Home
Gadgets

ಭಾರತಕ್ಕೆ Oakley Meta AI ಸ್ಮಾರ್ಟ್‌ಗ್ಲಾಸ್ ಎಂಟ್ರಿ: ಬೆಲೆ ಎಷ್ಟು ಗೊತ್ತಾ?

ಟೆಕ್ ದೈತ್ಯ ಮೆಟಾ ಮತ್ತು ಪ್ರಸಿದ್ಧ ಕ್ರೀಡಾ ಸನ್‌ಗ್ಲಾಸ್ ಬ್ರ್ಯಾಂಡ್ ಓಕ್ಲಿ (Oakley) ಜಂಟಿಯಾಗಿ ಅಭಿವೃದ್ಧಿಪಡಿಸಿರುವ Oakley Meta HSTN AI ಸ್ಮಾರ್ಟ್‌ಗ್ಲಾಸ್‌ಗಳು ಭಾರತದಲ್ಲಿ ಮುಂದಿನ ತಿಂಗಳಿಂದ ಖರೀದಿಗೆ ಲಭ್ಯವಾಗಲಿವೆ. ಕಳೆದ ಜೂನ್ ತಿಂಗಳಲ್ಲಿ ಜಾಗತಿಕವಾಗಿ ಅನಾವರಣಗೊಂಡಿದ್ದ ಈ ಸ್ಮಾರ್ಟ್ ಗ್ಲಾಸ್‌ಗಳು ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿ ತಂತ್ರಜ್ಞಾನದಿಂದ ಗಮನಸೆಳೆದಿದ್ದವು. ಇದೀಗ ಈ ಸ್ಮಾರ್ಟ್‌ಗ್ಲಾಸ್‌ಗಳನ್ನು ಭಾರದ ಮಾರುಕಟ್ಟೆಗೆ ತರಲಾಗುತ್ತಿದೆ. ಹಾಗಾದರೆ, ದೇಶದಲ್ಲಿ Oakley Meta HSTN AI ಸ್ಮಾರ್ಟ್‌ಗ್ಲಾಸ್‌ಗಳ ಬೆಲೆ ಎಷ್ಟು?, ಫೀಚರ್ಸ್ ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

Oakley Meta AI: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oakley Meta HSTN ಗ್ಲಾಸ್‌ಗಳು ಡಿಸೆಂಬರ್ 1ರಿಂದ ಅಧಿಕೃತ ಮಾರಾಟಕ್ಕೆ ಬರಲಿದೆ. ಮತ್ತು ದೇಶದಲ್ಲಿ ಇವುಗಳ ಬೆಲೆ ₹41,800 ರಿಂದ ಆರಂಭವಾಗಲಿದೆ. ದೇಶದ ಗ್ರಾಹಕರಿಗೆ Prizm, Prizm Polarised, Clear ಮತ್ತು Transition ಸೇರಿದಂತೆ ವಿವಿಧ ಲೆನ್ಸ್ ಆಯ್ಕೆಗಳು ಮತ್ತು ಅನೇಕ ಕಾಂಬಿನೇಷನ್‌ಗಳಲ್ಲಿ ಲಭ್ಯವಾಗಲಿವೆ. ಇನ್ನು ಈ ಸ್ಮಾರ್ಟ್‌ ಗ್ಲಾಸ್‌ಗಳನ್ನು ಇಂದಿನಿಂದ Sunglass Hut ಮತ್ತು ಪ್ರಮುಖ ಐವೇರ್ ಮಳಿಗೆಗಳಲ್ಲಿ ಪ್ರೀ-ಬುಕ್ ಮಾಡಲು ಅವಕಾಶವಿದೆ.

Oakley Meta AI: ಮುಖ್ಯ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನ
Oakley Meta HSTN ಗ್ಲಾಸ್‌ಗಳನ್ನು ವಿಶೇಷವಾಗಿ ಕ್ರೀಡಾಪಟುಗಳು ಮತ್ತು ಸ್ಪೋರ್ಟ್ಸ್ ಪ್ರಿಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದೆ. ಈ ಗ್ಲಾಸ್‌ಗಳು IPX4 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುತ್ತವೆ. ಇದರಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು, 3K ವರೆಗಿನ ಹೈ-ರೆಸಲ್ಯೂಷನ್ ವೀಡಿಯೋ ಚಿತ್ರೀಕರಿಸಬಹುದು. ಇದು ಹಿಂದಿನ Ray-Ban Meta ಮಾದರಿಯ 1080p ವೀಡಿಯೋ ಸಾಮರ್ಥ್ಯಕ್ಕಿಂತ ದೊಡ್ಡ ಅಪ್‌ಗ್ರೇಡ್ ಆಗಿದೆ.

