Home
Gadgets

1,199 ರೂ. ಗೆ 'Realme Buds T200 Lite TWS' ಇಯರ್‌ಬಡ್ಸ್ ರಿಲೀಸ್!

Realme ಕಂಪೆನಿಯು ತನ್ನ ಇತ್ತೀಚಿನ Realme Buds T200 Lite ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್‌ಗಳನ್ನು ಬುಧವಾರದಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ Realme P3 Ultra, Realme P3 ಮತ್ತು Realme Buds Air 7 ಸಾಧನಗಳ ಜೊತೆಗೆ Realme Buds T200 Lite ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್ ಸಹ ಪರಿಚಯಗೊಂಡಿದ್ದು, ಇದು IPX4 ಸ್ಪ್ಲಾಶ್ ರೆಸಿಸ್ಟೆನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಕರೆ ಶಬ್ದ ರದ್ದತಿ ಮತ್ತು ಒಂದೇ ಚಾರ್ಜ್‌ನಲ್ಲಿ 48 ಗಂಟೆಗಳವರೆಗೆ ಒಟ್ಟು ಬ್ಯಾಟರಿ ಬಾಳಿಕೆಯಂತಹ ಹಲವಾರು ವೈಶಿಷ್ಟ್ಯಗಳಲ್ಲಿ ಬಿಡುಗಡೆಯಾಗಿದೆ. ಮತ್ತೊಂದು ವಿಶೇಷವೆಂದರೆ, ಈ Realme Buds T200 Lite ಸಾಧನವು ಕೇವಲ 1,199 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಹಾಗಾದರೆ, ಹೊಸ Realme Buds T200 Lite ಸಾಧನವು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.

Realme Buds T200 Lite ಇಯರ್‌ಬಡ್ಸ್ ಬೆಲೆ
ಭಾರತದಲ್ಲಿ Realme ಬಡ್ಸ್ T200 ಲೈಟ್ ಬೆಲೆ ರೂ. 1,399. ಆದರೆ, ಬಿಡುಗಡೆಯ ಕೊಡುಗೆಯಾಗಿ ಕಂಪನಿಯು 200 ರೂ. ರಿಯಾಯಿತಿಯನ್ನು ನೀಡಿದ್ದು, ಈ TWS ಇಯರ್‌ಬಡ್‌ಗಳನ್ನು ರೂ. 1,199 ಗೆ ಖರೀದಿಸಬಹುದು. ಈ ಇಯರ್‌ಬಡ್‌ಗಳು ಅರೋರಾ ಪರ್ಪಲ್, ಸ್ಟಾರ್ಮ್ ಗ್ರೇ ಮತ್ತು ವೋಲ್ಟ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿವೆ. ಮೊದಲ ಮಾರಾಟ ಈಗಾಗಲೇ ಪ್ರಾರಂಭವಾಗಿದ್ದು, Realme ಕಂಪೆನಿಯ ಅಧಿಕೃತ ಬ್ರಾಂಡ್ ವೆಬ್‌ಸೈಟ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು.

1,199 ರೂ. ಗೆ 'Realme Buds T200 Lite TWS' ಇಯರ್‌ಬಡ್ಸ್ ರಿಲೀಸ್!

Realme ಬಡ್ಸ್ T200 ಲೈಟ್ ವೈಶಿಷ್ಟ್ಯಗಳು
Realme ಪ್ರಕಾರ, Realme Buds T200 Lite ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್‌ಗಳು 12.4mm ಡೈನಾಮಿಕ್ ಬಾಸ್ ಡ್ರೈವರ್‌ಗಳನ್ನು ಒಳಗೊಂಡಿವೆ, ಇದು ಹಿಂದಿನ ಮಾದರಿಯ ಹೋಲಿಸಿದರೆ 24% ದೊಡ್ಡದು. ಇದರಿಂದ ಆಳವಾದ ಬಾಸ್ ಮತ್ತು ಶ್ರೀಮಂತ ಧ್ವನಿಯನ್ನು ಒದಗಿಸುತ್ತದೆ ಎಂದು ಕಂಪನಿಯು ತಿಳಿಸಿದೆ. ಈ TWS ಇಯರ್‌ಬಡ್‌ಗಳಲ್ಲಿ ಡ್ಯುಯಲ್ ಮೈಕ್ರೊಫೋನ್‌ಗಳು ಮತ್ತು AI ಆಧಾರಿತ ಶಬ್ದ ರದ್ದತಿ ವೈಶಿಷ್ಟ್ಯವಿದೆ, ಇದು ಕರೆಗಳ ಸಮಯದಲ್ಲಿ ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳಿಕೆಗೆ ಸಂಬಂಧಿಸಿದಂತೆ, Realme Buds T200 Lite TWS ಇಯರ್‌ಬಡ್‌ಗಳು IPX4 ಸ್ಪ್ಲಾಶ್ ರೆಸಿಸ್ಟೆನ್ಸ್ ರೇಟಿಂಗ್ ಹೊಂದಿದ್ದು, ಇದು ನೀರಿನ ಸ್ಪ್ಲಾಶ್‌ಗಳನ್ನು ಸಮರ್ಥವಾಗಿ ಎದುರಿಸಬಲ್ಲದು ಮತ್ತು ಲಘು ಮಳೆ ಅಥವಾ ವ್ಯಾಯಾಮಗಳಿಗೆ ಸೂಕ್ತವಾಗಿದೆ.

