ಜ.23 ರಂದು Moto Watch ಬಿಡುಗಡೆ ಅಧಿಕೃತ: ಎಲ್ಲಾ ಫೀಚರ್ಸ್ ಬಹಿರಂಗ!
CES 2026 ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ Moto Watch ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ. Moto Watch ಅನ್ನು ಭಾರತದಲ್ಲಿ ಜನವರಿ 23ರಂದ ಬಿಡುಗಡೆಗೊಳಿಸಲಾಗುವುದು ಎಂದು Motorola ಕಂಪೆನಿ ತಿಳಿಸಿದ್ದು, ಈ ಸ್ಮಾರ್ಟ್‌ವಾಚ್‌ನ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಗೊಳಿಸಿದೆ. ಈ ಹೊಸ ಸ್ಮಾರ್ಟ್‌ವಾಚ್, ಪ್ರೀಮಿಯಂ ವಿನ್ಯಾಸ, ಆರೋಗ್ಯ ಕೇಂದ್ರೀಕೃತ ವೈಶಿಷ್ಟ್ಯಗಳು ಮತ್ತು ದೀರ್ಘ ಬ್ಯಾಟರಿ ಲೈಫ್‌ನೊಂದಿಗೆ ಗಮನ ಸೆಳೆಯುವಂತಿದೆ. ಹಾಗಾದರೆ, ಹೊಸ Moto Watch ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Moto Watch: ಬಿಡುಗಡೆ ದಿನಾಂಕ ಮತ್ತು ಲಭ್ಯತೆ
Moto Watch ಅನ್ನು ಭಾರತದಲ್ಲಿ ಜನವರಿ 23ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ.ಈ ಸ್ಮಾರ್ಟ್‌ವಾಚ್ ಮ್ಯಾಟ್ ಬ್ಲ್ಯಾಕ್ ಮತ್ತು ಮ್ಯಾಟ್ ಸಿಲ್ವರ್ ಎಂಬ ಎರಡು ಕ್ಲಾಸಿಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಬಳಕೆದಾರರ ಅಭಿರುಚಿಗೆ ಅನುಗುಣವಾಗಿ ಸಿಲಿಕೋನ್ ಸ್ಟ್ರ್ಯಾಪ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಸ್ಟ್ರ್ಯಾಪ್ ಆಯ್ಕೆಯನ್ನು ನೀಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಲಾಂಚ್ ನಂತರ, Moto Watch ಅನ್ನು Flipkart ಹಾಗೂ Motorola India ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು.
Moto Watch: ಪ್ರಮುಖ ವೈಶಿಷ್ಟ್ಯಗಳು
ಈ Moto Watch 1.4 ಇಂಚಿನ ವೃತ್ತಾಕಾರದ OLED ಡಿಸ್ಪ್ಲೇ ಹೊಂದಿದ್ದು, ಮೇಲ್ಭಾಗದಲ್ಲಿ Gorilla Glass 3 ರಕ್ಷಣೆಯಿದೆ. ಗ್ಲಾಸ್‌ನ ಹೊರವಲಯದಲ್ಲಿ ಸೂಕ್ಷ್ಮ ಸಮಯ ಗುರುತುಗಳೊಂದಿಗೆ ಕ್ಲಾಸಿಕ್ ವಾಚ್ ಲುಕ್ ನೀಡಲಾಗಿದೆ. 47mm ಅಲ್ಯೂಮಿನಿಯಂ ಫ್ರೇಮ್ ಹೊಂದಿರುವ ಈ ಸ್ಮಾರ್ಟ್‌ವಾಚ್ ಕೇವಲ 39 ಗ್ರಾಂ ತೂಕವಿದ್ದು, ದಿನಪೂರ್ತಿ ಧರಿಸಿದರೂ ಅಸ್ವಸ್ಥತೆ ಆಗದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

Moto Watch ಆರೋಗ್ಯದತ್ತ ಹೆಚ್ಚು ಗಮನಹರಿಸುವ ಬಳಕೆದಾರರಿಗೆ ಸಹ ಸೂಕ್ತವಾಗಿದೆ. ಇದು ಹೆಜ್ಜೆಗಳ ಲೆಕ್ಕ, ನಿದ್ರೆ ವಿಶ್ಲೇಷಣೆ, ಒತ್ತಡ ಮಟ್ಟ ಮಾಪನ ಸೇರಿದಂತೆ ಹಲವು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ವಿಶೇಷವೆಂದರೆ, ಇದು Polar ಕಂಪನಿಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಮೋಟೊರೋಲಾದ ಮೊದಲ ಸ್ಮಾರ್ಟ್‌ವಾಚ್. ಈ ತಂತ್ರಜ್ಞಾನದಿಂದ ಹೃದಯ ಬಡಿತ, SpO₂ ಮಟ್ಟ, ವರ್ಕೌಟ್ ಟ್ರ್ಯಾಕಿಂಗ್ ಸೇರಿದಂತೆ ನಿಖರ ಆರೋಗ್ಯ ಡೇಟಾ ದೊರೆಯುತ್ತದೆ.
