Home
Gadgets

ಭವಿಷ್ಯದ ಪಾರದರ್ಶಕ ಸ್ಮಾರ್ಟ್‌ಫೋನ್‌ ಬಳಸಲು ನೀವು ರೆಡಿನಾ?

ನಿಮ್ಮ ಫೋನ್ ಹಿಡಿದುಕೊಂಡರೆ ಒಂದು ಪಾರದರ್ಶಕ ಗಾಜನ್ನು ಹಿಡಿದ ಅನುಭವ ನಿಮಗೆ ಆಗಲಿದೆ.!!

By Bhaskar N J

ಬೇಸಿಕ್ ಮೊಬೈಲ್‌ನಿಂದ ಹಿಡಿದು ಸ್ಮಾರ್ಟ್‌ಫೋನ್ ಪ್ರಪಂಚದವರೆಗೂ ಬೆಳೆದುಬಂದಿರುವ ಮತ್ತು ಬೆಳೆಯುತ್ತಲೇ ಇರುವ ಈ ಮೊಬೈಲ್ ಎನ್ನುವ ಮಾಯಾ ಪ್ರಪಂಚ ಮತ್ತೆಲ್ಲಿ ಹೊಗಿ ನಿಲ್ಲುವುದೋ ಎನ್ನುವಹಾಗಿದೆ.! ಹೌದು, ನೀವು ಊಹಿಸದ ರೀತಿಯಲ್ಲಿ ಭವಿಷ್ಯದ ಸ್ಮಾರ್ಟ್‌ಫೋನ್‌ಗಳು ನಿಮ್ಮ ಕೈ ಸೇರಲಿವೆ.!!

ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇನ್ನೇನು ಕೆಲವೇ ವರ್ಷಗಳಲ್ಲಿ ನೀವು ಪಾರದರ್ಶಕ ಸ್ಮಾರ್ಟ್‌ಫೋನ್‌ಗಳಿಗೆ ಸಾಕ್ಷಿಯಾಗಲಿದ್ದೀರಾ.! ನಿಮ್ಮ ಫೋನ್ ಹಿಡಿದುಕೊಂಡರೆ ಒಂದು ಪಾರದರ್ಶಕ ಗಾಜನ್ನು ಹಿಡಿದ ಅನುಭವ ನಿಮಗೆ ಆಗಲಿದೆ.!! ಹಾಗಾದರೆ, ಈ ತಂತ್ರಜ್ಞಾನ ಹೇಗೆ ಅಭಿವೃದ್ದಿಯಾಗುತ್ತಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

 ಪಾರದರ್ಶಕ ಸ್ಮಾರ್ಟ್‌ಫೋನ್‌?

ಪಾರದರ್ಶಕ ಸ್ಮಾರ್ಟ್‌ಫೋನ್‌?

ತೈವಾನ್ ಮೂಲದ ಕಂಪೆನಿ ಪಾಲಿಟ್ರಾನ್ ಟೆಕ್ನಾಲಜೀಸ್, ಪ್ರಪಂಚದ ಮೊದಲ ಪಾರದರ್ಶಕ ಸ್ಮಾರ್ಟ್ಫೋನ್ ಎಂದು ಭಾವಿಸುವಂತಹ ಮೂಲ ಮಾದರಿ ಸ್ಮಾರ್ಟ್‌ರೂಪವನ್ನು ಹೊಂದಿರುವ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು, ಈ ಉತ್ಪನ್ನ ಪಾರದರ್ಶಕ ಸ್ಮಾರ್ಟ್‌ಫೋನ್‌ ಉತ್ಪಾದನೆಯ ಆರಂಭಿಕ ಹಂತಗಳಲ್ಲಿ ಉಳಿದಿದೆ ಎನ್ನಲಾಗಿದೆ.!!

ಪಾಲಿವಿಷನ್ ಪ್ರೈವೆಸಿ ಗ್ಲಾಸ್ !!

ಪಾಲಿವಿಷನ್ ಪ್ರೈವೆಸಿ ಗ್ಲಾಸ್ !!

ಈ ಸ್ಮಾರ್ಟ್‌ಫೋನ್ ಉತ್ಪನ್ನವನ್ನು ಪಾಲಿವಿಷನ್ ಪ್ರೈವೆಸಿ ಗ್ಲಾಸ್ ಮೂಲಕ ತಯಾರಿಸಲಾಗಿದ್ದು, ವಿಧ್ಯುತ್ ಹರಿದಾಗ ಈ ಡಿಸ್‌ಪ್ಲೇ ಪೂರ್ಣ ಪಾರದರ್ಶಕವಾಗಿ ಕಾಣಿಸಲಿದೆ. ಪಾಲಿಟ್ರಾನ್ ವೆಬ್‌ಸೈಟ್ ಪ್ರಕಾರ, "ದ್ರವ ಸ್ಫಟಿಕ ಅಣುಗಳು ಮೂಲಕ ಬೆಳಕು ಹಾದುಹೋಗುವುದರಿಂದ ಪಾಲಿವಿಷನ್ ಗ್ಲಾಸ್ ಸ್ಪಷ್ಟವಾಗಿ ಕಾಣಿಸುತ್ತದೆ" ಎಂದು ಹೇಳಿದೆ.!!

