Home
Gadgets

ಭಾರತದಲ್ಲಿ ಜ.6 ರಂದು Redmi Pad 2 Pro 5G ಲಾಂಚ್: ವಿಶ್ವದ ಅತಿದೊಡ್ಡ ಬ್ಯಾಟರಿ!

Redmi ತನ್ನ ಹೊಸ 5G ಟ್ಯಾಬ್ಲೆಟ್ Redmi Pad 2 Pro 5G ಅನ್ನು ಭಾರತದಲ್ಲಿ ಇದೇ ಜನವರಿ 6, 2026ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಟ್ಯಾಬ್ಲೆಟ್‌ ಬಿಡುಗಡೆಗಾಗಿ ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಶೇಷ ಲ್ಯಾಂಡಿಂಗ್ ಪುಟಗಳು ಲೈವ್ ಆಗಿದ್ದು, ಲಾಂಚ್ ದಿನಾಂಕವನ್ನು ಖಚಿತಪಡಿಸಿವೆ. ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಬಳಕೆಗೆ ಸಾಧ್ಯವಾಗುವಂತೆ ದೊಡ್ಡ ಬ್ಯಾಟರಿ ಇದರ ಪ್ರಮುಖ ಆಕರ್ಷಣೆಯಾಗಿದ್ದು, ಇದರ ಜೊತೆಗೆ ಪ್ರೊಸೆಸರ್ ಮತ್ತು ನಿರೀಕ್ಷಿತ ಬೆಲೆ ಮಾಹಿತಿ ದೊರೆತಿದೆ.

ಭಾರೀ ಬ್ಯಾಟರಿಯೊಂದಿಗೆ ಬರುತ್ತಿದೆ Pad 2 Pro 5G
ಮುಂಬರುತ್ತಿರುವ Redmi Pad 2 Pro 5G ನಲ್ಲಿ 12,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗುತ್ತದೆ ಎಂದು ಕಂಪನಿ ಟೀಸರ್‌ಗಳು ಸೂಚಿಸುತ್ತಿವೆ. ಅಮೆಜಾನ್ ಲಿಸ್ಟಿಂಗ್ ಪ್ರಕಾರ, ಇದು "ವಿಶ್ವದಲ್ಲೇ ಅತಿ ದೊಡ್ಡ ಬ್ಯಾಟರಿ ಹೊಂದಿರುವ ಟ್ಯಾಬ್ಲೆಟ್" ಎಂದು ಹೇಳಲಾಗಿದೆ. ಜೊತೆಗೆ 'Everything Pro, On-the-Go' ಎಂಬ ಟ್ಯಾಗ್‌ಲೈನ್ ಮೂಲಕ, ಪ್ರಯಾಣದಲ್ಲಿಯೂ ಪ್ರೊಡಕ್ಟಿವಿಟಿ ಮತ್ತು ಎಂಟರ್‌ಟೈನ್‌ಮೆಂಟ್ ಎರಡನ್ನೂ ಒದಗಿಸುವ ಸಾಧನವಾಗಿ ಇದನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿದುಬರುತ್ತಿದೆ.

Snapdragon 7s Gen 4 ಪ್ರೊಸೆಸರ್
ಬಿಡುಗಡೆಗೆ ಮುನ್ನವೇ Redmi Pad 2 Pro 5G ಭಾರತೀಯ ಆವೃತ್ತಿಯು Geekbench ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ. ಈ ಲಿಸ್ಟಿಂಗ್ ಪ್ರಕಾರ, ಟ್ಯಾಬ್ಲೆಟ್‌ನಲ್ಲಿ Qualcomm Snapdragon 7s Gen 4 ಪ್ರೊಸೆಸರ್ ಬಳಕೆಯಾಗಿದ್ದು, ಕನಿಷ್ಠ 8GB RAM ಆಯ್ಕೆಯೂ ಲಭ್ಯವಿರಲಿದೆ. ಜೊತೆಗೆ, ಇದು ನೇರವಾಗಿ Android 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂಬ ಸೂಚನೆ ದೊರೆತಿದೆ. ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕ್ರಿಯೇಟಿವ್ ಬಳಕೆದಾರರಿಗೆ ಇದು ಒಂದು ಮಲ್ಟಿ-ಪರ್ಪಸ್ ಸಾಧನವಾಗುವ ಸಾಧ್ಯತೆ ಇದೆ.

ಭಾರತದಲ್ಲಿ ಜ.6 ರಂದು Redmi Pad 2 Pro 5G ಲಾಂಚ್: ವಿಶ್ವದ ಅತಿದೊಡ್ಡ ಬ್ಯಾಟರಿ!

