ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ Redmi Pad 2 Pro 5G ಟ್ಯಾಬ್ಲೆಟ್!
ಶಿಯೋಮಿ ಸಬ್-ಬ್ರ್ಯಾಂಡ್ Redmi ಭಾರತದಲ್ಲಿ ತನ್ನ ಹೊಸ Redmi Pad 2 Pro 5G ಟ್ಯಾಬ್ಲೆಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ. ಕಂಪನಿ ಬಿಡುಗಡೆ ಮಾಡಿರುವ ಹೊಸ ಟೀಸರ್ ಪ್ರಕಾರ, Redmi Pad 2 Pro 5G ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ. ಮತ್ತು ಈ ಹೊಸ ಟ್ಯಾಬ್ಲೆಟ್ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಟೀಸರ್ ಚಿತ್ರದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, 'Pro' ಬ್ರಾಂಡಿಂಗ್ ಸೂಚನೆಯು ಇದರ ವಿವರಗಳನ್ನು ಸಹ ಸೂಚಿಸಿದೆ.
Redmi ಪ್ರಕಟಿಸಿರುವ 'Pro' ಬ್ರಾಂಡಿಂಗ್ ಮತ್ತು Redmi Pad ಹೆಸರಿನಿಂದಲೇ ಇದು ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಪರಿಚಯಗೊಂಡಿರುವ Redmi Pad 2 Pro ಮಾದರಿಯೇ ಎಂಬುದು ಸ್ಪಷ್ಟವಾಗುತ್ತದೆ. ಶಿಯೋಮಿ ಮುಂದಿನ ದಿನಗಳಲ್ಲಿ ಇನ್ನಷ್ಟು ಟೀಸರ್‌ಗಳನ್ನು ಬಿಡುಗಡೆ ಮಾಡುವ ಸೂಚನೆ ನೀಡಿರುವುದರಿಂದ, ಅಧಿಕೃತ ಲಾಂಚ್ ದಿನಾಂಕ ಮತ್ತು ಇತರ ಪ್ರಮುಖ ಮಾಹಿತಿಗಳು ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆ ಇದೆ. ಈ ಮೂಲಕ ಹಲವಾರು ದಿನಗಳಿಂದ ಬಜೆಟ್ ಬೆಲೆಯಲ್ಲಿ ಉತತ್ಮ ಟ್ಯಾಬ್ಲೆಟ್ ಹುಡುಕುತ್ತಿದ್ದ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.
ಗಮನಿಸುವುದಾದರೆ, Redmi Pad 2 Pro 5G ಜಾಗತಿಕವಾಗಿ ಈಗಾಗಲೇ ಬಿಡುಗಡೆಯಾಗಿದೆ. ಜಾಗತಿಕ ಮಾದರಿಯ ವೈಶಿಷ್ಟ್ಯಗಳನ್ನು ಗಮನಿಸಿದರೆ, Redmi Pad 2 Pro 5G ದೊಡ್ಡ 12.1 ಇಂಚಿನ LCD ಡಿಸ್ಪ್ಲೇ ಹೊಂದಿರಲಿದೆ. ಈ ಡಿಸ್ಪ್ಲೇಗೆ 2.5K ರೆಸಲ್ಯೂಷನ್ ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಸಪೋರ್ಟ್ ಇದೆ. Dolby Vision ಬೆಂಬಲ ಇರುವುದರಿಂದ, ವೀಡಿಯೊ ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಆನ್‌ಲೈನ್ ಕ್ಲಾಸ್‌ಗಳಂತಹ ಬಳಕೆಗಳಿಗೆ ಇದು ಉತ್ತಮ ಅನುಭವ ನೀಡುವ ಸಾಧ್ಯತೆ ಇದೆ.

ಕಾರ್ಯಕ್ಷಮತೆಯ ವಿಚಾರದಲ್ಲಿ, ಈ Redmi Pad 2 Pro 5G ಟ್ಯಾಬ್ಲೆಟ್ Qualcomm Snapdragon 7s Gen 4 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಗ್ಲೋಬಲ್ ಮಾರುಕಟ್ಟೆಯಲ್ಲಿ ಇದನ್ನು ಗರಿಷ್ಠ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿಯ ಕಾಂಫಿಗರೇಷನ್‌ಗಳು ಭಾರತದಲ್ಲೂ ದೊರೆಯುವ ನಿರೀಕ್ಷೆಯಿದ್ದು, ದಿನನಿತ್ಯದ ಕೆಲಸದಿಂದ ಹಿಡಿದು ಮಲ್ಟಿಟಾಸ್ಕಿಂಗ್‌ವರೆಗೆ ಸುಗಮ ಕಾರ್ಯಕ್ಷಮತೆ ನೀಡುವ ಸಾಧ್ಯತೆ ಇದೆ.
