Home
Gadgets

Oppo Watch S ಬಿಡುಗಡೆ: ಹೊಸ ಸ್ಮಾರ್ಟ್‌ವಾಚ್ ಹೇಗಿದೆ?, ಬೆಲೆ ಎಷ್ಟು ನೋಡಿ!

ಆಧುನಿಕ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ Oppo ಗುರುವಾರದಂದು ಆಯೋಜಿಸಿದ್ದ ತನ್ನ ಹಾರ್ಡ್‌ವೇರ್ ಬಿಡುಗಡೆ ಸಮಾರಂಭದಲ್ಲಿ ಹೊಸ 'Oppo Watch S' ಸಾಧನವನನ್ನು ಪರಿಚಯಿಸಿದೆ. ಈ ಕಾರ್ಯಕ್ರಮದಲ್ಲಿ ಕಂಪೆನಿಯ ಇತ್ತೀಚಿನ ಒಪ್ಪೋ ಫೈಂಡ್ X9, ಫೈಂಡ್ X9 ಪ್ರೊ ಮತ್ತು ಪ್ಯಾಡ್ 5 ಸಾಧನಗಳ ಜೊತೆಗೆ ಈ ಒಪ್ಪೋ ವಾಚ್ ಕೂಡ ಪರಿಚಯಗೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ಡಿಸೈನ್‌ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಹಾಗಾದರೆ, ಹೊಸ 'Oppo Watch S' ಸ್ಮಾರ್ಟ್‌ವಾಚ್ ಹೇಗಿದೆ?, ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.

Oppo Watch S: ಪ್ರಮುಖ ವೈಶಿಷ್ಟ್ಯಗಳು ಹೀಗಿವೆ.
ಹೊಸ Oppo Watch S ಸಾಧನವು ಒಂದು ಪ್ರೀಮಿಯಂ ಲುಕ್ ಹಾಗೂ ಉನ್ನತ ಮಟ್ಟದ ಹೆಲ್ತ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳೊಂದಿಗೆ ಬಂದಿರುವ ಸ್ಮಾರ್ಟ್‌ವಾಚ್ ಆಗಿದೆ. ಇದು ಸುಮಾರು 35 ಗ್ರಾಂ ತೂಲವಿದ್ದು, ಸ್ಟೇನ್ಲೆಸ್ ಸ್ಟೀಲ್ ಸರ್ಕ್ಯುಲರ್ ಡಯಲ್ ಬಾಡಿ ಹೊಂದಿರುವ ಈ ಸಾಧನವು ಬಲಭಾಗದಲ್ಲಿ ಕ್ರೌನ್ ಮತ್ತು ನವಿಗೇಶನ್ ಬಟನ್ ಹೊಂದಿದೆ. ಡಿಸ್‌ಪ್ಲೇ ವಿಬಾಗದಲ್ಲಿ, 464x464 ಪಿಕ್ಸೆಲ್‌ಗಳ ರೆಸಲ್ಯೂಷನ್ ಹೊಂದಿರುವ 1.46 ಇಂಚಿನ AMOLED ಡಿಸ್‌ಪ್ಲೇ ಇದ್ದು, ಇದು ಗರಿಷ್ಠ 3,000 ನಿಟ್ಸ್ ಬ್ರೈಟ್‌ನೆಸ್ ಒದಗಿಸಲಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ವಾಚ್ 4GB EMMC ಮೆಮೊರಿಯೊಂದಿಗೆ ಜೋಡಿಸಲಾದ BES2800BP ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಹಾಗೂ ColorOS Watch 7.1 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ವಾಚ್ ಸೈಕ್ಲಿಂಗ್, ಓಟ, ಈಜು, ನಡಿಗೆ ಮತ್ತು ರೋಯಿಂಗ್‌ಗಾಗಿ ಚಟುವಟಿಕೆ ಗುರುತಿಸುವಿಕೆ ವಿಧಾನಗಳು ಸೇರಿದಂತೆ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಅಲ್ಲದೆ, ಇದು AI ಕ್ರೀಡಾ ತರಬೇತಿ ಕಾರ್ಯವನ್ನು ಸಹ ಒಳಗೊಂಡಿದೆ. ಆದರೆ, ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ನನ್ನಲ್ಲಿ ಕುತೂಹಲ ಇದೆ.

ಹೆಲ್ತ್ ಮತ್ತು ಫಿಟ್ನೆಸ್ ವಿಭಾಗದಲ್ಲಿ, ಎಂಟು-ಚಾನೆಲ್ ಆಪ್ಟಿಕಲ್ ಹೃದಯ ಬಡಿತ ಸಂವೇದಕ, 16-ಚಾನೆಲ್ ಆಪ್ಟಿಕಲ್ ಪಲ್ಸ್ ಆಕ್ಸಿಮೀಟರ್ ಸಂವೇದಕ, ECG ಸಂವೇದಕಗಳನ್ನು ಹೊಂದಿದೆ. ಸ್ಲೀಪ್ ಟ್ರ್ಯಾಕಿಂಗ್ ನಲ್ಲಿ ನಿದ್ದೆ ಗುಣಮಟ್ಟ, SpO2 ಮಟ್ಟ, ಉಸಿರಾಟದ ಪ್ರಮಾಣ, ನಿದ್ದೆಯ ಸದ್ದಿನ ವಿಶ್ಲೇಷಣೆ ಮಾಡುವ ವೈಶಿಷ್ಟ್ಯಗಳು ಇದರಲ್ಲಿವೆ. ಇತರ ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳಲ್ಲಿ ಹೃದಯದ ಬಡಿತ ಟ್ರ್ಯಾಕಿಂಗ್, ಫಾಲ್ ಡಿಟೆಕ್ಷನ್, ಮೆನ್ಸ್ಟ್ರುಯಲ್ ಸೈಕಲ್ ಟ್ರ್ಯಾಕಿಂಗ್, ಡೈಲಿ ಆಕ್ಟಿವಿಟಿ ರಿಮೈಂಡರ್‌ಗಳು ಇವೆ.

