Home
Gadgets

MWC 2025: ಬಹುನಿರೀಕ್ಷಿತ Honor Watch 5 Ultra ಸ್ಮಾರ್ಟ್‌ವಾಚ್ ಬಿಡುಗಡೆ!

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2025 ಸಮಾರಂಭದಲ್ಲಿ ಹಾನರ್ ಕಂಪೆನಿಯು ತನ್ನ Honor Watch 5 Ultra ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು ಈಗಾಗಲೇ Honor Watch 5 ಮತ್ತು Watch 4 Pro ಅನ್ನು ಒಳಗೊಂಡಿರುವ ಹಾನರ್ ಸ್ಮಾರ್ಟ್‌ವಾಚ್ ಶ್ರೇಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಈ Honor Watch 5 Ultra ಸ್ಮಾರ್ಟ್‌ವಾಚ್ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಓದುವಿಕೆ ಸೇರಿದಂತೆ ಕೆಲವು ಕಂಪನಿಯ ಮೊದಲ ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಸ್ಮಾರ್ಟ್‌ವಾಚ್ ಅನ್ನು ಒಂದೇ ಚಾರ್ಜ್‌ನಲ್ಲಿ ಸಾಮಾನ್ಯ ಬಳಕೆಯೊಂದಿಗೆ 15 ದಿನಗಳವರೆಗೆ ಚಾಲನೆ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, ಹೊಸ Honor Watch 5 Ultra ಸ್ಮಾರ್ಟ್‌ವಾಚ್ ಸ್ಮಾರ್ಟ್‌ವಾಚ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

Honor Watch 5 Ultra ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು.

Honor Watch 5 Ultra ಸ್ಮಾರ್ಟ್‌ವಾಚ್ 60Hz ವೇರಿಯಬಲ್ ರಿಫ್ರೆಶ್ ರೇಟ್ ಸಾಮರ್ಥ್ಯದ 1.5 ಇಂಚಿನ LTPO AMOLED ಡಿಸ್‌ಪ್ಲೇಯನ್ನು ಹೊಂದಿದೆ, ಇದು ವೃತ್ತಾಕಾರದ ಗ್ರೇಡ್ 5 ಟೈಟಾನಿಯಂ ಮಿಶ್ರಲೋಹದ ಕೇಸ್‌ನಲ್ಲಿ ಲಭ್ಯವಿದ್ದು, ಯಾವಾಗಲೂ ಆನ್ ಆಗಿರುವ ಡಿಸ್‌ಪ್ಲೇ ಕಾರ್ಯವನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್‌ಪ್ಲೇಯನ್ನು ಸಫೈರ್ (ನೀಲಮಣಿ) ಗಾಜಿನಿಂದ ರಕ್ಷಿಸಲಾಗಿದೆ ಕಂಪೆನಿ ತಿಳಿಸಿದೆ. ಬಳಕೆದಾರರು ತಮ್ಮ ಆರೋಗ್ಯದ ಅವಲೋಕನಕ್ಕಾಗಿ ಕ್ವಿಕ್ ಹೆಲ್ತ್ ಸ್ಕ್ಯಾನ್ ವೈಶಿಷ್ಟ್ಯವನ್ನು ಬಳಸಬಹುದು, ಮತ್ತು ತ್ವರಿತ ECG ಟ್ರ್ಯಾಕಿಂಗ್ ಅನ್ನು ಸಹ ನೀಡುತ್ತದೆ. ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಓದುವಿಕೆ ಹಾಗೂ ಹೆಲ್ದಿ ಮಾರ್ನಿಂಗ್ ರಿಪೋರ್ಟ್ ಮೂಲಕ ಹಿಂದಿನ ದಿನದ ಆರೋಗ್ಯ ಡೇಟಾವನ್ನು ಒದಗಿಸುವಂತಹ ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ.

MWC 2025: ಬಹುನಿರೀಕ್ಷಿತ Honor Watch 5 Ultra ಸ್ಮಾರ್ಟ್‌ವಾಚ್ ಬಿಡುಗಡೆ!