ಎರಡೂ ಕಡೆ ಟಚ್‌ಸ್ಕ್ರೀನ್?

ಎರಡೂ ಕಡೆ ಟಚ್‌ಸ್ಕ್ರೀನ್?

ಪಾಲಿಟ್ರಾನ್ ಟೆಕ್ನಾಲಜೀಸ್ ಅಭಿವೃಧ್ದಿಪಡಿಸುತ್ತಿರುವ ಈ ಡಿವೈಸ್ ದ್ವಿಮುಖ-ಮಲ್ಟಿ-ಟಚ್ ಡಿಸ್ಪ್ಲೇನೊಂದಿಗೆ ಕಾರ್ಯಾಚರಣಾ ವ್ಯವಸ್ಥೆಯನ್ನು ಪ್ರಸ್ತುತಪಡಿಸಲಿದೆ. ಮತ್ತು ಪಾಲಿಟ್ರಾನ್ ಸಂಪೂರ್ಣ ಕಾರ್ಯನಿರ್ವಹಣೆಯ ಪಾರದರ್ಶಕ ಸ್ಮಾರ್ಟ್‌ಫೋನ್ ಉತ್ಪಾದನೆ ಗುರಿಯನ್ನು ಹೊಂದಲಾಗಿದೆ ಎಂದು ಮೊಬೈಲ್ ಗೀಕ್ಸ್ ವರದಿ ಮಾಡಿದೆ.

ಸಿಮ್ ಕಾರ್ಡ್, ಬ್ಯಾಟರಿಗಳೆಲ್ಲ ಕಾಣಿಸುತ್ತವೆ.!!

ಸಿಮ್ ಕಾರ್ಡ್, ಬ್ಯಾಟರಿಗಳೆಲ್ಲ ಕಾಣಿಸುತ್ತವೆ.!!

ಈ ಸ್ಮಾರ್ಟ್‌ಫೋನ್ ವಿನ್ಯಾಸ ಪಾರದರ್ಶಕವಾಗಿದ್ದು, ಸಿಮ್ ಕಾರ್ಡ್, ಬ್ಯಾಟರಿ ಮತ್ತು ಮೆಮೊರಿಕಾರ್ಡ್‌ಗಳೆಲ್ಲ ಮೊಬೈಲ್ ಮೇಲಿನಿಂದಲೇ ಗೋಚರಿಸುತ್ತವೆ.! ಏಕೆಂದರೆ ಸಿಮ್ ಕಾರ್ಡ್, ಬ್ಯಾಟರಿ ಮತ್ತು ಮೆಮೊರಿಕಾರ್ಡ್‌ಗಳೆಲ್ಲವನ್ನು ಪಾರದರ್ಶಕವಾಗಿ ರೂಪಿಸಲು ಇನ್ನೇಷ್ಟು ವರ್ಷಗಳು ಬೇಕಾಬಹುದೊ ಅಥವಾ ಆಗದಿರಬಹುದು.!!

ಮೊಬೈಲ್ ಕಂಪೆನಿಗಳು ಆಸಕ್ತಿ ತೋರಿಸಿವೆ.!!

ಮೊಬೈಲ್ ಕಂಪೆನಿಗಳು ಆಸಕ್ತಿ ತೋರಿಸಿವೆ.!!

ಪಾಲಿಟ್ರಾನ್ ಟೆಕ್ನಾಲಜೀಸ್ ಹೊಂದಿರುವ ಈ ತಂತ್ರಜ್ಞಾನದ ಬಳಕೆಗೆ ಎಲ್ಲಾ ಹ್ಯಾಂಡ್ಸೆಟ್ ತಯಾರಕರು ನಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದಾರೆ, ನಮ್ಮ ತಂತ್ರಜ್ಞಾನವು ಪ್ರಬುದ್ಧವಾಗಿದೆ" ಎಂದು ಪಾಲಿಟ್ರಾನ್ ಜನರಲ್ ಮ್ಯಾನೇಜರ್ ಸ್ಯಾಮ್ ಯು, ಮ್ಯಾಕ್ವರ್ಲ್ಡ್ ಹೇಳಿದ್ದಾರೆ.!!

Best Mobiles in India

English summary
If Polytron Technologies has its way, you'll barely be able to see your next smartphone..to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+