ಸಂಪರ್ಕಕ್ಕಾಗಿ, Realme Buds T200 Lite ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್‌ಗಳಲ್ಲಿ ಬ್ಲೂಟೂತ್ 5.4 ಮತ್ತು ಡ್ಯುಯಲ್-ಡಿವೈಸ್ ಜೋಡಣೆ ತಂತ್ರಜ್ಞಾನವಿದೆ, ಇದು ಬಳಕೆದಾರರಿಗೆ ಒಂದೇ ಸಮಯದಲ್ಲಿ ಎರಡು ಸಾಧನಗಳನ್ನು ಜೋಡಿಸಲು ಅನುಮತಿಸುತ್ತದೆ. ಇದರ ಹಿಂದಿನ ಮಾದರಿಯ ಹೋಲಿಸಿದರೆ, Realme Buds T200 Lite ಇಯರ್‌ಬಡ್ಸ್‌ನಲ್ಲಿ ಕಂಪನಿಯು ಶೇಕಡಾ 26 ರಷ್ಟು ಹೆಚ್ಚು ಬ್ಯಾಟರಿ ಬಾಳಿಕೆಯನ್ನು ಒದಗಿಸಿದೆ, ಮತ್ತು ಈಗ ಒಂದೇ ಚಾರ್ಜ್‌ನಲ್ಲಿ ಕೇಸ್‌ನೊಂದಿಗೆ 48 ಗಂಟೆಗಳ ಕಾಲ ಸಂಗೀತ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ತ್ವರಿತ ಚಾರ್ಜ್ ಕಾರ್ಯದೊಂದಿಗೆ, ಈ ealme Buds T200 Lite ಇಯರ್‌ಬಡ್ಸ್ 10 ನಿಮಿಷಗಳ ಚಾರ್ಜ್ ಐದು ಗಂಟೆಗಳ ಆಲಿಸುವ ಸಮಯವನ್ನು ಒದಗಿಸುತ್ತದೆ ಎಂದು ಕಂಪನಿಯು ತಿಳಿಸಿದೆ.

ಮತ್ತೊಂದೆಡೆ, ಇದಕ್ಕಿಂತಲೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರುವ Realme Buds Air 7 ಇಯರ್‌ಫೋನ್‌ಗಳು ಸಹ ಬಿಡುಗಡೆಯಾಗಿವೆ. ಈ ಇಯರ್‌ಫೋನ್‌ಗಳು ದೇಶದ ಮಾರುಕಟ್ಟೆಯಲ್ಲಿ ಇತರ ಸ್ಪರ್ಧಿಗಳಿಗೆ ದೊಡ್ಡ ಸವಾಲು ನೀಡುವ ನಿರೀಕ್ಷೆಯಿದೆ. 12.4mm ಡೈನಾಮಿಕ್ ಡೀಪ್ ಬ್ರಾಸ್ ಡ್ರೈವರ್‌ಗಳನ್ನು ಒಳಗೊಂಡ ಈ Realme Buds Air 7 ಇಯರ್‌ಫೋನ್‌ಗಳು N52 ನಿಯೋಡೈಮಿಯಮ್ ಮ್ಯಾಗ್ನೆಟ್‌ಗಳು ಮತ್ತು ತಾಮ್ರ SHTW ಕಾಯಿಲ್‌ಗಳನ್ನು ಬಳಸುತ್ತವೆ, ಇದರಿಂದ ಸ್ಪಷ್ಟ ಮತ್ತು ಆಳವಾದ ಆಡಿಯೊ ಅನುಭವವನ್ನು ನೀಡುತ್ತದೆ. ಹೈ-ರೆಸ್ ಆಡಿಯೊ ಪ್ರಮಾಣೀಕರಣವು ಉತ್ತಮ ಗುಣಮಟ್ಟದ ಸಂಗೀತವನ್ನು ಆಲಿಸಲು ಅನುಕೂಲಕರವಾಗಿದೆ. ಗೇಮಿಂಗ್ ಮತ್ತು ವೀಡಿಯೊ ವೀಕ್ಷಣೆಯಂತಹ ಸಂದರ್ಭಗಳಲ್ಲಿ ಕಡಿಮೆ ಲೇಟೆನ್ಸಿ ಬಹಳ ಮುಖ್ಯವಾಗಿದೆ. Realme Buds Air 7 ಕೇವಲ 45ms ವರೆಗೆ ಕಡಿಮೆ ಲೇಟೆನ್ಸಿಯನ್ನು ಒದಗಿಸುತ್ತದೆ, ಇದು ಉತ್ತಮ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ಈ Realme Buds Air 7 ಇಯರ್‌ಫೋನ್‌ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
The Realme Buds T200 Lite TWS earbuds are equipped with a 12.4mm dynamic bass driver for an immersive audio experience. They also offer Bluetooth 5.4 connectivity and the ability to pair with two devices simultaneously.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+