Home
Gadgets

OnePlus Pad Go 2 ಬಿಡುಗಡೆ: ಭಾರೀ ಪೀಚರ್ಸ್ ಮತ್ತು ಕಡಿಮೆ ಬೆಲೆ ಆಕರ್ಷಣೆ!

OnePlus ಕಂಪನಿಯು ಭಾರತದಲ್ಲಿ ತನ್ನ ಹೊಸ OnePlus Pad Go 2 ಟ್ಯಾಬ್ಲೆಟ್ ಅನ್ನು ಬುಧವಾದಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ OnePlus 15R ಸ್ಮಾರ್ಟ್‌ಫೋನ್ ಜೊತೆಗೆ ಪರಿಚಯಿಸಲಾದ ಈ ಟ್ಯಾಬ್ಲೆಟ್, ದಿನನಿತ್ಯದ ಬಳಕೆ, ಆನ್‌ಲೈನ್ ಕ್ಲಾಸ್, ಕೆಲಸ ಹಾಗೂ ಮನರಂಜನೆಗಾಗಿ ವಿನ್ಯಾಸಗೊಳಿಸಲಾಗಿರುವ ಸಾಧನವಾಗಿದ್ದು, ಶಕ್ತಿಶಾಲಿ MediaTek Dimensity 7300-Ultra ಪ್ರೊಸೆಸರ್, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಸ್ಮೂತ್ ಡಿಸ್ಪ್ಲೇ ಮತ್ತು 10,050mAh ಬ್ಯಾಟರಿ ದೊಡ್ಡ ಬ್ಯಾಟರಿ ಇದರ ಪ್ರಮುಖ ಹೈಲೈಟ್‌ಗಳಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

OnePlus Pad Go 2: ಬೆಲೆ ಮತ್ತು ಲಭ್ಯತೆ ವಿವರಗಳು
ಭಾರತದಲ್ಲಿ OnePlus Pad Go 2 ಬೆಲೆ ರೂ. 26,999ರಿಂದ ಆರಂಭವಾಗುತ್ತದೆ. ಈ ದರದಲ್ಲಿ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ Wi-Fi ಮಾತ್ರದ ಮಾದರಿ ಲಭ್ಯ. 256GB ಸ್ಟೋರೇಜ್ ಇರುವ Wi-Fi ವೇರಿಯಂಟ್‌ಗಾಗಿ ರೂ. 29,999 ನಿಗದಿಪಡಿಸಲಾಗಿದೆ. 5G ಸಂಪರ್ಕದೊಂದಿಗೆ ಬರುವ 8GB RAM + 256GB ಸ್ಟೋರೇಜ್ ಮಾದರಿಯ ಬೆಲೆ ರೂ. 32,999 ಆಗಿದೆ. ಇನ್ನು ದೇಶದಲ್ಲಿ ಇದೇ ಡಿಸೆಂಬರ್ 18ರಿಂದ Amazon, OnePlus India ಅಧಿಕೃತ ವೆಬ್‌ಸೈಟ್ ಹಾಗೂ ಪ್ರಮುಖ ಆಫ್‌ಲೈನ್ ಅಂಗಡಿಗಳಲ್ಲಿ ಈ OnePlus Pad Go 2 ಟ್ಯಾಬ್ಲೆಟ್ ಮಾರಾಟಕ್ಕೆ ಲಭ್ಯವಾಗಲಿದೆ. ಲಾಂಚ್ ಆಫರ್ ಆಗಿ, ರೂ. 2,000 ತಕ್ಷಣದ ಬ್ಯಾಂಕ್ ಡಿಸ್ಕೌಂಟ್ ಮತ್ತು ರೂ. 1,000 ಲಿಮಿಟೆಡ್-ಟೈಮ್ ರಿಯಾಯಿತಿ ನೀಡಲಾಗಿದ್ದು, ಪ್ರಾರಂಭಿಕ ಬೆಲೆ ರೂ. 23,999ಕ್ಕೆ ಇಳಿಯುತ್ತದೆ.

OnePlus Pad Go 2: ಪ್ರಮುಖ ವೈಶಿಷ್ಟ್ಯಗಳು ಹೀಗಿವೆ,
OnePlus Pad Go 2 ನಲ್ಲಿ 12.1 ಇಂಚಿನ ದೊಡ್ಡ LCD ಡಿಸ್ಪ್ಲೇ ನೀಡಲಾಗಿದ್ದು, 2.8K ರೆಸಲ್ಯೂಷನ್ ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಇದೆ. Dolby Vision ಬೆಂಬಲ, ಹೆಚ್ಚಿನ ಬ್ರೈಟ್‌ನೆಸ್ ಮತ್ತು ಜೀವಂತ ಬಣ್ಣಗಳೊಂದಿಗೆ ಸಿನಿಮಾ ವೀಕ್ಷಣೆ ಹಾಗೂ ಗೇಮಿಂಗ್ ಅನುಭವ ಮತ್ತಷ್ಟು ಸುಧಾರಿಸಲಿದೆ. ಮತ್ತು ಹೊಸ OnePlus Stylo ಸ್ಟೈಲಸ್‌ನ್ನು ಬೆಂಬಲಿಸುತ್ತದೆ. 4,096 ಪ್ರೆಶರ್ ಲೆವೆಲ್‌ಗಳೊಂದಿಗೆ ಬರುವ ಈ ಸ್ಟೈಲಸ್ ಬರವಣಿಗೆ, ಡ್ರಾಯಿಂಗ್ ಮತ್ತು ಕ್ರಿಯೇಟಿವ್ ಕೆಲಸಗಳಿಗೆ ಸಹಾಯಕವಾಗಿದೆ. 5G ಮಾದರಿಯ ತೂಕ ಸುಮಾರು 599 ಗ್ರಾಂ ಆಗಿದ್ದು, ಸ್ಲಿಮ್ ಮತ್ತು ಪ್ರೀಮಿಯಂ ವಿನ್ಯಾಸ ಹೊಂದಿದೆ.

