Home
Gadgets

OnePlus Nord Buds 4 Pro TWS ಲಾಂಚ್: ₹3,999ಕ್ಕೆ ಪವರ್‌ಫುಲ್ ಇಯರ್‌ಬಡ್ಸ್!

OnePlus ಇಂದು ಭಾರತದ ಮಾರುಕಟ್ಟೆಗೆ ತನ್ನ ಹೊಸ Nord Buds 4 Pro (TWS) ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಸಾಧನವನ್ನು ಭರ್ಜರಿಯಾಗಿ ಬಿಡುಗಡೆಗೊಳಿಸಿದೆ. 55dB ವರೆಗಿನ ಸಕ್ರಿಯ ಶಬ್ದ ರದ್ದತಿ, ವರ್ಧಿತ ಬಾಸ್‌ನೊಂದಿಗೆ 12mm ಡ್ರೈವರ್‌ಗಳು ಮತ್ತು LHDC 5.0 ಆಡಿಯೊದೊಂದಿಗೆ ಬ್ಲೂಟೂತ್ 6.0 ಅನ್ನು ಬೆಂಬಲಿಸುವ ಈ ಹೊಸ ಇಯರ್‌ಬಡ್ಸ್ ಸಾಧನವು ಮಧ್ಯಮ ಬೆಲೆಯ ವಿಭಾಗದಲ್ಲಿ ಹೆಚ್ಚು ಫೀಚರ್‌ಗಳನ್ನು ಹುಡುಕುವ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗಿ ಬಂದಿದೆ. ಹಾಗಾದರೆ, ಹೊಸ Nord Buds 4 Pro (TWS) ಇಯರ್‌ಬಡ್ಸ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

OnePlus Nord Buds 4 Pro : ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ OnePlus Nord Buds 4 Pro ಬೆಲೆಯು ₹3,999 ರೂ. ಗಳಾಗಿವೆ. ಆದರೆ, ಬಿಡುಗಡೆಯ ವಿಶೇಷ ಕೊಡುಗೆಯಾಗಿ ಈ ಸಾಧನವನ್ನು ₹3,799 ಕ್ಕೆ ಖರೀದಿಸಲು ಅವಕಾಶವಿದೆ. Radiant Grey ಮತ್ತು Raven Black ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್‌ಬಡ್ಸ್ ಸಾಧನವು ಇದೇ ಮಾರ್ಚ್ 23 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗುತ್ತವೆ. OnePlus India ವೆಬ್‌ಸೈಟ್, OnePlus Store ಆಪ್, Experience Stores ಜೊತೆಗೆ Amazon, Flipkart ಮತ್ತು Myntra ಮೂಲಕ ಈ ಸಾಧನವನ್ನು ಖರೀದಿಸಬಹುದು.

OnePlus Nord Buds 4 Pro TWS ಲಾಂಚ್: ₹3,999ಕ್ಕೆ ಪವರ್‌ಫುಲ್ ಇಯರ್‌ಬಡ್ಸ್!

OnePlus Nord Buds 4 Pro : ಪ್ರಮುಖ ವೈಶಿಷ್ಟ್ಯಗಳು
OnePlus Nord Buds 4 Pro ಇಯರ್‌ಬಡ್ಸ್‌ನಲ್ಲಿ 12mm ಟೈಟಾನಿಯಂ ಕೋಟಿಂಗ್ ಹೊಂದಿರುವ ಡೈನಾಮಿಕ್ ಡ್ರೈವರ್‌ಗಳನ್ನು ನೀಡಲಾಗಿದೆ. ಇದು ಗಾಢವಾದ ಬಾಸ್ ಮತ್ತು ಕ್ಲಿಯರ್ ವೋಕಲ್ಸ್ ಅನುಭವ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. 20Hz ರಿಂದ 40kHz ವರೆಗೆ ಫ್ರೀಕ್ವೆನ್ಸಿ ರೆಸ್ಪಾನ್ಸ್ ಮತ್ತು 122dB ಸೆನ್ಸಿಟಿವಿಟಿ ಹೊಂದಿರುವುದರಿಂದ ಸೌಂಡ್ ಗುಣಮಟ್ಟ ಇನ್ನಷ್ಟು ಉತ್ತಮವಾಗಿರುತ್ತದೆ. 55dB ವರೆಗೆ Active Noise Cancellation (ANC) ಬೆಂಬಲವಿದ್ದು, AI ಆಧಾರಿತ ರಿಯಲ್-ಟೈಮ್ ಅಡ್ಜಸ್ಟ್‌ಮೆಂಟ್ ಮೂಲಕ ಹೊರಗಿನ ಶಬ್ದವನ್ನು ಕಡಿಮೆ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕಾಲ್ ಗುಣಮಟ್ಟವನ್ನು ಹೆಚ್ಚಿಸಲು ಒಟ್ಟು ಆರು ಮೈಕ್ರೋಫೋನ್‌ಗಳನ್ನು ನೀಡಲಾಗಿದೆ. AI Call Noise Reduction ತಂತ್ರಜ್ಞಾನದಿಂದ ಮಾತನಾಡುವಾಗ ಸ್ಪಷ್ಟ ಧ್ವನಿ ಸಿಗುತ್ತದೆ. Bluetooth 6.0 ಜೊತೆಗೆ LHDC 5.0, AAC ಮತ್ತು SBC ಕೋಡೆಕ್‌ಗಳನ್ನು ಬೆಂಬಲಿಸುವ ಈ ಸಾಧನವು 10 ಮೀಟರ್ ವರೆಗೆ ಸಂಪರ್ಕ ಶ್ರೇಣಿಯನ್ನು ನೀಡುತ್ತದೆ. Google Fast Pair, Microsoft Swift Pair ಹಾಗೂ Dual-device connection ಕೂಡ ಲಭ್ಯವಿದೆ. ಜೊತೆಗೆ Spatial Audio ಹಾಗೂ ಗೇಮಿಂಗ್ ಮೋಡ್ ಕೂಡ ಒಳಗೊಂಡಿದೆ.

