Home
Gadgets

ಭಾರತದಲ್ಲಿ 12,000mAh ಬ್ಯಾಟರಿಯ Redmi Pad 2 Pro 5G ಟ್ಯಾಬ್ಲೆಟ್ ಬಿಡುಗಡೆ!

ಶಿಯೋಮಿ ತನ್ನ ಜನಪ್ರಿಯ Redmi ಸರಣಿಯಲ್ಲಿ Redmi Pad 2 Pro 5G ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಇಂದು (ಜ.6, ಮಂಗಳವಾರ) ಬಿಡುಗಡೆಗೊಳಿಸಿದೆ. ನವದೆಹಲಿಯಲ್ಲಿ ನಡೆದ ಲಾಂಚ್ ಈವೆಂಟ್‌ನಲ್ಲಿ Redmi Note 15 5G ಫೋನ್ ಜೊತೆಗೆ ಈ ಟ್ಯಾಬ್ಲೆಟ್ ಅನಾವರಣಗೊಂಡಿದ್ದು, 12.1 ಇಂಚಿನ ದೊಡ್ಡ ಡಿಸ್‌ಪ್ಲೇ, 12,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಮತ್ತು ಹಲವು ವರ್ಷಗಳ ಸಾಫ್ಟ್‌ವೇರ್ ಬೆಂಬಲದೊಂದಿಗೆ ಗಮನ ಸೆಳೆಯುವ ಎಲ್ಲ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾದರೆ, ಹೊಸ Redmi Pad 2 Pro 5G ಟ್ಯಾಬ್ಲೆಟ್ ಹೇಗಿದೆ?, ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

Redmi Pad 2 Pro 5G: ಬೆಲೆ ಮತ್ತು ಲಭ್ಯತೆ!
ಭಾರತದಲ್ಲಿ Redmi Pad 2 Pro 5G ಬೆಲೆ Wi-Fi ಮಾತ್ರ ಇರುವ 8GB RAM + 128GB ಸ್ಟೋರೇಜ್ ಮಾದರಿಗೆ ₹22,999 ರಿಂದ ಆರಂಭವಾಗುತ್ತದೆ. Wi-Fi ಜೊತೆಗೆ 5G ಸಂಪರ್ಕ ಹೊಂದಿರುವ ಇದೇ ವೇರಿಯಂಟ್‌ಗೆ ₹25,999 ದರ ನಿಗದಿಪಡಿಸಲಾಗಿದೆ. ಇತ್ತ 8GB RAM + 256GB ಸ್ಟೋರೇಜ್ ಇರುವ Wi-Fi + 5G ಮಾದರಿ ₹27,999 ಕ್ಕೆ ಲಭ್ಯ. Axis Bank, SBI ಮತ್ತು ICICI Bank ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ₹2,000 ವರೆಗೆ ತಕ್ಷಣದ ರಿಯಾಯಿತಿ ದೊರೆಯುತ್ತದೆ. ಈ ಹೊಸ ಟ್ಯಾಬ್ಲೆಟ್ ಜನವರಿ 12ರಿಂದ Xiaomi ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟಕ್ಕೆ ಬರಲಿದೆ.

ಭಾರತದಲ್ಲಿ 12,000mAh ಬ್ಯಾಟರಿಯ Redmi Pad 2 Pro 5G ಟ್ಯಾಬ್ಲೆಟ್ ಬಿಡುಗಡೆ!

Redmi Pad 2 Pro 5G: ಪ್ರಮುಖ ವೈಶಿಷ್ಟ್ಯಗಳು.
ಈ ಹೊಸ Redmi Pad 2 Pro 5G ಟ್ಯಾಬ್ಲೆಟ್ 12.1-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, 2.5K (2,560x1,600 ಪಿಕ್ಸೆಲ್‌ಗಳು) ರೆಸಲ್ಯೂಶನ್, 120Hz ವರೆಗೆ ರಿಫ್ರೆಶ್ ದರ, 249 ppi ಪಿಕ್ಸೆಲ್ ಸಾಂದ್ರತೆ, 360Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ, 600 nits ವರೆಗೆ ಗರಿಷ್ಠ ಹೊಳಪು, ಡಾಲ್ಬಿ ವಿಷನ್, 16:10 ಆಕಾರ ಅನುಪಾತ ಮತ್ತು 1.07 ಬಿಲಿಯನ್ ಬಣ್ಣಗಳನ್ನು ಹೊಂದಿದೆ. ಇದರ 16:10 ಆಸ್ಪೆಕ್ಟ್ ರೇಷಿಯೋ ದೊಡ್ಡ ಸ್ಕ್ರೀನ್ ಬಳಕೆಯನ್ನು ಇನ್ನಷ್ಟು ಉಪಯುಕ್ತವಾಗಿಸುತ್ತದೆ. ಒಟ್ಟಾರೆಯಾಗಿ, ವೀಡಿಯೋ ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಆನ್‌ಲೈನ್ ಕ್ಲಾಸ್‌ಗಳಿಗೆ ಇದು ಅತ್ಯುತ್ತಮ ಅನುಭವ ನೀಡುವ ಭರವಸೆ ತಂದಿದೆ.

