ಯಾವ ಪ್ರೊಸೆಸರ್?, ಎಷ್ಟು ರ್ಯಾಮ್? ಇರುವ ಸ್ಮಾರ್ಟ್‌ಪೋನ್ ಖರೀದಿಸಬೇಕು?!
ಮೊದಲಿನಂತೆ ಒಳ್ಳೆಯ ಮೊಬೈಲ್ ಕಂಪೆನಿ ನಂಬಿ ಸ್ಮಾರ್ಟ್‌ಪೋನ್ ಖರೀದಿಸಿಸುವ ಕಾಲ ಹೋಯಿತು. ಈಗೇನಿದ್ದರೂ, ಯಾವ ಸ್ಮಾರ್ಟ್‌ಫೋನ್ ಇತ್ತೀಚಿಗೆ ಬಿಡುಗಡೆಯಾಗಿದೆ?, ಆ ಸ್ಮಾರ್ಟ್‌ಫೋನ್ ಎಷ್ಟು ಫೀಚರ್ಸ್ ಹೊಂದಿದೆ?, ಆ ಸ್ಮಾರ್ಟ್‌ಪೋನಿನಲ್ಲಿರುವ ಪ್ರೊಸೆಸರ್ ಯಾವುದು?, ಅದರಲ್ಲಿ ಎಷ್ಟು ರ್ಯಾಮ್ ಅನ್ನು ನೀಡಲಾಗಿದೆ ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ.
ಆದರೆ, ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುವ ಬಹುತೇಕರಿಗೆ ಸ್ಮಾರ್ಟ್‌ಪೋನಿನಲ್ಲಿರುವ ಪ್ರೊಸೆಸರ್ ಮತ್ತು ರ್ಯಾಮ್‌ಗಳು ಫೋನ್ ಖರೀದಿಗೆ ಏಕೆ ಮುಖ್ಯವಾಗಿರುತ್ತವೆ ಎಂಬುದು ತಿಳಿದಿರುವುದಿಲ್ಲ. ಅತ್ಯುತ್ತಮ ಪ್ರೊಸೆಸರ್ ಯಾವುದು? ಆ ಪ್ರೊಸೆಸರ್ ಬಳಸಿರುವ ಪೋನ್‌ಗಳು ಯಾವುವು ಮತ್ತು ಅವುಗಳ ಬೆಲೆ ವ್ಯತ್ಯಾಸವೇಕಿರುತ್ತದೆ ಎಂಬುದು ತಿಳಿದಿರುವುದಿಲ್ಲ.

ಹಾಗಾಗಿ, ಇಂದಿನ ಲೇಖನದಲ್ಲಿ ಒಂದು ಸ್ಮಾರ್ಟ್‌ಫೋನ್ ಖರಿದಿಸುವ ಮುನ್ನ, ಸ್ಮಾರ್ಟ್‌ಪೋನಿನಲ್ಲಿರುವ ಪ್ರೊಸೆಸರ್ ಮತ್ತು ರ್ಯಾಮ್ ಅಂದ್ರೆ ಏನು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ. ಯಾವ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಪೋನ್ ಮತ್ತು ಎಷ್ಟು ರ್ಯಾಮ್ ಹೊಂದಿರುವ ಸ್ಮಾರ್ಟ್‌ಪೋನ್ ಅನ್ನು ಖರೀದಿಸಬೇಕು ಎಂಬುದರ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ಪ್ರೊಸೆಸರ್ ಎಂದರೇನು?
ಪ್ರೊಸೆಸರ್ ಅನ್ನು ಒಂದು ಮೊಬೈಲ್‌ನ ಮೆದುಳು ಅಥವಾ ಹೃದಯವೆಂದು ಕರೆಯಲಾಗಿದೆ. ಬೈಕ್ ಸ್ಕೂಟರ್‌ಗಳಲ್ಲಿ ಇಂಜಿನ್ ಹೇಗೋ ಹಾಗೆ ಮೊಬೈಲ್ ಫೋನ್‌ಗಳಲ್ಲಿ ಪ್ರೊಸೆಸರ್ ಇಂಜಿನ್ ಆಗಿರುತ್ತದೆ. ಇವುಗಶ ಶಕ್ತಿಯ ಆಧಾರದ ಮೇಲೆ ಆರಂಭಿಕ ದರ್ಜೆ, ಮಧ್ಯಮ ದರ್ಜೆ ಹಾಗೂ ಅತ್ಯುನ್ನತ ದರ್ಜೆಯ ಪ್ರೊಸೆಸರ್ ಎಂದು ವಿಂಗಡಿಸಲಾಗಿದೆ.

ಯಾವ ಪ್ರೊಸೆಸರ್ ಉತ್ತಮ?
ತಂತ್ರಜ್ಞಾನ ಬೆಳವಣಿಗೆಯಾದಂತೆ ಇತ್ತೀಚಿಗೆ ಬಿಡುಗಡೆಯಾಗಿರುವ ಅತ್ಯುನ್ನತ ದರ್ಜೆಯ ಪ್ರೊಸೆಸರ್‌ಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್‌ಗಳು ಉತ್ತಮ.ಈ ಪ್ರೊಸೆಸರ್‌ಗಳ ಮೊಬೈಲ್‌ಗಳು ಬಹಳ ವೇಗವಾಗಿದ್ದು, ಗೇಮ್‌ಗಳನ್ನು ಆರಾಮವಾಗಿ ಆಡಲು ಸಹಕರಿಸುತ್ತವೆ. ಆರಂಭಿಕ ದರ್ಜೆಯ ಪ್ರೊಸೆಸರ್‌ಗಳಲ್ಲಿ ಗೇಮ್‌ಗಳು ಸುಲಲಿತವಾಗಿರುವುದಿಲ್ಲ.