ಈ ಸ್ಮಾರ್ಟ್‌ವಾಚ್ 100+ ಕ್ರೀಡಾ ವಿಧಾನಗಳು, ನಿದ್ರೆ ಟ್ರ್ಯಾಕಿಂಗ್, ಹೃದಯ ಬಡಿತ ಟ್ರ್ಯಾಕಿಂಗ್ ಮತ್ತು ರಕ್ತ-ಆಮ್ಲಜನಕ ಮೇಲ್ವಿಚಾರಣೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಬಾಳಿಕೆಗಾಗಿ, ಹಾನರ್ ವಾಚ್ 5 ಅಲ್ಟ್ರಾ ಹೊಸ ಡೈವಿಂಗ್ ಮೋಡ್ ಅನ್ನು ಹೊಂದಿದ್ದು, ಇದು ಬಳಕೆದಾರರಿಗೆ 40 ಮೀಟರ್ ಆಳದವರೆಗೆ ನೀರಿನ ಅಡಿಯಲ್ಲಿ ಧುಮುಕಲು ಅನುವು ಮಾಡಿಕೊಡುತ್ತದೆ. ಇದು ಧೂಳು ಮತ್ತು ನೀರಿನ ಒಳಹರಿವಿನ ವಿರುದ್ಧದ ರಕ್ಷಣೆಗಾಗಿ IP68 ರೇಟಿಂಗ್ ಹೊಂದಿದೆ. ಹಾಗೆಯೇ, ಈ ಸ್ಮಾರ್ಟ್‌ವಾಚ್ 480mAh ಬ್ಯಾಟರಿಯನ್ನು ಹೊಂದಿದೆ, ಮತ್ತು ಸಾಮಾನ್ಯ ಬಳಕೆಯೊಂದಿಗೆ ಒಂದೇ ಚಾರ್ಜ್‌ನಲ್ಲಿ 15 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿದೆ. ಈ ಸ್ಮಾರ್ಟ್‌ವಾಚ್ 46.3×46.3x 11.4mm ಅಳತೆಗಳನ್ನು ಹೊಂದಿದೆ ಮತ್ತು 51.8g ತೂಗುತ್ತದೆ. ಮತ್ತು ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 5.2 ಮತ್ತು ಜಿಪಿಎಸ್ ವೈಶಿಷ್ಟ್ಯಗಳು ಸೇರಿವೆ.

ಬೆಲೆ ಮತ್ತು ಲಭ್ಯತೆ:

ನೂತನ Honor Watch 5 Ultra ಸ್ಮಾರ್ಟ್‌ವಾಚ್ ಬೆಲೆ ಎಷ್ಟು ಎಂಬ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿಯನ್ನು ಕಂಪೆನಿ ಒದಗಿಸಿಲ್ಲ, ಆದರೆ ಜಾಗತಿಕ ವೆಬ್‌ಸೈಟ್‌ನಲ್ಲಿ ಇದು ಶೀಘ್ರದಲ್ಲೇ ಬರಲಿದೆ ಎಂದು ಪಟ್ಟಿ ಮಾಡಲಾಗಿದೆ. ಇದನ್ನು ಕಪ್ಪು ಮತ್ತು ಕಂದು ಬಣ್ಣಗಳಲ್ಲಿ ಮಾರಾಟಕ್ಕೆ ತರಲಾಗುವ ಈ ಸ್ಮಾರ್ಟ್‌ವಾಚ್ ಫ್ಲೋರೋಎಲಾಸ್ಟೊಮರ್ ಮತ್ತು ಲೆದರ್ ಸ್ಟ್ರಾಪ್ ಆಯ್ಕೆಗಳಲ್ಲಿ ಮಾರಾಟಕ್ಕೆ. ಹಾಗೂ ಶೀಘ್ರದಲ್ಲೇ ಯುರೋಪ್‌ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
Showcasing an enchanting octagonal dome design, the HONOR Watch 5 Ultra effortlessly combines Eastern and Western elements, resulting in a visually appealing and harmonious aesthetic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+