Moto Buds Bass ಅನ್ನುಬಿಡುಗಡೆ ಮಾಡಿದೆ. ಕಳೆದ ಏಪ್ರಿಲ್‌ನಲ್ಲಿ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಾಗಿದ್ದ ಪ್ರೀಮಿಯಂ ಹೆಡ್‌ಸೆಟ್ Moto Buds Loop ದೇಶದ ಮಾರುಕಟ್ಟೆಗೆ ಇಂದು ಎಂಟ್ರಿ ನಿಡಿದೆ. ಇದರ ಜೊತೆಗೆ ಕೇವಲ ₹1,999 ನಷ್ಟು ಕಡಿಮೆ ಬೆಲೆಯ Moto Buds Bass ಕೂಡ ಎಂಟ್ರಿ ನೀಡಿದೆ. ಈ ಹೆಡ್‌ಸೆಟ್‌ಗಳು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಉತ್ತಮ ಆಡಿಯೋ ಅನುಭವ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತವೆ. Moto Buds Bass ಅನ್ನು ವಿಶೇಷವಾಗಿ ಬೋಸ್ (Bose) ಕಂಪನಿಯ ಸಹಯೋಗದೊಂದಿಗೆ ಟ್ಯೂನ್ ಮಾಡಲಾಗಿದೆ.
Moto Buds Loop ವೈಶಿಷ್ಟ್ಯಗಳು
Moto Buds Loop ಪ್ರೀಮಿಯಂ ಹೆಡ್‌ಸೆಟ್ 12mm ಡ್ರೈವರ್‌ಗಳನ್ನು ಒಳಗೊಂಡಿದ್ದು, ಇದು ಬೋಸ್ ಕಂಪನಿಯ ಸಹಯೋಗದೊಂದಿಗೆ ಟ್ಯೂನ್ ಮಾಡಲಾಗಿದೆ. ಇದು 3D ತರಹದ ಆಡಿಯೋ ಅನುಭವಕ್ಕಾಗಿ ಪ್ರಾದೇಶಿಕ ಧ್ವನಿ (Spatial Audio) ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಸ್ಪಷ್ಟವಾದ ಕರೆಗಳಿಗಾಗಿ, ಪ್ರತಿ ಇಯರ್‌ಫೋನ್‌ನಲ್ಲಿ ಧ್ವನಿ ಪಿಕಪ್ ಸಂವೇದಕಗಳು ಮತ್ತು ಕ್ರಿಸ್ಟಲ್‌ಟಾಕ್ AI ತಂತ್ರಜ್ಞಾನದೊಂದಿಗೆ ಡ್ಯುಯಲ್-ಮೈಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ, ಇದು ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಡಿವೈಸ್ ಮೋಟೋ AI ಮತ್ತು ಸ್ಮಾರ್ಟ್ ಕನೆಕ್ಟ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ, ಜೊತೆಗೆ ಮೋಟೋ ಬಡ್ಸ್ ಆ್ಯಪ್ ಮೂಲಕ ನಿಯಂತ್ರಿಸಬಹುದು.

ಈ ಹೆಡ್‌ಸೆಟ್ ಬ್ಲೂಟೂತ್ 5.4 ಸಂಪರ್ಕವನ್ನು ಹೊಂದಿದೆ ಮತ್ತು ಒಂದೇ ಸಮಯದಲ್ಲಿ ಎರಡು ಸಾಧನಗಳಿಗೆ ಸಂಪರ್ಕಿಸಬಹುದು. ಧೂಳು ಮತ್ತು ನೀರಿನ ಸಿಂಪಡಣೆಗಳಿಂದ ರಕ್ಷಣೆಗಾಗಿ ಇದು IP54 ರೇಟಿಂಗ್ ಅನ್ನು ಹೊಂದಿದೆ. ಬ್ಯಾಟರಿ ಬಾಳಿಕೆಯ ವಿಷಯದಲ್ಲಿ, Moto Buds Loop ಒಂದೇ ಚಾರ್ಜ್‌ನಲ್ಲಿ ಎಂಟು ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 39 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ. ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ ಮೂರು ಗಂಟೆಗಳವರೆಗೆ ಬಳಸಬಹುದು.
