Home
Gadgets

ಕೇವಲ ₹1,599 ರೂ.ಗೆ ಹೊಸ OnePlus Nord Buds 3R ಹೆಡ್‌ಸೆಟ್ ಲಾಂಚ್!

ಭಾರತೀಯ ಮಾರುಕಟ್ಟೆ ಈಗಾಗಲೇ ಬಜೆಟ್ ಬೆಲೆಯ ಹೆಡ್‌ಸೆಟ್‌ಗಳಿಂದ ತುಂಬಿ ಹರಿಯುತ್ತಿದ್ದರೂ, OnePlus ಕಂಪೆನಿಯು ಹೊಸ ಹೆಡ್‌ಸೆಟ್ ಮೂಲಕ ಮತ್ತೊಮ್ಮೆ ಸಂಚಲನ ಮೂಡಿಸಲು ಬಂದಿದೆ ಸೆಳೆದಿದೆ. OnePlus ತನ್ನ ಜನಪ್ರಿಯ Nord ಸರಣಿಯಡಿ ಮತ್ತೊಂದು ಬಜೆಟ್ ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಹೆಡ್‌ಸೆಟ್‌ ಅನ್ನು ದೇಶದಲ್ಲಿಂದು ಪರಿಚಯಿಸಿದೆ. ವಿಶೇಷವಾಗಿ ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಈ OnePlus Nord Buds 3R ಕೈಗೆಟುಕುವ ಬೆಲೆಯಲ್ಲೇ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲು ಸಜ್ಜಾಗಿದೆ. ಹಾಗಾದರೆ, ಈ ಹೊಸ ಹೆಡ್‌ಸೆಟ್ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ನೋಡೋಣ ಬನ್ನಿ.

OnePlus Nord Buds 3R: ಪ್ರಮುಖ ವೈಶಿಷ್ಟ್ಯಗಳು
ಹೊಸ OnePlus Nord Buds 3R TWS ಹೆಡ್‌ಸೆಟ್‌ವು ಚಾರ್ಜಿಂಗ್ ಕೇಸ್ ಸೇರಿ ಒಟ್ಟು 54 ಗಂಟೆಗಳ ಬ್ಯಾಟರಿ ಬಾಳಿಕೆ ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ. ಜೊತೆಗೆ, ಇದಕ್ಕೆ IP55 ರೇಟಿಂಗ್ ದೊರೆತಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆಯೊಂದಿಗೆ ವ್ಯಾಯಾಮದ ಸಮಯದಲ್ಲಿಯೂ ಅಥವಾ ಮಳೆಯಲ್ಲಿಯೂ ಬಳಸಲು ಅನುಕೂಲಕರವಾಗಿದೆ.

ಇದರ 12.4mm ಟೈಟಾನಿಯಂ-ಲೇಪಿತ ಡೈನಾಮಿಕ್ ಡ್ರೈವರ್‌ಗಳು ಉತ್ತಮ ಗುಣಮಟ್ಟದ ಆಡಿಯೋ ನೀಡುತ್ತವೆ. Sound Master EQ ಫೀಚರ್ ಮೂಲಕ ಬಳಕೆದಾರರು ತಮ್ಮ ಅಭಿರುಚಿಗೆ ತಕ್ಕಂತೆ ಆಡಿಯೋ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು. ಜೊತೆಗೆ, OnePlus 3D Audio ಬೆಂಬಲವು 360-ಡಿಗ್ರಿ ಸೌಂಡ್‌ಸ್ಟೇಜ್ ಅನುಭವವನ್ನು ಒದಗಿಸುತ್ತದೆ.

ಕೇವಲ ₹1,599 ರೂ.ಗೆ ಹೊಸ OnePlus Nord Buds 3R ಹೆಡ್‌ಸೆಟ್ ಲಾಂಚ್!

ಕರೆಗಳ ಗುಣಮಟ್ಟದಲ್ಲಿಯೂ ಈ ಹೆಡ್‌ಸೆಟ್ ಮುಂಚೂಣಿಯಲ್ಲಿದೆ. AI ಆಧಾರಿತ ಡ್ಯುಯಲ್ ಮೈಕ್ ಸೆಟಪ್ ಹೊರಗಿನ ಶಬ್ದವನ್ನು ಕಡಿಮೆ ಮಾಡಿ ಸ್ಪಷ್ಟ ಕರೆಗಳನ್ನು ಮಾಡಲು ನೆರವಾಗುತ್ತದೆ. ಸಂಪರ್ಕಕ್ಕೆ Bluetooth 5.4 ಮತ್ತು Google Fast Pair ತಂತ್ರಜ್ಞಾನವನ್ನು ಬಳಸಲಾಗಿದೆ. ಜೊತೆಗೆ, ಇದು ಒಂದೇ ಸಮಯದಲ್ಲಿ ಎರಡು ಸಾಧನಗಳಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನೂ ಹೊಂದಿದೆ.

