ಬುಹುನಿರೀಕ್ಷಿತ Realme Buds Air 7 TWS ಇಯರ್‌ಬಡ್ಸ್ ಬಿಡುಗಡೆ!
ರಿಯಲ್‌ಮಿ ಕಂಪೆನಿಯ ಜನಪ್ರಿಯ 'Realme Buds Air' ಆಡಿಯೊ ಗ್ಯಾಜೆಟ್ ಸರಣಿಗೆ ಮತ್ತೊಂದು ಸಾಧನ ಸೇರ್ಪಡೆಯಾಗಿದೆ. ನಿಯೋ 7 SE ಮತ್ತು ನಿಯೋ 7x ಹ್ಯಾಂಡ್‌ಸೆಟ್‌ಗಳ ಜೊತೆಗೆ "Realme Buds Air 7 TWS ಇಯರ್‌ಬಡ್ಸ್ ಸಾಧನವನ್ನು ಬಿಡುಗಡೆ ಮಾಡಲಾಗಿದ್ದು, 52dB ವರೆಗಿನ ಸಕ್ರಿಯ ಶಬ್ದ ರದ್ದತಿ (ANC) ಬೆಂಬಲದೊಂದಿಗೆ ಒಟ್ಟು 52 ಗಂಟೆಗಳವರೆಗೆ ಬಳಕೆಯ ಸಮಯವನ್ನು ನೀಡುವ ಸಾಮರ್ಥ್ಯದಲ್ಲಿ ಈ ಹೊಸ ಸಾಧನ ಬಿಡುಗಡೆಯಾಗಿದೆ. ಹಾಗಾದರೆ, ಹೊಸ Realme Buds Air 7 TWS ಇಯರ್‌ಬಡ್ಸ್ ಸಾಧನ ಹೇಗಿದೆ?, ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Realme Buds Air 7 TWS ಸಾಧನದ ಪ್ರಮುಖ ವೈಶಿಷ್ಟ್ಯಗಳು:
ಈ Realme Buds Air 7 TWS ಇಯರ್‌ಬಡ್ಸ್ ಸಾಧನವು ಡಾನ್ ಗೋಲ್ಡ್, ಆರ್ಕಿಡ್ ಪರ್ಪಲ್ ಮತ್ತು ವರ್ಡೆಂಟ್ ಗ್ರೀನ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಮೊದಲೇ ಹೇಳಿದಂತೆ, ಈ ಸಾಧನವು 52dB ವರೆಗಿನ ಶಬ್ದ ರದ್ದತಿ (ANC) ಸಾಮರ್ಥ್ಯವನ್ನು ಹೊಂದಿದೆ. ಇದು ಹೊರಗಿನ ಶಬ್ದವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಮತ್ತು ಉತ್ತಮ ಗುಣಮಟ್ಟದ ಆಡಿಯೊ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. 12.4mm ಟೈಟಾನಿಯಂ-ಲೇಪಿತ ಡೈನಾಮಿಕ್ ಡ್ರೈವರ್‌ಗಳು, LHDC 5.0, SBC, AAC ಹಾಗೂ Hi-Res ಆಡಿಯೊ ಪ್ರಮಾಣೀಕರಣ ಮತ್ತು LHDC 5.0 ಆಡಿಯೊ ಕೊಡೆಕ್ ಬೆಂಬಲದೊಂದಿಗೆ ಉತ್ತಮ ಗುಣಮಟ್ಟದ ಆಡಿಯೊ ಅನುಭವ ದೊರೆಯುವುದು ಕೂಡ ಖಾತ್ರಿಯಾದಂತಿದೆ.

ಇತ್ತೀಚಿನ ಬ್ಲೂಟೂತ್: 5.4 ನಲ್ಲಿ ಕಾರ್ಯನಿರ್ವಹಿಸುವ ಈ Realme Buds Air 7 TWS ಇಯರ್‌ಬಡ್ಸ್ ಸಾಧನವು (62mAh) ಬ್ಯಾಟರಿ ಹಾಗೂ ಚಾರ್ಜಿಂಗ್ ಕೇಸ್‌ನೊಂದಿಗೆ (480mAh) ಒಟ್ಟಾರೆಯಾಗಿ ಸಂಪೂರ್ಣ 52 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ, ಮತ್ತು ANC ಸಕ್ರಿಯಗೊಳಿಸಿದಾಗ 30 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಸಾಮರ್ಥ್ಯದೊಂದಿಗೆ ಬಂದಿವೆ ಎಂದು ಕಂಪೆನಿ ತಿಳಿಸಿದೆ. ಜೊತೆಗೆ 3D ಸ್ಪೇಷಿಯಲ್ ಆಡಿಯೊ, 6-ಮೈಕ್ ಕರೆ ಶಬ್ದ ರದ್ದತಿ, ಬ್ಲೂಟೂತ್ 5.4, ಸ್ವಿಫ್ಟ್ ಪೇರ್, ಡ್ಯುಯಲ್ ಡಿವೈಸ್ ಕನೆಕ್ಟಿವಿಟಿ, 45ms ಕಡಿಮೆ ಲೇಟೆನ್ಸಿ, ಟಚ್ ಕಂಟ್ರೋಲ್ಸ್, ರಿಯಲ್‌ಮಿ ಲಿಂಕ್ ಅಪ್ಲಿಕೇಶನ್ ಬೆಂಬಲ, ಮತ್ತು IP55 ಧೂಳು ಮತ್ತು ನೀರಿನ ಪ್ರತಿರೋಧದಂತಹ ಇತ್ತೀಚಿನ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ.
Realme Buds Air 7 TWS ಸಾಧನದ ಬೆಲೆ ಎಷ್ಟು?
ಭಾರತದಲ್ಲಿ ಕಳೆದ Realme Buds Air 6 TWS ಇಯರ್‌ಬಡ್ಸ್ ಸಾಧನವನ್ನು ಮೇ 2024 ರಲ್ಲಿ ಪರಿಚಯಿಸಲಾಗಿತ್ತು. ಆದರೆ, ಈ ಹೊಸ Realme Buds Air 7 TWS ಇಯರ್‌ಬಡ್ಸ್ ಸಾಧನವನ್ನು ಇದೀಗ ಚೀನಾದಲ್ಲಿ ಮಾತ್ರ ಪರಿಚಯಿಸಲಾಗಿದ್ದು, ಅಲ್ಲಿ CNY 299 (ಸರಿಸುಮಾರು ರೂ. 3,600) ಬೆಲೆಯಲ್ಲಿ ಪರಿಚಯಿಸಲಾಗಿದೆ. ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ Realme Buds Air 7 TWS ಸಾಧನವು ಉತ್ತಮ ಗುಣಮಟ್ಟದ ಆಡಿಯೊ, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಶಬ್ದ ರದ್ದತಿ ವೈಶಿಷ್ಟ್ಯಗಳನ್ನು ಹುಡುಕುತ್ತಿರುವವರಿಗೆ ಅತ್ಯುತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ.


Click it and Unblock the Notifications








