OnePlus Pad 2, Watch 2R ಮತ್ತು Nord Buds 3 Pro ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್ಸ್ ಏನು? ನೀವೆ ನೋಡಿ
ಒನ್‌ಪ್ಲಸ್ ಪ್ರಿಯರ ಕಾಯುವಿಕೆ ಮುಗಿಯಿತು. ಇಟಲಿಯ ಮಿಲನ್‌ನಲ್ಲಿ ಇಂದು ನಡೆದ 'ಒನ್‌ಪ್ಲಸ್ ಸಮ್ಮರ್ ಲಾಂಚ್ ಈವೆಂಟ್'ನಲ್ಲಿ (OnePlus Nord Summer Launch Event) ಕಂಪನಿಯು ತನ್ನ ಇತ್ತೀಚಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. OnePlus Nord 4 ಸ್ಮಾರ್ಟ್‌ಫೋನ್ ಜೊತೆಗೆ, OnePlus Watch 2r, OnePlus Pad 2 ಮತ್ತು Nord Buds 3 Pro ಅನ್ನು ಅದ್ದೂರಿಯಾಗಿ ಲಾಂಚ್ ಮಾಡಿದೆ. ಈ ಪೈಕಿ OnePlus Pad 2 ಟ್ಯಾಬ್ಲೆಟ್ 2023ರಲ್ಲಿ ಬಿಡುಗಡೆಯಾದ OnePlus ಪ್ಯಾಡ್‌ನ ಉತ್ತರಾಧಿಕಾರಿಯಾಗಿದೆ. ಇವುಗಳ ವಿಶೇಷತೆಗಳೇನು? ಬೆಲೆ ಎಷ್ಟು? ಎನ್ನುವುದನ್ನು ತಿಳಿಯೋಣ ಬನ್ನಿ.
OnePlus Pad 2 ಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು12.1″ 3K 144Hz LCD ಡಿಸ್ಲ್ಪೇಯನ್ನು ಪಡೆದಿದೆ. ಇದು Android 14-ಆಧಾರಿತ OxygenOS 14 ಅನ್ನು ರನ್ ಮಾಡುತ್ತದೆ. ಇದು 13MP ಮುಖ್ಯ ಕ್ಯಾಮೆರಾ ಜೊತೆಗೆ LED ಫ್ಲಾಷ್ ಹೊಂದಿದೆ. 8MP ಫ್ರಂಟ್ ಕ್ಯಾಮೆರಾ ಈ ಟ್ಯಾಬ್ಲೆಟ್‌ನಲ್ಲಿ ಅಳವಡಿಸಲಾಗಿದೆ. ಇದು 9510mAh ಬ್ಯಾಟರಿಯನ್ನು ಹೊಂದಿದೆ.

OnePlus Pad 2ನ ಬೆಲೆ ಮತ್ತು ಲಭ್ಯತೆ
OnePlus Pad 2 ನಿಂಬಸ್ ಗ್ರೇ ಬಣ್ಣದಲ್ಲಿ ಬರುತ್ತದೆ. ಇದರ 8GB + 128GB ಸ್ಟೋರೇಜ್ ಮಾದರಿಯ ಬೆಲೆ 39,999 ರೂ. ಇದೆ. ಮತ್ತು 12GB + 256GB ಸ್ಟೋರೇಜ್ ರೂಪಾಂತರದ ಬೆಲೆ 42,999 ರೂ. ಇದೆ. ಇದು Amazon.in, Flipkart, OnePlus.in, OnePlus ಸ್ಟೋರ್ ಅಪ್ಲಿಕೇಶನ್, Myntra, OnePlus ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಆಗಸ್ಟ್ 1 ರಿಂದ ಮಾರಾಟ ಪ್ರಾರಂಭಿಸಲಿದೆ.
OnePlus Pad 2ನ ಫೀಚರ್ಸ್‌ಗಳೇನು?
