Home
Gadgets

10,420mAh ಬ್ಯಾಟರಿ ಸಾಮರ್ಥ್ಯದ OPPO Pad 5 ಟ್ಯಾಬ್ಲೆಟ್ ಬಿಡುಗಡೆ!

Oppo ಗುರುವಾರದಂದು ಆಯೋಜಿಸಿದ್ದ ತನ್ನ ಹಾರ್ಡ್‌ವೇರ್ ಬಿಡುಗಡೆ ಸಮಾರಂಭದಲ್ಲಿ ಕಂಪೆನಿಯ ಇತ್ತೀಚಿನ ಒಪ್ಪೋ ಫೈಂಡ್ X9, ಫೈಂಡ್ X9 ಪ್ರೊ ಮತ್ತು ವಾಚ್ ಎಸ್ ಸಾಧನಗಳ ಜೊತೆಗೆ ಜೊತೆಗೆ ಹೊಸ OPPO Pad 5 ಟ್ಯಾಬ್ಲೆಟ್ ಸಾಧನವನ್ನು ಸಹ ಪರಿಚಯಿದೆ. ಈ ಹೊಸ ಸಾಧನವು 12.1-ಇಂಚಿನ 3K LCD ಡಿಸ್‌ಪ್ಲೇ ಮತ್ತು 10165mAh ಬ್ಯಾಟರಿಯಂತಹ ಗ್ರಾಹಕರನ್ನು ಸೆಳೆಯುವಂತಹ ವೈಶಿಷ್ಟ್ಯಗಳೊಂದೊಗೆ ಬಿಡುಗಡೆಯಾಗಿದೆ. ಹಾಗಾದರೆ, ಹೊಸ OPPO Pad 5 ಟ್ಯಾಬ್ಲೆಟ್ ಸಾಧನ ಹೇಗಿದೆ?, ಬೆಲೆ ಎಷ್ಟು ಎಂಬ ಎಲ್ಲಾ ಸಂಪೂರ್ಣ ವಿವರಗಳನ್ನು ನೋಡೊಣ ಬನ್ನಿ

OPPO Pad 5 ಟ್ಯಾಬ್ಲೆಟ್: ಪ್ರಮುಖ ವೈಶಿಷ್ಟ್ಯಗಳು
ಹೊಸ OPPO Pad 5 ಟ್ಯಾಬ್ಲೆಟ್ ಸಾಧನವು 88.5% ಸ್ಕ್ರೀನ್-ಟು-ಬಾಡಿ ಅನುಪಾತದ 12.1-ಇಂಚಿನ ವಿಶಾಲವಾದ 3K LCD ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 304ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಅತ್ಯಂತ ಸ್ಪಷ್ಟ ದೃಶ್ಯ ಅನುಭವ ನೀಡುತ್ತದೆ. ಇದರ 2,120×3,000 ರೆಸಲ್ಯೂಶನ್ ಮತ್ತು 144Hz ಅಡಾಪ್ಟಿವ್ ರಿಫ್ರೆಶ್ ದರವು ಗೇಮಿಂಗ್, ಸ್ಟ್ರೀಮಿಂಗ್ ಮತ್ತು ವೀಡಿಯೊ ವೀಕ್ಷಣೆಗೆ ತೃಪ್ತಿದಾಯಕ ಅನುಭವ ನೀಡುವ ಭರವಸೆ ನೀಡಿದೆ. ಜೊತೆಗೆ ಇದು 900 ನಿಟ್ ಗರಿಷ್ಠ ಹೊಳಪನ್ನು ನೀಡಲಿದೆ. ಇದರಿಂದ ಸೂರ್ಯನ ಬೆಳಕಿನಲ್ಲಿಯೂ ಓದು, ವೀಡಿಯೊ, ಮತ್ತು ಕೆಲಸ ಸುಲಭವಾಗಿಸುತ್ತದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಟ್ಯಾಬ್ಲೆಟ್ ಆಕ್ಟಾ ಕೋರ್ MediaTek Dimensity 9400+ ಚಿಪ್‌ಸೆಟ್ ಮೂಲಕ ಚಾಲಿತವಾಗಿದ್ದು, ColorOS 16 ಆಧಾರಿತ ಆಂಡ್ರಾಯ್ಡ್ 16 ನಲ್ಲಿ ಕಾರ್ಯನಿರ್ವಹಿಸುತ್ತದೆ. 16GB RAM ಮತ್ತು 512GB ಸ್ಟೋರೇಜ್ ವರೆಗೆ ಮೆಮೊರಿ ಆಯ್ಕೆಗಳಿವೆ. ಬ್ಯಾಟರಿ ವಿಭಾಗದಲ್ಲಿ, 10,420mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಇದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು, ದೀರ್ಘಕಾಲದ ಬಳಕೆಗೆ ಸುಲಭ ಪರಿಹಾರ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಟ್ಯಾಬ್‌ಗಳು ಸಾಮಾನ್ಯವಾಗಿ 10 ಸಾವಿರ mAh ಬ್ಯಾಟರಿಗಳನ್ನು ಹೊಂದುತ್ತಿರುವುದನ್ನು ನಾವು ನೋಡಬಹುದು.

