Home
Gadgets

Portronics Iron Beats 5 Prime ಲಾಂಚ್: 250W ಪವರ್‌ನ ಪಾರ್ಟಿ ಸ್ಪೀಕರ್!

ಜನಪ್ರಿಯ ಟೆಕ್ ಬ್ರ್ಯಾಂಡ್ ಪೋರ್ಟ್ರೋನಿಕ್ಸ್ (Portronics) ಭಾರತದಲ್ಲಿ ತನ್ನ ಹೊಸ Iron Beats 5 Prime ವೈರ್‌ಲೆಸ್ ಪಾರ್ಟಿ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಮನೆ ಪಾರ್ಟಿಗಳು ಮತ್ತು ಔಟ್‌ಡೋರ್ ಮನರಂಜನೆಗಾಗಿ ವಿನ್ಯಾಸಗೊಳಿಸಲಾದ ಈ ಸ್ಪೀಕರ್, ಒಂದೇ ಸಾಧನದಲ್ಲಿ ಸಂಪೂರ್ಣ ಪಾರ್ಟಿ ಅನುಭವವನ್ನು ನೀಡುವ ಉದ್ದೇಶ ಹೊಂದಿದೆ. 250W ಶಕ್ತಿಯ ಔಟ್‌ಪುಟ್, ಜೋರಾದ ಸೌಂಡ್, ಗಟ್ಟಿಯಾದ ಬಾಸ್ ಮತ್ತು ಕರೋಕೆ ಸಪೋರ್ಟ್‌ನೊಂದಿಗೆ, ಪ್ರತ್ಯೇಕ ಸ್ಪೀಕರ್ ಸೆಟ್‌ಅಪ್ ಅಗತ್ಯವಿಲ್ಲದೆ ಎಲ್ಲವೂ ಒಂದೇ ಬಾಕ್ಸ್‌ನಲ್ಲಿ ಬೇಕೆನ್ನುವ ಬಳಕೆದಾರರನ್ನು ಈ ಸ್ಪೀಕರ್ ಗುರಿಯಾಗಿಸಿಕೊಂಡಿದೆ.

Portronics Iron Beats 5 Prime: ಬೆಲೆ ಮತ್ತು ಲಭ್ಯತೆ
ಹೊಸ Portronics Iron Beats 5 Prime: ಪಾರ್ಟಿ ಸ್ಪೀಕರ್ ಅನ್ನು ಪರಿಚಯಾತ್ಮಕ ಆಫರ್ ಅಡಿಯಲ್ಲಿ ₹13,999 ದರಕ್ಕೆ ಬಿಡುಗಡೆ ಮಾಡಲಾಗಿದೆ. ಏಕೈಕ ಕಪ್ಪು ಬಣ್ಣದಲ್ಲಿ ಲಭ್ಯವಿರುವ ಈ ಸಾಧನವು 12 ತಿಂಗಳ ವಾರಂಟಿ ಜೊತೆಗೆ ದೊರೆಯುತ್ತದೆ ಎಂದು ಕಂಪೆನಿಯು ತಿಳಿಸಿದ್ದು, ಅಧಿಕೃತ Portronics ವೆಬ್‌ಸೈಟ್, ಪ್ರಮುಖ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ದೇಶಾದ್ಯಂತದ ಆಫ್‌ಲೈನ್ ಎಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ಈ ಸಾಧನವು ಮಾರಾಟಕ್ಕೆ ಬಂದಿದೆ

250W ಪವರ್ ಮತ್ತು ಬಾಸ್ ಫೋಕಸ್ ಸೌಂಡ್
ಹೊಸ Iron Beats 5 Prime ನಲ್ಲಿ ಡ್ಯುಯಲ್ 8-ಇಂಚಿನ ಸಬ್‌ವೂಫರ್‌ಗಳೊಂದಿಗೆ 250W ಔಟ್‌ಪುಟ್ ನೀಡಲಾಗಿದ್ದು, ಕಂಪನಿಯ Bass Boost ತಂತ್ರಜ್ಞಾನದಿಂದ ಭಾರೀ ಬಾಸ್ ಅನುಭವ ಸಿಗುತ್ತದೆ. ಹಾಡುಗಳಷ್ಟೇ ಅಲ್ಲದೆ ಮಾತಿನ ಧ್ವನಿಗೂ ಸ್ಪಷ್ಟತೆ ನೀಡಲು ವಿಶೇಷ ವೋಕಲ್ ಟ್ಯೂನಿಂಗ್ ಮಾಡಲಾಗಿದೆ. ಇದರಿಂದ ಸಂಗೀತ ಮತ್ತು ಕರೋಕೆ ಎರಡಕ್ಕೂ ಸಮತೋಲನದ ಸೌಂಡ್ ಸಿಗುತ್ತದೆ ಎಂದು Portronics ಹೇಳಿಕೊಂಡಿದೆ. ಈ ಸ್ಪೀಕರ್‌ನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಒಳಗೊಂಡಿರುವ ವೈರ್‌ಲೆಸ್ UHF ಕರೋಕೆ ಮೈಕ್ರೊಫೋನ್. Echo Control ಫೀಚರ್ ಮೂಲಕ ಮೈಕ್ರೊಫೋನ್ ಧ್ವನಿಯನ್ನು ಬೇಕಾದಂತೆ ಹೊಂದಿಸಿಕೊಳ್ಳಬಹುದು. ಇದರಿಂದ ಪ್ರತ್ಯೇಕ ಮೈಕ್ ಅಥವಾ ಹೆಚ್ಚುವರಿ ಆಕ್ಸೆಸರಿಗಳ ಅಗತ್ಯವಿಲ್ಲದೆ ಮನೆಯಲ್ಲೇ ಕರೋಕೆ ಸೆಷನ್ ನಡೆಸಬಹುದು ಎಂದು ಕಂಪೆನಿಯು ತಿಳಿಸಿದೆ.

