Realme Buds Air 7 Pro: ಹೊಸ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಬಿಡುಗಡೆ!
ಭಾರತೀಯರ ನೆಚ್ಚಿನ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ Realme ತನ್ನ ಹೊಸ ತಂತ್ರಜ್ಞಾನ ಹೊಂದಿರುವ Realme Buds Air 7 Pro TWS ಇಯರ್‌ಬಡ್ಸ್‌ಗಳು ಮಂಗಳವಾರದಂದು ಭಾರತ ಮತ್ತು ಇತರ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ Realme GT 7 ಸರಣಿ ಫೋನ್‌ಗಳ ಜೊತೆಗೆ ಈ Realme Buds Air 7 Pro TWS ಇಯರ್‌ಬಡ್ಸ್‌ಗಳು ಸಹ ಪರಿಚಯಗೊಂಡಿದ್ದು, ಈ ಹೊಸ ಇಯರ್‌ಬಡ್ಸ್‌ಗಳು ಉನ್ನತ ಶಬ್ದ ಗುಣಮಟ್ಟ, ಶಬ್ದ ರದ್ದತಿ ತಂತ್ರಜ್ಞಾನ ಹಾಗೂ ನವೀನ AI ವೈಶಿಷ್ಟ್ಯಗಳೊಂದಿಗೆ ಬರಲಿದ್ದು, ಗಮನಸೆಳೆಯುವಂತಹ ವೈಶಿಷ್ಟ್ಯಗಳಿವೆ. ಹಾಗಾದರೆ, ಹೊಸ Realme Buds Air 7 Pro TWS ಇಯರ್‌ಬಡ್ಸ್‌ಗಳು ಹೇಗಿವೆ ಮತ್ತು ಈ ಸಾಧನದ ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Realme Buds Air 7 Pro TWS ಇಯರ್‌ಬಡ್ಸ್ ವೈಶಿಷ್ಟ್ಯಗಳು
ನೂತನ Realme Buds Air 7 Pro TWS ಇಯರ್‌ಬಡ್ಸ್ ಸಾಧನವು 11mm ಮತ್ತು 6mm ಡ್ಯುಯಲ್-ಡ್ರೈವರ್ ಸೆಟಪ್ ಹೊಂದಿವೆ, ಇದರಿಂದ ಧ್ವನಿಯ ಉಚ್ಛ ಶ್ರೇಣಿಯಿಂದ ಕಡಿಮೆ ಶ್ರೇಣಿವರೆಗೆ ಸಮತೋಲನ ಹೊಂದಿದ ಶ್ರವಣ ಅನುಭವವನ್ನು ಒದಗಿಸುತ್ತವೆ. ಜೊತೆಗೆ, ಆರು ಮೈಕ್ರೋಫೋನ್ ಗಳೊಂದಿಗೆ ಬಂದು ಶಬ್ದವಿಲ್ಲದ ಕರೆ ಅನುಭವವನ್ನು ಕಲ್ಪಿಸುತ್ತವೆ. ಶಬ್ದ ರದ್ದತಿ ಕ್ಷೇತ್ರದಲ್ಲಿ, ಈ Realme Buds Air 7 Pro ಸಾಧನವು 53dB ವರೆಗೆ ಸಕ್ರಿಯ ಶಬ್ದ ರದ್ದತಿ (ANC) ಗೆ ಬೆಂಬಲ ನೀಡುತ್ತವೆ ಎಂದು ಕಂಪೆನಿ ತಿಳಿಸಿದೆ.
ಈ Realme Buds Air 7 Pro TWS ಇಯರ್‌ಬಡ್ಸ್‌ನ ಪ್ರಮುಖ ಆಕರ್ಷಣೆ ಎಂದರೆ AI ಆಧಾರಿತ ವೈಶಿಷ್ಟ್ಯಗಳು. ಇದರಲ್ಲಿನ AI ಲೈವ್ ಟ್ರಾನ್ಸ್‌ಲೇಟರ್ ಬಳಸಿ, ಬಳಕೆದಾರರು ಜೆಮಿನಿ AI ವಾಯ್ಸ್ ಅಸಿಸ್ಟೆಂಟ್ ಮೂಲಕ ನೇರ ಅನುವಾದ ಪಡೆಯಬಹುದು. ಫೇಸ್ ಟು ಫೇಸ್ ಟ್ರಾನ್ಸ್‌ಲೇಟರ್ ತಂತ್ರಜ್ಞಾನವು ನೈಜ ಸಮಯದ ಸಂಭಾಷಣೆಯ ಅನುವಾದಕ್ಕೆ ಸಹಾಯ ಮಾಡುತ್ತದೆ. AI ವಿಚಾರಣೆ ಉಪಕರಣದ ಮೂಲಕ ಬಳಕೆದಾರರು Google Gemini ಗೆ ಸುಲಭ ಪ್ರವೇಶ ಪಡೆಯಬಹುದು ಎಂದು ತಿಳಿಸಲಾಗಿದೆ.
