ಎಂಐ.ಕಾಮ್ ನಲ್ಲಿ ಖರೀದಿಸಿ ಮತ್ತು ಗೂಗಲ್ ಪೇ ರಿವಾರ್ಡ್ಸ್ ಪಡೆಯಿರಿ
ಗೂಗಲ್ ತೇಝ್ ಸೆಪ್ಟೆಂಬರ್ 2017 ರಲ್ಲಿ ಬಿಡುಗಡೆಗೊಂಡಿರುವ ಆಪ್ ಮತ್ತು ಎಲ್ಲರೂ ಇದನ್ನು ಇದನ್ನು ಗೂಗಲ್ ಪೇ ಎಂದು ಗುರುತಿಸುವ ಆಪ್. ಆಪ್ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಹಲವರ ಜೊತೆಗೆ ಕೈಜೋಡಿಸಿದೆ ಮತ್ತು ವಿಭಿನ್ನ ಆಫರ್ ಮತ್ತು ರಿವಾರ್ಡ್ ಗಳನ್ನು ತನ್ನ ಗ್ರಾಹಕರಿಗೆ ನೀಡಿದೆ.
ಅಂತಹ ಒಂದು ಪಾಟ್ನರ್ ಎಂದರೆ ಅದು ಶಿಯೋಮಿ. ಯಾವ ಗ್ರಾಹಕರು ಎಂಐ ಸ್ಟೋರ್ ಆಪ್ ಮತ್ತು ಎಂಐ.ಕಾಮ್ ಮೂಲಕ ಶುಕ್ರವಾರ ಖರೀದಿಸುತ್ತಾರೋ ಅವರಿಗೆ ಗೂಗಲ್ ಪೇ ರಿವಾರ್ಡ್ ಗಳನ್ನು ನೀಡುತ್ತದೆ.

ಆದರೆ ಇದೀಗ ಗೂಗಲ್ ಆಪ್ ತನ್ನ ಆಫರ್ ನ್ನು ಮರುಪರಿಶಿಲನೆ ಮಾಡಿದೆ. ವಾರಕ್ಕೆ ಮೂರು ದಿನ ಇದೀಗ ಎಂಐ.ಕಾಮ್ ಅಥವಾ ಎಂಐ ಸ್ಟೋರ್ ಆಪ್ ನಲ್ಲಿ ಖರೀದಿಸಿದ ಗ್ರಾಹಕರಿಗೆ ಗೂಗಲ್ ಪೇ ರಿವಾರ್ಡ್ ಗಳು ಗೂಗಲ್ ಪೇ ಮೂಲಕ ಪಾವತಿ ಮಾಡಿದರೆ ಲಭ್ಯವಾಗುತ್ತದೆ. ಗೂಗಲ್ ಪೇ ಆಫರ್ ಗಳು ಹೇಗಿದೆ ಈ ಕೆಳಗೆ ಓದಿ.
ಇತ್ತೀಚೆಗೆ ನಾವು ನಿಮಗೆ ಗೂಗಲ್ ಡುಯೋ ಮೂಲಕ ವೀಡಿಯೋ ಕರೆಗಳನ್ನು ಮಾಡಿ ಗೂಗಲ್ ಫೈಲ್ಸ್ ಆಪ್ ಗಳ ಮೂಲಕ ಗೂಗಲ್ ಪೇ ರಿವಾರ್ಡ್ಸ್ ಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿದ್ದೆವು. ಇದೀಗ ಶಿಯೋಮಿ ಖರೀದಿಯ ಮೂಲಕ ರಿವಾರ್ಡ್ಸ್ ಗಳನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಮುಂದೆ ಓದಿ.
ಶಿಯೋಮಿ ಮೂಲಕ ಗೂಗಲ್ ಪೇ ರಿವಾರ್ಡ್ಸ್ ಗಳನ್ನು ಪಡೆದುಕೊಳ್ಳುವುದು ಹೇಗೆ?
ರಿವಾರ್ಡ್ಸ್ ಗಳನ್ನು ಪಡೆದುಕೊಳ್ಳುವುದಕ್ಕಾಗಿ, ನೀವು ಎಂಐ.ಕಾಮ್ ವೆಬ್ ಸೈಟ್ ಗೆ ಅಥವಾ ಎಂಐ ಸ್ಟೋರ್ ಆಪ್ ಗೆ ತೆರಳಬೇಕು. ಒಂದೇ ಟ್ರಾನ್ಸ್ಯಾಕ್ಷನ್ ನಲ್ಲಿ ನೀವು 5000 ರುಪಾಯಿ ಬೆಲೆಬಾಳುವ ಖರೀದಿಯನ್ನು ಮಾಡಬೇಕು. ಯಾವಾಗ ಅದು ಪೇಮೆಂಟ್ ಆಯ್ಕೆಯನ್ನು ಕೇಳುತ್ತದೆಯೋ ಆಗ ನೀವು ನಿಮ್ಮ ಗೂಗಲ್ ಪೇ ಯುಪಿಐ ಐಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಇತರೆ ಯಾವುದೇ ಪೇಮೆಂಟ್ ಆಯ್ಕೆಯನ್ನು ಮಾಡುವಂತಿಲ್ಲ.
