ಭಾರತದಲ್ಲಿ Redmi Watch Move ಸ್ಮಾರ್ಟ್‌ವಾಚ್ ಬಿಡುಗಡೆಗೆ ದಿನಾಂಕ ಫಿಕ್ಸ್!
ಬಜೆಟ್ ಬೆಲೆಯಲ್ಲಿ ಗುಣಮಟ್ಟದ ಗ್ಯಾಜೆಟ್‌ಗಳ ತಯಾರಿಕೆಗೆ ಪ್ರಸಿದ್ಧವಾದ Redmi ಕಂಪನಿಯು ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ Redmi Watch Move ಎಂಬ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಹೊಸ ಸ್ಮಾರ್ಟ್‌ವಾಚ್‌ಗಾಗಿ ಬಿಡುಗಡೆ ದಿನಾಂಕವನ್ನು ಘೋಷಿಸುವುದರೊಂದಿಗೆ, ಕಂಪನಿಯು ಅದರ ವಿನ್ಯಾಸವನ್ನು ಸಹ ಟೀಸರ್ ಮಾಡಿದೆ. ಬಿಡುಗಡೆಗೆ ಮುಂಚಿನ ದಿನಗಳಲ್ಲಿ ವಾಚ್ ಕುರಿತು ಹೆಚ್ಚಿನ ಮಾಹಿತಿಗಳು ಆನ್‌ಲೈನ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ, ಆದರೆ ಪ್ರಸ್ತುತ ಮಾತ್ರ ಬಿಡುಗಡೆ ದಿನಾಂಕ ಮತ್ತು ವಿನ್ಯಾಸದ ಟೀಸರ್ ಅನ್ನು ಪರಿಚಯಿಸಲಾಗಿದೆ. ಈ ಕುರಿತು ಮತ್ತಷ್ಟು ವಿವರಗಳನ್ನು ನೋಡೋಣ ಬನ್ನಿ.
Redmi Watch Move ಇಂಡಿಯಾ ಲಾಂಚ್
Redmi ಕಂಪನಿಯು ತನ್ನ ಹೊಸ Redmi Watch Move ಸ್ಮಾರ್ಟ್‌ವಾಚ್ ಅನ್ನು ಇದೇ ಏಪ್ರಿಲ್ 21 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಕಂಪನಿಯ ಅಧಿಕೃತ ಎಕ್ಸ್ ಪೋಸ್ಟ್ ದೃಢಪಡಿಸಿದೆ. ಈ ಸ್ಮಾರ್ಟ್‌ವಾಚ್ ಕಂಪೆನಿಯು ಅಧಿಕೃತ ವೆಬ್‌ಸೈಟ್ ಲೈವ್ ಮೈಕ್ರೋಸೈಟ್ ಶಿಯೋಮಿ ಇಂಡಿಯಾ ಇ-ಸ್ಟೋರ್ ಮೂಲಕ ದೇಶದಲ್ಲಿ ಖರೀದಿಸಲು ಲಭ್ಯವಿರುತ್ತದೆ ಎಂದು ಖಚಿತಪಡಿಸಲಾಗಿದೆ. ಇನ್ನು, ಈ Redmi Watch Move ಸ್ಮಾರ್ಟ್‌ವಾಚ್‌ನ ವಿನ್ಯಾಸವನ್ನು ಸಹ ಟೀಸರ್ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ ಆಯತಾಕಾರದ ಡಿಸ್ಪ್ಲೇ, ಕಪ್ಪು ಬಣ್ಣ ಮತ್ತು ಬಲ ಅಂಚಿನಲ್ಲಿ ಕಿರೀಟದೊಂದಿಗೆ ಕಾಣಿಸುತ್ತದೆ. ಪೋಸ್ಟರ್‌ನಲ್ಲಿ, ವಾಚ್ AMOLED ಪರದೆಯೊಂದಿಗೆ ಸಜ್ಜುಗೊಂಡಿದೆ ಎಂದು ಸೂಚಿಸಲಾಗಿದೆ. ಅಂದರೆ, ಇದು Redmi Watch 5 ಸ್ಮಾರ್ಟ್‌ವಾಚ್ ಆಗಿರಬಹುದು ಎಂಬ ಸಂಶಯ ಮೂಡಿದೆ.