ಬ್ಯಾಟರಿ ಸಾಮರ್ಥ್ಯವು ಈ ಟ್ಯಾಬ್ಲೆಟ್‌ನ ಪ್ರಮುಖ ಹೈಲೈಟ್ ಆಗಿದೆ. Redmi Pad 2 Pro 5Gನಲ್ಲಿ 12,000mAh ದೊಡ್ಡ ಬ್ಯಾಟರಿ ನೀಡಲಾಗಿದ್ದು, 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಜೊತೆಗೆ ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇರುವುದರಿಂದ, ಅಗತ್ಯವಿದ್ದರೆ ಇತರೆ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಸಹ ಉಪಯೋಗಿಸಬಹುದು. ಇದು ಹೆಚ್ಚು ಸಮಯ ಟ್ಯಾಬ್ಲೆಟ್ ಬಳಸುವವರಿಗೆ ಉಪಯುಕ್ತ ಫೀಚರ್ ಆಗಿದೆ.
ಆಡಿಯೊ ಮತ್ತು ಕನೆಕ್ಟಿವಿಟಿ ವಿಭಾಗದಲ್ಲಿ, ಈ ಟ್ಯಾಬ್ಲೆಟ್ Dolby Atmos ಬೆಂಬಲದ ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿದೆ. Wi-Fi 6, Bluetooth 5.4 ಮತ್ತು ಪ್ರೀಮಿಯಂ ಲುಕ್ ನೀಡುವ ಸ್ಲಿಮ್ ಮೆಟಲ್ ಬಾಡಿ ಡಿಸೈನ್ ಕೂಡ ಇದರ ವಿಶೇಷತೆಗಳಾಗಿವೆ. ಜಾಗತಿಕವಾಗಿ ಶಿಯೋಮಿ ಕೀಬೋರ್ಡ್ ಮತ್ತು ಸ್ಟೈಲಸ್ ಆಕ್ಸೆಸರಿಗಳನ್ನು ಆಯ್ಕೆಯಾಗಿ ನೀಡಿದ್ದು, ಅವು ಭಾರತದಲ್ಲೂ ಲಭ್ಯವಾಗುವ ಸಾಧ್ಯತೆ ಇದೆ.
ಈಗಾಗಲೇ ಟೀಸರ್ ಬಿಡುಗಡೆಯಾಗಿರುವುದರಿಂದ, Redmi Pad 2 Pro 5G ಅಧಿಕೃತ ಲಾಂಚ್ ಹೆಚ್ಚು ದೂರದಲ್ಲಿಲ್ಲ ಎನ್ನಬಹುದು. ದೊಡ್ಡ ಸ್ಕ್ರೀನ್, ಶಕ್ತಿಶಾಲಿ ಬ್ಯಾಟರಿ ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರುವ ಮಧ್ಯಮ-ಪ್ರೀಮಿಯಂ ಸೆಗ್ಮೆಂಟ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಹುಡುಕುತ್ತಿರುವ ಭಾರತೀಯ ಗ್ರಾಹಕರಿಗೆ ಇದು ಗಮನಿಸಬೇಕಾದ ಆಯ್ಕೆಯಾಗಬಹುದು. ಇದರ 5G ರೂಪಾಂತರದ ಬೆಲೆ ₹25,000 - ₹30,000 ಎಂದು ನಿರೀಕ್ಷಿಸಲಾಗಿದ್ದು, ಅಧಿಕೃತ ಬೆಲೆ ಮತ್ತು ಲಾಂಚ್ ದಿನಾಂಕ ಘೋಷಣೆಯಾದ ಬಳಿಕ, ಈ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುತ್ತದೆ ಎಂಬುದು ನಮ್ಮ ಅಭಿಪ್ರಾಯ.


Click it and Unblock the Notifications








