ನಿಮ್ಮ ರೂಮಿಗೆ ಸರಿಯಾದ ಎಸಿ ಆಯ್ಕೆ ಮಾಡಿಕೊಳ್ಳುವುದು ಹೇಗೆ ಗೊತ್ತಾ?

By Gizbot Bureau
|

ಇದೀಗ ಬೇಸಿಗೆಯ ಸಮಯ ಮತ್ತು ಹೆಚ್ಚಿನವರು ಈ ಸಮಯದಲ್ಲಿ ತಮ್ಮ AC ಸರಿಯಾಗಿಲ್ಲ, ಕೋಣೆ ತಣ್ಣಗಾಗುವುದೇ ಇಲ್ಲ ಎಂದು ದೂರು ನೀಡುತ್ತಾರೆ. ಬಹುಶ್ಯಃ ACಯಲ್ಲಿ ಅಥವಾ ಅದರ ಕಂಪ್ರೆಸರ್ ನಲ್ಲಿ ಸಮಸ್ಯೆ ಇರುವ ಕಾರಣದಿಂದಾಗಿ ನಿಮಗೆ ಇಂತಹ ಅನುಭವವಾಗುತ್ತಿರುವ ಸಾಧ್ಯತೆ ಇದೆ. ಆದರೆ ಪ್ರತಿಯೊಂದು ವಿಚಾರಕ್ಕೂ ಎರಡು ಮುಖಗಳಿರುವಂತೆ ಈ ವಿಚಾರದಲ್ಲೂ ಕೂಡ ಎರಡು ವಿಭಿನ್ನ ಮುಖಗಳಿದೆ.

ನಿಮ್ಮ ರೂಮಿಗೆ ಸರಿಯಾದ ಎಸಿ ಆಯ್ಕೆ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಒಂದು ಮೇಲೆ ನಾವು ತಿಳಿಸಿರುವ ಸಮಸ್ಯೆ ಇನ್ನೊಂದು ನೀವು ಸರಿಯಾದ ಏರ್ ಕಂಡೀಷನ್ ನ್ನು ಆಯ್ಕೆ ಮಾಡಿದ್ದೀರೇ ಎಂಬುದಾಗಿದೆ. ನಿಮ್ಮ ರೂಮಿನ ಅಳತೆ, ಅಲ್ಲಿನ ವಾತಾವರಣ, ರೂಮಿನ ವೈಶಿಷ್ಟ್ಯತೆ ಅನುಗುಣವಾಗಿ ಸರಿಯಾದ ಏರ್ ಕಂಡೀಷನ್ ಆಯ್ಕೆ ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುವ ವಿಚಾರವಾಗಿರುತ್ತದೆ.

ಯಾವುದೇ ACಯನ್ನು ಖರೀದಿಸುವ ಮುನ್ನ ನೀವು ಗಮನಿಸಬೇಕಾಗಿರುವ ಕೆಲವು ಪ್ರಮುಖ ಅಂಶಗಳ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಬಹಳ ಮುಖ್ಯವಾಗಿ ನೀವು ಒಂದು ರೂಮಿಗೆ AC ಫಿಟ್ ಮಾಡಬೇಕು ಎಂದು ಅಂದುಕೊಳ್ಳುತ್ತಿದ್ದರೆ ಗಮನಿಸಬೇಕಾಗಿರುವ ಅಂಶವೇನೆಂದರೆ ನಿಮ್ಮ ರೂಮಿನ ಅಳತೆಗೆ ಯಾವ ಕೆಪಾಸಿಟಿ ಇರುವ ACಯ ಅಗತ್ಯತೆ ಇದೆ ಎಂಬುದನ್ನು ಗಮನಿಸಬೇಕು. ರೂಮಿನ ಸೈಜ್ 100-120 sq ft ಆಗಿದ್ದರೆ 1 Ton ಕೆಪಾಸಿಟಿಯ AC ಸಾಕಾಗುತ್ತದೆ.ಒಂದು ವೇಳೆ ದೊಡ್ಡ ರೂಮ್ ಆಗಿದ್ದರೆ 1.5 Ton ಅಥವಾ 2 Ton AC ಬೇಕಾಗುತ್ತದೆ. ಕೂಲಿಂಗ್ ಕೂಡ ನಿಮ್ಮ ರೂಮಿಗೆ ಸೂರ್ಯನ ಕಿರಣ ಎಷ್ಟು ಬೀಳುತ್ತದೆ ಎಂಬುದನ್ನು ಆಧರಿಸಿ ಇರುತ್ತದೆ.