ಕಾರ್ಯಕ್ಷಮತೆಗಾಗಿ, Redmi Pad 2 Pro 5G ಗೆ Qualcomm ನ 4nm ಆಧಾರಿತ Snapdragon 7s Gen 4 ಪ್ರೊಸೆಸರ್ ಶಕ್ತಿ ನೀಡುತ್ತದೆ. 2.7GHz ಗರಿಷ್ಠ ಕ್ಲಾಕ್ ಸ್ಪೀಡ್ ಹೊಂದಿರುವ ಮಲ್ಟಿಟಾಸ್ಕಿಂಗ್ ಮತ್ತು ಲೈಟ್ ಗೇಮಿಂಗ್‌ಗೆ ಸೂಕ್ತವಾಗಿದೆ. Aಜೊತೆಗೆ dreno 810 GPU, 8GB LPDDR4x RAM ಮತ್ತು 256GB ವರೆಗೆ UFS 2.2 ಸ್ಟೋರೇಜ್ ಇದರಲ್ಲಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 15 ಅನ್ನು ಆಧರಿಸಿದ HyperOS 2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಐದು ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು ಏಳು ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ನೀಡಿದೆ.

ಕ್ಯಾಮೆರಾ ವಿಭಾಗದಲ್ಲಿ, Redmi Pad 2 Pro 5G ಟ್ಯಾಬ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಟ್ಯಾಬ್ಲೆಟ್‌ನಲ್ಲಿ 1080p ರೆಸಲ್ಯೂಷನ್‌ನಲ್ಲಿ 60fps ವರೆಗೆ ವೀಡಿಯೋ ರೆಕಾರ್ಡಿಂಗ್ ಸಾಧ್ಯವಾಗಲಿದೆ. ಈ ಟ್ಐಆಬ್‌ನ ಪ್ರಮುಖ ಹೈಲೈಟ್ ಎಂದರೆ ಅದರ 12,000mAh ಬ್ಯಾಟರಿ. ಇದು 33W ಫಾಸ್ಟ್ ಚಾರ್ಜಿಂಗ್ ಜೊತೆಗೆ 27W ರಿವರ್ಸ್ ಚಾರ್ಜಿಂಗ್ ಬೆಂಬಲವನ್ನೂ ಹೊಂದಿದೆ. 5G, 4G LTE, Wi-Fi 6 ಮತ್ತು Bluetooth 5.4 ಸಂಪರ್ಕ ಆಯ್ಕೆಗಳು ಇರುವ ಈ ಸಾಧನವು ಕೇವಲ 7.5mm ದಪ್ಪ ಮತ್ತು 610 ಗ್ರಾಂ ತೂಕ ಹೊಂದಿದೆ.

ಒಟ್ಟಾರೆಯಾಗಿ, ದೊಡ್ಡ ಡಿಸ್‌ಪ್ಲೇ, ಶಕ್ತಿಶಾಲಿ ಬ್ಯಾಟರಿ, ನವೀನ ಪ್ರೊಸೆಸರ್ ಮತ್ತು ದೀರ್ಘಕಾಲದ ಅಪ್‌ಡೇಟ್ ಹುಡುಕುತ್ತಿರುವ ಭಾರತೀಯ ಬಳಕೆದಾರರಿಗೆ Redmi Pad 2 Pro 5G ಅತ್ಯಂತ ಉತ್ತಮ ಆಯ್ಕೆಯಾಗಿ ಬಂದಿದೆ ಎನ್ನಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Xiaomi has launched the Redmi Pad 2 Pro 5G in India alongside the Redmi Note 15 5G. The tablet features a large 12.1-inch display, a massive 12,000mAh battery, 5G connectivity, and long-term software support, making it a strong choice for entertainment and productivity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+