ಇಂದಿನಿಂದ OnePlus Pad Lite ಸೇಲ್: ಬೆಲೆ, ಕೊಡುಗೆಗಳು ಮತ್ತು ಎಲ್ಲವೂ!
ಭಾರತದ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಎಂಟ್ರಿ ನೀಡಿರುವ OnePlus Pad Lite ಸಾಧನವು ಇಂದು (ಆಗಸ್ಟ್ 1) ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ಸಾಮಾನ್ಯ ಬಳಕೆಗೆ ಸೂಕ್ತವಾಗುವಂತಹ ಆಕರ್ಷಕ ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ OnePlus Pad Lite ಸಾಧನವು ಕಳೆದ ವಾರವಷ್ಟೇ ದೇಶದಲ್ಲಿ ಪರಿಚಯಗೊಂಡಿತ್ತು. ಇಂದು ಮಧ್ಯಾಹ್ನ 12 ಗಂಟೆಯಿಂದ ಈ ಸಾಧನವನ್ನು ಖರೀದಿಸಲು ಸಾಧ್ಯವಾಗುತ್ತಿದೆ. ಹಾಗಾದರೆ, ಹೊಸ OnePlus Pad Lite ಟ್ಯಾಬ್ಲೆಟ್ ಹೇಗಿದೆ?, ಬೆಲೆ ಎಷ್ಟು ಮತ್ತು ಕೊಡುಗೆಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
OnePlus Pad Lite: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ OnePlus Pad Lite ಬೆಲೆ 6GB RAM + 128GB (Wi-Fi) ರೂಪಾಂತರಕ್ಕೆ ರೂ. 15,999 ರಿಂದ ಪ್ರಾರಂಭವಾಗುತ್ತದೆ. ಇದರ ಜೊತೆಗೆ, 8GB RAM + 128GB (Wi-Fi + 4G LTE) ಆಯ್ಕೆಯ ಬೆಲೆ ರೂ. 17,999 ಆಗಿದೆ. ಖರೀದಿದಾರರು ಈ ಟ್ಯಾಬ್ಲೆಟ್‌ಗಳ ಮೇಲೆ ರೂ. 2,000 ತ್ವರಿತ ರಿಯಾಯಿತಿ ಮತ್ತು ರೂ. 1,000 ವಿಶೇಷ ಲಾಂಚ್ ಆಫರ್‌ಗಳನ್ನು ಪಡೆಯಬಹುದು. ಗ್ರಾಹಕರು ಆಯ್ದ ಬ್ಯಾಂಕ್‌ಗಳಲ್ಲಿ 6 ತಿಂಗಳವರೆಗೆ ಉಚಿತ EMI ಪಾವತಿ ಆಯ್ಕೆಗಳನ್ನು ಸಹ ಆನಂದಿಸಬಹುದು ಎಂದು ಕಂಪೆನಿಯು ತಿಳಿಸಿದೆ.

ಇನ್ನು ಈ OnePlus Pad Lite ಟ್ಯಾಬ್ಲೆಟ್ ಏರೋ ಬ್ಲೂ (Aero Blue) ಶೇಡ್‌ನಲ್ಲಿ ಲಭ್ಯವಿರುತ್ತದೆ. ಇಂದು ಮಧ್ಯಾಹ್ನ 12 ಗಂಟೆಗೆ ಮಾರಾಟಕ್ಕೆ ಬರಲಿದೆ. ಇದನ್ನು OnePlus ಇಂಡಿಯಾ ವೆಬ್‌ಸೈಟ್, OnePlus ಸ್ಟೋರ್ ಅಪ್ಲಿಕೇಶನ್, OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು, Amazon, Flipkart, Croma, Reliance Digital, Vijay Sales, Bajaj Electronics ಮತ್ತು ಆಯ್ದ ಇತರ ಪಾಲುದಾರ ಅಂಗಡಿಗಳ ಮೂಲಕ ಖರೀದಿಸಬಹುದು. ಈ ಟ್ಯಾಬ್ಲೆಟ್ ಸಾಮಾನ್ಯ ಬಳಕೆಗೆ ಸೂಕ್ತವಾದಂತೆ ಬಿಡುಗಡೆಯಾದಂತೆ ಕಾಣಿಸಿಸುತ್ತಿದ್ದು, ಇದರ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
OnePlus Pad Lite : ಪ್ರಮುಖ ವೈಶಿಷ್ಟ್ಯಗಳು
ಹೊಸ OnePlus Pad Lite ಟ್ಯಾಬ್ಲೆಟ್ 11-ಇಂಚಿನ HD+ (1920x1200 ಪಿಕ್ಸೆಲ್‌ಗಳು) 10-ಬಿಟ್ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದ್ದು, 500 ನಿಟ್ಸ್ ಬ್ರೈಟ್‌ನೆಸ್ ಮಟ್ಟವನ್ನು ನೀಡುತ್ತದೆ. ಜೊತೆಗೆ, ಫ್ಲಿಕರ್-ಮುಕ್ತ ಮತ್ತು ಕಡಿಮೆ ನೀಲಿ ಬೆಳಕಿನ ಮಾನದಂಡಗಳಿಗಾಗಿ TÜV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.ಸುರಕ್ಷತೆಗಾಗಿ, ಫೇಸ್ ರೆಕಗ್ನಿಷನ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.
ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಟ್ಯಾಬ್ಲೆಟ್ 8GB ವರೆಗೆ RAM ನೊಂದಿಗೆ MediaTek Helio G100 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, Android 15 ಆಧಾರಿತ OxygenOS 15.0.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸುಗಮ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ದೀರ್ಘಕಾಲದ ಬಳಕೆಯನ್ನು ಖಚಿತಪಡಿಸಿಕೊಳ್ಳಲು, OnePlus Pad Lite 9,340mAh ಬ್ಯಾಟರಿಯನ್ನು ಒಳಗೊಂಡಿದೆ ಮತ್ತು ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ (SuperVOOC ಚಾರ್ಜಿಂಗ್) ಬೆಂಬಲವನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, ಟ್ಯಾಬ್ಲೆಟ್ ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆಗಳಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಆಡಿಯೊ ವಿಭಾಗದಲ್ಲಿ, ಇದು ಹೈ-ರೆಸ್ ಆಡಿಯೋ ಗೋಲ್ಡ್ ಸ್ಟ್ಯಾಂಡರ್ಡ್ ಪ್ರಮಾಣೀಕರಣದೊಂದಿಗೆ ಕ್ವಾಡ್-ಸ್ಪೀಕರ್ ಘಟಕವನ್ನು ಹೊಂದಿದೆ, ಇದು ಉತ್ತಮ ಗುಣಮಟ್ಟದ ಧ್ವನಿ ಅನುಭವವನ್ನು ಒದಗಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ, 4G LTE, ಬ್ಲೂಟೂತ್ 5.4 ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಜೊತೆಗೆ SBC, AAC, aptX, aptX HD, ಮತ್ತು LDAC ಆಡಿಯೊ ಕೋಡೆಕ್‌ಗಳನ್ನು ಸಹ ಬೆಂಬಲಿಸುತ್ತದೆ.


Click it and Unblock the Notifications