ಇನ್ನು OPPO Pad 5 ತನ್ನ ಕ್ಯಾಮೆರಾ ವ್ಯವಸ್ಥೆಯಲ್ಲೂ ಸುಧಾರಣೆ ಕಂಡಿದೆ. ಈ ಸಾಧನದ ಹಿಂಭಾಗದಲ್ಲಿ LED ಫ್ಲ್ಯಾಷ್ ಅನ್ನು ಒಳಗೊಂಡಿರುವ 8 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ/ವೀಡಿಯೊ ಕ್ಯಾಮೆರಾ ಇದೆ. ಸಂಪರ್ಕ ಆಯ್ಕೆಗಳಲ್ಲಿ 5G , Wi-Fi 6, ಬ್ಲೂಟೂತ್ 5.4, USB 3.2 Gen 1 ಅನ್ನು ಬೆಂಬಲಿಸುವ USB ಟೈಪ್-C ಪೋರ್ಟ್, NFC ವೈಶಿಷ್ಟ್ಯಗಳಿವೆ. ಆಡಿಯೋ ಪ್ರಿರಿಗಾಗಿ, ಈ ಸಾಧನವು ಅದರ USB ಟೈಪ್-C ಇಂಟರ್ಫೇಸ್ ಮೂಲಕ ಹೈ-ರೆಸ್ ಆಡಿಯೊ ಪ್ರಮಾಣೀಕರಣವನ್ನು ಒದಗಿಸುತ್ತದೆ. ಮತ್ತು ಈ ಟ್ಯಾಬ್ಲೆಟ್ ಸರಿಸುಮಾರು 579 ಗ್ರಾಂ ತೂಗುತ್ತದೆ.

10,420mAh ಬ್ಯಾಟರಿ ಸಾಮರ್ಥ್ಯದ OPPO Pad 5 ಟ್ಯಾಬ್ಲೆಟ್ ಬಿಡುಗಡೆ!

ಬೆಲೆ ಮತ್ತು ಲಭ್ಯತೆ
OPPO Pad 5 ಸದ್ಯಕ್ಕೆ ಚೀನಾದಲ್ಲಿ ಲಭ್ಯವಿದ್ದು, ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಗೆ ಸಾಧ್ಯವಾಗಿದೆ. ಇದನ್ನು ಗ್ಯಾಲಕ್ಸಿ ಸಿಲ್ವರ್, ಸ್ಪೇಸ್ ಗ್ರೇ, ಗ್ಯಾಲಕ್ಸಿ ಸಿಲ್ವರ್ ಸಾಫ್ಟ್ ಲೈಟ್ ಎಡಿಷನ್, ಲಕ್ಕಿ ಪರ್ಪಲ್ ಸಾಫ್ಟ್ ಲೈಟ್ ಎಡಿಷನ್ ಬಣ್ಣಗಳಲ್ಲಿ ಖರೀದಿಸಬಹುದು.
8GB + 128GB: CNY 2,599 (ಅಂದಾಜು 32,000 ರೂ.)
8GB + 256GB: CNY 2,799 (ಅಂದಾಜು 34,000 ರೂ.)
12GB + 256GB: CNY 3,099 (ಅಂದಾಜು 38,000ರೂ. )
16GB + 512GB: CNY 3,599 ( ಅಂದಾಜು 44,000ರೂ. )

