ಚೀನಾದಲ್ಲಿ OPPO Pad Air 5 ಟ್ಯಾಬ್ಲೆಟ್ ಬಿಡುಗಡೆ: ಭಾರತಕ್ಕೆ ಯಾವಾಗ ಬರಲಿದೆ?
OPPO ತನ್ನ ಹೊಸ OPPO Pad Air 5 ಟ್ಯಾಬ್ಲೆಟ್ ಅನ್ನು ಚೀನಾದಲ್ಲಿ(25,ಡಿಸೆಂಬರ್) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಟ್ಯಾಬ್ಲೆಟ್ 120Hz ಡಿಸ್ಪ್ಲೇ, ಡೈಮೆನ್ಸಿಟಿ 7300 ಅಲ್ಟ್ರಾ ಚಿಪ್‌ಸೆಟ್ ಮತ್ತು ಬೃಹತ್ 10,050mAh ಬ್ಯಾಟರಿಯೊಂದಿಗೆ ಬಂದಿದ್ದು, ಟೆಕ್ ಪ್ರಿಯರ ಗಮನ ಸೆಳೆಯುವಂತಿದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಕ್ಲಾಸ್‌ಗಳು, ಡಿಜಿಟಲ್ ಕೆಲಸಗಳು ಮತ್ತು ಮನರಂಜನೆಗಾಗಿ ಟ್ಯಾಬ್ಲೆಟ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, OPPO Pad Air 5 ಒಂದು ಸಮತೋಲನದ ಪ್ರೀಮಿಯಂ ಆಯ್ಕೆಯ ಟ್ಯಾಬ್ಲೆಟ್ ಆಗಿ ಕಾಣಿಸುತ್ತಿದೆ. ಈ ಟ್ಯಾಬ್ಲೆಟ್ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
OPPO Pad Air 5: ಬೆಲೆ ಮತ್ತು ಮಾರಾಟ ದಿನಾಂಕ
OPPO Pad Air 5 ಚೀನಾದಲ್ಲಿ CNY 1,899 (ಸುಮಾರು ₹24,200) ಆರಂಭಿಕ ಬೆಲೆಗೆ ಪರಿಚಯಗೊಂಡಿದೆ. ಇದರ 8GB + 256GB ಮಾದರಿಯ ಬೆಲೆ CNY 2,199 (ಸುಮಾರು ರೂ. 28,100), ಟಾಪ್‌ಎಂಡ್ 12GB RAM + 256GB ಸ್ಟೋರೇಜ್ ಆವೃತ್ತಿಯ ಬೆಲೆ CNY 2,499 (ಸುಮಾರು ರೂ. 32,200) ಗಳಾಗಿವೆ. ಈ ಮಾದರಿಯಲ್ಲಿ ಕಣ್ಣುಗಳಿಗೆ ಸುಲಭವಾಗುವ ಡಿಸ್ಪ್ಲೇ ಅನುಭವ ನೀಡುವ Soft Light ಎಡಿಷನ್ ಕೂಡ ಲಭ್ಯವಿದ್ದು, ಇದು 8GB RAM + 256GB ಸ್ಟೋರೇಜ್ ಆಯ್ಕೆಗೆ CNY 2,399 (ಸುಮಾರು ರೂ. 31,200) ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಗೆ CNY 2,699 (ಸುಮಾರು ರೂ. 35,100) ಬೆಲೆ ಹೊಂದಿದೆ. ಇನ್ನು ಈ ಟ್ಯಾಬ್ಲೆಟ್ ಡಿಸೆಂಬರ್ 31 ರಿಂದ ಚೀನಾದ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟಕ್ಕೆ ಬರಲಿದ್ದು, ಬಣ್ಣ ಆಯ್ಕೆಗಳಲ್ಲಿ Starlight Powder ಮತ್ತು Space Gray ಸೇರಿವೆ.

