Noise: ಆಫ್‌ಲೈನ್ ಸ್ಟೋರ್‌ಗೆ ಎಂಟ್ರಿ ಕೊಟ್ಟ ನಾಯ್ಸ್ ಲುನಾ ರಿಂಗ್; ಲಭ್ಯತೆ ತಿಳಿಯಿರಿ
ನಾಯ್ಸ್ ಸಂಸ್ಥೆ ತನ್ನ ಗ್ರಾಹಕರಿಗೆ ಅನುಕೂಲವಾಗಲೆಂದು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ವಾಚ್‌ಗಳು, ಇಯಡ್‌ಬಡ್ಸ್‌ಗಳು, ಲುನಾ ರಿಂಗ್, ಸ್ಪೀಕರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಈ ಮೂಲಕ ಮದ್ಯಮ ವರ್ಗದ ಹಾಗೂ ಯುವಕರನ್ನು ಸೆಳೆಯುವಲ್ಲಿ ನಾಯ್ಸ್ (Noise) ಯಶಸ್ವಿಯಾಗಿದೆ. ಇತ್ತೀಚೆಗೆ ನಾಯ್ಸ್ ಸಂಸ್ಥೆ ತನ್ನ ಬಹು ನಿರೀಕ್ಷಿತ ನಾಯ್ಸ್ ಲುನಾ ರಿಂಗ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು, ಇಷ್ಟು ದಿನಗಳ ಕಾಲ ಆನ್‌ಲೈನ್ ಸ್ಟೋರ್‌ಗಳಲ್ಲಿ ಈ ಲುನಾ ರಿಂಗ್ ಲಭ್ಯವಿತ್ತು ಇದೀಗ ಈ ನಾಯ್ಸ್ ಲುನಾ ರಿಂಗ್ ಆಫ್ ಲೈನ್ ಸ್ಟೋರ್‌ಗಳಲ್ಲಿ ಕೂಡ ಲಭ್ಯವಿರಲಿದೆ ಎಂಬ ಅಂಶವನ್ನು ನಾಯ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ.
ಹೌದು ನಾಯ್ಸ್ ಲುನಾ ರಿಂಗ್ (noise Luna Ring) ಪ್ರಸ್ತುತ ಭಾರತದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಕೂಡ ಲಭ್ಯವಿದೆ. ಕಂಪನಿಯು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸ್ಮಾರ್ಟ್ ರಿಂಗ್ ಅನ್ನು ಪ್ರಾರಂಭಿಸಿತ್ತು. ಇದು 70 ಮೆಟ್ರಿಕ್‌ಗಳಲ್ಲಿ ನಿದ್ರೆ ಮತ್ತು ಸಿದ್ಧತೆ ಸೇರಿದಂತೆ ದೈನಂದಿನ ಆರೋಗ್ಯ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವುದು ಮತ್ತು ವಿಶ್ರಾಂತಿ ಮಾದರಿಗಳನ್ನು ಸೂಚಿಸಲಿದೆ.

ನಾಯ್ಸ್ ಲೂನಾ ರಿಂಗ್ (Noise Luna Ring) ಬೆಲೆ ಮತ್ತು ಲಭ್ಯತೆ:
ಇದರ ಬೆಲೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ 19,999 ರೂ.ಗಳು ಎಂದು ನಿಗದಿಪಡಿಸಲಾಗಿದೆ. ಇದು ಬಿಡುಗಡೆಯಾದಾಗ ಇದರ ಬೆಲೆ 4,999 ರೂ. ಗಳು ಎಂದು ನಿಗದಿಪಡಿಸಿ ಬಿಡುಗಡೆ ಮಾಡಲಾಗಿತ್ತು. ಈ ರಿಂಗ್ ಅನ್ನು ಆಫ್‌ಲೈನ್‌ನಲ್ಲಿ ಖರೀದಿಸಲು ಆಸಕ್ತಿ ಹೊಂದಿರುವವರು 6 ಮಹಾ ನಗರಗಳಲ್ಲಿರುವ ಆಯ್ದ ರಿಲಯನ್ಸ್ ಡಿಜಿಟಲ್ ಮತ್ತು ವಿಜಯ್ ಸೇಲ್ಸ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಈ ರಿಂಗ್ ಅನ್ನು ಸ್ಟೋರ್‌ಗಳಿಗೆ ಹೋಗಿ ಖರೀದಿಸಬಹುದಾಗಿದೆ.
