ಭಾರತದಲ್ಲಿ Realme Buds Clip ಇಯರ್‌ಬಡ್ಸ್ ಲಾಂಚ್: ಕ್ಲಿಪ್-ಸ್ಟೈಲ್ ಹೇಗಿದೆ?
ಭಾರತದಲ್ಲಿ Realme ತನ್ನ ಮೊದಲ ಕ್ಲಿಪ್-ಸ್ಟೈಲ್ ಮಾದರಿಯ ಓಪನ್-ಫಿಟ್ ಟ್ರೂಲಿ ವೈರ್‌ಲೆಸ್ ಆಡಿಯೋ ಸಾಧನವನ್ನು ಪರಿಚಯಿಸಿದೆ. ದೇಶದಲ್ಲಿ Realme Buds Clip ಎಂಬ ಹೆಸರಿನಲ್ಲಿ ಈ ಸಾಧನವು ಪರಿಚಯಗೊಂಡಿದ್ದು, ಈ ಸಾಧನವು ಕಿವಿಯೊಳಗೆ ಹೋಗುವ ಇಯರ್‌ಬಡ್ಸ್‌ಗಳಿಗೆ ಪರ್ಯಾಯವಾಗಿ ವಿನ್ಯಾಸಗೊಳಿಸಿದಂತಿದೆ. ದೀರ್ಘಕಾಲ ಬಳಕೆಯಲ್ಲಿ ಆರಾಮ, ಸುತ್ತಮುತ್ತಲಿನ ಶಬ್ದಗಳ ಅರಿವು ಮತ್ತು ಹಗುರವಾದ ವಿನ್ಯಾಸವನ್ನು ಬಯಸುವ ಬಳಕೆದಾರರು ಇದನ್ನು ಗಮನಿಸಬಹುದು. ಹಾಗಾದರೆ, ಹೊಸ Realme Buds Clip ಇಯರ್‌ಬಡ್ಸ್ ಹೇಗಿದೆ?, ಬೆಲೆ ಎಷ್ಟು? ಮತ್ತು ಖರಿದೀಸಬಹುದೇ ಎಂಬುದನ್ನು ನೋಡೋಣ ಬನ್ನಿ.
Realme Buds Clip : ಪ್ರಮುಖ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, Realme Buds Clip ನಲ್ಲಿ ಕ್ಲಿಪ್-ಸ್ಟೈಲ್ ಓಪನ್-ಇಯರ್ ವಿನ್ಯಾಸ ಬಳಸಲಾಗಿದೆ. ಪ್ರತಿಯೊಂದು ಇಯರ್‌ಬಡ್ ಕೇವಲ 5.3 ಗ್ರಾಂ ತೂಕ ಹೊಂದಿದ್ದು, ಮೆಟಲ್ ಸ್ಟ್ರಕ್ಚರ್ ಬಳಕೆಯಿಂದ ಬಲ ಮತ್ತು ಲವಚಿಕತೆ ಎರಡನ್ನೂ ಒದಗಿಸುತ್ತದೆ. ಫ್ರಾಸ್ಟೆಡ್ ಫಿನಿಷ್ ಇದ್ದು, ಬೆವರು ಮತ್ತು ದಿನನಿತ್ಯದ ಬಳಕೆಯ ಗುರುತುಗಳನ್ನು ಕಡಿಮೆ ಮಾಡುತ್ತದೆ. ಕಿವಿ ಕಾಲುವೆಗೆ ಒತ್ತಡ ಇಲ್ಲದಿರುವುದರಿಂದ, ದಿನವಿಡೀ ಇಯರ್‌ಬಡ್ಸ್ ಧರಿಸುವವರಿಗೆ ಇದು ಆರಾಮದಾಯಕ ಅನುಭವ ನೀಡುತ್ತದೆ.
