Home
Gadgets

3,599 ರೂ.ಗೆ Realme Buds Air 8 ಲಾಂಚ್: ಫೀಚರ್ಸ್ ನೋಡಿಯೇ ಸುಸ್ತಾಗ್ತೀರಾ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ಭಾರತದಲ್ಲಿ ತನ್ನ ಹೊಸ Realme Buds Air 8 ಸಾಧನವನ್ನು ಬಿಡುಗಡೆ ಮಾಡಿದೆ. Realme 16 Pro ಸರಣಿ ಫೋನ್‌ಗಳೊಂದಿಗೆ ಪರಿಚಯಗೊಂಡಿರುವ ಈ ಹೊಸ ಟ್ರೂಲಿ ವೈರ್‌ಲೆಸ್ ಇಯರ್‌ಬಡ್ಸ್‌ಗಳು, ಹೈ-ಕ್ವಾಲಿಟಿ ವೈರ್‌ಲೆಸ್ ಆಡಿಯೋ ಮತ್ತು AI ಆಧಾರಿತ ಸ್ಮಾರ್ಟ್ ಫೀಚರ್‌ಗಳು, 55dB ತನಕ ಆಕ್ಟಿವ್ ನೊಯ್ಸ್ ಕ್ಯಾನ್ಸಲೇಶನ್, ಒಟ್ಟು 58 ಗಂಟೆಗಳ ಬ್ಯಾಟರಿ ಬ್ಯಾಕಪ್ ಮತ್ತು IP55 ರೇಟಿಂಗ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗಾದರೆ, ಹೊಸ Realme Buds Air 8 ಇಯರ್‌ಬಡ್ಸ್ ಸಾಧನ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

Realme Buds Air 8: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Realme Buds Air 8 ಇಯರ್‌ಬಡ್ಸ್ ಬೆಲೆ ರೂ. 3,799 ಆಗಿದೆ. ಆದರೆ, ಲಾಂಚ್ ಆಫರ್ ಅಡಿಯಲ್ಲಿ ರೂ. 200 ರಿಯಾಯಿತಿಯೊಂದಿಗೆ ಈ ಸಾಧನವನ್ನು ರೂ. 3,599 ಕ್ಕೆ ಖರೀದಿಸಬಹುದು. ಇದೇ . ಜನವರಿ 16 ರಿಂದ Flipkart, Amazon, Realme India ಅಧಿಕೃತ ವೆಬ್‌ಸೈಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಬರುತ್ತಿರುವ ಈ ಸಾಧನವು, Master Grey, Master Gold ಮತ್ತು Master Purple ಎಂಬ ಮೂರು ಸ್ಟೈಲಿಷ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

Realme Buds Air 8: ಫೀಚರ್ಸ್ ಹೇಗಿವೆ?
ಹೊಸ Realme Buds Air 8 11mm + 6mm ಡ್ಯುಯಲ್ ಡ್ರೈವರ್ ಸೆಟ್‌ಅಪ್ ಹೊಂದಿವೆ. SBC, AAC ಜೊತೆಗೆ LHDC 5.0 ಕೋಡೆಕ್ ಬೆಂಬಲ ನೀಡಲಾಗಿದ್ದು, Hi-Res Audio ಪ್ರಮಾಣಪತ್ರವೂ ದೊರಕುತ್ತದೆ. 96kHz ತನಕ ಸ್ಯಾಂಪ್ಲಿಂಗ್ ರೇಟ್ ಮತ್ತು ಹೆಚ್ಚಿನ ಡೇಟಾ ಟ್ರಾನ್ಸ್ಮಿಷನ್ ಸ್ಪೀಡ್‌ನಿಂದ ಸಂಗೀತದಲ್ಲಿ ಸ್ಪಷ್ಟತೆ ಮತ್ತು ಆಳವಾದ ಬಾಸ್ ಅನುಭವ ಸಿಗುತ್ತದೆ. Realme ಅಭಿವೃದ್ಧಿಪಡಿಸಿದ NextBass ಆಲ್ಗೊರಿಥಮ್ ಕಡಿಮೆ ಫ್ರೀಕ್ವೆನ್ಸಿ ಧ್ವನಿಯನ್ನು ಉತ್ಕೃಷ್ಟಗೊಳಿಸುತ್ತದೆ. ಜೊತೆಗೆ 3D ಸ್ಪೇಷಿಯಲ್ ಆಡಿಯೋ ಬೆಂಬಲದಿಂದ ಸಿನಿಮಾ ಹಾಗೂ ಗೇಮಿಂಗ್ ಅನುಭವ ಇನ್ನಷ್ಟು ಜೀವಂತವಾಗುತ್ತದೆ.