ನಾಯ್ಸ್ ಲೂನಾ ರಿಂಗ್ ಏಳು ಬೇರೆ ಬೇರೆ ಗಾತ್ರಗಳಲ್ಲಿ ಲಭ್ಯವಿದೆ ಮತ್ತು ಇದು ಸನ್‌ಲಿಟ್ ಗೋಲ್ಡ್ (Sunlit Gold), ರೋಸ್ ಗೋಲ್ಡ್ (Rose Gold), ಸ್ಟಾರ್‌ಡಸ್ಟ್ ಸಿಲ್ವರ್ (Stardust Silver), ಲೂನಾರ್ ಬ್ಲ್ಯಾಕ್ ( Lunar Black) ಮತ್ತು ಮಿಡ್‌ನೈಟ್ ಬ್ಲ್ಯಾಕ್ (Midnight Black) ಬಣ್ಣಗಳಲ್ಲಿ ಗ್ರಾಹಕರು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.
ಈ ಕುರಿತು ನಾಯ್ಸ್ ಸಹ ಸಂಸ್ಥಾಪಕ ಅಮಿತ್ ಖತ್ರಿ ಮಾಹಿತಿ ನೀಡಿದ್ದು, ' ನಾಯ್ಸ್ ಬಳಕೆದಾರರಿಗೆ ಪ್ರೀಮಿಯಂ ಅನುಭವವನ್ನು ನೀಡುವ ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ, ಮಳಿಗೆಗಳಲ್ಲಿ ಲೂನಾ ರಿಂಗ್ ಅನ್ನು ಪರಿಚಯಿಸುವುದನ್ನು ನಾವು ಅಪಾರ ಹೆಮ್ಮೆಪಡುತ್ತೇವೆ. ಲೂನಾ ರಿಂಗ್ ಮೂಲಕ ತಡೆರಹಿತ ತಾಂತ್ರಿಕ ಏಕೀಕರಣದ ಮೂಲಕ ಗ್ರಾಹಕರು ತಮ್ಮ ಜೀವನಶೈಲಿಯನ್ನು ಉನ್ನತೀಕರಿಸಲು ಮತ್ತು ನಾವು ಕೂಡ ಸಶಕ್ತರಾಗಲು ಬಯಸುತ್ತೇವೆ, ಅವರ ಯೋಗಕ್ಷೇಮ ಮತ್ತು ಕಾರ್ಯಕ್ಷಮತೆಯ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ' ಎಂದು ಹೇಳಿದ್ದಾರೆ.
ನಾಯ್ಸ್ ಲುನಾ ರಿಂಗ್ (Noise Luna ring) ವಿಶೇಷತೆಗಳು:
ನಾಯ್ಸ್ ಲೂನಾ ರಿಂಗ್ ನಿದ್ರೆ, ಸಿದ್ಧತೆ ಸೇರಿದಂತೆ 70 ಕ್ಕೂ ಹೆಚ್ಚು ಕೆಲಸಗಳ ಕುರಿತು ಟ್ರ್ಯಾಕ್ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆಹಾರ ಮತ್ತು ವ್ಯಾಯಾಮದಿಂದ ಪ್ರಭಾವಿತವಾಗಿರುವ ದೇಹದ ವ್ಯತ್ಯಾಸಗಳನ್ನು ಟ್ರ್ಯಾಕ್ ಮಾಡುವ ತಾಪಮಾನದ ಸೆನ್ಸಾರ್ ಹೊಂದಿದೆ. ಇದು ಅಲ್ಟ್ರಾ-ಲೈಟ್‌ವೈಟ್ 3 ಎಂಎಂ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ ಮತ್ತು ಫೈಟರ್ ಜೆಟ್ ಗ್ರೇಡ್ ಟೈಟಾನಿಯಂ ಮತ್ತು ವಜ್ರದಂತಹ ಲೇಪನದಿಂದ ರಚಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು ಗೀರುಗಳು ಮತ್ತು ತುಕ್ಕು ನಿರೋಧಕ ಹೊಂದಿದೆ. ಜೊತೆಗೆ ಬ್ಲೂಟೂತ್ 5 LE, 50m ವರೆಗೆ ನೀರು ನಿರೋಧಕ ಹೊಂದಿದೆ ಮತ್ತು ಒಂದೇ ಚಾರ್ಜ್‌ನಲ್ಲಿ 6 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.


Click it and Unblock the Notifications