OnePlus Pad Go 2 ಬಿಡುಗಡೆ: ಭಾರೀ ಪೀಚರ್ಸ್ ಮತ್ತು ಕಡಿಮೆ ಬೆಲೆ ಆಕರ್ಷಣೆ!

ಕಾರ್ಯಕ್ಷಮತೆಗಾಗಿ, ಈ ಟ್ಯಾಬ್ಲೆಟ್‌ MediaTek Dimensity 7300-Ultra ಚಿಪ್‌ಸೆಟ್ ಹೊಂದಿದೆ. ಇದನ್ನು 8GB LPDDR5x RAM ಮತ್ತು 256GB ವರೆಗೆ ವೇಗದ UFS 3.1 ಸ್ಟೋರೇಜ್‌ನೊಂದಿಗೆ ಸಂಯೋಜಿಸಲಾಗಿದೆ. Android 16 ಆಧಾರಿತ OxygenOS 16 ಮೇಲೆ ಕಾರ್ಯನಿರ್ವಹಿಸುವಈ ಟ್ಯಾಬ್ಲೆಟ್ AI Writer, AI Recorder ಮತ್ತು AI Reflection Eraser ಮುಂತಾದ ಹೊಸ ತಲೆಮಾರಿನ AI ಫೀಚರ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ Open Canvas ಮಲ್ಟಿಟಾಸ್ಕಿಂಗ್ ಸಪೋರ್ಟ್ ಇರುವುದರಿಂದ ಒಂದೇ ಸಮಯದಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ಸುಲಭವಾಗಿ ಬಳಸಬಹುದು.

ಕ್ಯಾಮೆರಾ ವಿಬಾಗದಲ್ಲಿ, OnePlus Pad Go 2 ಟ್ಯಾಬ್ಲೆಟ್‌ನಲ್ಲಿ ಹಿಂಭಾಗ ಮತ್ತು ಮುಂಭಾಗ ಎರಡೂ ಕಡೆ 8 ಮೆಗಾಪಿಕ್ಸೆಲ್ ಕ್ಯಾಮೆರಾಗಳಿವೆ. ಬ್ಯಾಟರಿ ವಿಭಾಗದಲ್ಲಿ, OnePlus Pad Go 2 ನಲ್ಲಿ 10,050mAh ಬ್ಯಾಟರಿ ನೀಡಲಾಗಿದ್ದು, 33W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 15 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅಥವಾ 60 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸಂಪರ್ಕಕ್ಕಾಗಿ Wi-Fi 6, Bluetooth 5.4, USB Type-C ಪೋರ್ಟ್ ಮತ್ತು ಫೇಸ್ ಅನ್ಲಾಕ್ ಸುರಕ್ಷತಾ ವೈಶಿಷ್ಟ್ಯವೂ ಸೇರಿದೆ.

ಒಟ್ಟಾರೆಯಾಗಿ ಹೇಳುವುದಾದರೆ, OnePlus Pad Go 2 ಭಾರತದಲ್ಲಿ ಮಧ್ಯಮ ಬೆಲೆಯ ಟ್ಯಾಬ್ಲೆಟ್ ವಿಭಾಗದಲ್ಲಿ ಬಲವಾದ ಆಯ್ಕೆಯಾಗಿ ಬಂದಿದೆ. ಇದರ ದೊಡ್ಡ 120Hz ಡಿಸ್ಪ್ಲೇ, 5G ಸಂಪರ್ಕ, ಶಕ್ತಿಶಾಲಿ ಬ್ಯಾಟರಿ ಮತ್ತು ಲೇಟೆಸ್ಟ್ Android ಅನುಭವವನ್ನು ಹುಡುಕುತ್ತಿರುವ ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗಬಹುದು. ದೀರ್ಘಕಾಲ ಬ್ಯಾಟರಿ ಬಳಕೆ, ಮಲ್ಟಿಟಾಸ್ಕಿಂಗ್, ಆನ್‌ಲೈನ್ ಕ್ಲಾಸ್ ಮತ್ತು ವರ್ಕ್-ಫ್ರಂ-ಹೋಮ್ ಬಳಕೆಗೆ ಹೊಸ ಸಾಧನವನ್ನು ಹುಡುಕುತ್ತಿರುವ ಗ್ರಾಹಕರಿಗೆ OnePlus Pad Go 2 ಗಮನಾರ್ಹ ಆಯ್ಕೆ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ.

Best Mobiles in India

English summary
The OnePlus Pad Go 2 has launched in India alongside the OnePlus 15R, featuring a MediaTek Dimensity 7300-Ultra processor, a smooth 120Hz adaptive display, and a large 10,050mAh battery, making it ideal for daily use, online classes, work, and entertainment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+