ನಾಯಿಸ್ ಸಂಸ್ಥೆಯ ಈ ಸ್ಮಾರ್ಟ್‌ವಾಚ್‌ಗೆ ಈಗ 56% ರಿಯಾಯಿತಿ!
ಭಾರತೀಯ ಮಾರುಕಟ್ಟೆಯಲ್ಲಿ ನಾಯಿಸ್ ಸಂಸ್ಥೆಯು ಪ್ರಮುಖ ಟೆಕ್ ಕಂಪನಿಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಮುಖ್ಯವಾಗಿ ನಾಯಿಸ್ ಸಂಸ್ಥೆಯು ಸ್ಮಾರ್ಟ್ ಉತ್ಪನ್ನಗಳು ಹಾಗೂ ಸ್ಮಾರ್ಟ್‌ವಾಚ್ ಡಿವೈಸ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆದಿವೆ. ಆ ಪೈಕಿ ನಾಯಿಸ್ ಇತ್ತೀಚಿಗೆ ಬಿಡುಗಡೆ ಮಾಡಿರುವ 'ನಾಯಿಸ್‌ಫಿಟ್ ಹ್ಯಾಲೊ' (NoiseFit Halo) ಸ್ಮಾರ್ಟ್‌ವಾಚ್ ಈಗ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ.
ಹೌದು, ನಾಯಿಸ್ (Noise) ಕಂಪೆನಿ ಹೊಸ 'ನಾಯಿಸ್‌ಫಿಟ್ ಹ್ಯಾಲೊ' (NoiseFit Halo) ಸ್ಮಾರ್ಟ್‌ವಾಚ್' ಇ ಕಾಮರ್ಸ್ ಅಮೆಜಾನ್ ವೆಬ್‌ಸೈಟ್‌ನಲ್ಲಿ 56% ರಷ್ಟು ರಿಯಾಯಿತಿ ಪಡೆದಿದೆ. ಈ ಭರ್ಜರಿ ಆಫರ್‌ನಿಂದಾಗಿ 7,990 ರೂ. ಪ್ರೈಸ್ ಟ್ಯಾಗ್ ಹೊಂದಿರುವ ನಾಯಿಸ್‌ಫಿಟ್ ಹಾಲೋ ಸ್ಮಾರ್ಟ್‌ವಾಚ್ 3,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ನಾಯ್ಸ್‌ಫಿಟ್ ಹ್ಯಾಲೊ ಸ್ಮಾರ್ಟ್‌ವಾಚ್ 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 466 x 466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ವಾಚ್ ಪ್ರೀಮಿಯಂ ಮೆಟಾಲಿಕ್ ಬಿಲ್ಡ್ ಅನ್ನು ಹೊಂದಿದ್ದು, ಚರ್ಮ, ಟೆಕ್ಸ್ಚರ್ಡ್ ಸಿಲಿಕೋನ್ ಮತ್ತು ಸ್ಟ್ಯಾಂಡರ್ಡ್ ಸಿಲಿಕೋನ್ ಆಯ್ಕೆಯಲ್ಲಿ ಬರಲಿದೆ. ಇದು ಟ್ರೂ ಸಿಂಕ್‌ನಿಂದ ನಡೆಸಲ್ಪಡುವ ಬ್ಲೂಟೂತ್-ಕಾಲಿಂಗ್ ಅನ್ನು ಕೂಡ ಬೆಂಬಲಿಸಲಿದೆ.
ಇನ್ನು ನಾಯ್ಸ್‌ಫಿಟ್ ಹ್ಯಾಲೊ ಸ್ಮಾರ್ಟ್‌ವಾಚ್ 150 ಕ್ಕೂ ಹೆಚ್ಚು ಕ್ಲೌಡ್ ವಾಚ್ ಫೇಸ್‌ಗಳನ್ನು ಹೊಂದಿದೆ. ಇದು ಮಲ್ಟಿ ಸ್ಪೋರ್ಟ್ಸ್‌ಮೋಡ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್ SpO2 ಮಾನಿಟರಿಂಗ್, ಹಾರ್ಟ್‌ಬೀಟ್ ಟ್ರ್ಯಾಕಿಂಗ್ ಮತ್ತು ಸ್ಲಿಪ್ ಮಾನಿಟರಿಂಗ್ ಮತ್ತು ಸ್ಟೆಪ್ ಟ್ರ್ಯಾಕರ್ರ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.