ಈ ಟ್ಯಾಬ್ಲೆಟ್ 268.66×195.06×6.49mm ಅಳತೆ ಮತ್ತು 584 ಗ್ರಾಂ ತೂಕವಿದೆ. ಇದು 8GB / 12GB LPDDR5X RAM ಜೊತೆಗೆ 128GB / 256GB UFS 3.1 ಸ್ಟೋರೇಜ್ ಪಡೆದಿದೆ. 9510mAh ಬ್ಯಾಟರಿಯೊಂದಿಗೆ 67W SuperVOOC ವೇಗದ ಚಾರ್ಜಿಂಗ್ ಸಪೋರ್ಟ್ ಹೊಂದಿದೆ. USB ಟೈಪ್-ಸಿ ಆಡಿಯೋ, ಆರು ಸ್ಪೀಕರ್‌ಗಳು, ಹೈ-ರೆಸ್ ಪ್ರಮಾಣೀಕರಣ, Wi-Fi 7 802.11 be (2.4GHz + 5GHz), ಬ್ಲೂಟೂತ್ 5.4 ಸಂಪರ್ಕಗಳನ್ನು ಒಳಗೊಂಡಿದೆ.
OnePlus ವಾಚ್ 2R: ಒನ್‌ಪ್ಲಸ್ ವಾಚ್ 2R ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಒನ್‌ಪ್ಲಸ್ ವಾಚ್ 2 ಅನ್ನು ಹೋಲುತ್ತವೆ. ಇದು Snapdragon W5 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 1.43 ಇಂಚಿನ AMOLED 326PPI ಡಿಸ್ಲ್ಪೇಯನ್ನು ಹೊಂದಿದೆ. ಇದು 47×46.6×12.1mm ಅಳತೆ ಮತ್ತು 37 ಗ್ರಾಂ ತೂಕವಿದೆ. 500mAh ಬ್ಯಾಟರಿ ಜೊತೆಗೆ ಸ್ಮಾರ್ಟ್ ಮೋಡ್‌ನಲ್ಲಿ 100 ಗಂಟೆಗಳ ಬಳಕೆ, 48 ಗಂಟೆಗಳ ಭಾರೀ ಬಳಕೆಯೊಂದಿಗೆ ಮತ್ತು 12 ದಿನಗಳ ಪವರ್ ಸೇವರ್ ಮೋಡ್‌ನಲ್ಲಿ ಬರಲಿದೆ.
OnePlus ವಾಚ್ 2R ಬೆಲೆ: OnePlus ವಾಚ್ 2R ಫಾರೆಸ್ಟ್ ಗ್ರೀನ್ ಮತ್ತು ಗನ್‌ಮೆಟಲ್ ಗ್ರೇ ಬಣ್ಣಗಳಲ್ಲಿ ಬರುತ್ತದೆ. ಇದರ ಬೆಲೆ 17,999 ರೂ. ಇದೆ. ಇದು Amazon.in, Flipkart, OnePlus.in, OnePlus ಸ್ಟೋರ್ ಅಪ್ಲಿಕೇಶನ್, Myntra, OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಿಂದ ಲಭ್ಯವಿರುತ್ತದೆ. ಜುಲೈ 20 ರಿಂದ ಮಾರಾಟ ಪ್ರಾರಂಭಿಸಲಿದೆ.
OnePlus ನಾರ್ಡ್ ಬಡ್ಸ್ 3 ಪ್ರೊ: ನಾರ್ಡ್ ಬಡ್ಸ್ 3 ಪ್ರೊ ಬ್ಲಾಕ್ ಮತ್ತು ಸಾಫ್ಟ್ ಜೇಡ್ ಬಣ್ಣಗಳಲ್ಲಿ ಬರುತ್ತದೆ. ಇದರ ಬೆಲೆ 3299 ರೂ. ಜುಲೈ 20 ರಿಂದ ಮಾರಾಟ ಪ್ರಾರಂಭಿಸಲಿದೆ. ಇಯರ್‌ಬಡ್‌ನ ತೂಕ 4.4 ಗ್ರಾಂ. 58mAh ಬ್ಯಾಟರಿಯು 440mAh ಚಾರ್ಜಿಂಗ್ ಕೇಸ್‌ನೊಂದಿಗೆ 12 ಗಂಟೆಗಳವರೆಗೆ ಬಾಳಿಕೆ ಬರುತ್ತದೆ. ಇದು 4,000Hz, ಬ್ಲೂಟೂತ್ 5.4, ಡ್ಯುಯಲ್ ಕನೆಕ್ಷನ್, ಗೂಗಲ್ ಫಾಸ್ಟ್ ಪೇರ್ ಅನ್ನು ಹೊಂದಿದೆ.


Click it and Unblock the Notifications