Moto Watch ನಲ್ಲಿ Bluetooth 5.3 ಮೂಲಕ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಲಭ್ಯವಿದೆ. ನೋಟಿಫಿಕೇಶನ್ ಅಲರ್ಟ್‌ಗಳು, ಕರೆಗಳ ಮಾಹಿತಿ ಮತ್ತು Moto AI ಬೆಂಬಲಿತ ಫೋನ್‌ಗಳೊಂದಿಗೆ "Catch Me Up" ಫೀಚರ್ ಇದನ್ನು ಇನ್ನಷ್ಟು ಸ್ಮಾರ್ಟ್ ಆಗಿ ಮಾಡುತ್ತದೆ. ಜೊತೆಗೆ, ಟ್ರೆಕ್ಕಿಂಗ್ ಮತ್ತು ಔಟ್‌ಡೋರ್ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಡ್ಯುಯಲ್-ಫ್ರಿಕ್ವೆನ್ಸಿ GPS ಸಹ ಸೇರಿಸಲಾಗಿದೆ.
ಬ್ಯಾಟರಿ ಸಾಮರ್ಥ್ಯದಲ್ಲಿ, Moto Watchನ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. Always-On Display ಆಫ್ ಮಾಡಿದರೆ 13 ದಿನಗಳವರೆಗೆ, ಮತ್ತು AOD ಆನ್ ಮಾಡಿದರೂ ಸಹ ಸುಮಾರು 7 ದಿನಗಳ ಬ್ಯಾಟರಿ ಲೈಫ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ
ಒಟ್ಟಿನಲ್ಲಿ, Moto Watch ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಬರುತ್ತಿದೆ ಆಕರ್ಷಕ ವಿನ್ಯಾಸ, ವಿಶ್ವಾಸಾರ್ಹ ಆರೋಗ್ಯ ಟ್ರ್ಯಾಕಿಂಗ್ ಮತ್ತು ದೀರ್ಘ ಬ್ಯಾಟರಿ ಲೈಫ್‌ಗಳೊಂದಿಗೆ, ಇದು ಭಾರತೀಯ ಗ್ರಾಹಕರಿಗೆ ಗಮನಾರ್ಹ ಆಯ್ಕೆಯಾಗಿ ಕಾಣಿಸುತ್ತಿದೆ. ಗಮನಿಸುವುದಾದರೆ, ಜನವರಿ 23ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಈ ಲಾಂಚ್ ಕಾರ್ಯಕ್ರಮದಲ್ಲಿಯೇ ಬಹುನಿರೀಕ್ಷಿತ Motorola Signature ಫೋನ್ ಸಹ ಅನಾವರಣಗೊಳ್ಳಲಿದೆ.


Click it and Unblock the Notifications