OnePlus Nord Buds 4 Pro TWS ಲಾಂಚ್: ₹3,999ಕ್ಕೆ ಪವರ್‌ಫುಲ್ ಇಯರ್‌ಬಡ್ಸ್!

ಬ್ಯಾಟರಿ ವಿಷಯದಲ್ಲಿ, ಪ್ರತಿ ಇಯರ್‌ಬಡ್‌ನಲ್ಲಿ 62mAh ಸಾಮರ್ಥ್ಯವಿದ್ದು, ಚಾರ್ಜಿಂಗ್ ಕೇಸ್‌ನಲ್ಲಿ 530mAh ಬ್ಯಾಟರಿ ಇದೆ. ANC ಆಫ್ ಹಾಗೂ 50% ವಾಲ್ಯೂಮ್‌ನಲ್ಲಿ AAC ಕೋಡೆಕ್ ಬಳಸಿ ಒಟ್ಟು 54 ಗಂಟೆಗಳವರೆಗೆ ಪ್ಲೇಬ್ಯಾಕ್ ಸಿಗುತ್ತದೆ ಎಂದು ಕಂಪನಿ ಹೇಳಿದೆ. ಇಯರ್‌ಬಡ್ಸ್‌ಗಳನ್ನು ಪೂರ್ಣ ಚಾರ್ಜ್ ಮಾಡಲು ಸುಮಾರು 60 ನಿಮಿಷಗಳು ಬೇಕಾಗುತ್ತದೆ, ಕೇಸ್ ಸೇರಿದಂತೆ ಒಟ್ಟು 90 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. USB Type-C ಪೋರ್ಟ್ ಮೂಲಕ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

ಬಳಕೆದಾರ ಅನುಭವವನ್ನು ಸುಧಾರಿಸಲು ಟಚ್ ಕಂಟ್ರೋಲ್‌ಗಳು, ವಾಲ್ಯೂಮ್ ಸ್ವೈಪ್ ಜೆಸ್‌ಚರ್‌ಗಳು, AI ಅಸಿಸ್ಟೆಂಟ್ ಸಪೋರ್ಟ್, HeyMelody ಆಪ್ ಮೂಲಕ AI ಟ್ರಾನ್ಸ್ಲೇಷನ್, Spotify Tap ಹಾಗೂ ಕ್ಯಾಮೆರಾ ಕಂಟ್ರೋಲ್‌ಗಳಂತಹ ಫೀಚರ್‌ಗಳನ್ನು ಸೇರಿಸಲಾಗಿದೆ. ಧೂಳು ಮತ್ತು ನೀರಿನಿಂದ ರಕ್ಷಣೆಗೆ IP55 ರೇಟಿಂಗ್ ಇದೆ. ಪ್ರತಿ ಇಯರ್‌ಬಡ್ ತೂಕವು ಸುಮಾರು 4.4 ಗ್ರಾಂ ಆಗಿದ್ದು, ಕೇಸ್ ಸೇರಿ ಒಟ್ಟು 43 ಗ್ರಾಂ ತೂಕವಿದೆ. ಇಯರ್‌ಬಡ್ಸ್ ಗಾತ್ರ 31 x 20 x 17.52 ಮಿಮೀ ಆಗಿದ್ದು, ಚಾರ್ಜಿಂಗ್ ಕೇಸ್ ಗಾತ್ರ 60.00 x 49.64 x 25.04 ಮಿಮೀ ಆಗಿದೆ.

ಒಟ್ಟಾರೆಯಾಗಿ, ಉತ್ತಮ ಸೌಂಡ್ ಅನುಭವ, ಶಕ್ತಿಶಾಲಿ ನಾಯ್ಸ್ ಕ್ಯಾನ್ಸಲೇಶನ್ ಮತ್ತು ದೊಡ್ಡ ಬ್ಯಾಟರಿ ಲೈಫ್‌ನೊಂದಿಗೆ ಬಂದಿರುವ ಈ ಹೊಸ OnePlus Nord Buds 4 Pro ಇಯರ್‌ಬಡ್ಸ್ ಸಾಧನವು ಮಧ್ಯಮ ಬೆಲೆಯ ವಿಭಾಗದಲ್ಲಿ ಹೆಚ್ಚು ಫೀಚರ್‌ಗಳನ್ನು ಹುಡುಕುವ ಬಳಕೆದಾರರಿಗೆ ಇದು ಆಕರ್ಷಕ ಆಯ್ಕೆಯಾಗಿ ಕಾಣುತ್ತಿದೆ.

Best Mobiles in India

English summary
The OnePlus Nord Buds 4 Pro TWS earbuds have been launched in India at a starting price of ₹3,999, featuring up to 55dB active noise cancellation, 12mm drivers for enhanced bass, and support for LHDC 5.0 audio with Bluetooth 6.0. The earbuds will be available from March 23 via online and offline platforms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+