ಆದರೆ ಒಂದು ಅಂಶ ನೀವು ಚೆನ್ನಾಗಿ ನೆನಪಿಡಬೇಕು. ಬುಧವಾರ, ಗುರುವಾರ ಮತ್ತು ಶುಕ್ರವಾರದ ದಿನ ಮಾಡುವ ಟ್ರಾನ್ಸ್ಯಾಕ್ಷನ್ ಗಳಿಗೆ ಮಾತ್ರವೇ ಕಂಪೆನಿ ಆಫರ್ ನ್ನು ನೀಡುತ್ತದೆ. ಅಷ್ಟೇ ಅಲ್ಲ ಕ್ಯಾನ್ಸಲ್ ಮಾಡಿರುವ, ರೀಫಂಡ್ ಅಥವಾ ಪ್ರೊಸೆಸ್ ಆಗಿರದ ಯಾವುದೇ ಆರ್ಡರ್ ಕೂಡ ರಿವಾರ್ಡ್ಸ್ ಗಳು ಲಭ್ಯವಾಗುವುದಿಲ್ಲ. ಒಂದು ವೇಳೆ ಅನರ್ಹವಾಗಿರುವ ಟ್ರಾನ್ಸ್ಶ್ಯಾಕ್ಷನ್ ಗೆ ನೀವು ಸ್ಕ್ರಾಚ್ ಕಾರ್ಡ್ ಗಳನ್ನು ಪಡೆದಿದ್ದರೆ ಅದನ್ನು ಗೂಗಲ್ ಪೇ ಅಕೌಂಟ್ ನಿಂದ ರಿಮೂವ್ ಮಾಡಲಾಗುತ್ತದೆ.
ಒಂದು ವೇಳೆ ನೀವು ಸ್ಕ್ರ್ಯಾಚ್ ಕಾರ್ಡ್ ಗಳನ್ನು ಎಂಐ.ಕಾಮ್ ಅಥವಾ ಎಂಐ ಸ್ಟೋರ್ ಖರೀದಿಯಲ್ಲಿ ಪಡೆದಿದ್ದರೆ ಅದರ ಮೊತ್ತವನ್ನು ನಿಮ್ಮ ಯಶಸ್ವಿ ಟ್ರಾನ್ಸ್ಯಾಕ್ಷನ್ ನಡೆದ 6 ರಿಂದ 8 ದಿನಗಳ ಅವಧಿಯಲ್ಲಿ ಪಡೆಯಬಹುದು.ಒಂದು ತಿಂಗಳಲ್ಲಿ ಒಮ್ಮೆ ಮಾತ್ರ ಶಿಯೋಮಿ ಗೂಗಲ್ ಪೇ ಆಫರ್ ರಿವಾರ್ಡ್ಸ್ ಗಳನ್ನು ಪಡೆಯುವುದಕ್ಕೆ ಅವಕಾಶವಿರುತ್ತದೆ ಮತ್ತು ಪ್ರತಿ ರಿವಾರ್ಡ್ 100 ರಿಂದ 500 ರುಪಾಯಿವರೆಗಿನ ಮೊತ್ತವನ್ನು ಹೊಂದಿರುತ್ತದೆ.
ಒಂದು ವೇಳೆ ನೀವು ರಿವಾರ್ಡ್ ಗಳನ್ನು ಪಡೆದಿದ್ದರೆ, ನೇರವಾಗಿ ಆ ಮೊತ್ತವು ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ. ಇದು ಸಾಧ್ಯವಾಗುವುದು ನೀವು ನಿಮ್ಮ ಗೂಗಲ್ ಪೇ ಅಕೌಂಟ್ ನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಲಿಂಕ್ ಮಾಡಿದ್ದಾಗ ಮಾತ್ರವೇ ಸಾಧ್ಯವಾಗುತ್ತದೆ. ಆದರೆ ಈ ಆಫರ್ ತಮಿಳುನಾಡು ಪ್ರಾಂತ್ಯದವರಿಗೆ ಲಭ್ಯವಾಗುವುದಿಲ್ಲ.


Click it and Unblock the Notifications