Moto Buds Bass ವೈಶಿಷ್ಟ್ಯಗಳು
Moto Buds Bass ಹೆಡ್‌ಸೆಟ್ 12.4mm ಕಾಂಪೋಸಿಟ್ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಹೈ-ರೆಸ್ LDAC ಆಡಿಯೋ ಕೋಡೆಕ್ ಬೆಂಬಲದೊಂದಿಗೆ ಉತ್ತಮ ಗುಣಮಟ್ಟದ ಆಡಿಯೋ ಅನುಭವ ನೀಡುತ್ತದೆ. ಇದು 50dB ವರೆಗೆ ಸಕ್ರಿಯ ಶಬ್ದ ರದ್ದತಿ (ANC) ವೈಶಿಷ್ಟ್ಯವನ್ನು ಹೊಂದಿದ್ದು, ಇದು ಬಳಕೆದಾರರಿಗೆ ಪಾರದರ್ಶಕತೆ, ಅಡಾಪ್ಟಿವ್ ಮತ್ತು ಆಫ್ ಮೋಡ್‌ಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಈ ಡಿವೈಸ್ ಕೂಡ ಪ್ರಾದೇಶಿಕ ಆಡಿಯೋ ಮತ್ತು ಮೋಟೋ ಬಡ್ಸ್ ಆ್ಯಪ್‌ಗೆ ಹೊಂದಿಕೊಳ್ಳುತ್ತದೆ, ಇದರಿಂದ ANC, EQ ಮೋಡ್‌ಗಳು ಮತ್ತು ಸ್ಪರ್ಶ ನಿಯಂತ್ರಣಗಳನ್ನು ಕಸ್ಟಮೈಸ್ ಮಾಡಬಹುದು.
Moto Buds Bass ಹೆಡ್‌ಸೆಟ್ Google Fast Pair ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಬೆಂಬಲಿಸುತ್ತದೆ. ಉತ್ತಮ ಕರೆ ಗುಣಮಟ್ಟಕ್ಕಾಗಿ, ಪ್ರತಿ ಇಯರ್‌ಬಡ್‌ನಲ್ಲಿ ಕ್ರಿಸ್ಟಲ್‌ಟಾಕ್ AI, ENC ಮತ್ತು ಆಂಟಿ-ವಿಂಡ್ ಶಬ್ದ ಕಡಿತಕ್ಕೆ ಬೆಂಬಲದೊಂದಿಗೆ ಮೂರು ಮೈಕ್ರೊಫೋನ್‌ಗಳಿವೆ. ಬ್ಯಾಟರಿ ಬಾಳಿಕೆಯ ವಿಷಯದಲ್ಲಿ, ಇದು ಏಳು ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 48 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ ಎರಡು ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯ ಪಡೆಯಬಹುದು. ಈ ಬಡ್‌ಗಳು ಸಹ ಧೂಳು ಮತ್ತು ನೀರಿನ ಸಿಂಪಡಣೆಗಳಿಂದ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಹೊಂದಿವೆ.
Moto Buds Loop ಮತ್ತು Moto Buds Bass: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Moto Buds Loop ಹೆಡ್‌ಸೆಟ್‌ನ ಬೆಲೆ ₹7,999 ಮತ್ತು Moto Buds Bass ನ ಬೆಲೆ ₹1,999 ಎಂದು ನಿಗದಿಪಡಿಸಲಾಗಿದೆ. Moto Buds Loop ಸೆಪ್ಟೆಂಬರ್ 1ರಿಂದ ಮತ್ತು Moto Buds Bass ಸೆಪ್ಟೆಂಬರ್ 8 ರಿಂದ ಮಾರಾಟಕ್ಕೆ ಬರಲಿವೆ. ಗ್ರಾಹಕರು ಫ್ಲಿಪ್‌ಕಾರ್ಟ್, ಮೋಟೋರೋಲಾ ಇಂಡಿಯಾ ಇ-ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಮಳಿಗೆಗಳಲ್ಲಿ ಇವುಗಳನ್ನು ಖರೀದಿಸಬಹುದು.Moto Buds Bass ಪ್ಯಾಂಟೋನ್-ಪ್ರಮಾಣೀಕೃತ ಬ್ಲೂ ಜ್ಯುವೆಲ್, ಡಾರ್ಕ್ ಶ್ಯಾಡೋ ಮತ್ತು ಪೋಸಿ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. Moto Buds Loop ಟ್ರೆಕ್ಕಿಂಗ್ ಗ್ರೀನ್ ಬಣ್ಣದಲ್ಲಿ ಮಾತ್ರ ಲಭ್ಯವಿದೆ.


Click it and Unblock the Notifications








