Home
Gadgets

ವಿಸ್ಮಯಕಾರಿ ಸ್ಮಾರ್ಟ್‌ ಶೂ: ನೈಕ್ ವಿನ್ಯಾಸದಲ್ಲಿ ಇಂಟಲಿಜೆಂಟ್ ಶೂ...!

By Srinidhi

ಸದ್ಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ ವಸ್ತುಗಳು ಕಾಣಿಸಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಸ್ಟೋಡ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ನೈಕ್ ಕಂಪನಿಯೂ ಹೊಸದೊಂದು ಸ್ಮಾರ್ಟ್‌ ಶೂವನ್ನು ರೆಡಿ ಮಾಡಿದ್ದು, ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇದೊಂದು ಸ್ಮಾರ್ಟ್ ಶೂ ಆಗಿದ್ದು, ಲೈಸ್ ಕಟ್ಟುವ ಮತ್ತು ಬಿಚ್ಚುವ ಅವಶ್ಯವಿಲ್ಲ ಎನ್ನಲಾಗಿದೆ. ಹೈಪರ್ ಅಡಾಪ್ಟ್ 1.0 ಎಂದು ಇದಕ್ಕೆ ನಾಮಕರಣವನ್ನು ಮಾಡಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಶುರು ಮಾಡಿದೆ ಎನ್ನಲಾಗಿದೆ.

ವಿಸ್ಮಯಕಾರಿ ಸ್ಮಾರ್ಟ್‌ ಶೂ: ನೈಕ್ ವಿನ್ಯಾಸದಲ್ಲಿ ಇಂಟಲಿಜೆಂಟ್ ಶೂ...!

ಹೈಪರ್ ಅಡಾಪ್ಟ್ 1.0 ಶೂ ಲೋಕದಲ್ಲಿಯೇ ಹೊಸ ಅದ್ಬುತ ಎನ್ನಲಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ನೀಡಲಿದ್ದು, ಶೂ ಲೈಸ್ ಕಟ್ಟುವಂತಹ ಕೆಲಸದಿಂದ ಮುಕ್ತಿಯನ್ನು ನೀಡಲಿದೆ. ಸಖರ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಹೈಪರ್ ಅಡಾಪ್ಟ್ 1.0 ಶೂ, ನೂತನ ತಲೆಮಾರಿನ ಮಕ್ಕಳಿಗೆ ಹೊಸ ಸಾಧ್ಯತೆಯಾಗಿದ್ದು, ನೋಡಲು ವಿನ್ಯಾಸವು ಸಹ ಅದ್ದೂರಿಯಾಗಿದೆ. ಈ ಹಿನ್ನಲೆಯಲ್ಲಿ ಹೈಪರ್ ಅಡಾಪ್ಟ್ 1.0 ಶೂ ಕುರಿತ ಮಾಹಿತಿಯೂ ಮುಂದಿನಂತೆ ಇದೆ.

ಸ್ಮಾರ್ಟ್‌ ಶೂ:

ಸ್ಮಾರ್ಟ್‌ ಶೂ:

ಹೈಪರ್ ಅಡಾಪ್ಟ್ 1.0 ಶೂ ನಲ್ಲಿ ಹೊಸ ಮಾದರಿಯ ತಂತ್ರಜ್ಙಾನವನ್ನು ಅಳವಡಿಸಲಾಗಿದ್ದು, ನೀವು ಶೂ ಒಳಗೆ ಕಾಲು ಹಾಕುತ್ತಿದ್ದಂತೆ ಸ್ಮಾರ್ಟ್ ಶೂ ತನ್ನ ಕೆಲಸ ವನ್ನು ಆರಂಭಿಸುತ್ತಿದೆ. ನಿಮ್ಮ ಕಾಲಿನ ಗಾತ್ರಕ್ಕೆ ಸರಿಯಾಗಿ ಲೈಸ್‌ಗಳನ್ನು ಬಿಗಿ ಮಾಡುತ್ತಿದೆ. ಇದರಿಂದಾಗಿ ನೀವು ಲೈಸ್ ಕಟ್ಟವ ಅವಶ್ಯಕತೆಯೇ ಇರುವುದಿಲ್ಲ.

