OnePlus Pad Go 2: ಬಜೆಟ್ ಟ್ಯಾಬ್ಲೆಟ್ ಸೆಗ್ಮೆಂಟ್‌ನಲ್ಲಿ ದೊಡ್ಡ ಅಪ್‌ಗ್ರೇಡ್!
OnePlus ತನ್ನ ಹೊಸ ಬಜೆಟ್ ಟ್ಯಾಬ್ಲೆಟ್ OnePlus Pad Go 2 ಅನ್ನು ಇದೇ ಡಿಸೆಂಬರ್ 17ರಂದು ಭಾರತಕ್ಕೆ ತರಲು ಸಜ್ಜಾಗಿದೆ. ದೇಶದಲ್ಲಿ ಬಹುನಿರೀಕ್ಷಿತ ಮಧ್ಯಮ ಪ್ರೀಮಿಯಂ OnePlus 15R ಫೋನ್ ಜೊತೆಗೆ ಈ ಹೊಟ ಟ್ಯಾಬ್ಲೆಟ್ ಕೂಡ ಬಿಡುಗಡೆಯಾಗುತ್ತಿದೆ. ಈ ಅಧಿಕೃತ ಲಾಂಚ್‌ಗೂ ಮುನ್ನವೇ, OnePlus ತನ್ನ ಟ್ಯಾಬ್ಲೆಟ್ ಮಾದರಿಯ ಪ್ರಮುಖ ವೈಶಿಷ್ಟ್ಯಗಳು, ಬಣ್ಣ ಆಯ್ಕೆಗಳು ಮತ್ತು ಮಾರಾಟ ದಿನಾಂಕವನ್ನು ಘೋಷಿಸಿದೆ. ಈ ಹೊಸ ಸಾಧನದ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಹೆಚ್ಚು ಪ್ರಕಾಶಮಾನವಾದ 12.1 ಇಂಚಿನ 120Hz ಡಿಸ್‌ಪ್ಲೇ
OnePlus Pad Go 2 ಡಿಸ್‌ಪ್ಲೇ ವಿಭಾಗದಲ್ಲಿ ಗಮನ ಸೆಳೆಯುವಂತಹ ದೊಡ್ಡ ಮಟ್ಟದ ಸುಧಾರಣೆಗಳನ್ನು ಪಡೆದುಕೊಂಡಿದೆ. ಟ್ಯಾಬ್ಲೆಟ್‌ನಲ್ಲಿ 12.1 ಇಂಚಿನ 120Hz LCD ಪ್ಯಾನೆಲ್ ನೀಡಲಾಗಿದ್ದು, ಸ್ಪಷ್ಟತೆ ಮತ್ತು ಮೃದುವಾದ ಸ್ಕ್ರೋಲಿಂಗ್ ಅನುಭವವನ್ನು ಒದಗಿಸುತ್ತದೆ. 7:5 ಅಸ್ಪೆಕ್ಟ್ ರೇಷಿಯೊ, 284PPI ಪಿಕ್ಸೆಲ್ ಸಾಂದ್ರತೆ, 98% DCI-P3 ಕಲರ್ ಗ್ಯಾಮುಟ್ ಹಾಗೂ 900 ನಿಟ್ಸ್ ಪೀಕ್ ಬ್ರೈಟ್‌ನೆಸ್‌ಗಳೊಂದಿಗೆ ಬಂದಿದೆ. Dolby Vision ಬೆಂಬಲ ಮತ್ತು TÜV Rheinland Intelligent Eye Care 4.0 ಪ್ರಮಾಣೀಕರಣವು ದೀರ್ಘಕಾಲ ಬಳಕೆಯಲ್ಲೂ ಕಣ್ಣುಗಳಿಗೆ ಸುರಕ್ಷತೆ ನೀಡುತ್ತದೆ.
4nm Dimensity 7300-Ultra ಚಿಪ್ - ವೇಗ ಮತ್ತು ಸ್ಥಿರತೆ
ಕಾರ್ಯಕ್ಷಮತೆಯ ವಿಭಾಗದಲ್ಲಿ OnePlus Pad Go 2 ಅನ್ನು 4nm ಪ್ರೊಸೆಸರ್‌ನಲ್ಲಿ ನಿರ್ಮಿಸಲಾದ MediaTek Dimensity 7300-Ultra ಚಿಪ್ ನಡೆಸುತ್ತದೆ. 8GB LPDDR5x RAM ಮತ್ತು 128GB/256GB UFS 3.1 ಸ್ಟೋರೇಜ್ ಆಯ್ಕೆಗಳು ಲಭ್ಯವಿರುವುದರಿಂದ, ಅಪ್ಲಿಕೇಶನ್‌ಗಳು, ಗೇಮಿಂಗ್ ಮತ್ತು ಮಲ್ಟಿಟ್ಯಾಸ್ಕಿಂಗ್ ಎಲ್ಲವೂ ಮೃದುವಾಗಿ ನಡೆಯಲಿವೆ. ಬಜೆಟ್ ಸೆಗ್ಮೆಂಟ್‌ನಲ್ಲಿ ಈ ಮಟ್ಟದ ಸಂಯೋಜನೆ ದೊಡ್ಡ ಅಪ್‌ಗ್ರೇಡ್ ಆಗಿದೆ.