ಶಬ್ದ ನಿಯಂತ್ರಣಕ್ಕೆ ಬಂದರೆ, ಈ ಇಯರ್‌ಬಡ್ಸ್‌ಗಳು 55dB ತನಕ ಆಕ್ಟಿವ್ ನೊಯ್ಸ್ ಕ್ಯಾನ್ಸಲೇಶನ್ ನೀಡುತ್ತವೆ. Ear Canal Adaptive ANC ತಂತ್ರಜ್ಞಾನ ಬಳಕೆದಾರರ ಕಿವಿಯ ಆಕಾರಕ್ಕೆ ಅನುಗುಣವಾಗಿ ಶಬ್ದ ಕಡಿತವನ್ನು ಹೊಂದಿಸುತ್ತದೆ. ಸುತ್ತಮುತ್ತಲ ಪರಿಸರದ ಶಬ್ದದ ಆಧಾರದ ಮೇಲೆ ಸ್ವಯಂಚಾಲಿತವಾಗಿ ತೀವ್ರತೆಯನ್ನು ಬದಲಿಸುವ ರಿಯಲ್-ಟೈಮ್ ಅಡಾಪ್ಟಿವ್ ANC ಕೂಡ ಇದೆ. Realme Link ಆ್ಯಪ್ ಮೂಲಕ Balanced, Deep ಮತ್ತು Mild ಮೋಡ್‌ಗಳನ್ನು ಸುಲಭವಾಗಿ ಆಯ್ಕೆ ಮಾಡಬಹುದು.

3,599 ರೂ.ಗೆ Realme Buds Air 8 ಲಾಂಚ್: ಫೀಚರ್ಸ್ ನೋಡಿಯೇ ಸುಸ್ತಾಗ್ತೀರಾ!

ಕರೆ ಗುಣಮಟ್ಟವನ್ನು ಉತ್ತಮಗೊಳಿಸಲು Realme Buds Air 8 ನಲ್ಲಿ ಆರು ಮೈಕ್ರೋಫೋನ್ ವ್ಯವಸ್ಥೆ ನೀಡಲಾಗಿದೆ. ಪ್ರತಿ ಇಯರ್‌ಬಡ್‌ನಲ್ಲಿ ಮೂರು ಮೈಕ್ರೋಫೋನ್‌ಗಳಿದ್ದು, ಗಾಳಿ ಅಥವಾ ಮಳೆಯಂತಹ ಪರಿಸ್ಥಿತಿಗಳಲ್ಲೂ ಸ್ಪಷ್ಟ ವಾಯ್ಸ್ ಕ್ಲಾರಿಟಿ ಒದಗಿಸಲು ಸಹಾಯ ಮಾಡುತ್ತವೆ. ಇದು ವರ್ಕ್-ಫ್ರಮ್-ಹೋಮ್ ಬಳಕೆದಾರರಿಗೆ ಮತ್ತು ನಿರಂತರ ಕರೆ ಮಾಡುವವರಿಗೆ ಉಪಯುಕ್ತವಾಗಿದೆ.

ಕನೆಕ್ಟಿವಿಟಿ ವಿಷಯದಲ್ಲಿ, ಈ ಇಯರ್‌ಬಡ್ಸ್‌ಗಳು Bluetooth 5.4 ಬೆಂಬಲದೊಂದಿಗೆ ಬರುತ್ತವೆ. ಒಂದೇ ಸಮಯದಲ್ಲಿ ಮೂರು ಸಾಧನಗಳಿಗೆ ಕನೆಕ್ಟ್ ಆಗುವ ಸಾಮರ್ಥ್ಯ, ಪಿಸಿ ಬಳಕೆದಾರರಿಗೆ Swift Pair ಸಪೋರ್ಟ್ ಮತ್ತು ಗೇಮಿಂಗ್‌ಗಾಗಿ 45ms ಕಡಿಮೆ ಲ್ಯಾಟೆನ್ಸಿ ಮೋಡ್ ಇವುಗಳನ್ನು ಇನ್ನಷ್ಟು ಪ್ರಾಯೋಗಿಕವಾಗಿಸುತ್ತವೆ. ಇನ್ನು AI Live Translator ಮತ್ತು ಅನುವಾದ ಫೀಚರ್‌ಗಳ ಮೂಲಕ 30 ಕ್ಕೂ ಹೆಚ್ಚು ಭಾಷೆಗಳಿಗೆ ಬೆಂಬಲ ಸಿಗುತ್ತದೆ. ಜೊತೆಗೆ Google Gemini ಆಧಾರಿತ AI Voice Assistant 2.0 ಸಹಾಯವನ್ನು ಪಡೆದುಕೊಳ್ಳಬಹುದು.

