Realme Watch 5: ಭಾರತದಲ್ಲಿ ಶೀಘ್ರವೇ ಲಾಂಚ್, ಟೀಸರ್ ಬಿಡುಗಡೆ!
Realme ತನ್ನ ಹೊಸ ಸ್ಮಾರ್ಟ್‌ವಾಚ್ Realme Watch 5 ಅನ್ನು ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇ-ಕಾಮರ್ಸ್ ಜಾಲತಾಣ Flipkart ನಲ್ಲಿ Realme Watch 5 ಗಾಗಿ ಹೊಸ ಟೀಸರ್ ಪುಟವನ್ನು ತೆರೆಯಲಾಗಿದ್ದು, ಈ ವಾಚ್‌ನ ಭಾರತದ ಆಗಮನವವು ಅಧಿಕೃತವಾಗಿ ದೃಢಪಡಿಸಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಈ ವಾಚ್, ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳಿಂದ ಗಮನಸೆಳೆದಿದೆ. ಇದೀಗ ಭಾರತಕ್ಕೆ ಆಗಮಿಸುವ ಸುದ್ದಿಯ ಮೂಲಕ ದೇಶದ ಬಳಕೆದಾರರಲ್ಲೂ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Realme Watch 5: ಡಿಸೈನ್ ಟೀಸರ್ ಬಿಡುಗಡೆ
ಪ್ರಸ್ತುತ Flipkart ನಲ್ಲಿ ಕಾಣಿಸಿಕೊಂಡಿರುವ ಟೀಸರ್‌ನಲ್ಲಿ Realme Watch 5 ವಾಚ್‌ನ ಭಾಗಶಃ ವಿನ್ಯಾಸ ಹೊರಬಂದಿದೆ. ಈ ವಾಚ್ ಅಗಲವಾದ ಚೌಕಾಕಾರದ ಡಯಲ್ ಮತ್ತು ಬೆಳ್ಳಿ ಬಣ್ಣದ ಪಟ್ಟಿಯೊಂದಿಗೆ ಕಾಣಿಸಿಕೊಂಡಿದೆ. ಆದರೆ, ಇದರ ಭಾರತೀಯ ಲಾಂಚ್ ದಿನಾಂಕ ಮತ್ತು ಬೆಲೆ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಅದಾಗ್ಯೂ, ಈ ವಾಚ್ ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿಲಭ್ಯವಿದ್ದು, ಸುಮಾರು EUR 60 (ಸುಮಾರು ₹6,000) ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ, ಭಾರತದಲ್ಲೂ ಇದೇ ಶ್ರೇಣಿಯ ಬೆಲೆಯನ್ನು ನಾವು ನಿರೀಕ್ಷಿಸಬಹುದು.
Realme Watch 5: ಪ್ರಮುಖ ವೈಶಿಷ್ಟ್ಯಗಳು
Realme Watch 5 ಸಾಧನವು 1.97-ಇಂಚಿನ (390x450 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ ಹೊಂದಿದೆ. ಇದು 600 nits ಬ್ರೈಟ್‌ನೆಸ್ ಮತ್ತು 60Hz ರಿಫ್ರೆಶ್ ರೇಟ್ ನೀಡಲಿದೆ. ಈ ವಾಚ್ ಬ್ಲೂಟೂತ್ ಕರೆಯನ್ನು ಬೆಂಬಲಿಸುತ್ತದೆ ಮತ್ತು ಓಟ, ಯೋಗ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ 108 ಕ್ರೀಡಾ ವಿಧಾನಗಳನ್ನು ನೀಡುತ್ತದೆ.ಬ್ಯಾಟರಿ ದಕ್ಷತೆಯ ವಿಚಾರದಲ್ಲಿ, ಈ ವಾಚ್ ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬಳಕೆ ನೀಡುತ್ತದೆ ಮತ್ತು Bluetooth Calling ಬಳಕೆಗಾಗಿ ಇದು 720 ನಿಮಿಷಗಳ ಕಾಲ ಕರೆ ಮಾಡಲು ನೆರವಾಗುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