ಚಾರ್ಜ್ ಮಾಡಬೇಕು:

ಚಾರ್ಜ್ ಮಾಡಬೇಕು:

ನಿಮ್ಮ ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಯೂಎಸ್‌ಬಿಯಿಂದ ಈ ಸ್ಮಾರ್ಟ್ ಶೂವನ್ನು ಚಾರ್ಜ್ ಮಾಡಬೇಕಾಗಿದೆ. ಇದಕ್ಕಾಗಿಯೇ ಈ ಶೂ ಬಾಕ್ಸ್ ನೊಂದಿಗೆ ಚಾರ್ಜರ್ ಅನ್ನು ನೀಡಲಾಗಿದೆ. ಇದರಿಂದಾಗಿ ನೀವು ಶೂವನ್ನು ಚಾರ್ಚ್ ಮಾಡಬೇಕಾಗುತ್ತಿದೆ.

ಬಾಕ್ಸ್‌ನಲ್ಲಿ:

ಬಾಕ್ಸ್‌ನಲ್ಲಿ:

ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಬಾಕ್ಸ್‌ನಲ್ಲಿ ಹೈಪರ್ ಅಡಾಪ್ಟ್ 1.0 ಶೂ ಡೆಲಿವರಿಯಾಗಲಿದ್ದು, ಇದರಲ್ಲಿ ಒಂದು ಜೊತೆ ಶೂ, ಕ್ವೀಕ್ ಸ್ಟಾರ್ಟ್ ಗೈಡ್, ಅಡ್ಯಾಪ್ಟರ್, ಚಾರ್ಜಿಂಗ್ ವೈರ್ ಗಳನ್ನು ನೀಡಲಾಗುತ್ತದೆ. ಇದರ ಸಹಾಯದಿಂದ ನೀವು ಹೈಪರ್ ಅಡಾಪ್ಟ್ 1.0 ಶೂ ವನ್ನು ಚಾರ್ಜ್ ಮಾಡಬೇಕಾಗಿದೆ.

ಹೇಗೆ ಕಾರ್ಯ:

ಹೇಗೆ ಕಾರ್ಯ:

ಈ ಸ್ಮಾರ್ಟ್‌ ಶೂವಿನ ಒಳಗೆ ನೀವು ಕಾಲಿಟ್ಟರೇ ಸಾಕು ಅದೇ ಲೈಸ್ ಗಟ್ಟಿ ಮಾಡಿಕೊಳ್ಳಲಿದೆ. ಅಲ್ಲದೇ ಇದರಲ್ಲಿ ಎರಡು ಬಟನ್ ಮತ್ತು LED ಲೈಟ್ ಅನ್ನು ನೀಡಲಾಗಿದೆ. ಇದರ ಸಹಾಯದಿಂದ ನೀವು ನಿಮಗೆ ಬೇಕಾದರೆ ಇನ್ನು ಟೈಟ್ ಮತ್ತು ಲೂಸ್ ಮಾಡಿಕೊಳ್ಳಬಹುದು. ಜೊತೆಗೆ ಪ್ರಿಸೆಟ್ ಸೈಜ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹದುಆಗಿದೆ.

ಯುವಕರಿಗೆ:

ಯುವಕರಿಗೆ:

ಹೈಪರ್ ಅಡಾಪ್ಟ್ 1.0 ಶೂ ವಿಶೇಷವಾಗಿ ಯೂವಕರಿಗೆಂದು ನಿರ್ಮಾಣವಾಗಿದ್ದು, ನೋಡಲು ಸ್ಟೈಲಿಶ್ ಆಗಿದ್ದು, ಬಳಕೆ ಮಾಡಿಕೊಳ್ಳಲು ಸಹ ಉತ್ತಮವಾಗಿದೆ. ಈ ಸ್ಮಾರ್ಟ್‌ ಶೂ ಬೆಲೆ $720 ಆಗಿದ್ದು, ಶೀಘ್ರವೇ ನಮ್ಮ ಮಾರುಕಟ್ಟೆಯಲ್ಲಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸ್ಮಾರ್ಟ್ ಶೂ ಕುರಿತ ವೀಡಿಯೊ ಕೆಳಗೆ ಇದೆ.

ಹೈಪರ್ ಅಡಾಪ್ಟ್ 1.0 ಶೂ ವೀಡಿಯೊ:

ಈ ವೀಡಿಯೊದಲ್ಲಿ ನೀವು ಹೈಪರ್ ಅಡಾಪ್ಟ್ 1.0 ಶೂ ಹೇಗಿದೆ ಎಂಬುದರ ಸಂಪೂರ್ಣ ವಿವರವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲಿ ನಿಮಗೆ ಹೆಚ್ಚಿನ ಮಾಹಿತಿಯೂ ದೊರೆಯಲಿದೆ.

Best Mobiles in India

English summary
Nike’s self-lacing shoe was created. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+