ನಾಯ್ಸ್‌ಫಿಟ್ (NoiseFit) ಅಪ್ಲಿಕೇಶನ್ ಮೂಲಕ ಬಳಕೆದಾರರ ಅಧಿಕಾವಧಿಯ ಪ್ರಗತಿಯನ್ನು ಟ್ರ್ಯಾಕ್ ಮಾಡಲು, ಆರೋಗ್ಯ ಅಪ್‌ಡೇಟ್‌ಗಳನ್ನು ಪಡೆಯಲು, ಸ್ನೇಹಿತರೊಂದಿಗೆ ಸ್ಪರ್ಧಿಸಲು ಮತ್ತು ನಿಮ್ಮ ಡಿವೈಸ್ ಶೇರ್ ಮಾಡಲು NoiseFit ಹ್ಯಾಲೊ ವಾಚ್ ಅನ್ನು NoiseFit ಅಪ್ಲಿಕೇಶನ್‌ಗೆ ಲಿಂಕ್ ಮಾಡಬೇಕು. ಇದರೊಂದಿಗೆ ಈ ಡಿವೈಸ್ BT v5.3, ಸಿಂಗಲ್ ಚಿಪ್ ಕರೆ - ಸಿಂಗಲ್ ಚಿಪ್ BT v5.3 ನೊಂದಿಗೆ ಕನೆಕ್ಟ್ ಮಾಡಬಹುದು.
ನಾಯ್ಸ್‌ಫಿಟ್ ಹಾಲೋ ಸ್ಮಾರ್ಟ್‌ವಾಚ್ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತ. ಆದರೆ ಭಾರಿ ಬ್ಲೂಟೂತ್ ಕಾಲಿಂಗ್ ಬಳಕೆಯಲ್ಲಿ ಒಂದು ದಿನದವರೆಗೆ ಇರಲಿದೆ ಎನ್ನಲಾಗಿದೆ. ಇನ್ನು ಸ್ಮಾರ್ಟ್‌ವಾಚ್ ಸ್ಮಾರ್ಟ್ ಟಚ್ ಟೆಕ್, ಅಧಿಸೂಚನೆಗಳು, ವೆದರ್ ಅಪ್ಡೇಟ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಹಾಗೆಯೇ ನಾಯ್ಸ್ ಕಂಪೆನಿ ಇತ್ತೀಚಿಗಿನ ಡಿವೈಸ್‌ಗಳಲ್ಲಿ ಒಂದಾದ 'ನಾಯ್ಸ್‌ಫಿಟ್ ಕ್ರ್ಯ' ಸ್ಮಾರ್ಟ್‌ವಾಚ್ ಸಹ ಆಕರ್ಷಕ ಎನಿಸಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ನಿಮ್ಮ ಸ್ಮಾರ್ಟ್‌ಫೋನ್ ಕರೆಗಳನ್ನು ಕಂಟ್ರೋಲ್ ಮಾಡಬಹುದಾಗಿದೆ. ಇದರೊಂದಿಗೆ ಸ್ಟೆಪ್ ಟ್ರ್ಯಾಕಿಂಗ್, ಹಾರ್ಟ್‌ಬೀಟ್ ಸೆನ್ಸಾರ್ ಮತ್ತು SpO2 ಮಾನಿಟರಿಂಗ್ ಸೆನ್ಸಾರ್ ಅನ್ನು ಬೆಂಬಲಿಸಲಿದೆ.
ನಾಯ್ಸ್‌ಫಿಟ್ ಕ್ರ್ಯೂ ಸ್ಮಾರ್ಟ್‌ವಾಚ್ 1.38 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ರೇಟಿಂಗ್ ಅನ್ನು ಒಳಗೊಂಡಿದೆ. ಜೊತೆಗೆ ಧೂಳು ಮತ್ತು ನೀರಿನಿಂದ ರಕ್ಷಣೆ ಮಾಡುವುದಕ್ಕಾಗಿ ಸ್ಮಾರ್ಟ್‌ವಾಚ್ IP68 ರೇಟಿಂಗ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಅನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್ ಮಾಡುವುದಕ್ಕಾಗಿ ನಾಯ್ಸ್‌ಫಿಟ್ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.
ನಾಯ್ಸ್‌ಫಿಟ್ ಕ್ರ್ಯೂ ಸ್ಮಾರ್ಟ್‌ವಾಚ್ ಬ್ಲೂಟೂತ್ 5.3 ಅನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಫಿಟ್‌ನೆಸ್ ಮತ್ತು ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ಹೊಂದಿದ್ದು, ನಾಯ್ಸ್‌ಫಿಟ್ ಕ್ರ್ಯೂ ಸ್ಟೆಪ್ ಟ್ರ್ಯಾಕಿಂಗ್, ಹೃದಯ ಬಡಿತ ಮತ್ತು SpO2 ಮಾನಿಟರಿಂಗ್ ಮತ್ತು ಸ್ಲೀಪ್ ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಹೊಂದಿದೆ. ಇದಲ್ಲದೆ ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಾಗಿದೆ. ಅಲ್ಲದೆ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸಲಿದೆ.


Click it and Unblock the Notifications








