Home
Gadgets

ಭಾರತದಲ್ಲಿ Realme Pad 3 ಶೀಘ್ರ ಬಿಡುಗಡೆ: 12,200mAh ಬ್ಯಾಟರಿ ಜೊತೆ!

ಭಾರತದಲ್ಲಿ Realme ಸುಮಾರು ಎರಡು ವರ್ಷಗಳ ಹಿಂದೆ ಪರಿಚಯಿಸಿದ್ದ Realme Pad 2 ಉತ್ತರಾಧಿಕಾರಿಯಾಗಿ Realme Pad 3 ಟ್ಯಾಬ್ಲೆಟ್ ಇನ್ನೇನು ಬಿಡುಗಡೆಯಾಗಲು ಸಜ್ಜಾಗಿದೆ. ಕಳೆದ ಮಾದರಿಗಿಂತಲೂ ದೊಡ್ಡ ಅಪ್‌ಗ್ರೇಡ್‌ಗಳೊಂದಿಗೆ ಬರುತ್ತಿರುವ ಈ ಟ್ಯಾಬ್ಲೆಟ್ ಜನವರಿ 6 ರಂದು Realme 16 Pro 5G ಸ್ಮಾರ್ಟ್‌ಫೋನ್‌ಗಳೊಂದಿಗೆ ಪರಿಚಯಗೊಳ್ಳುವುದು ಬಹುತೇಕ ಖಾತ್ರಿಯಾಗಿದೆ. ಇದೀಗ ಈ Realme Pad 3 ಟ್ಯಾಬ್ಲೆಟ್ ಹೊಂದಿರಬಹುದಾದ ಫೀಚರ್ಸ್ ಯಾವುವು ಎಂಬ ಮಾಹಿತಿ ಲೀಕ್ ಆಗಿದೆ.!

ಹೌದು, ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು ತಮ್ಮ ಇತ್ತೀಚಿನ X ಪೋಸ್ಟ್ Realme Pad 3 ಟ್ಯಾಬ್ಲೆಟ್ ಹೊಂದಿರಬಹುದಾದ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದಾರೆ. ಇವರ ಪ್ರಕಾರ, ಡಿಸ್‌ಪ್ಲೇ ವಿಷಯದಲ್ಲಿ Realme Pad 3 ಗಮನ ಸೆಳೆಯಲಿದೆ. ಈ ಟ್ಯಾಬ್ಲೆಟ್‌ನಲ್ಲಿ 11.6 ಇಂಚಿನ ದೊಡ್ಡ LCD ಪರದೆ ನೀಡಲಾಗುತ್ತಿದ್ದು, 2.8K ರೆಸಲ್ಯೂಶನ್ ಮತ್ತು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುವ ಸಾಧ್ಯತೆ ಇದೆ. ಇದು OTT ವೀಡಿಯೊ ವೀಕ್ಷಣೆ ಮತ್ತು ಮಲ್ಟಿಟಾಸ್ಕಿಂಗ್‌ಗೆ ಇದು ಉತ್ತಮ ವೀಕ್ಷಣಾ ಅನುಭವ ನೀಡಬಹುದು.

ಬ್ಯಾಟರಿ ಸಾಮರ್ಥ್ಯವೇ ಈ Realme Pad 3 ರ ಪ್ರಮುಖ ಹೈಲೈಟ್ ಆಗಿರಬಹುದಾಗಿದ್ದು, ಈ ಟ್ಯಾಬ್ಲೆಟ್‌ನಲ್ಲಿ 12,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇರಲಿದೆ ಎನ್ನಲಾಗಿದೆ. ಇದು 45W ವೈರ್‌ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಸಾಧ್ಯತೆ ಇದೆ.ಕ್ಯಾಮೆರಾ ವಿಭಾಗದಲ್ಲಿ, Realme Pad 3 ಸರಳ ಆದರೆ ಬಳಕೆಗೆ ಅನುಕೂಲಕರ ಸೆಟಪ್ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಟ್ಯಾಬ್ಲೆಟ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಬಹುದು.

ಭಾರತದಲ್ಲಿ Realme Pad 3 ಶೀಘ್ರ ಬಿಡುಗಡೆ: 12,200mAh ಬ್ಯಾಟರಿ ಜೊತೆ!