ಬ್ಲೂಟೂತ್ 5.4 ತಂತ್ರಜ್ಞಾನ ಮತ್ತು ಡ್ಯುಯಲ್ ಡಿವೈಸ್ ಸಂಪರ್ಕದಿಂದ ಈ Realme Buds Air 7 Pro ಇಯರ್‌ಬಡ್ಸ್ ಅನ್ನು ಎರಡು ಸಾಧನಗಳೊಂದಿಗೆ ಒಟ್ಟಿಗೆ ಸಂಪರ್ಕ ಸಾಧಿಸಬಹುದು. ಆಟಗಳ ಪ್ರಿಯರಿಗಾಗಿ 45ms ಕಡಿಮೆ ಲೇಟೆನ್ಸಿ ಮೋಡ್ ಕೂಡ ಲಭ್ಯವಿದೆ, ಇದು ದೃಶ್ಯ ಮತ್ತು ಶ್ರವಣ ನಡುವೆ ಕಡಿಮೆ ವಿಳಂಬವಿರುವ ಅನುಭವ ಒದಗಿಸುತ್ತದೆ. ಹೈ-ರೆಸ್ ಆಡಿಯೋ ವೈರ್‌ಲೆಸ್ ಪ್ರಮಾಣೀಕರಣ ಹೊಂದಿರುವ ಈ ಸಾಧನವು ಆಡಿಯೋ ಪ್ರೇಮಿಗಳಿಗೆ ಸಹ ಅತ್ಯುತ್ತಮ ಗುಣಮಟ್ಟದ ಧ್ವನಿಯನ್ನು ನೀಡುತ್ತದೆ.

ಈ Realme Buds Air 7 Pro ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP55 ಪ್ರಮಾಣಿತ ರೇಟಿಂಗ್ ಹೊಂದಿವೆ. ಚಾರ್ಜಿಂಗ್‌ಗೆ USB ಟೈಪ್-ಸಿ ಪೋರ್ಟ್ ಲಭ್ಯವಿದೆ. ಬ್ಯಾಟರಿ ಬಾಳಿಕೆಯಲ್ಲಿ ಇವು 48 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತವೆ, ಚಾರ್ಜಿಂಗ್ ಕೇಸ್‌ನೊಂದಿಗೆ. LHDC ಆಡಿಯೋ ಕೋಡೆಕ್ ಬಳಸಿದಾಗ, ಈ ಸಮಯ 28 ಗಂಟೆಗಳವರೆಗೆ ಇಳಿಯಬಹುದು. ಆದರೆ, 10 ನಿಮಿಷಗಳ ತ್ವರಿತ ಚಾರ್ಜ್ ಮೂಲಕ 11 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯ ದೊರೆಯುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
Realme Buds Air 7 Pro TWS ಇಯರ್‌ಬಡ್ಸ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Realme Buds Air 7 Pro ಇಯರ್‌ಬಡ್ಸ್ ಬೆಲೆ ₹5,499 ಆಗಿದೆ. ಈ ಸಾಧನವು ಫೈರಿ ರೆಡ್, ಗ್ಲೋರಿ ಬೀಜ್, ಮೆಟಾಲಿಕ್ ಗ್ರೇ ಮತ್ತು ರೇಸಿಂಗ್ ಗ್ರೀನ್ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಇವು ಲಭ್ಯವಿದ್ದು, ಇದೇ ಮೇ 30 ರಂದು ಮಧ್ಯಾಹ್ನ 12 ಗಂಟೆಯಿಂದ ಈ ಇಯರ್‌ಬಡ್ಸ್‌ಗಳನ್ನು ರಿಯಲ್ಮಿಯ ಅಧಿಕೃತ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್, ಮೈಂತ್ರಾ ಹಾಗೂ ಆಯ್ದ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು. ಮತ್ತೊಂದು ವಿಷಯ, ಈ ಸಾಧನ್ ಪ್ರತಿ ಇಯರ್‌ಬಡ್ 4.89 ಗ್ರಾಂ ತೂಕವಿದ್ದು, ಚಾರ್ಜಿಂಗ್ ಕೇಸ್ ಒಟ್ಟು 43.4 ಗ್ರಾಂ ತೂಕವಿದೆ.


Click it and Unblock the Notifications