ಸ್ಟೈಲಸ್ ಮತ್ತು ಕೀಬೋರ್ಡ್ ಬೆಂಬಲ
Redmi ಬಿಡುಗಡೆ ಮಾಡಿದ ದೃಶ್ಯ ಟೀಸರ್‌ಗಳಲ್ಲಿ, Redmi Pad 2 Pro 5G ಟ್ಯಾಬ್ಲೆಟ್‌ಗೆ ಸ್ಟೈಲಸ್ ಮತ್ತು ಕೀಬೋರ್ಡ್ ಅಕ್ಸೆಸರಿಗಳ ಬೆಂಬಲ ಇರುವುದನ್ನು ತೋರಿಸಲಾಗಿದೆ. ಇಷ್ಟೇ ಅಲ್ಲದೆ, Redmi ಕಂಪೆನಿಯು ಮುಂದಿನ ಐದು ದಿನಗಳ ಕಾಲ ಹಂತ ಹಂತವಾಗಿ ಟ್ಯಾಬ್ಲೆಟ್‌ನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುವ ಯೋಜನೆ ಹೊಂದಿದೆ. ಇದರಲ್ಲಿ ಡಿಸ್‌ಪ್ಲೇ ಗುಣಮಟ್ಟ, ಕನೆಕ್ಟಿವಿಟಿ ಆಯ್ಕೆಗಳು, ಸ್ಪೀಕರ್ ಸೆಟಪ್, ಬಿಲ್ಡ್ ಡ್ಯುರಬಿಲಿಟಿ ಮತ್ತು ಒಟ್ಟಾರೆ ವಿನ್ಯಾಸದ ವಿವರಗಳು ಸೇರಿರುತ್ತವೆ.

Redmi Note 15 5G ಜೊತೆಗೆ ಲಾಂಚ್
ಜನವರಿ 6, 2026ರಂದು ದೇಶದಲ್ಲಿ Redmi Pad 2 Pro 5G ಬಿಡುಗಡೆಯಾಗಲಿದೆಇದೇ ದಿನ ನಡೆಯಲಿರುವ Redmi Note 15 5G ಲಾಂಚ್ ಈವೆಂಟ್‌ನ ಭಾಗವಾಗಿ ಈ ಟ್ಯಾಬ್ಲೆಟ್ ಬಿಡುಗಡೆಯಾಗಲಿದೆ. ಅಮೆಜಾನ್ ಜೊತೆಗೆ ಫ್ಲಿಪ್‌ಕಾರ್ಟ್ ಕೂಡ Redmi Pad 2 Pro 5Gಗಾಗಿ ಪ್ರತ್ಯೇಕ ಲ್ಯಾಂಡಿಂಗ್ ಪುಟವನ್ನು ಆರಂಭಿಸಿದೆ. ಇದರಿಂದ ಟ್ಯಾಬ್ಲೆಟ್ ಭಾರತದಲ್ಲಿ ಎರಡೂ ಪ್ರಮುಖ ಇ-ಕಾಮರ್ಸ್ ವೇದಿಕೆಗಳಲ್ಲಿ ಲಭ್ಯವಾಗಲಿದೆ ಎಂಬುದು ಖಚಿತವಾಗಿದೆ.

ನಿರೀಕ್ಷಿತ ಬೆಲೆ ಎಷ್ಟು?
Redmi Pad 2 Pro 5G ಸಾಧನವು ಮಧ್ಯಮ-ಪ್ರೀಮಿಯಂ ಸೆಗ್ಮೆಂಟ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಹುಡುಕುತ್ತಿರುವ ಭಾರತೀಯ ಗ್ರಾಹಕರಿಗೆ ಗಮನಿಸಬೇಕಾದ ಆಯ್ಕೆಯಾಗಬಹುದು. ಏಕೆಂದರೆ, 5G ರೂಪಾಂತರದ ಬೆಲೆ ₹25,000 - ₹30,000 ಒಳಗೆ ಇರಬಹುದು ಎಂದು ಹಲವು ಪ್ರಮುಖ ಟೆಕ್ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಅಧಿಕೃತ ಬೆಲೆ ಘೋಷಣೆಯಾದ ಬಳಿಕ ಈ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುತ್ತದೆ ಎಂಬುದು ನಮ್ಮ ಅಭಿಪ್ರಾಯ.

ಒಟ್ಟಿನಲ್ಲಿ, Redmi Pad 2 Pro 5G ಭಾರತದಲ್ಲಿ ದೊಡ್ಡ ಬ್ಯಾಟರಿ, ಹೊಸ Snapdragon ಚಿಪ್‌ಸೆಟ್, Android 15 ಮತ್ತು ಪ್ರೊಡಕ್ಟಿವಿಟಿ ಫೀಚರ್‌ಗಳೊಂದಿಗೆ ಜನವರಿ 6, 2026ರಂದು ಅಧಿಕೃತ ಪ್ರವೇಶ ಪಡೆಯಲಿದೆ. ಮುಂದಿನ ದಿನಗಳಲ್ಲಿ ಪ್ರಕಟವಾಗುವ ಟೀಸರ್‌ಗಳು ಈ ಟ್ಯಾಬ್ಲೆಟ್ ಕುರಿತು ಇನ್ನಷ್ಟು ಸ್ಪಷ್ಟ ಚಿತ್ರಣವನ್ನು ನೀಡಲಿವೆ. ಈ ಎಲ್ಲಾ ಅಪ್‌ಡೇಟ್‌ಗಳನ್ನು ನಾವು ನಿಮಗೆ ಒದಗಿಸುತ್ತೇವೆ. ನಿಮ್ಮ ನೆಚ್ಚಿನ ಕನ್ನಡ ಗಿಜ್‌ಬಾಟ್‌ನಲ್ಲಿ ಯಾವಾಗಲೂ ಟ್ಯೂನ್ ಆಗಿರಿ.

Best Mobiles in India

English summary
The Redmi Pad 2 Pro 5G is officially launching in India on January 6, 2026. According to Amazon’s listing, the tablet will feature the world’s largest battery, positioning it as a strong option for long-lasting performance and 5G connectivity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+