ಬದಲಾದ ಅಮೆಜಾನ್ ಇಕೋ: ಹೊಸ ಬಣ್ಣದಲ್ಲಿ ಮಾರುಕಟ್ಟೆಗೆ
ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಅಮೆಜಾನ್ ಸ್ಮಾರ್ಟ್ ಸ್ಪೀಕರ್ ಇಕೋ ಹೊಸ ಅವತಾರದಲ್ಲ ಕಾಣಿಸಿಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಹಿನ್ನಲೆಯಲ್ಲಿ ಅಮೆಜಾನ್ ಹೊಸದಾಗಿ ರೆಡ್ ಬಣ್ಣದಲ್ಲಿ ಇಕೋ ಸ್ಮಾರ್ಟ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದ್ದು, ನೋಡಲು ಉತ್ತಮವಾಗಿ ಕಾಣುತ್ತಿದೆ ಎನ್ನಲಾಗಿದೆ.

ಇಕೋ ಮಧ್ಯಮ ಬೆಲೆಯ ಸ್ಮಾರ್ಟ್ ಸ್ವೀಕರ್ ಆಗಿದ್ದು, ಇದರೊಂದಿಗೆ ಇಕೊ ಡಾಟ್ ಆರಂಭಿಕ ಬೆಲೆಯಲ್ಲಿ, ಇಕೋ ಪ್ಲಸ್ ಟಾಪ್ ಎಂಡ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಹೊಸ ಬಣ್ಣದ ಇಕೋ ಸಾಕಷ್ಟು ಜನರನ್ನು ಸೆಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ
ಈ ಹಿಂದಿನ ಇಕೋ ವಿಶೇಷತೆಗಳನ್ನೇ ರೆಡ್ ಇಕೋದಲ್ಲಿಯೂ ಕಾಣಬಹುದಾಗಿದ್ದು, ಯಾವುದೇ ವ್ಯತ್ಯಾಸವಿಲ್ಲ ಎನ್ನಲಾಗಿದೆ. ಇದು ಬಣ್ಣವನ್ನು ಮಾತ್ರವೇ ಬದಲಾಯಿಸಿಕೊಂಡಿದೆ ಎನ್ನಲಾಗಿದೆ. ಈ ಹಿಂದೆ ಆಪಲ್ ಸಹ ರೆಡ್ ಐಫೋನ್ ಮತ್ತು ಐಪ್ಯಾಡ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು .
ಭಾರತೀಯ ಮಾರುಕಟ್ಟೆಯಲ್ಲಿ ಸಹ ಇಕೋ ಲಭ್ಯವಿದ್ದು ರೂ. 6,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ಅಲ್ಲದೇ ಭಾರತೀಯ ಮಾರುಕಟ್ಟೆಗೆ ಸರಿ ಹೊಂದುವಂತೆ ವಿಶೇಷವಾಗಿ ವಿನ್ಯಾಸವನ್ನು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಈ ಕಾರಣಕ್ಕೆ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ.
ಈಗಾಗಲೇ ಮಾರುಕಟ್ಟೆಗೆ ಆಪಲ್ ಹೋಮ್ ಪೋಡ್, ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಗಳು ಕಾಲಿಡುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಅವುಗಳಿಂತ ಮಂಚೆ ಮಾರುಕಟ್ಟೆಯಲ್ಲಿ ಹವಾ ಸೃಷ್ಠಿಸಲು ಅಮೆಜಾನ್ ಮುಂದಾಗಿದೆ ಎನ್ನಲಾಗಿದೆ.


Click it and Unblock the Notifications








