ಭಾರತದಲ್ಲಿ 'Noise Master Buds' ಇಯರ್‌ಬಡ್ ಇದೀಗ ಖರೀದಿಗೆ ಲಭ್ಯ!..ಇಲ್ಲಿದೆ ಫುಲ್ ಡೀಟೇಲ್ಸ್!
ಬೋಸ್ ತಂತ್ರಜ್ಞಾನದಿಂದ ಸೌಂಡ್ ಟ್ಯೂನ್ ಮಾಡಲಾದ ಆಡಿಯೊ ಒಳಗೊಂಡಿರುವ Noise ಕಂಪನಿಯ ಹೊಚ್ಚ ಹೊಸ ವೈರ್‌ಲೆಸ್ 'Noise Master Buds' ಇಯರ್‌ಬಡ್ ಸಾಧನದ ಮಾರಾಟ ಇದೀಗ ಆರಂಭವಾಗಿದೆ.! ಭಾರತೀಯ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Noise ಕಂಪೆನಿಯ ಮೊಟ್ಟ ಮೊದಲ ಮಾಸ್ಟರ್ ಸರಣಿಯ ಈ 'Noise Master Buds' ಸಾಧನದ ಇಯರ್‌ಬಡ್‌ಗಳು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ನೊಂದಿಗೆ ಅಡಾಪ್ಟಿವ್ ಸೌಂಡ್ ಐಸೊಲೇಷನ್, ಸ್ಪೇಷಿಯಲ್ ಆಡಿಯೊ ಮತ್ತು ಸುಧಾರಿತ ಬ್ಲೂಟೂತ್ ಆಡಿಯೊ ಕೋಡೆಕ್‌ಗಳಿಗೆ ಬೆಂಬಲದಂತಹ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿವೆ.
ಈ ಹೊಸ Noise Master Buds ಸಾಧನವು 12.4 ಎಂಎಂ ಡ್ರೈವರ್‌ಗಳನ್ನು ಹೊಂದಿದ್ದು, ಇವುಗಳನ್ನು PEEK ಮತ್ತು ಟೈಟಾನಿಯಂನಂತಹ ಪ್ರೀಮಿಯಂ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಶಬ್ದ ರದ್ದತಿಗಾಗಿ, ಇಯರ್‌ಬಡ್‌ಗಳು 49dB ವರೆಗೆ ಅಡಾಪ್ಟಿವ್ ಸೌಂಡ್ ಐಸೊಲೇಷನ್ ಅನ್ನು ನೀಡುತ್ತವೆ. ಈ ಇಯರ್‌ಬಡ್‌ಗಳು ಕೆಲವು ವಿಶೇಷ ಸೌಲಭ್ಯಗಳನ್ನು ಹೊಂದಿವೆ. ಅವುಗಳಲ್ಲಿ ಮುಖ್ಯವಾದುದು ಸ್ಪೇಷಿಯಲ್ ಆಡಿಯೊ ಎಂಬ ವಿಶೇಷ ತಂತ್ರಜ್ಞಾನದೊಂದಿಗಿನ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC). ಇದರ ಸಹಾಯದಿಂದ ಹೊರಗಿನ ಶಬ್ದವನ್ನು ಕಡಿಮೆ ಮಾಡಿ, ಸ್ಪಷ್ಟವಾಗಿ ಸಂಗೀತವನ್ನು ಕೇಳಬಹುದು. ಇದರಿಂದ ಸಂಗೀತವನ್ನು ಕೇಳುವ ಅನುಭವ ಮತ್ತಷ್ಟು ಅದ್ಭುತವಾಗಿರುತ್ತದೆ.