ಈ Realme Watch 5 ನಲ್ಲಿ ಲಭ್ಯವಿರುವ ಆರೋಗ್ಯ ವೈಶಿಷ್ಟ್ಯಗಳಲ್ಲಿ SpO2 ಟ್ರ್ಯಾಕಿಂಗ್, ಹೃದಯ ಬಡಿತ ಮೇಲ್ವಿಚಾರಣೆ, ನಿದ್ರೆ ಮತ್ತು ಒತ್ತಡ ಟ್ರ್ಯಾಕಿಂಗ್ ಸೇರಿದ್ದು, ಚಟುವಟಿಕೆಗಳನ್ನು ನಿಖರವಾಗಿ ಟ್ರಾಕ್ ಮಾಡುತ್ತದೆ. ಈ ವಾಚ್ 300 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ಸಂಚರಣೆಗೆ, ಇದು GPS ಅನ್ನು ನೀಡುತ್ತದೆ ಮತ್ತು ಐದು ಅಂತರ್ನಿರ್ಮಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್‌ಗಳನ್ನು (GNSS) ಬೆಂಬಲಿಸುತ್ತದೆ. ಸ್ಮಾರ್ಟ್‌ವಾಚ್ IP68 ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿದ್ದು, ಸುರಕ್ಷತೆಯನ್ನು ಸಹ ಖಚಿತಪಡಿಸುತ್ತದೆ.
Realme Watch 5 ಅನ್ನು ಫೋನ್‌ಗೆ ಸಂಪರ್ಕಿಸಿದಾಗ Bluetooth Calling ಸಹ ಬೆಂಬಲಿಸುತ್ತದೆ, ಇದರಿಂದ ನೇರವಾಗಿ ವಾಚ್ ಮೂಲಕವೇ ಕರೆ ಸ್ವೀಕರಿಸಲು ಸಾಧ್ಯ. ಜೊತಗೆ, ಈ Realme Watch 5 ವಾಚ್‌ನಲ್ಲಿ NFC ಆಧಾರಿತ ಪಾವತಿ ವ್ಯವಸ್ಥೆ ಕೂಡ ಒದಗಿಸಲಾಗಿದೆ. ಇದರಿಂದ ಹೊಂದಾಣಿಕೆಯ ಪ್ರದೇಶಗಳಲ್ಲಿ ಸ್ಪರ್ಶರಹಿತ ಪಾವತಿಗಳನ್ನು ಸುಲಭವಾಗಿ ಮಾಡಬಹುದು.
ಒಟ್ಟಾರೆ ಸಾರಾಂಶವಾಗಿ, ಈ Realme Watch 5 ವಾಚ್ ಕಡಿಮೆ ಬೆಲೆಯ ಸೆಗ್ಮೆಂಟ್‌ನಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವ ಸ್ಮಾರ್ಟ್‌ವಾಚ್ ಆಗಿ ಗಮನ ಸೆಳೆಯುತ್ತಿದೆ. AMOLED ಸ್ಕ್ರೀನ್, Bluetooth Calling, ದೀರ್ಘಕಾಲದ ಬ್ಯಾಟರಿ ಮತ್ತು 108 Sports Modes ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ, ಭಾರತದಲ್ಲಿ ಇದರ ಲಾಂಚ್‌ಗೆ ಹೆಚ್ಚಿನ ನಿರೀಕ್ಷೆ ಇದೆ. ಅಧಿಕೃತ ಬಿಡುಗಡೆ ದಿನಾಂಕಕ್ಕಾಗಿ Flipkart ಮತ್ತು Realme ಘೋಷಣೆಯನ್ನು ಕಾದುನೋಡಬೇಕು. ಈ ಹೊಸ ವಾಚ್ ಫೀಚರ್ಸ್ ಮತ್ತು ಬೆಲೆಯ ಕುರಿತಂತೆ ನಿಮ್ಮ ಅನಿಸಿಕೆಗಳೇನು?, ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