ಬ್ಯಾಟರಿ ವಿಬಾಗದಲ್ಲಿ, 339mAh ಬ್ಯಾಟರಿ ಇದ್ದು, ಇದು 10 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದರೆ, ಸಾಮಾನ್ಯ ಬಳಕೆಯಲ್ಲಿ 7 ದಿನಗಳು ಹಾಗೂ Always-on Display ಇದ್ದರೆ 4 ದಿನಗಳು ಬಾಳಿಕೆ ಒದಗಿಸಲಿದೆ. ಈ ಸ್ಮಾರ್ಟ್ ವಾಚ್ ಸುಮಾರು 90 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ 10 ನಿಮಿಷಗಳ ಚಾರ್ಜ್ ಸಾಧನವನ್ನು 24 ಗಂಟೆಗಳವರೆಗೆ ಚಾರ್ಜ್ ಮಾಡುತ್ತದೆ ಎಂದು ಒಪ್ಪೋ ಹೇಳಿಕೊಂಡಿದೆ.

Oppo Watch S ಬಿಡುಗಡೆ: ಹೊಸ ಸ್ಮಾರ್ಟ್‌ವಾಚ್ ಹೇಗಿದೆ?, ಬೆಲೆ ಎಷ್ಟು ನೋಡಿ!
Photo credit: gizmochina

ಕನೆಕ್ಟಿವಿಟಿ ಆಯ್ಕೆಗಳಲ್ಲಿ, Bluetooth 5.2, NFC, BeiDou, GPS (L1+L5), Galileo, GLONASS ಮತ್ತು OZSS ವೈಶಿಷ್ಟ್ಯಗಳಿವೆ. Android 10 ಮತ್ತು iOS 14 ಹಾಗೂ ನಂತರದ ಆವೃತ್ತಿಗಳಿಗೆ ಹೊಂದಿಕೊಳ್ಳುವ ಈ ಸಾಧನವು ccelerometer, gyroscope, geomagnetic, air pressure ಮತ್ತು ambient light ಸೆನ್ಸಾರ್‌ಗಳನ್ನು ಹೊಂದಿದೆ. ಇನ್ನುಳಿದಂತೆ, 5ATM + IP68 ಪ್ರಮಾಣಿತ ನೀರು ಮತ್ತು ಧೂಳು ನಿರೋಧಕತೆ ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾದರೆ, ಈ ಸಾಧನವು 44.98×44.98×8.9 ಮಿ.ಮೀ ಅಳತೆ ಹೊಂದಿದೆ.

Oppo Watch S: ಬೆಲೆ ಎಷ್ಟು?
Oppo Watch S ಸಾಧನವು ರಿದಮ್ ಸಿಲ್ವರ್ ಮತ್ತು ರೇಸಿಂಗ್ ಬ್ಲ್ಯಾಕ್ ಮಾದರಿಯಲ್ಲಿ CNY 1,299 (ಸುಮಾರು ₹16,000) ಬೆಲೆಗೆ ಪರಿಚಯಗೊಂಡಿದೆ. ಇದರ ವೈಬ್ರಂಟ್ ಗ್ರೀನ್ ಫೀಲ್ಡ್ ಮಾದರಿಯ ಬೆಲೆ CNY 1,499 (ಸುಮಾರು ₹18,500) ಗಳಾಗಿವೆ. ಇದೇ ಅಕ್ಟೋಬರ್ 22ರಿಂದ ಚೀನಾದ Oppo ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

ಅತ್ಯಂತ ಪ್ರೀಮಿಯಂ ಲುಕ್ ಜೊತೆಗೆ ಇಷ್ಟೆಲ್ಲಾ ಆಧುನಿಕ ಫೀಚರ್ಸ್ ಹೊಂದಿರುವ ಈ Oppo Watch S ಸ್ಮಾರ್ಟ್‌ವಾಚ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಬ್ಯವಾಗಿಲ್ಲ. ಇದಕ್ಕಾಗಿ ನಾವು ಕೂಡ ಎದುರುನೋಡುತ್ತಿದ್ದೇವೆ. ಆದರೆ, ಒಂದಂತೂ ಸತ್ಯ, ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಈ ಸ್ಮಾರ್ಟ್‌ವಾಚ್ ಹೊಂದಿರುವ ವೈಶಿಷ್ಟ್ಯಗಳು ಹೆಚ್ಚು ಗಮನಸೆಳೆಯುತ್ತಿವೆ.

Best Mobiles in India

English summary
Oppo Watch S is the brand’s latest smartwatch featuring a 1.46-inch AMOLED display, fitness tracking, heart-rate monitoring, and seamless smartphone connectivity. It offers stylish design and smart features at an affordable price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+