ಒಂದು ಚಾರ್ಜ್‌ನಲ್ಲಿ ದೀರ್ಘ ಬ್ಯಾಟರಿ ಬ್ಯಾಕಪ್
ಟ್ಯಾಬ್ಲೆಟ್‌ನಲ್ಲಿ 10,050mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದ್ದು, OnePlus ಪ್ರಕಾರ ಇದು 15 ಗಂಟೆಗಳವರೆಗೆ ವೀಡಿಯೊ ವೀಕ್ಷಣೆ ಅಥವಾ 60 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುತ್ತದೆ. 33W SUPERVOOC ವೈರ್‌ಡ್ ಚಾರ್ಜಿಂಗ್ ಬೆಂಬಲದಿಂದ ಚಾರ್ಜಿಂಗ್ ವೇಗವೂ ಉತ್ತಮವಾಗಿರುತ್ತದೆ. ಜೊತೆಗೆ ವೈರ್‌ಡ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಲಭ್ಯವಾಗಿದ್ದು, ಅಗತ್ಯವಿದ್ದಲ್ಲಿ ಇತರ ಸಾಧನಗಳನ್ನು ಚಾರ್ಜ್ ಮಾಡಲು ಸಹ ಇದು ಸಹಾಯ ಮಾಡುತ್ತದೆ.
ಮೊದಲ ಬಾರಿಗೆ ಸ್ಟೈಲಸ್ ಬೆಂಬಲ
OnePlus Pad Go ಸರಣಿಯಲ್ಲಿ ಮೊದಲ ಬಾರಿಗೆ, Pad Go 2 ಜೊತೆ ಹೊಸ Pad Go 2 Stylo ಸ್ಟೈಲಸ್ ಬೆಂಬಲ ಬರುತ್ತಿದೆ. ವೇಗವಾಗಿ ಚಾರ್ಜ್ ಆಗುವ ಈ ಸ್ಟೈಲಸ್ ಕೇವಲ 10 ನಿಮಿಷದ ಚಾರ್ಜ್‌ನಲ್ಲಿ ಅರ್ಧ ದಿನದ ಬಳಕೆಯನ್ನು ನೀಡುತ್ತದೆ. ವಿದ್ಯಾರ್ಥಿಗಳು, ಕ್ರಿಯೇಟರ್‌ಗಳು ಮತ್ತು ನೋಟ್‌ಟೇಕಿಂಗ್ ಮಾಡುವ ಬಳಕೆದಾರರಿಗೆ ಇದು ವಿಶೇಷ ಆಕರ್ಷಣೆಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
Open Canvas:ಸುಧಾರಿತ ಮಲ್ಟಿಟ್ಯಾಸ್ಕಿಂಗ್ ಅನುಭವ
OnePlus Open ಮತ್ತು Pad ಸರಣಿಯ ಹೊಸ ಮಾದರಿಗಳಲ್ಲಿ ಜನಪ್ರಿಯಗೊಂಡ Open Canvas ಮಲ್ಟಿಟ್ಯಾಸ್ಕಿಂಗ್ ಅನುಭವ ಈಗ Pad Go 2 ಗೆ ಸಹ ಬರುತ್ತಿದೆ. ಒಂದೇ ಸಮಯದಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ಬಳಸುವವರಿಗೆ ಇದು ದೊಡ್ಡ ಸೌಲಭ್ಯ. Shadow Black ವರ್ಗದಲ್ಲಿ ಮಾತ್ರ 5G ಸಂಪರ್ಕ ಲಭ್ಯವಿದೆ ಎಂದು OnePlus ಸ್ಪಷ್ಟಪಡಿಸಿದೆ.
OnePlus Pad Go 2 ನಿರೀಕ್ಷಿತ ಬೆಲೆ, ಬಣ್ಣ ಮತ್ತು ಮಾರಾಟ
ಹಿಂದಿನ Pad Go ಮಾದರಿ ₹19,999 ಆರಂಭಿಕ ಬೆಲೆಯಲ್ಲಿ ಲಭ್ಯವಿತ್ತು. ಮೆಮೊರಿ ಚಿಪ್‌ಗಳ ಬೆಲೆ ಏರಿಕೆ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಗಮನಿಸಿದರೆ, Pad Go 2 ನ ಬೆಲೆ ₹20,000 - ₹25,000 ರ ಮಧ್ಯೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬೆಲೆ ಶ್ರೇಣಿಯಲ್ಲಿ, ಇದು ಬಜೆಟ್ ಪ್ರೀಮಿಯಂ ಟ್ಯಾಬ್ಲೆಟ್ ಸೆಗ್ಮೆಂಟ್‌ನಲ್ಲಿ ಬಲವಾದ ಸ್ಪರ್ಧಿಯಾಗಲಿದೆ. ಇನ್ನು ಈಗಾಗಲೇ ಖಚಿತವಾಗಿರುವಂತೆ, ಭಾರತದಲ್ಲಿ ಡಿಸೆಂಬರ್ 18ರಂದು ಮಧ್ಯಾಹ್ನ 12 ಗಂಟೆಯಿಂದ ಈ ಸಾಧನವು ಮಾರಾಟಕ್ಕೆ ಬರುತ್ತಿದೆ. ಅಂದರೆ, ಲಾಂಚ್ ನಂತರ ಕೇವಲ ಒಂದು ದಿನದಲ್ಲಿ ಈ ಸಾಧನವನ್ನು Shadow Black ಮತ್ತು Lavender Drift ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.


Click it and Unblock the Notifications