ಬ್ಯಾಟರಿ ವಿಷಯದಲ್ಲಿ, ಪ್ರತಿ ಇಯರ್‌ಬಡ್‌ನಲ್ಲಿ 62mAh ಬ್ಯಾಟರಿ ಮತ್ತು ಚಾರ್ಜಿಂಗ್ ಕೇಸ್‌ನಲ್ಲಿ 530mAh ಬ್ಯಾಟರಿ ನೀಡಲಾಗಿದೆ. ANC ಆಫ್ ಮಾಡಿ ಬಳಸಿದರೆ, ಒಂದೇ ಚಾರ್ಜ್‌ನಲ್ಲಿ 14 ಗಂಟೆಗಳ ಪ್ಲೇಬ್ಯಾಕ್ ಹಾಗೂ ಕೇಸ್ ಜೊತೆಗೆ ಒಟ್ಟು 58 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಿಗುತ್ತದೆ ಎಂಬುದು ಕಂಪನಿಯ ಹೇಳಿಕೆಯಾಗಿದೆ. ವೇಗದ ಚಾರ್ಜಿಂಗ್ ಸಹಿತ, ದೀರ್ಘಕಾಲಿಕ ಬಳಕೆಗೆ 1,000 ಚಾರ್ಜಿಂಗ್ ಸೈಕಲ್‌ಗಳ ನಂತರವೂ 80% ಬ್ಯಾಟರಿ ಆರೋಗ್ಯ ಉಳಿಯುತ್ತದೆ ಎಂದು Realme ತಿಳಿಸಿದೆ.

ವಿನ್ಯಾಸದ ದೃಷ್ಟಿಯಿಂದ, Realme Buds Air 8 IP55 ರೇಟಿಂಗ್ ಹೊಂದಿದ್ದು ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆ ನೀಡುತ್ತವೆ. ಜಿಯೋಮೆಟ್ರಿಕ್ ತ್ರಿಭಾಗ ವಿನ್ಯಾಸದ ಚಾರ್ಜಿಂಗ್ ಕೇಸ್, ಬಯೋ-ಬೇಸ್ಡ್ ಸಿಲಿಕೋನ್ ಫಿನಿಶ್ ಮತ್ತು USB Type-C ಚಾರ್ಜಿಂಗ್ ಪೋರ್ಟ್ ಇದರ ಪ್ರೀಮಿಯಂ ಲುಕ್‌ಗೆ ಕಾರಣವಾಗಿವೆ. ಒಟ್ಟಾರೆಯಾಗಿ, Realme Buds Air 8 ತನ್ನ ಬೆಲೆ ವಿಭಾಗದಲ್ಲಿ ಶಕ್ತಿಶಾಲಿ ANC, ಉನ್ನತ ಆಡಿಯೋ ಗುಣಮಟ್ಟ, AI ಫೀಚರ್‌ಗಳು ಮತ್ತು ದೀರ್ಘ ಬ್ಯಾಟರಿ ಬ್ಯಾಕಪ್‌ನೊಂದಿಗೆ ಭಾರತದಲ್ಲಿ ಅತ್ಯುತ್ತಮ ಟ್ರೂಲಿ ವೈರ್‌ಲೆಸ್ ಇಯರ್‌ಬಡ್ಸ್ ಆಯ್ಕೆಗಳಲ್ಲಿ ಒಂದಾಗಿ ಕಾಣಿಸುತ್ತಿದೆ.

Best Mobiles in India

English summary
Realme has launched the Realme Buds Air 8 in India, featuring up to 55dB Active Noise Cancellation, AI-powered call noise reduction, and up to 58 hours of total battery life. Priced at ₹3,799 (₹3,599 with launch offer), the earbuds come with an IP55 rating and will be available from January 16 in Master Grey, Master Gold, and Master Purple color options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+