ಭಾರತಕ್ಕೆ Oakley Meta AI ಸ್ಮಾರ್ಟ್‌ಗ್ಲಾಸ್ ಎಂಟ್ರಿ: ಬೆಲೆ ಎಷ್ಟು ಗೊತ್ತಾ?

ಈ Oakley Meta HSTN ಗ್ಲಾನ್‌ನಲ್ಲಿ ಕ್ಯಾಮೆರಾ ಮತ್ತು LED ಲೈಟ್ ಅನ್ನು ಫ್ರೇಮ್‌ನ ಎರಡೂ ಬದಿಗಳಲ್ಲಿ ಅಳವಡಿಸಲಾಗಿದ್ದು, ಇದರಲ್ಲಿನ ಒಂದು ವಿಶೇಷ ಕ್ಯಾಪ್ಚರ್ ಬಟನ್ ಮೂಲಕ PoV ಚಿತ್ರೀಕರಣ ಸಾಧ್ಯವಾಗಲಿದೆ. ಬಳಕೆದಾರರು Instagram ಮೊದಲಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತ್ಯಕ್ಷ FPV ಲೈವ್ ಸ್ಟ್ರೀಮಿಂಗ್ ಕೂಡ ಮಾಡಬಹುದು. ಧ್ವನಿ ದಾಖಲಿಸಲು ಐದು ಮೈಕ್ರೋಫೋನ್‌ಗಳ (ಪೆಂಟಾ-ಮೈಕ್ರೋಫೋನ್) ವ್ಯವಸ್ಥೆಯನ್ನು ನೀಡಲಾಗಿದೆ.

Ray-Ban Meta ಗ್ಲಾಸ್‌ಗಳಂತೆ, Oakley Meta HSTN ಗ್ಲಾಸ್‌ಗಳಲ್ಲಿಯೂ Meta AI ಸಹಾಯಕ ಒಳಗೊಂಡಿದೆ. "Hey Meta" ಎಂದು ಹೇಳುವುದರ ಮೂಲಕ ಬಳಕೆದಾರರು ಧ್ವನಿ ಆಧಾರಿತ ಸೂಚನೆಗಳನ್ನು ನೀಡಬಹುದು.ಇದರಿಂದ ಕರೆ ಸ್ವೀಕರಿಸುವುದು, ಮೆಸೇಜ್‌ ಕಳುಹಿಸುವುದು, ಹವಾಮಾನ ಮಾಹಿತಿ ಪಡೆಯುವುದು, ಪ್ರಯಾಣ ಅಥವಾ ಊಟ ಸಂಬಂಧಿತ ಸಲಹೆ ಕೇಳುವುದು, ಸಂಗೀತ ನಿಯಂತ್ರಿಸುವುದು ಮುಂತಾದ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು.

ಇನ್ನು ಬ್ಯಾಟರಿ ಮತ್ತು ದೃಢತೆಯಲ್ಲಿ, Oakley Meta HSTN ಗ್ಲಾಸ್‌ಗಳು ಸಾಮಾನ್ಯ ಬಳಕೆಯಲ್ಲಿ 8 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುತ್ತವೆ. ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇದು 19 ಗಂಟೆಗಳ ತನಕ ಇರುತ್ತದೆ.ಗ್ಲಾಸ್‌ಗಳೊಂದಿಗೆ ನೀಡಲಾಗುವ ಚಾರ್ಜಿಂಗ್ ಕೇಸ್ 48 ಗಂಟೆಗಳ ಹೆಚ್ಚಿನ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ. Apple Music, Spotify ಮತ್ತು ಇತರ ಅಪ್ಲಿಕೇಶನ್‌ಗಳೊಂದಿಗೆ ಈ ಗ್ಲಾಸ್‌ಗಳು ಕಾರ್ಯನಿರ್ವಹಿಸುತ್ತವೆ.

AI, ಕ್ಯಾಮೆರಾ ಸಾಮರ್ಥ್ಯ, ಕ್ರೀಡಾ ವಿನ್ಯಾಸ ಮತ್ತು Meta ಹಾಗೂ Oakley ಬ್ರ್ಯಾಂಡ್ ಗಳ ಸಂಯೋಜನೆಯು ಈ ಹೊಸ Oakley Meta HSTN AI ಸ್ಮಾರ್ಟ್‌ಗ್ಲಾಸ್‌ಗಳನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿವೆ. ಆದರೆ, ಬೆಲೆ ವಿಷಯದಲ್ಲಿ ನಾವು ಸ್ವಲ್ಪ ಹೆಚ್ಚು ಧಾರಾಳವಾಗಿ ಇರಬೇಕು ಅಷ್ಟೇ.!

Best Mobiles in India

English summary
Oakley Meta HSTN glasses will go on official sale in India from December 1. And their price in the country will start at ₹41,800.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+