ನೂತನ ಇಯರ್‌ಬಡ್ಸ್ ಲಾಂಚ್ ಮಾಡಿದ ರಿಯಲ್‌ಮಿ; ಬೆಲೆ ಎಷ್ಟು
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಮಾರುಕಟ್ಟೆಯಲ್ಲಿ ಹೇಗೆ ತಮ್ಮ ಜನಪ್ರಿಯತೆ ಪಡೆದುಕೊಂಡಿವೆಯೋ ಅದೇ ರೀತಿ ರಿಯಲ್‌ಮಿ ಇಯರ್ ಬಡ್ಸ್‌ಗಳೂ (Realme Earbuds) ಕೂಡ ಮಾರುಕಟ್ಟೆಯಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿವೆ. ಇದೀಗ ರಿಯಲ್‌ಮಿ ಸಂಸ್ಥೆ ತನ್ನ ಗ್ರಾಹಕರಿಗೆ ನೂತನ ವೈಯರ್‌ಲೆಸ್ ಇಯರ್‌ಬರ್ಡ್ ಬಿಡುಗಡೆಗೊಳಿಸಿದೆ.
ರಿಯಲ್‌ಮಿ ಸಂಸ್ಥೆ ತಾನು ನೀಡಿದ ಭರವಸೆಯಂತೆ ಭಾರತದಲ್ಲಿ ರಿಯಲ್‌ಮಿ ಬಡ್ಸ್ ವೈರ್‌ಲೆಸ್ 3 ನಿಯೋ (Realme Buds Wireless 3 Neo) ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಇದು ರಿಚ್ ಬಾಸ್ ಬೂಸ್ಟ್, ಡ್ಯುಯಲ್ ಡಿವೈಸ್ ಸಂಪರ್ಕ ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP55 ರೇಟಿಂಗ್, 45ms ಅತೀ ಕಡಿಮೆ ಲೇಟೆನ್ಸಿ ಜೊತೆಗೆ 32 ಗಂಟೆಗಳ ಬ್ಯಾಟರಿ, 13.4mm ಡ್ರೈವರ್‌ಗಳಂತಹ ಹಲವು ಹೊಸ ಅಪ್‌ಡೇಟ್‌ಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ರಿಯಲ್‌ಮಿ ಬಡ್ಸ್ ವೈರ್‌ಲೆಸ್ 3 ನಿಯೋ ವೈಶಿಷ್ಟ್ಯಗಳು ಮತ್ತು ವಿಶೇಷ ಗುಣಗಳು:
ಈ ಡಿವೈಸ್ ಸಾಧಾರಣ ಇಯರ್ ಬಡ್ಸ್‌ಗಿಂತ ಹಲವು ವಿಭಿನ್ನವಾದ ಹಾಗೂ ಹೊಸ ಬಗೆಯ ತಂತ್ರಾಂಶದ ಮೂಲಕ ಹಲವು ಹೊಸ ಬಗೆಯ ಫೀಚರ್ಸ್‌ಗಳನ್ನು ಹೊಂದಿದೆ.
* ಡಿವೈಸ್‌ಗಳನ್ನು ಸಂಪರ್ಕಿಸಲು ಬ್ಲೂಟೂತ್ 5.4, ಎಸ್‌ಬಿಸಿ (SBC) ಮತ್ತು ಎಎಸಿ (AAC) ಕೊಡೆಕ್‌ಗಳು, ಡ್ಯುಯಲ್ ಡಿವೈಸ್ ಸಂಪರ್ಕ, ಗೂಗಲ್ ಫಾಸ್ಟ್ ಪೇರ್ ಅನ್ನು ಹೊಂದಿದೆ.
* 13.4mm ಬಾಸ್ ಬೂಸ್ಟ್ ಡ್ರೈವರ್ ಹೊಂದಿದೆ.
* ಎರಡು ಬಡ್ಸ್‌ಗಳನ್ನು ಸರಳವಾಗಿ ಬೇರ್ಪಡಿಸುವ ಮೂಲಕ ಸಂಪರ್ಕಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಮ್ಯಾಗ್ನೆಟಿಕ್ ಕಂಟ್ರೋಲರ್ ಇರಿಸಲಾಗಿದೆ.
