Home
Gadgets

ಭಾರತದ ಅತಿ ಸ್ಲಿಮ್ 5G ಟ್ಯಾಬ್ಲೆಟ್–ಕಡಿಮೆ ಬೆಲೆ, ಬಿಡುಗಡೆಗೆ ಇನ್ನು ನಾಲ್ಕೇ ದಿನ!

ಭಾರತದಲ್ಲಿ ಅತಿ ತೆಳುವಾದ ಮತ್ತು ಹಗುರವಾದ 5G ಟ್ಯಾಬ್ಲೆಟ್ 'ಮೋಟೋ ಪ್ಯಾಡ್ 60 ನಿಯೋ' (Moto Pad 60 Neo) ಅನ್ನು ಬಿಡುಗಡೆ ಮಾಡುವ ದಿನಾಂಕವನ್ನು ಮೋಟೋರೊಲಾ ಕಂಪೆನಿ ಅಧಿಕೃತವಾಗಿ ಪ್ರಕಟಿಸಿದೆ. ಕೇವಲ 6.9 ಮಿ.ಮೀ ದಪ್ಪ ಮತ್ತು 490 ಗ್ರಾಂ ತೂಕದ ಈ ಟ್ಯಾಬ್ಲೆಟ್ ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಮತ್ತು ನೀವು ಇದನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು ಎಂದು ಕಂಪೆನಿ ಖಚಿತಪಡಿಸಿದೆ. ಈ ಹೊದ ಟ್ಯಾಬ್ಲೆಟ್ ಅನ್ನು ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದ್ದು, ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತುಬರುತ್ತಿದೆ. ಹಾಗಾದರೆ, ಮುಂಬರುವ ಹೊಸ ಮೋಟೋ ಪ್ಯಾಡ್ 60 ನಿಯೋ ಟ್ಯಾಬ್ಲೆಟ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ಮೋಟೋ ಪ್ಯಾಡ್ 60 ನಿಯೋ: ಪ್ರಮುಖ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ
ಹೊಸ ಮೋಟೋ ಪ್ಯಾಡ್ 60 ನಿಯೋ ಟ್ಯಾಬ್ಲೆಟ್ ಕೇವಲ 6.9 ಮಿ.ಮೀ ದಪ್ಪ ಮತ್ತು 490 ಗ್ರಾಂ ತೂಕದೊಂದಿಗೆ, ಇದು ಭಾರತದಲ್ಲಿನ ಅತಿ ತೆಳುವಾದ ಮತ್ತು ಹಗುರವಾದ 5G ಟ್ಯಾಬ್ಲೆಟ್ ಎಂದು ಮೋಟೋರೊಲಾ ಹೇಳಿಕೊಂಡಿದೆ.

ಈ ಟ್ಯಾಬ್ಲೆಟ್ 11 ಇಂಚಿನ 2.5K ರೆಸಲ್ಯೂಷನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಬೆಂಬಲಿಸುವುದರಿಂದ, ಗೇಮಿಂಗ್ ಮತ್ತು ವೀಡಿಯೋಗಳನ್ನು ನೋಡುವಾಗ ಉತ್ತಮ ಅನುಭವ ನೀಡುತ್ತದೆ.

ಕ್ವಾಡ್ ಸ್ಪೀಕರ್‌ಗಳನ್ನು ಹೊಂಂದಿರುವ ಈ ಟ್ಯಾಬ್ಲೆಟ್ ಡಾಲ್ಬಿ ಅಟ್ಮೋಸ್ ತಂತ್ರಜ್ಞಾನವನ್ನು ಬೆಂಬಲಿಸುವುದರಿಂದ, ಚಲನಚಿತ್ರ ಮತ್ತು ಸಂಗೀತ ಕೇಳುವಾಗ ಉತ್ತಮ ಸೌಂಡ್ ಅನುಭವವನ್ನು ನೀಡುತ್ತದೆ ಎಂದು ಕಂಪೆನಿಯು ತಿಳಿಸಿದೆ.

ಭಾರತದ ಅತಿ ಸ್ಲಿಮ್ 5G ಟ್ಯಾಬ್ಲೆಟ್–ಕಡಿಮೆ ಬೆಲೆ, ಬಿಡುಗಡೆಗೆ ಇನ್ನು ನಾಲ್ಕೇ ದಿನ!