ಕನೆಕ್ಟಿವಿಟಿ ಆಯ್ಕೆಗಳಲ್ಲಿ, Realme Pad 3 ಅನ್ನು Wi-Fi ಮತ್ತು 5G ಎರಡೂ ವೇರಿಯಂಟ್‌ಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಭಾರತದಲ್ಲಿ Wi-Fi ಮಾದರಿ RMP2502 ಮತ್ತು 5G ಮಾದರಿ RMP2501 ಎಂಬ ಮಾದರಿ ಸಂಖ್ಯೆಗಳೊಂದಿಗೆ ಬರಬಹುದು. ಸ್ಟೋರೇಜ್ ಮತ್ತು ಕಾರ್ಯಕ್ಷಮತೆಯ ವಿಚಾರದಲ್ಲಿ, ಎಲ್ಲಾ ವೇರಿಯಂಟ್‌ಗಳಲ್ಲೂ 8GB RAM ನೀಡಲಾಗಬಹುದು. ಜೊತೆಗೆ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳು ಲಭ್ಯವಾಗುವ ನಿರೀಕ್ಷೆ ಇದೆ. Champagne Gold ಮತ್ತು Space Grey ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಈ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಬಹುದು.

ಹೋಲಿಕೆಗಾಗಿ ನೋಡಿದರೆ, 2023ರಲ್ಲಿ ಬಿಡುಗಡೆಯಾದ Realme Pad 2 ನಲ್ಲಿ 2K ಡಿಸ್ಪ್ಲೇ, MediaTek Helio G99 ಪ್ರೊಸೆಸರ್, 4G ಸಪೋರ್ಟ್ ಮತ್ತು 8,360mAh ಬ್ಯಾಟರಿ ನೀಡಲಾಗಿತ್ತು. ಈ ಹಿನ್ನೆಲೆ ನೋಡಿದರೆ, Realme Pad 3 ದೊಡ್ಡ ಡಿಸ್ಪ್ಲೇ, ಶಕ್ತಿಶಾಲಿ ಬ್ಯಾಟರಿ ಮತ್ತು 5G ಬೆಂಬಲದೊಂದಿಗೆ ಭಾರತದಲ್ಲಿ ಟ್ಯಾಬ್ಲೆಟ್ ಸೆಗ್ಮೆಂಟ್‌ಗೆ ಹೊಸ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಈ ಮಾಹಿತಿಗಳು ಇನ್ನು ಅಧಿಕೃತವಾಗಿಲ್ಲ, ಜನವರಿ 6 ರಂದು ಈ ಕುರಿತಂತೆ ನಾವು ಮತ್ತಷ್ಟು ಮಾಹಿತಿಯನ್ನು ಎದುರುನೋಡುತ್ತಿದ್ದೇವೆ.

200 MP ಕ್ಯಾಮೆರಾದ Realme 16 Pro ಸರಣಿ ಭಾರತಕ್ಕೆ
Realme ಭಾರತೀಯ ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ Realme 16 Pro ಸರಣಿ ಬಿಡುಗಡೆ ದಿನಾಂಕವನ್ನು ಇತ್ತೀಚಿಗಷ್ಟೇ ಅಧಿಕೃತವಾಗಿ ಘೋಷಿಸಿತ್ತು.ಮೊದಲೇ ತಿಳಿಸಿದಂತೆ ದೇಶದ ಮಾರುಕಟ್ಟೆಗೆ Realme 16 Pro ಸರಣಿಯ 2026ರ ಜನವರಿ 6ರಂದು ಆಗಮಿಸಲಿದ್ದು, ಈ ಈ ಸರಣಿಯಲ್ಲಿ Realme 16 Pro 5G ಮತ್ತು Realme 16 Pro+ 5G ಎಂಬ ಎರಡು ಪ್ರೀಮಿಯಂ ಮಿಡ್-ರೇಂಜ್ ಮಾದರಿಗಳು ಅನಾವರಣಗೊಳ್ಳಲಿವೆ. ಆಧುನಿಕ ತಂತ್ರಜ್ಞಾನ, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ಆಕರ್ಷಕ ವಿನ್ಯಾಸದ ಸಂಯೋಜನೆಯೊಂದಿಗೆ ಈ ಫೋನ್‌ಗಳು ಬಳಕೆದಾರರ ಗಮನ ಸೆಳೆಯಲು ಸಜ್ಜಾಗಿ ಬರುತ್ತಿವೆ. ಹಾಗಾದರೆ, ಪ್ರಸ್ತುತ ತಿಳಿದುಬಂದಿರುವ ಅಧಿಕೃತ ಮಾಹಿತಿಗಳಂತೆ ಮುಂಬರುವ Realme 16 Pro ಸರಣಿ ಸ್ಮಾರ್ಟ್‌ಫೋನ್‌ಗಳು ಹೇಗಿರಲಿವೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
Realme Pad 3 is expected to launch in India on January 6 alongside the Realme 16 Pro 5G. Leaks suggest it will feature an 11.6-inch 2.8K LCD display, a massive 12,200mAh battery with 45W fast charging, and dual 8MP cameras, making it a solid upgrade over the Realme Pad 2 for entertainment and multitasking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+