Portronics Iron Beats 5 Prime ಲಾಂಚ್: 250W ಪವರ್‌ನ ಪಾರ್ಟಿ ಸ್ಪೀಕರ್!

ಬ್ಯಾಟರಿ ಬ್ಯಾಕ್‌ಅಪ್ ಮತ್ತು ಕನೆಕ್ಟಿವಿಟಿ ಆಯ್ಕೆಗಳು.
8,000mAh ಬ್ಯಾಟರಿಯೊಂದಿಗೆ ಈ ಸ್ಪೀಕರ್ ಒಂದು ಚಾರ್ಜ್‌ನಲ್ಲಿ ಸುಮಾರು 6 ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ. ಒಳಗೊಳ್ಳಿಸಲಾದ ಹ್ಯಾಂಡಲ್ ಮತ್ತು ಸ್ಮೂತ್ ವೀಲ್‌ಗಳ ಕಾರಣದಿಂದ ಔಟ್‌ಡೋರ್ ಪಾರ್ಟಿ ಅಥವಾ ಟ್ರಿಪ್‌ಗಳಿಗೆ ಇದನ್ನು ಸುಲಭವಾಗಿ ಒಯ್ಯಬಹುದು. ಈ ಸಾಧನವುBluetooth 5.3 ಸಪೋರ್ಟ್‌ನೊಂದಿಗೆ Iron Beats 5 Prime ವೇಗವಾದ ಮತ್ತು ಸ್ಥಿರ ವೈರ್‌ಲೆಸ್ ಕನೆಕ್ಷನ್ ಒದಗಿಸುತ್ತದೆ. ಜೊತೆಗೆ USB, Aux-In ಮತ್ತು ಗಿಟಾರ್‌ಗಾಗಿ ವಿಶೇಷ ಇನ್‌ಪುಟ್‌ಗಳೂ ಲಭ್ಯ. TWS ಮೋಡ್ ಬಳಸಿ ಎರಡು Iron Beats 5 Prime ಸ್ಪೀಕರ್‌ಗಳನ್ನು ಜೋಡಿಸಿ ದೊಡ್ಡ ಜಾಗದಲ್ಲಿ ಇನ್ನಷ್ಟು ಶಕ್ತಿಯುತ ಸ್ಟೀರಿಯೋ ಸೌಂಡ್ ಪಡೆಯಬಹುದು.ನವೀಕರಿಸಿದ RGB ಲೈಟಿಂಗ್ ಸೆಟ್‌ಅಪ್‌ನಲ್ಲಿ LED ಸ್ಟ್ರಿಪ್ ಮತ್ತು Smiley Dynamic RGB ಲೈಟ್‌ಗಳು ಇದ್ದು, ಸಂಗೀತದ ರಿದಮ್‌ಗೆ ತಕ್ಕಂತೆ ಲೈಟ್‌ಗಳು ಮೂಡಿಬರುತ್ತವೆ.

ಒಟ್ಟಾರೆಯಾಗಿ, Portronics Iron Beats 5 Prime ತನ್ನ ಬೆಲೆ ವಿಭಾಗದಲ್ಲಿ ಹೆಚ್ಚು ಪವರ್, ಕರೋಕೆ ಸಪೋರ್ಟ್ ಮತ್ತು ಪೋರ್ಟಬಿಲಿಟಿಯನ್ನು ಒಟ್ಟಿಗೆ ನೀಡುವ ಸ್ಪೀಕರ್ ಆಗಿದೆ.ಈ ವಿಭಾಗದಲ್ಲಿ ಹೆಚ್ಚು ಗಮನಸೆಳೆದಿರುವ ಇತರೆ ಮಾದರಿಗಳಿಗೆ ಹೋಲಿಸಿದರೆ Portronics Iron Beats 5 Prime ಕಡಿಮೆ ದರದಲ್ಲಿ ಹೆಚ್ಚಿನ ಔಟ್‌ಪುಟ್ ನೀಡುತ್ತಿದದ್ದು, ಮನೆ ಪಾರ್ಟಿ ಪ್ರಿಯರಿಗೆ ಇದು ಗಮನಾರ್ಹ ಆಯ್ಕೆಯಾಗಿ ಕಾಣಿಸುತ್ತದೆ. ಆದರೆ, ಖರೀದಿಗೂ ಮುನ್ನ ಈ ಸ್ಫಿಕರ್‌ಗಳ ಕುರಿತಂತೆ ಸಂಪೂರ್ಣ ವಿಮರ್ಶೆಗಳನ್ನು ಚೆಕ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Portronics has launched the Iron Beats 5 Prime wireless party speaker in India, featuring a powerful 250W output, deep bass, and built-in karaoke support. Designed as an all-in-one solution, it delivers loud, immersive sound for home parties and outdoor entertainment without extra equipment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+