ಕೇವಲ 999 ರೂ.ಗೆ Noise Buds F1 (TWS) ಇಯರ್‌ಬಡ್ ಬಿಡುಗಡೆ!
ಆಡಿಯೋ ಗ್ಯಾಜೆಟ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜನಪ್ರಿಯ ಬ್ರ್ಯಾಂಡ್ Noise ತನ್ನ ಹೊಸ Noise Buds F1 ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್‌ಗಳನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಿದೆ. ಈ ಹೊಸ ಇಯರ್‌ಬಡ್‌ಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗಿದ್ದು, ಇವುಗಳು ನಾಲ್ಕು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿವೆ. ಹಾಗಾದರೆ, ಹೊಸ Noise Buds F1 ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್‌ಗಳು ಹೇಗಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Noise Buds F1 TWS ಇಯರ್‌ಬಡ್ ವೈಶಿಷ್ಟ್ಯಗಳು
Noise Buds F1 TWS ಇಯರ್‌ಬಡ್‌ಗಳು 11mm ಡ್ರೈವರ್‌ಗಳನ್ನು ಹೊಂದಿದ್ದು, ಉತ್ತಮ ಧ್ವನಿ ಗುಣಮಟ್ಟವನ್ನು ನೀಡುತ್ತವೆ. ಬಳಕೆದಾರರು ತಮ್ಮ ಇಷ್ಟದಂತೆ ಧ್ವನಿ ಪ್ರೊಫೈಲ್ ಅನ್ನು ಕಸ್ಟಮೈಸ್ ಮಾಡಲು EQ ಮೋಡ್‌ಗಳನ್ನು ಸಹ ಬೆಂಬಲಿಸುತ್ತವೆ. ಕರೆಗಳನ್ನು ಸ್ಪಷ್ಟವಾಗಿ ಸ್ವೀಕರಿಸಲು, ಇವುಗಳು ಕ್ವಾಡ್ ಮೈಕ್ ಸಿಸ್ಟಮ್‌ನೊಂದಿಗೆ ಬರುತ್ತವೆ, ಇದು ಸುತ್ತಮುತ್ತಲಿನ ಅನಗತ್ಯ ಶಬ್ದಗಳನ್ನು ನಿವಾರಿಸಲು ಪರಿಸರ ಶಬ್ದ ರದ್ದತಿ (ENC) ವೈಶಿಷ್ಟ್ಯವನ್ನು ಬಳಸುತ್ತದೆ. ಗೇಮಿಂಗ್ ಆಡುವವರಿಗೆ, ಇದು ಕಡಿಮೆ-ಲೇಟೆನ್ಸಿ ಮೋಡ್ ಅನ್ನು ಹೊಂದಿದೆ, ಇದು ನೈಜ-ಸಮಯದ ಆಡಿಯೋ ಪ್ರತಿಕ್ರಿಯೆಯನ್ನು ನೀಡುತ್ತದೆ.
ಸಂಪರ್ಕಕ್ಕಾಗಿ, ಈ Noise Buds F1 ಇಯರ್‌ಬಡ್‌ಗಳು ಬ್ಲೂಟೂತ್ 5.3 ಅನ್ನು ಬಳಸುತ್ತದೆ. ಇದರ ಹೈಪರ್‌ಸಿಂಕ್ ವೈಶಿಷ್ಟ್ಯವು ಕೇಸ್ ಮುಚ್ಚಳವನ್ನು ತೆರೆದ ತಕ್ಷಣ ಕೊನೆಯ ಸಂಪರ್ಕಿತ ಸಾಧನದೊಂದಿಗೆ ತ್ವರಿತವಾಗಿ ಜೋಡಣೆಯಾಗುತ್ತದೆ. ಈ ಇಯರ್‌ಬಡ್‌ಗಳು ನೀರು ಮತ್ತು ಬೆವರಿನಿಂದ ರಕ್ಷಣೆಗಾಗಿ IPX5 ರೇಟಿಂಗ್‌ಅನ್ನು ಹೊಂದಿವೆ, ಇದು ವ್ಯಾಯಾಮ ಮಾಡುವಾಗ ಅಥವಾ ಹೊರಗೆ ಹೋಗುವಾಗ ಅನುಕೂಲಕರವಾಗಿದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಇಷ್ಟೇ ಅಲ್ಲದೆ, ಇದು ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ಲೇಬ್ಯಾಕ್ ಸಮಯವನ್ನು ಬಯಸುವವರಿಗೆ ಬಹಳ ಉಪಯುಕ್ತ ಎಂದು ತಿಳಿಸಿದೆ.

Noise Buds F1 ಇಯರ್‌ಬಡ್‌ಗಳು ಬ್ಯಾಟರಿ ಬಾಳಿಕೆ ಮತ್ತು ಚಾರ್ಜಿಂಗ್ ಕುರಿತು ನೋಡುವುದಾದರೆ, ಈ ಸಾಧನವು ಚಾರ್ಜಿಂಗ್ ಕೇಸ್‌ನೊಂದಿಗೆ ಸೇರಿ, ಒಂದೇ ಚಾರ್ಜ್‌ನಲ್ಲಿ 50 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು Noise ಕಂಪೆನಿ ಹೇಳಿದೆ. ಇದಲ್ಲದೆ, ಇನ್‌ಸ್ಟಾಚಾರ್ಜ್ ತಂತ್ರಜ್ಞಾನದ ಮೂಲಕ, ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 150 ನಿಮಿಷಗಳವರೆಗೆ ಸಂಗೀತವನ್ನು ಕೇಳಬಹುದು. ಇದರಿಂದಾಗಿಯೇ, Noise Buds F1 ಇಯರ್‌ಬಡ್‌ಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ಲೇಬ್ಯಾಕ್ ಸಮಯವನ್ನು ಬಯಸುವವರಿಗೆ ಬಹಳ ಉಪಯುಕ್ತ ಎಂದು ಕಂಪೆನಿ ಹೇಳಿಕೊಂಡಿದೆ.
Noise Buds F1 TWS ಇಯರ್‌ಬಡ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Noise Buds F1 ಇಯರ್‌ಫೋನ್‌ಗಳ ಪರಿಚಯಾತ್ಮಕ ಬೆಲೆ ರೂ. 999 ಆಗಿದೆ. ಇದು ಸೀಮಿತ ಅವಧಿಯ ಪ್ರಚಾರದ ಬೆಲೆಯಾಗಿದ್ದು, ಈ ಅವಧಿ ಎಷ್ಟು ದಿನಗಳವರೆಗೆ ಇರುತ್ತದೆ ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಇನ್ನು ಈ ಇಯರ್‌ಬಡ್‌ಗಳು ಕಾಮ್ ಬೀಜ್, ಕಾರ್ಬನ್ ಬ್ಲಾಕ್, ಮಿಂಟ್ ಗ್ರೀನ್ ಮತ್ತು ಟ್ರೂ ಪರ್ಪಲ್ ಎಂಬ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಇವುಗಳು ಪ್ರಸ್ತುತ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಿದೆ. ಒಟ್ಟಾರೆಯಾಗಿ, ಸಮಗ್ರ ವೈಶಿಷ್ಟ್ಯಗಳು, ಆಕರ್ಷಕ ವಿನ್ಯಾಸ ಮತ್ತು ಕೈಗೆಟುಕುವ ಬೆಲೆಯೊಂದಿಗೆ, Noise Buds F1 ಭಾರತೀಯ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