ಗೇಮಿಂಗ್ ಪ್ರಿಯರಿಗೆ, 47ms ಲೋ-ಲೇಟೆನ್ಸಿ ಮೋಡ್ ಉತ್ತಮ ಅನುಭವ ನೀಡುತ್ತದೆ. ಟ್ಯಾಪ್ ಗೆಶ್ಚರ್‌ಗಳ ಮೂಲಕ ಧ್ವನಿ ಸಹಾಯಕರನ್ನು ನಿಯಂತ್ರಿಸುವುದರೊಂದಿಗೆ, AI ಭಾಷಾ ಅನುವಾದ ಹಾಗೂ Tap 2 Take ಫೀಚರ್ ಬಳಸಿ ಫೋಟೋ ತೆಗೆಯುವ ಸೌಲಭ್ಯವೂ ಲಭ್ಯ.

OnePlus Nord Buds 3R: ಬೆಲೆ ಮತ್ತು ಲಭ್ಯತೆ
OnePlus Nord Buds 3r ಹೆಡ್‌ಸೆಟ್ ₹1,799 ರೂ.ಗೆ ಬಿಡುಗಡೆಯಾಗಿದೆ. ಆದರೆ, ಸೀಮಿತ ಅವಧಿಗೆ ಇದನ್ನು ₹1,599 ರ ವಿಶೇಷ ಬೆಲೆಗೆ ಖರೀದಿಸಬಹುದು. Aura Blue ಮತ್ತು Ash Black ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್‌ಫೋನ್ ಇದೇ ಸೆಪ್ಟೆಂಬರ್ 8 ರಿಂದ ಭಾರತದ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಮಾರಾಟಕ್ಕೆ ಬರಲಿದೆ. ₹2,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಹೊಸ OnePlus Nord Buds 3R ಉತ್ತಮ ಆಡಿಯೋ ಗುಣಮಟ್ಟ ಮತ್ತು ಉಪಯುಕ್ತ ವೈಶಿಷ್ಟ್ಯಗಳ ಸಮತೋಲನದ ಪ್ಯಾಕೇಜ್ ಆಗಿ ಗ್ರಾಹಕರಿಗೆ ದೊರೆಯುತ್ತಿದೆ ಎನ್ನಬಹುದು.

OnePlus Nord Buds 3R: ಪ್ರಮುಖ ವೈಶಿಷ್ಟ್ಯಗಳು ಬುಲೆಟ್ ಪಾಯಿಂಟ್‌ಗಳಲ್ಲಿ

  • ಬ್ಯಾಟರಿ: ಚಾರ್ಜಿಂಗ್ ಕೇಸ್‌ ಸಹಿತ ಒಟ್ಟು 54 ಗಂಟೆಗಳ ಬ್ಯಾಟರಿ ಬ್ಯಾಕಪ್
  • ಪ್ರೊಟೆಕ್ಷನ್: IP55 ರೇಟಿಂಗ್ - ಧೂಳು ಮತ್ತು ನೀರಿನಿಂದ ರಕ್ಷಣೆ, ವ್ಯಾಯಾಮ/ಮಳೆಯಲ್ಲಿಯೂ ಬಳಸಲು ಸೂಕ್ತ
  • ಆಡಿಯೋ ಡ್ರೈವರ್: 12.4mm ಟೈಟಾನಿಯಂ-ಲೇಪಿತ ಡೈನಾಮಿಕ್ ಡ್ರೈವರ್‌ಗಳು - ಉತ್ತಮ ಗುಣಮಟ್ಟದ ಧ್ವನಿ
  • ಆಡಿಯೋ ಕಸ್ಟಮೈಜೆಶನ್: Sound Master EQ ಮೂಲಕ ಬಳಕೆದಾರರ ಇಷ್ಟಕ್ಕೆ ತಕ್ಕಂತೆ ಸೆಟ್ಟಿಂಗ್ ಬದಲಾವಣೆ
  • 3D ಆಡಿಯೋ: OnePlus 3D Audio ಬೆಂಬಲ - 360° ಸೌಂಡ್‌ಸ್ಟೇಜ್ ಅನುಭವ
  • ಕರೆಗಳ ಗುಣಮಟ್ಟ: AI ಆಧಾರಿತ ಡ್ಯುಯಲ್ ಮೈಕ್ - ಹೊರಗಿನ ಶಬ್ದ ಕಡಿತ, ಸ್ಪಷ್ಟ ಕರೆಗಳು
  • ಕನೆಕ್ಟಿವಿಟಿ: Bluetooth 5.4 ಮತ್ತು Google Fast Pair ಬೆಂಬಲ
  • ಡ್ಯುಯಲ್ ಕನೆಕ್ಷನ್: ಒಂದೇ ಸಮಯದಲ್ಲಿ ಎರಡು ಸಾಧನಗಳಿಗೆ ಸಂಪರ್ಕ
  • ಗೇಮಿಂಗ್ ಮೋಡ್: 47ms ಲೋ-ಲೇಟೆನ್ಸಿ ಮೋಡ್ - ಗೇಮಿಂಗ್‌ಗೆ ಸೂಕ್ತ
  • ಟ್ಯಾಪ್ ಕಂಟ್ರೋಲ್‌ಗಳು: ಧ್ವನಿ ಸಹಾಯಕರ ನಿಯಂತ್ರಣ, Tap 2 Take ಮೂಲಕ ಫೋಟೋ ತೆಗೆದುಕೊಳ್ಳುವ ಸೌಲಭ್ಯ
Best Mobiles in India

English summary
OnePlus has launched the Nord Buds 3R in India with 12.4mm drivers, IP55 rating, and an affordable price. check all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+