ಇನ್ನೊಂದು ಪ್ರಮುಖ ಅಂಶ ಗಮನಿಸಬೇಕಾಗಿರುವುದು ನಿಮ್ಮ ಮನೆ ಎಷ್ಟನೇ ಫ್ಲೋರ್ ನಲ್ಲಿ ಇದೆ ಎಂಬುದಾಗಿದೆ.ಒಂದು ವೇಳೆ ಮೇಲಿನ ಸ್ಥರದಲ್ಲಿ ನಿಮ್ಮ ಮನೆ ಇದ್ದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತದೆ. ಆಗ ನೀವು ಹೆಚ್ಚು ಕೆಪಾಸಿಟಿ ಇರುವ ACಯನ್ನು ಖರೀದಿಸಬೇಕಾಗುತ್ತದೆ.

ಎರಡನೆಯ ಪ್ರಮುಖ ಅಂಶ ನೀವು ಯಾವ ರೀತಿಯ ACಯನ್ನು ಖರೀದಿಸಬೇಕು ಎಂಬುದನ್ನು ಆಲೋಚಿಸಬೇಕಾಗುತ್ತದೆ. ಸಾಮಾನ್ಯವಾಗಿ ಎರಡು ಪ್ರಮುಖ ರೀತಿಯ AC ಇರುತ್ತದೆ. ವಿಂಡೋ AC ಮತ್ತು ಸ್ಪ್ಲಿಟ್ AC. ವಿಂಡೋ AC ಹೋಲಿಕೆ ಮಾಡಿ ಹೇಳಿದರೆ ಬಹಳ ಕಡಿಮೆ ಬೆಲೆಯ, ಕೈಗೆಟುಕುವ ಬೆಲೆಯ AC ಆಗಿರುತ್ತದೆ. ಇದು ಸಿಂಗಲ್ ಯುನಿಟ್ ನದ್ದಾಗಿದ್ದು ರೂಮ್ ಕೂಲರ್ ನಂತೆ ಇರುತ್ತದೆ.

ಸ್ಪ್ಲಿಟ್ ACಯಲ್ಲಿ ಎರಡು ಭಾಗವಿರುತ್ತದೆ.- ಬ್ಲೋವರ್ ಮತ್ತು ಕಂಪ್ರೆಸರ್ . ಕಂಪ್ರೆಸರ್ ನ್ನು ರೂಮಿನ ಹೊರಗಡೆ ಇಡಲಾಗುತ್ತದೆ ಮತ್ತು ಬ್ಲೋವರ್ ನ್ನು ರೂಮಿನ ಒಳಭಾಗದಲ್ಲೇ ಅಳವಡಿಸಲಾಗುತ್ತದೆ. ಸರಿಯಾದ ಪ್ರಮಾಣದ ಕೂಲಿಂಗ್ ಗಾಗಿ ಎರಡೂ ಕೂಡ ಸರಿಯಾದ ವೆಂಟಿಲೇಷನ್ ನ್ನು ಬೇಡುತ್ತದೆ.

ರೂಮಿನ ಸೈಜಿನ ಆಧಾರದಲ್ಲಿ ಯಾವ AC ಹಾಕಬೇಕು ಎಂಬ ಬಗೆಗಿನ ವಿವರ ಇಲ್ಲಿದೆ ನೋಡಿ.

ರೂಮ್ ಅಳತೆಯ ಪ್ರಕಾರದಲ್ಲಿ ಎಸಿಯ ಕೆಪಾಸಿಟಿ

* 120sqft ಅಥವಾ ಅದಕ್ಕಿಂತ ಕಡಿಮೆ ಅಥವಾ : 1.2 Ton ಗಿಂತ ಕಡಿಮೆ

* 120sqft ಮತ್ತು 179sqft ನ ನಡುವೆ: 1.5 Ton ಎಸಿ

* 180sqft ಗಿಂತ ದೊಡ್ಡದು: 2 Ton ಅಥವಾ ಅದಕ್ಕಿಂತ ಹೆಚ್ಚು

Best Mobiles in India

Read more about:
English summary
Planning to buy a new AC? Here’s how to pick the right size AC for your room

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X