* ಫೋನ್ ಕಾಲ್ ಸಂದರ್ಭದಲ್ಲಿ ಸುತ್ತಮುತ್ತಲಿನ ಡಿಸ್ಟರ್ಬೆನ್ಸ್ ಕಡಿಮೆ ಮಾಡಲು ಇಎನ್‌ಸಿ (ENC) ಅಲ್ಗಾರಿದಮ್ ಇರಲಿಸಲಾಗಿದೆ.
* 45 ಎಂಎಸ್ ಸೂಪರ್ ಲೋ ಲೇಟೆನ್ಸಿ ಗೇಮಿಂಗ್ ಮೋಡ್ ಹೊಂದಿದೆ.
* ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP55 ತಂತ್ರಜ್ಞಾನ ಒಳಗೊಂಡಿದೆ.
* ಒಮ್ಮೆ ಚಾರ್ಜ್ ಮಾಡಿದ ಬಳಿಕ ಸುಮಾರು 32 ಗಂಟೆಗಳ ಕಾಲ ಸಂಗೀತ ಕೇಳಬಹುದು ಹಾಗೂ ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 7 ಗಂಟೆಗಳ ಕಾಲ ಸಂಗೀತ ಕೇಳುವಷ್ಟು ಸಧೃಡ ಬ್ಯಾಟರಿ ಸೌಲಭ್ಯ ಹೊಂದಿದೆ. * ಚಾರ್ಜಿಂಗ್‌ಗಾಗಿ USB ಟೈಪ್-C ಚಾರ್ಜಿಂಗ್ ಪೋರ್ಟ್ ಹೊಂದಿದೆ.
ಬೆಲೆ ಮತ್ತು ಲಭ್ಯತೆ: ರಿಯಲ್‌ಮಿ ಬಡ್ಸ್ ವೈಯರ್‌ಲೆಸ್ 3 ನಿಯೋ (realme Buds Wireless 3 Neo) ಇದು ಅಕ್ವಾ ಬ್ಲೂ, ಕಡು ಕಪ್ಪು, ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಇದರ ಬೆಲೆ ರಿಯಲ್‌ಮಿ.ಕಾಮ್ ವೆಬ್‌ಸೈಟ್ ನಲ್ಲಿ 1299 ರೂ. ಗಳಾಗಿವೆ. ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಗಳಲ್ಲಿ ಇದು 1199 ರೂ. ಗಳಿಗೆ ಗ್ರಾಹಕರ ಕೈ ಸೇರಲಿದೆ.
ಗ್ರಾಹಕರನ್ನು ಸೆಳೆಯುತ್ತಿದೆ ರಿಯಲ್‌ಮಿ GT 6T ಮೊಬೈಲ್: ಮೇ 22ರಂದು ರಿಯಲ್‌ಮಿ ಸಂಸ್ಥೆ ರಿಯಲ್‌ಮಿ GT 6T ಹೆಸರಿನ ನೂತನ ಮೊಬೈಲ್ ಲಾಂಚ್ ಮಾಡಿದ್ದು, ಈ ಮೊಬೈಲ್ ಕೂಡ ಗ್ರಾಹಕರನ್ನು ಸೆಳೆದಿದೆ, 6.78 ಇಂಚಿನ 3D LTPO AMOLED ಡಿಸ್‌ಪ್ಲೇ, ಇದರ ಡಿಸ್‌ಪ್ಲೇಯು 2,789 x 1,264 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ.
ಜೊತೆಗೆ 6000 nits ಪೀಕ್ ಬ್ರೈಟ್ನೆಸ್, 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಸೌಲಭ್ಯ ಸಹ ಕಾಣಬಹುದಾಗಿದೆ. ಹಾಗೂ ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್, ದ್ವಿತಿಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಹಾಗೂ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಹೊಂದಿದೆ.


Click it and Unblock the Notifications