OPPO Pad 5: ಛಾಪು ಮೂಡಿಸಬಹುದೇ?
ಈ ಹೊಸ OPPO Pad 5 ಸಾಧನವು ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆ ಇದೆ. OPPO Pad 5 (MediaTek Dimensity 9400+ ಮತ್ತು 10,420mAh/67W ಬ್ಯಾಟರಿ) ಅದರ ಸಮಗ್ರ ವಿಭಾಗದಲ್ಲಿರುವ ಟ್ಯಾಬ್ಲೆಟ್‌ಗಳಿಗೆ ತೀವ್ರ ಸ್ಪರ್ಧೆ ನೀಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇತ್ತೀಚಿನ OnePlus Pad 3 ಸಾಧನವು Snapdragon 8 Elite ಮತ್ತು 12,140mAh/80W ವೈಶಿಷ್ಟ್ಯಗಳನ್ನು ಹೊಂದಿದೆ. ಆದರೂ, OPPO Pad 5 ಹೆಚ್ಚು ಸಾಮರ್ಥ್ಯವಿರುವ 16GB RAM ಆಯ್ಕೆ ಮತ್ತು ಸಮಾನವಾದ 144Hz 3K ಡಿಸ್‌ಪ್ಲೇ ಹೊಂದಿದೆ.

OPPO Pad 5 ಟ್ಯಾಬ್ಲೆಟ್‌ನ ಅತ್ಯುತ್ತಮ ಅಂಶವೆಂದರೆ ಅದರ ಶಕ್ತಿಶಾಲಿ Dimensity 9400+ ಚಿಪ್‌ಸೆಟ್ ಮತ್ತು ಉನ್ನತ 12.1-ಇಂಚಿನ 3K 144Hz ಡಿಸ್‌ಪ್ಲೇಯೊಂದಿಗೆ 10,420mAh ಬ್ಯಾಟರಿಯ ಸಂಯೋಜನೆ. ಇದು ಉನ್ನತ ಕಾರ್ಯಕ್ಷಮತೆ ಮತ್ತು ದೀರ್ಘ ಬ್ಯಾಟರಿ ಬಾಳಿಕೆಗೆ ಆದ್ಯತೆ ನೀಡುವವರಿಗೆ ಸೂಕ್ತವಾಗಿದೆ. ಕಾರ್ಯಕ್ಷಮತೆ ಕೇಂದ್ರಿತ ಬಳಕೆದಾರರಿಗೆ OPPO Pad 5 ಟ್ಯಾಬ್ಲೆಟ್ ಶಕ್ತಿಯುತ Android ಟ್ಯಾಬ್ಲೆಟ್ ಆಗಿದ್ದು, ಇದು ಗೇಮಿಂಗ್ ಮತ್ತು ಮಲ್ಟಿಮೀಡಿಯಾಗಾಗಿ ಉತ್ತಮ ಡಿಸ್‌ಪ್ಲೇ ಮತ್ತು ದೀರ್ಘ ಬ್ಯಾಟರಿಯನ್ನು ನೀಡುತ್ತದೆ ಎಂಬುದು ನನ್ನ ಅಭಿಪ್ರಾಯ.

Best Mobiles in India

English summary
OPPO Pad 5 with MediaTek Dimensity 9400+ SoC, 144Hz display, and a massive 10,420mAh battery is now officially launched, offering flagship-level performance for tablets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+