ಉತ್ತಮ ಪ್ರೊಸೆಸರ್‌ಗಳು ಯಾವುವು?
ಆರಂಭಿಕ ದರ್ಜೆಯ ಪ್ರೊಸೆಸರ್‌ಗಳ ಬೆಲೆ 5 ರಿಂದ 10 ಸಾವಿರ ರೂ.ಮೊಬೈಲ್‌ಗಳಲ್ಲಿ ಕಾಣಬಹುದಾದರೆ, .12 ರಿಂದ 35 ಸಾವಿರದವರೆಗೆ ಮಧ್ಯಮ ದರ್ಜೆಯ, ರೂ.35 ಸಾವಿರದ ನಂತರ ಅತ್ಯುನ್ನತ ದರ್ಜೆಯ ಪ್ರೊಸೆಸರ್ ಸ್ಮಾರ್ಟ್‌ಫೋನ್‌ಗಳು ಇರುತ್ತವೆ. ಮಧ್ಯಮ ದರ್ಜೆಯ ಪ್ರೊಸೆಸರ್‌ಗಳು ಸಹ ಈಗ ಸಾಕಷ್ಟು ವೇಗ, ಅಡೆತಡೆಯಿಲ್ಲದ ಗೇಮ್‌ಗಳಿಗೆ ಸಹಾಯಕವಾಗಿರುತ್ತವೆ.

ಮೊಬೈಲ್ ಗುಣಮಟ್ಟ ಕೂಡ ಮುಖ್ಯ!
30-35 ಸಾವಿರ ರೂ.ಗಳಿಗೇ ಒನ್‌ಪ್ಲಸ್, ಹಾನರ್, ಶಿಯೋಮಿ, ಆಸುಸ್ ಕಂಪೆನಿಗಳು ಅತ್ಯುನ್ನತ ದರ್ಜೆಯ ಪ್ರೊಸೆಸರ್ ನೀಡಿದರೆ, ಸ್ಯಾಮ್‌ಸಂಗ್ 60-70 ಸಾವಿರ ರೂ.ಗಳ ಫೋನ್‌ಗಳಲ್ಲಿ ಇಂಥ ಪ್ರೊಸೆಸರ್ ಬಳಸುತ್ತದೆ. ಡಿಸ್‌ಪ್ಲೇ, ಮೊಬೈಲ್ ಬಾಡಿ, ಕ್ಯಾಮೆರಾ, ಬ್ರ್ಯಾಂಡ್, ಸಾಫ್ಟ್‌ವೆರ್ ಎಲ್ಲವೂ ಮುಖ್ಯವಾಗಿರುವ ಸಂದರ್ಭದಲ್ಲಿ ಮೊಬೈಲ್ ಬೆಲೆಯೂ ಏರಿಕೆಯಾಗುತ್ತದೆ.

ರ್ಯಾಮ್ ಅಂದರೆ ಏನು?
ರ್ಯಾಮ್ ಅಂದರೇನು? ಎಂಬ ಕುತೂಹಲ ಹಲವರಲ್ಲಿರುತ್ತದೆ. ರ್ಯಾಮ್ ಎಂಬುದು ತಾತ್ಕಾಲಿಕ ಸಂಗ್ರಹಣಾ ವ್ಯವಸ್ಥೆಯಾಗಿದ್ದು, ನೀವು ಹುಡುಕಾಡಿದ ಮಾಹಿತಿ, ನಡೆಸಿದ ವ್ಯವಹಾರವೆಲ್ಲವನ್ನೂ ತಾತ್ಕಾಲಿಕವಾಗಿ ಶೇಖರಿಸಿಕೊಳ್ಳುತ್ತದೆ. ನೀವು ತೆರೆದ ಈ ತಾತ್ಕಾಲಿಕ ಮೆಮೊರಿಯನ್ನು ರಿಯಲ್ ಟೈಮ್‌ನಲ್ಲಿ ಬಳಕೆದಾರರು ಅಳಿಸಬಹುದಾಗಿದೆ.

ಎಷ್ಟು ರ್ಯಾಮ್ ಮೊಬೈಲ್ ಬೇಕು?
ಮೊಬೈಲ್‌ಗಳಲ್ಲಿ 3 ಜಿಬಿ ರ್ಯಾಮ್, 4 ಜಿಬಿ ರ್ಯಾಮ್ ಅಂತ ನೋಡುತ್ತೇವೆ. ತಾತ್ಕಾಲಿಕ ಮೆಮೊರಿ ಸಂಗ್ರಹಕ್ಕೆ ರ್ಯಾಮ್ ಜಾಸ್ತಿ ಇದ್ದಷ್ಟೂ ಅನುಕೂಲ. ಇದು ಹೆಚ್ಚಿದ್ದರೆ ಫೋನ್ ಹ್ಯಾಂಗ್ ಆಗುವುದಿಲ್ಲ. ಇಂದು 4 ಜಿಬಿ ರ್ಯಾಮ್ ಇರುವ ಮೊಬೈಲ್ ಆದರೆ ಸಾಕು. ಅದಕ್ಕೂ ಹೆಚ್ಚೆಂದರೆ 6 ಜಿಬಿ ರ್ಯಾಮ್ ಸ್ಮಾರ್ಟ್‌ಫೋನ್ ನಮ್ಮೆಲ್ಲಾ ಬೇಡಿಕೆಗಳನ್ನು ಪೂರೈಸುತ್ತದೆ.


Click it and Unblock the Notifications