ಈ ಇಯರ್‌ಬಡ್ಸ್‌ಗಳಲ್ಲಿ 11ಮಿಮೀ ಡ್ಯುಯಲ್-ಡ್ರೈವರ್ ಸೆಟ್‌ಅಪ್ ನೀಡಲಾಗಿದೆ. ರಿಯಲ್‌ಮಿಯ NextBass ಆಲ್ಗೋರಿದಮ್ ಕಡಿಮೆ ಫ್ರಿಕ್ವೆನ್ಸಿಗಳಲ್ಲಿ ಉತ್ತಮ ಬಾಸ್ ನೀಡುವ ಜೊತೆಗೆ ವೋಕಲ್‌ಗಳನ್ನು ಸ್ಪಷ್ಟವಾಗಿ ಉಳಿಸುತ್ತದೆ. 3D ಸ್ಪೇಷಿಯಲ್ ಆಡಿಯೋ ಬೆಂಬಲದಿಂದ ಸಂಗೀತ ಮತ್ತು ವೀಡಿಯೊಗಳಲ್ಲಿ ವಿಶಾಲ ಹಾಗೂ ಆಳವಾದ ಸೌಂಡ್ ಅನುಭವ ಸಿಗುತ್ತದೆ. ಇದಲ್ಲದೆ, Directional Sound-Leap ತಂತ್ರಜ್ಞಾನ ಶಬ್ದವನ್ನು ನೇರವಾಗಿ ಕಿವಿಯತ್ತ ಕೇಂದ್ರೀಕರಿಸುವುದರಿಂದ ಓಪನ್-ಇಯರ್ ವಿನ್ಯಾಸದಲ್ಲಿಯೂ ಶಬ್ದ ಲೀಕೆಜ್ ಕಡಿಮೆಯಾಗುತ್ತದೆ.

Realme Buds Clip ನಲ್ಲಿ ಡ್ಯುಯಲ್ ಮೈಕ್ರೋಫೋನ್ ಹೊಂದಿದ AI ENC (Environmental Noise Cancellation) ಸೌಲಭ್ಯವಿದ್ದು, ಗದ್ದಲದ ಪರಿಸರದಲ್ಲೂ ಕರೆಗಳು ಸ್ಪಷ್ಟವಾಗಿರಲು ಸಹಾಯ ಮಾಡುತ್ತದೆ. ಡ್ಯುಯಲ್-ಡಿವೈಸ್ ಕನೆಕ್ಷನ್ ಬೆಂಬಲ ಇರುವುದರಿಂದ, ಒಂದೇ ಸಮಯದಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗೆ ಸಂಪರ್ಕ ಹೊಂದಬಹುದು. ಗೇಮಿಂಗ್ ಮತ್ತು ಶಾರ್ಟ್ ವಿಡಿಯೋ ವೀಕ್ಷಣೆಗೆ Game Mode ನೀಡಲಾಗಿದ್ದು, ಲ್ಯಾಟೆನ್ಸಿಯನ್ನು 45ms ವರೆಗೆ ಇಳಿಸುತ್ತದೆ. ಟ್ಯಾಪ್ ಕಂಟ್ರೋಲ್ ಮೂಲಕ ಸಂಗೀತ, ಕರೆಗಳು ಮತ್ತು ಇತರ ಕಾರ್ಯಗಳನ್ನು ಸುಲಭವಾಗಿ ನಿಯಂತ್ರಿಸಬಹುದು.
ಈ ಇಯರ್‌ಬಡ್ಸ್‌ಗಳು ಒಟ್ಟು 36 ಗಂಟೆಗಳವರೆಗೆ ಬ್ಯಾಟರಿ ಲೈಫ್ ನೀಡುತ್ತವೆ. IP55 ಡಸ್ಟ್ ಮತ್ತು ವಾಟರ್ ರೆಸಿಸ್ಟನ್ಸ್ ರೇಟಿಂಗ್ ಇದ್ದು, ಹೊರಾಂಗಣ ಬಳಕೆ ಮತ್ತು ವ್ಯಾಯಾಮದ ಸಮಯದಲ್ಲೂ ಭರವಸೆಯ ಕಾರ್ಯಕ್ಷಮತೆ ನೀಡುತ್ತದೆ. Gemini ಆಧಾರಿತ AI ವಾಯ್ಸ್ ಅಸಿಸ್ಟೆಂಟ್ ಬೆಂಬಲ ಮತ್ತು Find My Earphones ಫೀಚರ್ ದಿನನಿತ್ಯದ ಬಳಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತವೆ ಎಂದು ಕಂಪೆನಿಯು ತಿಳಿಸಿದೆ.