ನಾವು ಗಮನಿಸುವುದಾದರೆ, ಈ ವರ್ಷದ ಆರಂಭದಲ್ಲಿ, Redmi ಕಂಪನಿಯು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಶಕ್ತಿಶಾಲಿ Redmi Watch 5 ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿತು. ಚೀನಾದಲ್ಲಿ ಮೊದಲು ನವೆಂಬರ್ 2024 ರಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ವಾಚ್ ಭಾರತದ ಯಾವಾಗ ಬಿಡುಗಡೆಗಲಿದೆ ಎಂಬ ಬಗ್ಗೆ ಕಂಪೆನಿಯು ಇನ್ನೂ ದೃಢಪಡಿಸಿಲ್ಲ. ಅಥವಾ ಇದೇ ಸ್ಮಾರ್ಟ್‌ವಾಚ್ Redmi Watch Move ಹೆಸರಿನಲ್ಲಿ ಬರುತ್ತಿದೆ ಎಂಬ ಕುರಿತು ಸಹ ತಿಳಿದುಬಂದಿಲ್ಲ. ಒಂದು ವೇಳೆ ಇದೇ ಸಾಧನವು ಹೊಸ ಹೆಸರಿನಲ್ಲಿ ಬರುವುದಾದರೆ, ಈ ಹೊಸ Redmi Watch 5 ಸ್ಮಾರ್ಟ್‌ವಾಚ್ 2.07-ಇಂಚಿನ AMOLED ಆಯತಾಕಾರದ ಪರದೆಯೊಂದಿಗೆ 60Hz ರಿಫ್ರೆಶ್ ದರ, 1,500nits ವರೆಗೆ ಗರಿಷ್ಠ ಹೊಳಪು ಮತ್ತು ಯಾವಾಗಲೂ-ಆನ್ ಡಿಸ್ಪ್ಲೇ ಬೆಂಬಲದೊಂದಿಗೆ ಪರಿಚಯವಾಗಿದೆ.

ಇಷ್ಟೇ ಅಲ್ಲದೆ, Redmi Watch 5 ಸ್ಮಾರ್ಟ್‌ವಾಚ್ 550mAh ಬ್ಯಾಟರಿಯನ್ನು ಹೊಂದಿದೆ ಮತ್ತು ಒಂದೇ ಚಾರ್ಜ್‌ನಲ್ಲಿ 24 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು 5ATM ನೀರಿನ ಪ್ರತಿರೋಧವನ್ನು ಹೊಂದಿದೆ ಮತ್ತು Xiaomi ಯ HyperOS 2 ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಲೆ ಕುರಿತು ನೋಡುವುದಾದರೆ, Redmi Watch 5 ಸ್ಮಾರ್ಟ್‌ವಾಚ್‌ನ ಮೂಲ ಆಯ್ಕೆಯ ಸಾಧನದ ಬೆಲೆ CNY 599 (ಸರಿಸುಮಾರು ರೂ. 6,600). ಆದರೆ ಇ-ಸಿಮ್ ಆವೃತ್ತಿಯ ಬೆಲೆ CNY 799 (ಸರಿಸುಮಾರು ರೂ. 9,000). ಗಳಾಗಿವೆ.
ಇದೀಗ ಭಾರತದಲ್ಲಿ Watch 5 Active ಮತ್ತು Watch 5 Lite ಗಳು ಲಭ್ಯವಿವೆ.
ಭಾರತದ ಮಾರುಕಟ್ಟೆಯಲ್ಲಿ Redmi ಕಳೆದ ವರ್ಷ ಪರಿಚಯಿಸಿರುವ Watch 5 Active ಮತ್ತು Watch 5 Lite ಸ್ಮಾರ್ಟ್‌ವಾಚ್‌ಗಳು ಲಭ್ಯವಿವೆ. ಈ ಸ್ಮಾರ್ಟ್‌ವಾಚ್‌ಗಳ ಬೆಲೆ ಕ್ರಮವಾಗಿ ರೂ. 2,799 ಮತ್ತು ರೂ. 3,999 ಗಳಾಗಿದ್ದು, ಈ ಎರಡೂ ಧರಿಸಬಹುದಾದ ಸಾಧನಗಳು 18 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ ಮತ್ತು 5ATM ನೀರಿನ ಪ್ರತಿರೋಧವನ್ನು ಹೊಂದಿವೆ. ಇವುಗಳಲ್ಲಿ Redmi Watch 5 Lite ಸ್ಮಾರ್ಟ್‌ವಾಚ್ 1.96-ಇಂಚಿನ AMOLED ಆಯತಾಕಾರದ ಡಿಸ್ಪ್ಲೇಯನ್ನು ಹೊಂದಿದ್ದರೆ, ಇತ್ತ Redmi Watch 5 Active ಸ್ಮಾರ್ಟ್‌ವಾಚ್ 2-ಇಂಚಿನ ಆಯತಾಕಾರದ LCD ಸ್ಕ್ರೀನ್ ಅನ್ನು ಹೊಂದಿದೆ.


Click it and Unblock the Notifications