ಈ Noise Master Buds ಸಾಧನದಲ್ಲಿ ಹೆಚ್ಚು ಶಬ್ದದ ಅನುಭವಕ್ಕಾಗಿ ಅವು LHDC (ಕಡಿಮೆ ಲೇಟೆನ್ಸಿ ಹೈ ಡೆಫಿನಿಷನ್ ಆಡಿಯೊ ಕೋಡೆಕ್) ನಂತಹ ಸುಧಾರಿತ ಆಡಿಯೊ ಕೋಡೆಕ್‌ಗಳನ್ನು ಸಹ ಬೆಂಬಲಿಸುತ್ತವೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಸ್ಪಾಟಿಯಲ್ ಆಡಿಯೋ ಬೆಂಬಲ, ಗೂಗಲ್ ಫಾಸ್ಟ್ ಪೇರ್ ಮತ್ತು ಡ್ಯುಯಲ್-ಡಿವೈಸ್ ಸಂಪರ್ಕ ಸೇರಿವೆ. ಬ್ಲೂಟೂತ್ v5.3 ನೊಂದಿಗೆ ಸಜ್ಜುಗೊಂಡಿರುವ ಇಯರ್‌ಬಡ್‌ಗಳು ಗೇಮಿಂಗ್‌ಗಾಗಿ ಕಡಿಮೆ ಲೇಟೆನ್ಸಿ ಮೋಡ್ ಅನ್ನು ಸಹ ಹೊಂದಿವೆ.ಬೆವರು ಮತ್ತು ನೀರಿನಿಂದ ಹಾಳಾಗದಂತೆ IPX5 ರೇಟಿಂಗ್ ನೀಡಲಾಗಿದೆ.ಇವುಗಳ ಬ್ಯಾಟರಿ ಬಾಳಿಕೆ ಕೂಡ ಚೆನ್ನಾಗಿದ್ದು, 10 ನಿಮಿಷ ಚಾರ್ಜ್ ಮಾಡಿದರೆ 6 ಗಂಟೆಗಳವರೆಗೆ ಸಂಗೀತವನ್ನು ಕೇಳಬಹುದು ಎಂದು ಕಂಪೆನಿ ತಿಳಿಸಿದೆ.
ಹೊಸ Noise Master Buds ಸಾಧನವು ಪ್ರೀಮಿಯಂ ಲುಕ್ ಜೊತೆಗೆ ಓನಿಕ್ಸ್, ಟೈಟಾನಿಯಂ ಮತ್ತು ಸಿಲ್ವರ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಈ ಇಯರ್‌ಬಡ್‌ಗಳನ್ನು ಆರಾಮವಾಗಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆದ್ದು, ಇವುಗಳನ್ನು ಮೃದುವಾದ ವಸ್ತುಗಳಿಂದ ತಯಾರಿಸಲಾಗಿದೆ, ಇದರಿಂದ ಕಿವಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ Noise Master Buds ಸಾಧನದ ಬೆಲೆ 7,999 ರೂ. ಗಳಾಗಿದ್ದು, ಈ ಸಾಧನವನ್ನು Noise ಕಂಪನಿಯ ವೆಬ್‌ಸೈಟ್, ಅಮೆಜಾನ್ ಇಂಡಿಯಾ ಮತ್ತು ರಿಲಯನ್ಸ್ ಡಿಜಿಟಲ್, ಕ್ರೋಮಾ ಮತ್ತು ವಿಜಯ್ ಸೇಲ್ಸ್‌ನಂತಹ ಅಂಗಡಿಗಳಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.
ಕಳೆದ ಹಲವು ದಿನಗಳ ಹಿಂದೆಯೇ, ಸಂಗೀತ ಕೇಳುವ ಗುಣಮಟ್ಟ ತುಂಬಾ ಅತ್ಯುತ್ತಮವಾಗಿರುವ ಬೋಸ್ ಕಂಪನಿಯ ತಂತ್ರಜ್ಞಾನವನ್ನು ಬಳಸಿ ಸೌಂಡ್ ಟ್ಯೂನ್ ಮಾಡಲಾಗಿರುವ 'Noise Master Buds' ಇಯರ್‌ಬಡ್ ಸಾಧನವನ್ನು ಬಿಡುಗಡೆ ಮಾಡುವ ಬಗ್ಗೆ Noise ಕಂಪನಿ ತಿಳಿಸಿತ್ತು.ಇದೀಗ ನಿರೀಕ್ಷೆಯಂತೆಯೇ ಬೋಸ್ ಕಂಪನಿಯ ತಂತ್ರಜ್ಞಾನವನ್ನು ಬಳಸಿ ಸೌಂಡ್ ಟ್ಯೂನ್ ಮಾಡಲಾಗಿರುವ 'Noise Master Buds' ಇಯರ್‌ಬಡ್ ಸಾಧನವು ಮಾರುಕಟ್ಟೆಗೆ ಬಂದಿದೆ. ಈ ಮೂಲಕ ಹಲವು ದಿನಗಳಿಂದ 'Noise Master Buds' ಇಯರ್‌ಬಡ್ ಸಾಧನವನ್ನು ಖರೀದಿಸಲು ಕಾದುಕುಳಿತಿದ್ದ ಗ್ರಾಹಕರಿಗೆ ಇದೀಗ ಭರ್ಜರಿ ಸಿಹಿಸುದ್ದಿ ದೊರೆತಂತಾಗಿದೆ.


Click it and Unblock the Notifications