Realme Buds Clip ಬೆಲೆ ಮತ್ತು ಲಭ್ಯತೆ (India)
ಭಾರತದಲ್ಲಿ Realme Buds Clip ಅಧಿಕೃತ ಬೆಲೆ ರೂ. 5,999 ಆಗಿದೆ. ಲಾಂಚ್ ಆಫರ್‌ನ ಭಾಗವಾಗಿ ಗ್ರಾಹಕರು ಇದನ್ನು ರೂ. 5,499ಕ್ಕೆ ಖರೀದಿಸಬಹುದು. ಈ ಇಯರ್‌ಬಡ್ಸ್ ಫೆಬ್ರವರಿ 5ರಂದು ಮಧ್ಯಾಹ್ನ 12 ಗಂಟೆಯಿಂದ ಮಾರಾಟಕ್ಕೆ ಲಭ್ಯವಾಗಲಿದ್ದು, ಪರಿಚಯಾತ್ಮಕ ಆಫರ್ ಆಗಿ ಫೆಬ್ರವರಿ 7ರಂದು ರಾತ್ರಿ 11:59ರವರೆಗೆ ಮಾತ್ರ ಈ ಕೊಡುಗೆಯ ಬೆಲೆ ಮಾನ್ಯವಾಗಿರುತ್ತದೆ ಎಂದು Realme ಕಂಪೆನಿಯು ತಿಳಿಸಿದೆ.
ಯಾರಿಗೆ Realme Buds Clip ಸೂಕ್ತ?
ಕಿವಿಯೊಳಗಿನ ಒತ್ತಡ ಇಷ್ಟವಿಲ್ಲದವರು, ಕೆಲಸದ ನಡುವೆ ಇಯರ್‌ಬಡ್ಸ್ ತೆಗೆದು ಹಾಕುವ ಅಭ್ಯಾಸ ಇರುವವರು ಅಥವಾ ಸುತ್ತಮುತ್ತಲಿನ ಪರಿಸರದ ಶಬ್ದಗಳನ್ನು ಗಮನದಲ್ಲಿಟ್ಟುಕೊಂಡು ಸಂಗೀತ ಕೇಳುವವರಿಗೆ Realme Buds Clip ಉತ್ತಮ ಆಯ್ಕೆಯಾಗಬಹುದು. ಆದರೆ, ಓಪನ್-ಇಯರ್ ವಿನ್ಯಾಸದ ಕಾರಣ ಅತ್ಯಂತ ಗದ್ದಲದ ಪರಿಸರದಲ್ಲಿ ಶಬ್ದ ಪ್ರತ್ಯೇಕತೆ ಕಡಿಮೆಯಾಗುವ ಸಾಧ್ಯತೆ ಇದೆ. ಬಾಸ್ ಸಾಫ್ಟ್‌ವೇರ್ ಮೂಲಕ ಸುಧಾರಿತವಾಗಿದ್ದರೂ, ಸೀಲ್ಡ್ ಇನ್-ಇಯರ್ ಇಯರ್‌ಬಡ್ಸ್ ನೀಡುವಷ್ಟು ಗಾಢ ಬಾಸ್ ಅನುಭವವನ್ನು ನಿರೀಕ್ಷಿಸಬಾರದು. ಒಟ್ಟಾರೆಯಾಗಿ, Realme Buds Clip ಆರಾಮದಾಯಕ ವಿನ್ಯಾಸ, ಸ್ಮಾರ್ಟ್ ಫೀಚರ್‌ಗಳು ಮತ್ತು ವಿಭಿನ್ನ ಓಪನ್-ಇಯರ್ ಅನುಭವವನ್ನು ಬಯಸುವ ಬಳಕೆದಾರರಿಗೆ ಹೊಸ ಆಯ್ಕೆಯಾಗಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.


Click it and Unblock the Notifications