ಕಾರ್ಯಕ್ಷಮತೆಗಾಗಿ, ಈ ಮೋಟೋ ಪ್ಯಾಡ್ 60 ನಿಯೋ ಟ್ಯಾಬ್ಲೆಟ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಬಳಸಲಾಗಿದ್ದು, ಇದು ದೈನಂದಿನ ಕಾರ್ಯಗಳನ್ನು ಸುಗಮಗೊಳಿಸಲಿದೆ ಮತ್ತು ಅತ್ಯುತ್ತಮ 5G ಸಂಪರ್ಕ ಒದಗಿಸಲಿದೆ ಎಂದು ಕಂಪೆನಿಯು ತಿಳಿಸಿದೆ.

ಈ ಹೊಸ ಟ್ಯಾಬ್ಲೆಟ್‌ನೊಂದಿಗೆ ಮೋಟೋ ಪೆನ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಪೆನ್ 4,096 ಮಟ್ಟದ ಒತ್ತಡ ಗುರುತಿಸುವ ತಂತ್ರಜ್ಞಾನ, ಕಡಿಮೆ ವಿಳಂಬ (low latency) ಮತ್ತು ಟಿಲ್ಟ್ ಸಪೋರ್ಟ್ ಒಳಗೊಂಡಿದೆ. ಇದು ಡಿಜಿಟಲ್ ನೋಟ್ಸ್ ತೆಗೆದುಕೊಳ್ಳುವವರಿಗೆ ಬಹಳ ಉಪಯುಕ್ತವಾಗಿದೆ.

ಇನ್ನು ಈ ಸಾಧನದಲ್ಲಿರುವ ಸ್ಮಾರ್ಟ್ ಕನೆಕ್ಟ್ ಎಂಬ ವೈಶಿಷ್ಟ್ಯವು ಲ್ಯಾಪ್‌ಟಾಪ್ ಮತ್ತು ಇತರ ಸಾಧನಗಳೊಂದಿಗೆ ಸುಲಭವಾಗಿ ಫೈಲ್‌ಗಳನ್ನು ವರ್ಗಾಯಿಸಲು ಮತ್ತು ಬಹು-ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಈ ಟ್ಯಾಬ್ಲೆಟ್ ವಿಶೇಷತೆ ಎಂದರೆ, ಇದು 7,040mAh ಬ್ಯಾಟರಿಯನ್ನು ಹೊಂದಿದ್ದು, 68W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಚಾರ್ಜರ್ ಕೂಡ ಸಾಧನದ ಪ್ಯಾಕೇಜ್‌ನಲ್ಲಿ ಲಭ್ಯವಿದೆ.

ದೇಶದಲ್ಲಿ ಈಗಾಗಲೇ ಮೋಟೋರೊಲಾ ತನ್ನ ಮೋಟೋ ಪ್ಯಾಡ್ 60 ಪ್ರೊ ಮಾದರಿಯನ್ನು ₹26,999 ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಪ್ರೋ ಮಾದರಿಯಲ್ಲಿ 12.7 ಇಂಚಿನ 144Hz 3K ಡಿಸ್‌ಪ್ಲೇ, ಡೈಮೆನ್ಸಿಟಿ 8300 ಪ್ರೊಸೆಸರ್ ಮತ್ತು 10,200mAh ಬ್ಯಾಟರಿ ಇದೆ. ಇದರ ಹೋಲಿಕೆಯಲ್ಲಿ, ನಿಯೋ ಆವೃತ್ತಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದೆ.ಭಾರತದಲ್ಲಿ ಟ್ಯಾಬ್ಲೆಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಸ್ಯಾಮ್‌ಸಂಗ್ ಮತ್ತು ಶಿಯೋಮಿಯಂತಹ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲು ಮೋಟೋರೊಲಾ ಈ ಹೊಸ ಟ್ಯಾಬ್ಲೆಟ್ ಅನ್ನು ಪರಿಚಯಿಸಿದೆ. ಇದರ ಉಚಿತ ಪೆನ್ ಮತ್ತು ಸ್ಮಾರ್ಟ್ ಕನೆಕ್ಟ್ ವೈಶಿಷ್ಟ್ಯಗಳು ಇದನ್ನು ಹೆಚ್ಚು ಆಕರ್ಷಕ ಆಯ್ಕೆಯನ್ನಾಗಿ ಮಾಡಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Motorola has officially announced the Moto Pad 60 Neo India launch date along with its key specifications and Flipkart availability. Here’s everything you need to know before the launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+