OPPO Pad Air 5: ಪ್ರಮುಖ ವೈಶಿಷ್ಟ್ಯಗಳು
ಈ ಹೊಸ OPPO Pad Air 5 ಟ್ಯಾಬ್ಲೆಟ್‌ನಲ್ಲಿ 12.1 ಇಂಚಿನ 2.8K ರೆಸಲ್ಯೂಶನ್ ಇರುವ LCD ಡಿಸ್ಪ್ಲೇ ನೀಡಲಾಗಿದ್ದು, ಇದು 120Hz ರಿಫ್ರೆಶ್ ರೇಟ್ ಮತ್ತು 900 nits HBM ಬ್ರೈಟ್‌ನೆಸ್ ಹೊಂದಿದೆ. ಕಾರ್ಯಕ್ಷಮತೆ ವಿಷಯದಲ್ಲಿ OPPO Pad Air 5 ಅನ್ನು MediaTek Dimensity 7300 Ultra ಪ್ರೊಸೆಸರ್ ಚಾಲನೆ ಮಾಡುತ್ತದೆ. ಇದು ಗರಿಷ್ಠ 12GB LPDDR5X RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಸ್ಮೂತ್ ಡಿಸ್‌ಪ್ಲೇ, ವೇಗ ಹಾಗೂ ಸಂಗ್ರಹಣೆಯ ಎಲ್ಲಾ ಅಂಶಗಳಲ್ಲಿ ಇದು ಬಳಕೆದಾರರ ನಿರೀಕ್ಷೆ ಪೂರೈಸುವ ಭರವಸೆಯನ್ನು ನೀಡಿದೆ.
ಕ್ಯಾಮೆರಾ ವಿಭಾಗದಲ್ಲಿ OPPO Pad Air 5 ನಲ್ಲಿ 8MP ಹಿಂಬದಿ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಇದರ ದೊಡ್ಡ ಹೈಲೈಟ್ ಎಂದರೆ 10,050mAh ಸಾಮರ್ಥ್ಯದ ಬ್ಯಾಟರಿ, ಇದು ದೀರ್ಘ ಸಮಯ ಬಳಕೆಗೆ ಅವಕಾಶ ನೀಡುತ್ತದೆ. ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಸಾಫ್ಟ್‌ವೇರ್ ವಿಷಯಕ್ಕೆ ಬಂದರೆ, ಈ ಟ್ಯಾಬ್ಲೆಟ್ Android 16 ಆಧಾರಿತ ColorOS 16 ಮೇಲೆ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿವಿಟಿಗಾಗಿ Wi-Fi 6 ಮತ್ತು Bluetooth 5.4 ಬೆಂಬಲವಿದೆ. ಮತ್ತು ಈ ಸಾಧನವು ಕೇವಲ 6.83 ಮಿಮೀ ದಪ್ಪ ಮತ್ತು 597 ಗ್ರಾಂ ತೂಕ ಹೊಂದಿದೆ.
ಭಾರತದಲ್ಲಿಈ OPPO Pad Air 5 ಟ್ಯಾಬ್ಲೆಟ್ ಬಿಡುಗಡೆ ಕುರಿತು ಕಂಪೆನಿಯು ದಿನಾಂಕವನ್ನು ದೃಢೀಕರಿಸದಿದ್ದರೂ, ಉದ್ಯಮದ ವರದಿಗಳು OPPO Reno 15 ಸರಣಿಯ ಜೊತೆಗೆ, OPPO Pad Air 5 ಕೂಡ ಭಾರತದಲ್ಲಿ ಬಿಡುಗಡೆ ಮಾಡಬಹುದೆಂದು ಸೂಚಿಸುತ್ತಿವೆ. ನಾವು ಭಾರತೀಯ ಮಾರುಕಟ್ಟೆಯ ದೃಷ್ಟಿಯಿಂದ ನೋಡಿದರೆ, OPPO Pad Air 5 ಭಾರತದಲ್ಲಿ ಬಿಡುಗಡೆ ಆದರೆ ಮಧ್ಯಮ ಬೆಲೆ ವಿಭಾಗದಲ್ಲಿ ಬಲವಾದ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ದೊಡ್ಡ ಡಿಸ್ಪ್ಲೇ, ಶಕ್ತಿಶಾಲಿ ಬ್ಯಾಟರಿ ಮತ್ತು ನವೀನ ಸಾಫ್ಟ್‌ವೇರ್ ಹೊಂದಿರುವ ಈ ಟ್ಯಾಬ್ಲೆಟ್, ವಿಶೇಷವಾಗಿ ವಿದ್ಯಾರ್ಥಿಗಳು, ಫ್ರೀಲಾನ್ಸರ್‌ಗಳು ಮತ್ತು ವರ್ಕ್-ಫ್ರಮ್-ಹೋಮ್ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಬಹುದು. ಈ ಹೊಸ OPPO Pad Air 5 ಟ್ಯಾಬ್ಲೆಟ್ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








